ತೊಡೆ ತಟ್ಟಿ ಗೆದ್ದವರಿಲ್ಲ.. ಹಾಲಿ ಚಾಂಪಿಯನ್​ ಟೀಮ್ ಇಂಡಿಯಾದ 50 ವರ್ಷದ ಇತಿಹಾಸ ಹೇಗಿದೆ?

ಯುಎಇ ಎದುರಿನ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನ ಆರಂಭಿಸಲಿರುವ ಟೀಮ್ ಇಂಡಿಯಾ, ಏಷ್ಯಾಕಪ್​​ ಗೆಲುವಿನೊಂದಿಗೆ ಅಭಿಯಾನಕ್ಕೆ ಅಂತ್ಯವಾಡುವ ಲೆಕ್ಕಾಚಾರದಲ್ಲಿದೆ. ಟೀಮ್ ಇಂಡಿಯಾದ ಈ ಕನಸು ನನಸಾಗಿಸಿಕೊಳ್ಳುವುದು ಫಿಕ್ಸ್.

author-image
Bhimappa
SANJU_SAMSON (2)
Advertisment

ಏಷ್ಯಾಕಪ್​ ಚಾಂಪಿಯನ್ಸ್​​​ ಯಾರ್ ಆಗ್ತಾರೆ?, ಈ ಪ್ರಶ್ನೆ ಒನ್​ ಆ್ಯಂಡ್ ಒನ್ಲಿ ಅನ್ಸರ್ ಟೀಮ್ ಇಂಡಿಯಾ. 50 ವರ್ಷಗಳ ಇತಿಹಾಸ ಕೆದಕಿ ನೋಡಿದ್ರೆ, ಟೀಮ್ ಇಂಡಿಯಾ ಎದುರು ಏಷ್ಯಾದಲ್ಲೇ ತೊಡೆತಟ್ಟಿ ನಿಂತವರಿಲ್ಲ. ಈ ಮಾತು ಯಾಕೆ ಹೇಳ್ತಿದ್ದೀವಿ ಅಂತೀರಾ?.

ಟೀಮ್ ಇಂಡಿಯಾ ವರ್ಲ್ಡ್ ಟಿ20​ ಚಾಂಪಿಯನ್. ಟಿ20 ಕ್ರಿಕೆಟ್​ನ ನಂಬರ್ ಒನ್ ಟೀಮ್.. ಏಷ್ಯಾಕಪ್​ನ ಅಧಿಪತಿ. ಇದೀಗ ಇದೇ ಅಧಿಪತಿ ಏಷ್ಯಾಕಪ್​ ಕಪ್​ ಟೂರ್ನಿಗೆ ಸಜ್ಜಾಗಿ ನಿಂತಿದೆ. ನಾಳೆ ಯುಎಇ ಎದುರಿನ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನ ಆರಂಭಿಸಲಿರುವ ಟೀಮ್ ಇಂಡಿಯಾ, ಏಷ್ಯಾಕಪ್​​ ಗೆಲುವಿನೊಂದಿಗೆ ಅಭಿಯಾನಕ್ಕೆ ಅಂತ್ಯವಾಡುವ ಲೆಕ್ಕಾಚಾರದಲ್ಲಿದೆ. ಟೀಮ್ ಇಂಡಿಯಾದ ಈ ಕನಸು ನನಸಾಗಿಸಿಕೊಳ್ಳುವುದು ಫಿಕ್ಸ್.

KL_RAHUL (9)

ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಡಾಮಿನೇಷನ್..!

ಟೀಮ್ ಇಂಡಿಯಾ, ವರ್ಲ್ಡ್ ಟಿ20 ಚಾಂಪಿಯನ್ಸ್. ರಿಯಲ್ ಏಷ್ಯಾನ್ ಕಿಂಗ್. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.. ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾದ ಸಾಧನೆ. 50 ವರ್ಷಗಳ ಏಷ್ಯಾಕಪ್​ ಇತಿಹಾಸದಲ್ಲಿ ಇದುವರೆಗೆ 16 ಟೂರ್ನಿಗಳು ನಡೆದಿವೆ. ಈ 16 ಟೂರ್ನಿಗಳ ಪೈಕಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಆಲಂಕರಿಸಿದ್ದು ಬರೋಬ್ಬರಿ 8 ಬಾರಿ. ಸದ್ಯ ವರ್ಲ್ಡ್​ ಚಾಂಪಿಯನ್, ಟಿ20 ಕ್ರಿಕೆಟ್​​ನ ನಂಬರ್​.1 ಟೀಮ್ ಆಗಿ, ಹಾಲಿ ಚಾಂಪಿಯನ್ಸ್​ ಆಗಿ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಟೀಮ್ ಇಂಡಿಯಾದ ಫೇವರಿಟ್ ಕಂಡೀಷನ್ಸ್​  ಯುಎಇ..!

ಟೀಮ್ ಇಂಡಿಯಾ.. ಏಷ್ಯಾಕಪ್ ಇತಿಹಾಸದ ಮೋಸ್ಟ್ ಸಕ್ಸಸ್ ಫುಲ್ ಟೀಮ್, ಅರ್ಧದಷ್ಟು ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಆದ್ರೆ, ಟೀಮ್ ಇಂಡಿಯಾ ಗೆದ್ದ 8 ಟ್ರೋಫಿಗಳ ಪೈಕಿ ಮೂರು ಬಾರಿ ಯುಎಇನಲ್ಲೇ ಗೆದ್ದಿರುವುದು ವಿಶೇಷ. ಹೀಗಾಗಿ ಯುಎಇ ಟೀಮ್ ಇಂಡಿಯಾ ಪಾಲಿನ ಮೋಸ್ಟ್​ ಫೇವರಿಟ್ ಕಂಡೀಷನ್ಸ್ ಅನ್ನೋದು ದಿಗ್ಗಜರ ಮಾತು. ಹೀಗಾಗಿ ಟೀಮ್ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಆಗಿ ಮೆರೆದಾಡುವುದರಲ್ಲಿ ಅಚ್ಚರಿ ಇಲ್ಲ.

ಟೀಮ್ ಇಂಡಿಯಾಗೆ ಆ ಮೂವರೇ ಥ್ರೆಟ್..!

ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದೆ. ಏಷ್ಯಾನ್ ಕಿಂಗ್ ಆಗಿ ಮರೆದಾಡ್ತಿದೆ ನಿಜ. ಆದ್ರೆ, ಇದೇ ಅಧಿಪತಿ ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನ, ಪಾಕಿಸ್ತಾನ್​​, ಶ್ರೀಲಂಕಾ ತಂಡಗಳೇ ಬಿಗೆಸ್ಟ್ ಥ್ರೆಟ್. ಈ ಪೈಕಿ ಮೋಸ್ಟ್ ಡೇಂಜರಸ್ ಶ್ರೀಲಂಕಾ ಅಂದ್ರೆ ತಪ್ಪಿಲ್ಲ. ಯಾಕಂದ್ರೆ, 50 ವರ್ಷಗಳ ಟ್ರ್ಯಾಕ್ ರೆಕಾರ್ಡ್ಸ್​ ನೋಡಿದ್ರೆ, ಏಷ್ಯಾಕಪ್​ ಫೈನಲ್ಸ್​ನಲ್ಲಿ ಶ್ರೀಲಂಕಾ ಹಾಗೂ ಭಾರತವೇ 9 ಬಾರಿ ಮುಖಾಮುಖಿಯಾಗಿವೆ. ಹೀಗಾಗಿ ಸೂಪರ್​​-4 & ಫೈನಲ್ಸ್​ನಲ್ಲಿ ಎದುರಾಗಲಿರುವ ಶ್ರೀಲಂಕಾ, ಅಫ್ಘಾನ್ ತಂಡಗಳ ಸವಾಲು ಮೆಟ್ಟಿ ನಿಲ್ಲಲು ಟೀಮ್ ಇಂಡಿಯಾ ರೆಡಿಯಾಗಿರಬೇಕಿದೆ.

ಇದನ್ನೂ ಓದಿ: MS ಧೋನಿ ಅಭಿನಯದ ಹೊಸ ಸಿನಿಮಾದ ಟೀಸರ್ ಔಟ್​.. ಕೂಲ್ ಕ್ಯಾಪ್ಟನ್​ ವೈಲ್ಡ್​

SURYA_KUMAR (2)

ಲೀಗ್​ ಅಲ್ಲ, ಸೂಪರ್-4 ಮ್ಯಾಚ್​ಗಳೇ ಚಾಲೆಂಜ್​..!

ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ,  3 ಲೀಗ್​ ಮ್ಯಾಚ್​ಗಳನ್ನಾಡಲಿದೆ. ಈ ಪೈಕಿ ಪಾಕ್ ಬಿಟ್ರೆ, ಇನ್ನುಳಿದ 2 ಮ್ಯಾಚ್ ಸುಲಭಕ್ಕೆ ಗೆಲ್ಲುತ್ತೆ. ಆದ್ರೆ, ಸೂಪರ್​​-4ನಲ್ಲಿ ಆಗಲ್ಲ. ಗ್ರೂಪ್​​-Aನ ಟಾಪ್-2 ಟೀಮ್ಸ್​ ಹಾಗೂ ಗ್ರೂಪ್-ಬಿನ ಬಿ-1 ಹಾಗೂ ಬಿ2 ಟೀಮ್​ಗಳ ಎದುರು ಸೆಣಸಾಡಬೇಕಿದೆ. ಈ ಅಂದ್ರೆ, ಗ್ರೂಪ್​ ಎನಲ್ಲಿ ಪಾಕ್​​, ಗ್ರೂಪ್​ ಬಿನಲ್ಲಿ ಅಫ್ಗಾನ್, ಬಾಂಗ್ಲಾ ಅಥವಾ ಶ್ರೀಲಂಕಾ ಸವಾಲು ಸ್ವೀಕರಿಸಬೇಕಿದೆ. ಈ ಮ್ಯಾಚ್​​ಗಳಲ್ಲಿ ಗೆದ್ದರಷ್ಟೇ ಫೈನಲ್​ ಎಂಟ್ರಿ.. ಇಲ್ಲ ಟೀಮ್ ಇಂಡಿಯಾಗೆ ಸಂಕಷ್ಟ ತಪ್ಪಿದಿಲ್ಲ.  

ಏಷ್ಯಾಕಪ್​​ನಲ್ಲಿ ಈ ಸಲವೂ ಟೀಮ್ ಇಂಡಿಯಾನೇ ‘ಕಿಂಗ್’..!

ಏಷ್ಯಾಕಪ್​ನಲ್ಲಿ ಈ ಸಲ ಟೀಮ್ ಇಂಡಿಯಾ ಕಿಂಗ್ ಆಗೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ವರ್ಲ್ಡ್​ ಟಿ20 ಚಾಂಪಿಯನ್ ಟೀಮ್ ಇಂಡಿಯಾ, ವಿಶ್ವ ಟಿ20 ಕ್ರಿಕೆಟ್​ನ ನಂಬರ್​.1 ಟೀಮ್​. ಟೀಮ್ ಇಂಡಿಯಾದ ಱಕಿಂಗ್​ಗೆ ಹೋಲಿಕೆ ಮಾಡಿದ್ರೆ, ಶ್ರೀಲಂಕಾ 7 ಹಾಗೂ ಪಾಕ್ 8ನೇ ಸ್ಥಾನದಲ್ಲಿದೆ. ಇತರೆ ತಂಡಗಳಿಗೆ ಹೋಲಿಕೆ ಮಾಡಿದ್ರೆ, ಟಿ20 ಸ್ಪೆಷಲಿಸ್ಟ್​ಗಳ ದಂಡೇ ಟೀಮ್ ಇಂಡಿಯಾದಲ್ಲಿದೆ. ಸಿಂಗಲ್ ಆಗಿ ಮ್ಯಾಚ್ ಗೆಲ್ಲಿಸೋ ಆಟಗಾರರು, ಯುಎಇ ಕಂಡೀಷನ್ಸ್​ಗೆ ಚಮತ್ಕಾರ ಮಾಡಬಲ್ಲ ಬೂಮ್ರಾ, ಅರ್ಷ್​ದೀಪ್ ಸಿಂಗ್​ರಂಥ ಪೇಸರ್​ಗಳ ಜೊತೆಗೆ ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿಯಂತ ಸ್ಪಿನ್ ಜಾದೂಗಾರರಿದ್ದಾರೆ. ಹೀಗಾಗಿ ಈ ಸಲನೂ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಮರೆದಾಡುವುದರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Shubman Gill Captaincy Asia Cup 2025 Surya kumar Yadav
Advertisment