MS ಧೋನಿ ಅಭಿನಯದ ಹೊಸ ಸಿನಿಮಾದ ಟೀಸರ್ ಔಟ್​.. ಕೂಲ್ ಕ್ಯಾಪ್ಟನ್​ ವೈಲ್ಡ್​ ಲುಕ್ಕಿಂಗ್!

ಲೆಜೆಂಡರಿ ಕ್ರಿಕೆಟರ್​, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈವರೆಗೆ ಯಾವುದು ಸ್ಪಷ್ಟತೆ ಇರಲಿಲ್ಲ. ಇದೀಗ ಈ ಬಗ್ಗೆ ಬಿಗ್ ಅಪ್​ಡೇಟ್ ಹೊರ ಬಿದ್ದಿದೆ.

author-image
Bhimappa
MS_DHONI_MOVIE
Advertisment

ಲೆಜೆಂಡರಿ ಕ್ರಿಕೆಟರ್​, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈವರೆಗೆ ಯಾವುದು ಸ್ಪಷ್ಟತೆ ಇರಲಿಲ್ಲ. ಇದೀಗ ಈ ಬಗ್ಗೆ ಬಿಗ್ ಅಪ್​ಡೇಟ್ ಹೊರ ಬಿದ್ದಿದ್ದು ಭಾರತ ತಂಡದ ಮಾಜಿ ನಾಯಕ ಎಂ.ಎಸ್​ ಧೋನಿ ಅವರು ಖಡಕ್ ಟಾಸ್ಕ್​ ಫೋರ್ಸ್​ ಆಫೀಸರ್ ಆಗಿ ಟೀಸರ್​ನಲ್ಲಿ  ಕಾಣಿಸಿಕೊಂಡಿದ್ದಾರೆ. ​

MS_DHONI_MOVIE_2

ಸ್ಕ್ರೀನ್ ರೈಟರ್​ ಕಮ್ ನಟ ಮಾಧವನ್ ಅವರು ಸೆಪ್ಟೆಂಬರ್ 7 ರಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಟನೆಯ ಸಿನಿಮಾದ ಟೀಸರ್​ ಶೇರ್ ಮಾಡಿಕೊಂಡಿದ್ದಾರೆ. ಈ ಟೀಸರ್​ನಲ್ಲಿ ನಟ ಮಾಧವನ್ ಹಾಗೂ ಎಂ.ಎಸ್ ಧೋನಿ ಅವರು ಖಡಕ್ ಟಾಸ್ಕ್​ ಫೋರ್ಸ್​ ಆಫೀಸರ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಧೋನಿಯಂತೂ ಕ್ರಿಕೆಟ್​ಗೂ ಸೈ, ಸಿನಿಮಾಗೂ ಸೈ ಎನ್ನುವಂತೆ ಅಮೋಘವಾಗಿ ಅಭಿನಯ ಮಾಡಿದ್ದಾರೆ. 

ಎಂ.ಎಸ್​ ಧೋನಿ ಅವರು ಅಭಿನಯದಲ್ಲಿ ಸಾಕಷ್ಟು ಪಳಗಿರುವವರಂತೆ, ಲೆಜೆಂಡರಿ ಆ್ಯಕ್ಟರ್​ ಅಂತೆ ನಟನೆ ಮಾಡಿದ್ದಾರೆ. ಬ್ಲ್ಯಾಕ್ ಡ್ರೆಸ್​ನಲ್ಲಿ, ಕಣ್ಣಿಗೆ ಕೂಲಿಂಗ್ ಗ್ಲಾಸ್​ನಲ್ಲಿ ರಗಡ್​ ಲುಕ್​ನಲ್ಲಿ ಧೋನಿ ಮಿಂಚಿದ್ದಾರೆ. ಟೀಸರ್​ನಲ್ಲಿ ಫೈರಿಂಗ್ ಮಾಡೋ ದೃಶ್ಯಗಳಿದ್ದು ಧೋನಿ ಗನ್​ ಹಿಡಿದು ಫೈರಿಂಗ್ ಮಾಡಿದ್ದಾರೆ. ಕಾರಿನ ಮೇಲೆಯೇ ಸ್ಟೈಲ್​ ಆಗಿ ನಿಂತುಕೊಂಡು ಗುಂಡಿನ ದಾಳಿಯೇ ನಡೆಸಿ ಬಿಟ್ಟಿದ್ದಾರೆ. ಅಂತೂ ಧೋನಿ ಅವರು ಸಿನಿಮಾದಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಚಂದ್ರಗ್ರಹಣ; ಬೆಂಗಳೂರಲ್ಲಿ ಊಟ ಮಾಡಿ, ಮಕ್ಕಳಿಗೆ ಸಿಹಿ, ಹಣ್ಣುಗಳು ಕೊಟ್ಟು ಮೌಢ್ಯತೆಗೆ ಸೆಡ್ಡು

MS_DHONI_MOVIE_1

ಈ ಟೀಸರ್​ಗೆ ಟ್ಯಾಗ್ ಲೈನ್ಸ್ ಬರೆದಿರುವ ನಟ ಮಾಧವನ್ ಅವರು, ಒಂದು ಮಿಷನ್​ಗೆ ಇಬ್ಬರು ಫೈಟರ್​ಗಳು. ಈಗಿನಿಂದ ಚೇಸಿಂಗ್ ಆರಂಭವಾಗಿದೆ. ಟೀಸರ್ ಔಟ್​ ಆಗಿದೆ ಎಂದಿದ್ದಾರೆ. ಆದರೆ ಈ ಟೀಸರ್​ ಸಿನಿಮಾದ್ದೋ, ವೆಬ್​ ಸೀರಿಸ್ ಅಥವಾ ಇನ್ಯಾವುದಕ್ಕೆ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿಲ್ಲ. ಆದರೆ ಟೀಸರ್​ನಲ್ಲಿ ಮಾಧವನ್ ಹಾಗೂ ಧೋನಿ ಸಖತ್ ಆಗಿಯೇ ಮಿಂಚಿದ್ದಾರೆ. ಈ ಸಿನಿಮಾವನ್ನು ವಾಸನ್ ಬಾಲ ಅವರು ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಇದು ಅಭಿಮಾನಿಗಳ ಮುಂದೆ ಬರಲಿದೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Dhoni MS Dhoni cinema MS Dhoni investment MS Dhoni
Advertisment