/newsfirstlive-kannada/media/media_files/2025/09/07/suryakumar_gill_practic-2025-09-07-17-57-56.jpg)
ಮಹತ್ವದ ಏಷ್ಯಾಕಪ್​ ಟೂರ್ನಿ ಆರಂಭಕ್ಕೆ 2 ದಿನ ಮಾತ್ರ ಬಾಕಿ. ಅರಬ್ಬರ ನಾಡನ್ನ ತಲುಪಿರೋ ತಂಡಗಳು ಏಷ್ಯನ್​ ಸಮರಕ್ಕೆ ಭರ್ಜರಿ ಸಿದ್ಧತೆ ಆರಂಭಿಸಿವೆ. ಟೀಮ್​ ಇಂಡಿಯಾ ಕೂಡ ಮಹತ್ವದ ಟೂರ್ನಿಗೆ ತನ್ನ ತಯಾರಿಯನ್ನ ಆರಂಭಿಸಿದೆ. ದುಬೈನಲ್ಲಿ ಸೂರ್ಯನ ಸೈನ್ಯದ ಮೊದಲ ದಿನ ಪ್ರಾಕ್ಟಿಸ್​​ ಹೇಗಿತ್ತು?.
ಐಸಿಸಿ ಅಕಾಡೆಮಿಯಲ್ಲಿ ಬೆವರಿಳಿಸಿದ ಆಟಗಾರರು.!
ಇಂಗ್ಲೆಂಡ್ ಪ್ರವಾಸದಿಂದ ವಾಪಾಸ್ಸಾದ ಬಳಿಕ ಟೀಮ್​ ಇಂಡಿಯಾ ಆಟಗಾರರು ಸುದೀರ್ಘ ವಿಶ್ರಾಂತಿಗೆ ಜಾರಿದ್ದರು. ಸಿಕ್ಕ ಬಿಡುವಿನಲ್ಲಿ ಸುತ್ತಾಟ ನಡೆಸಿ, ಕುಟುಂಬದೊಂದಿಗೆ ಟೈಮ್​ ಸ್ಪೆಂಡ್​ ಮಾಡಿ ರಿಲ್ಯಾಕ್ಸ್​ ಆಗಿದ್ದರು. ಬರೋಬ್ಬರಿ 31 ದಿನಗಳ ಟೀಮ್​ ಇಂಡಿಯಾ ಬ್ರೇಕ್ ಅಂತ್ಯವಾಗಿದೆ. ಏಷ್ಯಾಕಪ್​ ಟೂರ್ನಿಗಾಗಿ ದುಬೈಗೆ ಹಾರಿರೋ ಆಟಗಾರರು ಫೀಲ್ಡ್​ಗೆ​ ಕಮ್​ಬ್ಯಾಕ್​ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/09/07/suryakumar_gill-1-2025-09-07-17-58-12.jpg)
ಭಾರತದಿಂದ ದುಬೈ ಹಾರಿದ ದಿನ ಟೀಮ್​ ಇಂಡಿಯನ್ಸ್​ ವಿಶ್ರಾಂತಿಗೆ ಜಾರಿದ್ದರು. ನಿನ್ನೆಯಿಂದ ಅಭ್ಯಾಸದ ಅಖಾಡಕ್ಕೆ ಧುಮುಕಿರೋ ಆಟಗಾರರು ಐಸಿಸಿ ಅಕಾಡೆಮಿಯಲ್ಲಿ ಬೆವರಿಳಿಸಿದ್ದಾರೆ. ವಾರ್ಮ್​ ಅಪ್​ನಿಂದ ದೀರ್ಘಕಾಲದಿಂದ ಮೈದಾನದಿಂದ ದೂರ ಉಳಿದಿದ್ದ ಆಟಗಾರರು ಹೆಚ್ಚು ಕಾಲ ವಾರ್ಮ್​​ಅಪ್​ ಮಾಡಿ ಅಭ್ಯಾಸಕ್ಕೆ ಅಣಿಯಾದರು.
ಟಿ.ದಿಲೀಪ್​ ಮಾರ್ಗದರ್ಶನದಲ್ಲಿ ಫೀಲ್ಡಿಂಗ್​ ಡ್ರಿಲ್​.!
ವಾರ್ಮ್​ ಅಪ್​ ಮುಗಿದ ಬೆನ್ನಲ್ಲೇ, ಟೀಮ್​ ಇಂಡಿಯಾ ಆಟಗಾರರು ನೆಕ್ಸ್ಟ್​ ಶಿಫ್ಟ್​ ಆಗಿದ್ದು ಫೀಲ್ಡಿಂಗ್​ ಡ್ರಿಲ್​ಗೆ. ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ಮಾರ್ಗದರ್ಶನದಲ್ಲಿ ಆಟಗಾರರು ಸುದೀರ್ಘ ಕಾಲ ಫೀಲ್ಡಿಂಗ್​ ಅಭ್ಯಾಸ ನಡೆಸಿದರು. ಅಭಿಶೇಕ್​ ಶರ್ಮಾ, ಶುಭ್​ಮನ್​ ಗಿಲ್​ ಮೊದಲು ಫೀಲ್ಡಿಂಗ್​ ಅಭ್ಯಾಸ ಆರಂಭಿಸಿದರು. ಆ ಬಳಿಕ ನಾಯಕ ಸೂರ್ಯಕುಮಾರ್​ ಯಾದವ್​ ಸೇರಿದಂತೆ ಉಳಿದೆಲ್ಲಾ ಆಟಗಾರರು ಜೊತೆಯಾಗಿದ್ದಾರೆ.
ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​, ಬೆವರಿಳಿಸಿದ ಬ್ಯಾಟರ್ಸ್​​.!
ಫೀಲ್ಡಿಂಗ್​ ಡ್ರಿಲ್​ ಮುಗೀತಾ ಇದ್ದಂತೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​​ಗಳು ಬ್ಯಾಟ್​ ಹಿಡಿದು ನೆಟ್ಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಸೂರ್ಯಕುಮಾರ್​ ಯಾದವ್​, ಸಂಜು ಸ್ಯಾಮ್ಸನ್​, ಶುಭ್​ಮನ್​ ಗಿಲ್​, ಅಭಿಷೇಕ್​ ಶರ್ಮಾ ಫಸ್ಟ್​ ಬ್ಯಾಚ್​​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ನೆಟ್ಸ್​​ನಲ್ಲಿ ಇವ್ರು ಬ್ಯಾಟಿಂಗ್​ ನಡೆಸಿದ್ದಾರೆ. ಜಿತೇಶ್​ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್​, ತಿಲಕ್​ ವರ್ಮಾ ಸೆಕೆಂಡ್​ ಬ್ಯಾಚ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇವ್ರ ಅಭ್ಯಾಸದ ಹೈಲೆಟ್ಸ್​​ ಅಂದ್ರೆ ಬಿಗ್​ ಶಾಟ್ಸ್​​. ಲೋವರ್​ ಆರ್ಡರ್​ ಬ್ಯಾಟರ್ಸ್​ ನೆಟ್ಸ್​ನಲ್ಲಿ ಬಿಗ್​ ಶಾಟ್ಸ್​ ಮೇಲೆ ಕಾನ್ಸಟ್ರೆಂಟ್​ ಮಾಡಿ ಅಭ್ಯಾಸ ನಡೆಸಿದ್ದಾರೆ. ಹೆಡ್​​ಕೋಚ್​ ಗೌತಮ್​ ಗಂಭೀರ್​, ಸಿಂತಾಶು ಕೋಟಕ್​ ಆಟಗಾರರ ಅಭ್ಯಾಸದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ನೆಟ್ಸ್​ನಲ್ಲಿ ಕೆಲ ಕಾಲ ಬೌಲಿಂಗ್​ ಮಾಡಿದ ಬೂಮ್ರಾ.!
ಇಂಗ್ಲೆಂಡ್​ ಪ್ರವಾಸದ ವೇಳೆ ಫಿಟ್​ನೆಸ್​ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದ ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಮೇಲೆ ಎಲ್ಲರ ಹದ್ದಿನ ಕಣ್ಣಿತ್ತು. ಆದ್ರೆ, ಮೊದಲ ದಿನದ ಅಭ್ಯಾಸದಿಂದ ಅಂತರ ಕಾಯ್ದುಕೊಂಡ ಬೂಮ್ರಾ ಕೆಲ ಕಾಲ ಮಾತ್ರ ಬೌಲಿಂಗ್​ ಮಾಡಿದ್ದಾರೆ. ಫಿಸಿಯೋ ಜೊತೆಗೆ ಬೂಮ್ರಾ ಹೆಚ್ಚು ಟೈಮ್​ ಸ್ಪೆಂಡ್​ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/09/07/gill_bumrha-2025-09-07-17-58-23.jpg)
ಜಿತೇಶ್​ ಶರ್ಮಾಗೆ ಸಂಜು ಸ್ಯಾಮ್ಸನ್ ಕೀಪಿಂಗ್​​​ ಟಿಪ್ಸ್​​.!
ಟೀಮ್​ ಇಂಡಿಯಾದ ಅಭ್ಯಾಸದಲ್ಲಿ ಹೆಚ್ಚು ಗಮನ ಸೆಳೆದಿದ್ದು ವಿಕೆಟ್​ ಕೀಪರ್​​ಗಳಾದ ಸಂಜು ಸ್ಯಾಮ್ಸನ್​ ಹಾಗೂ ಜಿತೇಶ್​ ಶರ್ಮಾ. ಜಿತೇಶ್​​ ಶರ್ಮಾ ವಿಕೆಟ್​ ಕೀಪಿಂಗ್​ ಅಭ್ಯಾಸ ನಡೆಸ್ತಾ ಇದ್ರೆ, ಸಂಜು ಸ್ಯಾಮ್ಸನ್​ ಟಿಪ್ಸ್​ ನೀಡ್ತಾ ಇದ್ರು. ಇದನ್ನ ನೋಡಿದ್ರೆ ಏಷ್ಯಾಕಪ್​ ಟೂರ್ನಿಯಲ್ಲಿ ಜಿತೇಶ್​​ ಶರ್ಮಾನೇ ಕೀಪಿಂಗ್​ ಡ್ಯೂಟಿ ಮಾಡೋ ಸಾಧ್ಯತೆ ಹೆಚ್ಚಿದೆ.
31 ದಿನಗಳ ಬಳಿಕ ಮೈದಾನಕ್ಕೆ ಕಮ್​ಬ್ಯಾಕ್​ ಮಾಡಿದ ಟೀಮ್​ ಇಂಡಿಯಾ ಆಟಗಾರರು ಅಭ್ಯಾಸದ ಅಖಾಡದಲ್ಲಿ ಬೆವರಿಳಿಸಿದ್ದಾರೆ. ಟೂರ್ನಿ ಆರಂಭಕ್ಕೆ ಇಂದೂ ಸೇರಿ ಇನ್ನೂ 2 ದಿನಗಳ ಸಮಯವಿದ್ದು, ಈ ಟೈಮ್​ನಲ್ಲಿ ಮತ್ತಷ್ಟು ಫೈನ್​ ಟೂನ್​ ಮಾಡಿಕೊಳ್ಳೋಕೆ ಅವಕಾಶವಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us