Advertisment

ಕಿಂಗ್​ ಕೊಹ್ಲಿನ ನೆನಪಿಸುತ್ತಿರುವ T20 ಪಂದ್ಯಗಳು.. ಟೀಮ್ ಇಂಡಿಯಾಗೆ ಬೇಕಾಗಿರೋದು ಏನೇನು?

ಟೀಮ್ ಇಂಡಿಯಾ ಗೆಲುವಿನ ನಡುವೆಯೂ ಕೊಹ್ಲಿಯ ಅಲಭ್ಯತೆ ಅಭಿಮಾನಿಗಳಲ್ಲಿ ಕಾಡಿತು. ಟೀಮ್​ ಇಂಡಿಯಾ ಬ್ಯಾಟರ್ಸ್​ ಮಾಡಿದ ಕೆಲ ತಪ್ಪುಗಳು ಅಭಿಮಾನಿಗಳಲ್ಲಿ ಕೊಹ್ಲಿ ಇರಬೇಕಿತ್ತು ಎಂಬ ಭಾವನೆಯನ್ನ ಮೂಡಿಸಿದೆ.

author-image
Bhimappa
VIRAT_KOHLI (3)
Advertisment

ಪಾಕಿಸ್ತಾನ ವಿರುದ್ಧದ ಕದನದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದ್ರೂ, ಅಭಿಮಾನಿಗಳಿಗೆ ಸಮಾಧಾನವಿಲ್ಲ. ಗೆಲುವಿನ ನಡುವೆಯೂ ಕೊಹ್ಲಿಯ ಅಲಭ್ಯತೆ ಅಭಿಮಾನಿಗಳಲ್ಲಿ ಕಾಡಿತು. ಟೀಮ್​ ಇಂಡಿಯಾ ಬ್ಯಾಟರ್ಸ್​ ಮಾಡಿದ ಕೆಲ ತಪ್ಪುಗಳು ಅಭಿಮಾನಿಗಳಲ್ಲಿ ಕೊಹ್ಲಿ ಇರಬೇಕಿತ್ತು ಎಂಬ ಭಾವನೆಯನ್ನ ಮೂಡಿಸಿದೆ. ಅಷ್ಟಕ್ಕೂ ಆದ ತಪ್ಪುಗಳು ಏನು?. 

Advertisment

ಇಂಡೋ-ಪಾಕ್​ ಹೈವೋಲ್ಟೇಜ್​ ಕದನ ಅಂತ್ಯಕಂಡಿದೆ. ನಿರೀಕ್ಷೆಯಂತೆ ಬದ್ಧವೈರಿಯನ್ನ ಬಗ್ಗು ಬಡಿದು ಟೀಮ್​ ಇಂಡಿಯಾ ದುಬೈ ನೆಲದಲ್ಲಿ ವಿಜಯ ಪತಾಕೆ ಹಾರಿಸಿದೆ. ಸೂರ್ಯನ ಸೈನ್ಯದ ದಾಳಿಗೆ ಪತರುಗುಟ್ಟಿದ ಪಾಕ್​ ಪಡೆ ಸೋತು ಬಿಲ ಸೇರಿದೆ. 

Virat Kohli: ಕೊಹ್ಲಿ ಅಂದ್ರೆ ನಿದ್ದೆಯಲ್ಲೂ ಕನವರಿಸ್ತಿದೆ ಪಾಕ್​! ನಾಳೆಯ ವಿರಾಟ ಪರ್ವಕ್ಕೆ ಕಾಯುತ್ತಿದ್ದಾರೆ ಫ್ಯಾನ್ಸ್​

ಗೆಲುವಿನ ನಡುವೆಯೂ ಕಾಡಿದ ಕೊಹ್ಲಿ ಅಲಭ್ಯತೆ.!

ಪಾಕಿಸ್ತಾನ ವಿರುದ್ಧದ ಬ್ಯಾಟಲ್​ನಲ್ಲಿ ಟೀಮ್​ ಇಂಡಿಯಾ ಫುಲ್​ ಡಾಮಿನೇಟಿಂಗ್​ ಪರ್ಫಾಮೆನ್ಸ್​ ನೀಡ್ತು. ಬ್ಯಾಟಿಂಗ್​ ಇರಲಿ, ಬೌಲಿಂಗ್​ ಇರಲಿ.. ಮೆನ್​ ಇನ್​ ಬ್ಲೂ ಆರ್ಮಿಯ ಅಬ್ಬರದ ಆಟಕ್ಕೆ ಪಾಕ್​ ಪಡೆ ಕಂಗಾಲ್​ ಆಗಿ ಹೋಯ್ತು. ಪಂದ್ಯದೂದ್ದಕ್ಕೂ ಅಧಿಪತ್ಯ ಸಾಧಿಸಿದ ಟೀಮ್​ ಇಂಡಿಯಾ 7 ವಿಕೆಟ್​​ ಭರ್ಜರಿ ಜಯ ಸಾಧಿಸಿತು. ಈ ಭರ್ಜರಿ ಗೆಲುವಿನ ಹೊರತಾಗಿಯೂ ಟೀಮ್​ ಇಂಡಿಯಾ ಬ್ಯಾಟಿಂಗ್​ ಯುನಿಟ್​ ಕೆಲ ತಪ್ಪನ್ನ ಮಾಡಿತು. ಇದ್ರಿಂದಾಗಿ ಕಿಂಗ್​​ ವಿರಾಟ್​ ಕೊಹ್ಲಿಯ ಅಲಭ್ಯತೆ ಅಭಿಮಾನಿಗಳಿಗೆ ಕಾಡ್ತು.  

ಪಾಕ್​ ಪಡೆಗೆ ವಿಕೆಟ್​ ‘ಗಿಫ್ಟ್​’ ಕೊಟ್ಟ ಬ್ಯಾಟರ್ಸ್​​.!

Advertisment

ದುಬೈನಲ್ಲಿ ನಡೆದ ಕದನದಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​​ ಆತುರಕ್ಕೆ ಬಿದ್ದಂತೆ ಕಾಣ್ತಿತ್ತು. ಶುಭ್​ಮನ್​ ಗಿಲ್​ ಆರಂಭದಲ್ಲೇ ಸುಲಭಕ್ಕೆ ವಿಕೆಟ್​ ಕೈ ಚೆಲ್ಲಿದ್ರು. ಮತ್ತೋರ್ವ ಆರಂಭಿಕ ಆಟಗಾರ ಅಭಿಷೇಕ್​ ಶರ್ಮಾ ಕೂಡ ಅಷ್ಟೇ. 13 ಎಸೆತಗಳಲ್ಲೇ 31 ರನ್​ಗಳಿಸಿದ್ದ ಅಭಿಷೇಕ್ ಶರ್ಮಾಗೆ ಬಿಗ್​ ಸ್ಕೋರ್​ ಕಲೆ ಹಾಕೋ ಅವಕಾಶವಿತ್ತು. ಆದ್ರೆ, ಆತುರಕ್ಕೆ ಬಿದ್ದು ವಿಕೆಟ್​ ಒಪ್ಪಿಸಿದ್ರು. 

ಹೀಗೆ ಔಟ್​ ಆಗಿದ್ದನ್ನ ನೋಡಿದ ಮೇಲೆ ಅಭಿಷೇಕ್​ ಶರ್ಮಾ ಕೊಹ್ಲಿಯಿಂದ ಕಲಿಯಬೇಕಿದೆ ಅನ್ನೋ​ ಅಭಿಪ್ರಾಯ ವ್ಯಕ್ತವಾಗ್ತಿದೆ. ಪಾಕ್​ ವಿರುದ್ಧದ ಪಂದ್ಯ ಅಂದ್ರೆ ಅದೆಷ್ಟೇ ಒತ್ತಡವಿದ್ರೂ ತಾಳ್ಮೆಯಿಂದ ಕೊಹ್ಲಿ ಇನ್ನಿಂಗ್ಸ್​ ಕಟ್ತಾ ಇದ್ರು. 2022ರ ಟಿ20 ವಿಶ್ವಕಪ್​ನ ಪಾಕ್​ ವಿರುದ್ಧದ ಪಂದ್ಯ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.! ಒಟ್ಟಾರೆ, ಆಡಿದ್ದ 125 ಟಿ20 ಪಂದ್ಯಗಳ ಪೈಕಿ 31 ಪಂದ್ಯಗಳಲ್ಲಿ ಕೊಹ್ಲಿ ನಾಟೌಟ್​ ಆಗಿದ್ರು. ಆದ್ರೆ, ಈವರೆಗೆ 18 ಪಂದ್ಯಗಳನ್ನಾಡಿರೋ ಅಭಿಷೇಕ್​​ ಒಂದೇ ಒಂದು ಪಂದ್ಯದಲ್ಲಿ ನಾಟೌಟ್​ ಆಗಿಲ್ಲ. 

ಮಿಡಲ್​ ಓವರ್​ಗಳಲ್ಲಿ ಸ್ಲೋ ಬ್ಯಾಟಿಂಗ್​.!

128 ರನ್​ಗಳ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಪವರ್​​ ಪ್ಲೇನಲ್ಲೇ 61 ರನ್​ಗಳಿಸಿತ್ತು. ಆದ್ರೆ, ಆ ಬಳಿಕ ಟೀಮ್​ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್​ ನಡೆಸಿದ್ರು. ಕನಿಷ್ಟ ಸ್ಟ್ರೈಕ್​ ರೊಟೆಶನ್​ ಕೂಡ ಮಾಡದೆ ಸೂರ್ಯಕುಮಾರ್​, ತಿಲಕ್​ ವರ್ಮಾ ಪರದಾಡಿದ್ರು. 7ರಿಂದ 13ನೇ ಓವರ್​ವರೆಗೆ ಒಟ್ಟು 15 ಎಸೆತಗಳನ್ನ ಡಾಟ್​​ ಮಾಡಿದ್ರು. ಅಂದ್ರೆ, 7 ಓವರ್​ಗಳ ಪೈಕಿ 2 ಓವರ್​ 3 ಎಸೆತಗಳಲ್ಲಿ ರನ್ನೇ ಬರಲಿಲ್ಲ. ಆದ್ರೆ, ವಿರಾಟ್​ ಕೊಹ್ಲಿ ಇದ್ದಿದ್ರೆ ಸಿಂಗಲ್ಸ್​​, ಡಬಲ್ಸ್​​ಗಳಿಸ್ತಾ ಸ್ಟ್ರೈಕ್​ ರೊಟೆಶನ್​ ಮಾಡೋದ್ರ ಜೊತೆಗೆ ರನ್​​ ಕೂಡ ಗಳಿಸ್ತಿದ್ರು. 

ಮಿಸ್ಟ್ರಿ ಬೌಲರ್ಸ್​​ ಎದುರಿಸೋದ್ರಲ್ಲಿ ಕೊಹ್ಲಿ ಪಂಟರ್​.!

Advertisment

ಅದ್ಬುತ ಆರಂಭ ಪಡೆದ ಟೀಮ್​ ಇಂಡಿಯಾದ ಬ್ಯಾಟಿಂಗ್​ ಸ್ಪಿನ್​​ ಅಟ್ಯಾಕ್ ಆರಂಭವಾದ ಮೇಲೆ ಸ್ಲೋ ಡೌನ್​ ಆಯ್ತು. ಶಾಹೀನ್​ ಅಫ್ರಿದಿ ಹಾಕಿದ 2 ಓವರ್​​ಗಳಲ್ಲೇ 23 ರನ್​ಗಳಿಸಿದ ಟೀಮ್​ ಇಂಡಿಯಾ, ಅಬ್ರಾರ್​ ಅಹ್ಮದ್​ ಹಾಕಿದ 4 ಓವರ್​ಗಳಿಂದ ಗಳಿಸಿದ್ದು ಕೇವಲ 16 ರನ್​ ಮಾತ್ರ. ಸೈಮ್​ ಅಯುಬ್​ ಬೌಲಿಂಗ್​ನಲ್ಲಿ ರನ್​ ಬಂದ್ರೂ 3 ವಿಕೆಟ್​ಗಳನ್ನ ಕಳೆದುಕೊಂಡಿತು. ಸ್ಪಿನ್​​ ವಿರುದ್ಧ ಸ್ವಲ್ಪ ಮಟ್ಟಿಗೆ ಇಂಡಿಯನ್​ ಬ್ಯಾಟರ್ಸ್​​ ಅನ್​​ಕಂಫರ್ಟ್​ಬಲ್​ ಆಗಿದ್ರು. ಅದೇ ಕೊಹ್ಲಿ ಇದ್ದಿದ್ರೆ ಹೀಗಾಗ್ತಾ ಇರಲಿಲ್ಲ. ಸ್ಪಿನ್ ಎದುರಿನ ದಾಖಲೆಯೇ ಇದನ್ನ ಹೇಳುತ್ತೆ. 

ಇದನ್ನೂ ಓದಿ: MS ಧೋನಿ ಕ್ಯಾಪ್ಟನ್ಸಿಯಲ್ಲಿ ಅನ್ಯಾಯ..ಅನ್ಯಾಯ.. ಹುಕ್ಕಾ ಗ್ಯಾಂಗ್​​ಗೆ ತಂಡದಲ್ಲಿ ಸ್ಥಾನ..!

Gill and abhishek sharma

T20 ಫಾರ್ಮೆಟ್​ನಲ್ಲಿ ಕೊಹ್ಲಿ ಬ್ಯಾಟಿಂಗ್​

Advertisment

ಟಿ20 ಫಾರ್ಮೆಟ್​ನಲ್ಲಿ ವೇಗಿಗಳ ಎದುರು 41 ಬಾರಿ ಔಟ್​ ಆಗಿದ್ದ ವಿರಾಟ್​ ಕೊಹ್ಲಿ 44.19ರ ಸರಾಸರಿಯಲ್ಲಿ 2,759 ರನ್​ಗಳಿಸಿದ್ರು. ಇನ್ನು, ಸ್ಪಿನ್ನರ್ಸ್​ ಎದುರು 14 ಬಾರಿ ಔಟ್​ ಆಗಿದ್ದ ಕೊಹ್ಲಿ 62.13ರ ಅದ್ಭುತ ಸರಾಸರಿಯಲ್ಲಿ 1429 ರನ್​ಗಳಿಸಿದ್ರು. 

In his final T20I game, Kohli shows what India will miss.. T20 ವಿಶ್ವಕಪ್​ ಫೈನಲ್​ ಗೆದ್ದ ಬಳಿಕ ಕೊಹ್ಲಿ ನಿವೃತ್ತಿ ಹೇಳಿದ್ರಲ್ವಾ.? ಈ  ಲೈನ್ ಸಖತ್​​​ ವೈರಲ್​ ಆಗಿತ್ತು. ದುಬೈನಲ್ಲಿ ಪಾಕ್​ ಎದುರು ಟೀಮ್​ ಇಂಡಿಯಾ ಆಡಿದ ರೀತಿ ಈ ಮಾತನ್ನ ಮತ್ತೆ ನೆನಪಿಸಿದೆ. ಮುಂದಿನ ಪಂದ್ಯಕ್ಕೂ ಮುನ್ನ ಕೊಹ್ಲಿಯನ್ನ ಸ್ಪೂರ್ತಿಯಾಗಿ ತೆಗೆದುಕೊಂಡು ಆಟಗಾರರು ಕೆಲ ಬದಲಾವಣೆ ಮಾಡಿಕೊಳ್ಳಬೇಕಿದೆ. ಆ ಮೈಂಡ್​ಸೆಟ್​​ ಬೆಳೆಸಿಕೊಳ್ಳಬೇಕಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Asia Cup 2025 Indian cricket team news T20I team Virat Kohli
Advertisment
Advertisment
Advertisment