ಈ ಆಟಗಾರರನ್ನ ಟೀಮ್ ಇಂಡಿಯಾಕ್ಕೆ ಆಯ್ಕೆನೇ ಮಾಡ್ತಿಲ್ಲ ಯಾಕೆ.. ಏಷ್ಯಾ ಕಪ್​ನಲ್ಲೂ ಇಲ್ಲ ಚಾನ್ಸ್​!

ಟೀಮ್​ ಇಂಡಿಯಾ ಪರವೂ ಮಿಂಚಿದ್ರೂ, ಐಪಿಎಲ್​ನಲ್ಲಿ ಅಬ್ಬರಿಸಿದ್ರು. 2026ರ ಟಿ20 ವಿಶ್ವಕಪ್​ ಆಡಬೇಕು ಅನ್ನೋ ಕನಸು ಕಂಡಿದ್ದರು. ಆದ್ರೆ, ಕೆ.ಎಲ್ ರಾಹುಲ್ ಸೇರಿದಂತೆ ಈ ಆಟಗಾರರ ಕನಸು ನುಚ್ಚು ನೂರಾಗಿದೆ.

author-image
Bhimappa
KL_RAHUL_SHREYAS_IYER (1)
Advertisment

ಟೀಮ್​ ಇಂಡಿಯಾ ಪರವೂ ಮಿಂಚಿದ್ರೂ, ಐಪಿಎಲ್​ನಲ್ಲಿ ಅಬ್ಬರಿಸಿದ್ರು. 2026ರ ಟಿ20 ವಿಶ್ವಕಪ್​ ಆಡಬೇಕು ಅನ್ನೋ ಕನಸು ಕಂಡಿದ್ದರು. ಆದ್ರೆ, ಆ ಕನಸು ನುಚ್ಚು ನೂರಾಗಿದೆ. ಶ್ರೇಯಸ್​​ ಅಯ್ಯರ್​, ಯಶಸ್ವಿ ಜೈಸ್ವಾಲ್​, ಕೆ.ಎಲ್​ ರಾಹುಲ್​​​.. ಈ ಘಟಾನುಘಟಿಗಳು​ ಇನ್ಮುಂದೆ ಟಿ20 ಫಾರ್ಮೆಟ್​​ನಲ್ಲಿ ಕಾಣಿಸಿಕೊಳ್ಳೋದೆ ಡೌಟ್​.

ಏಷ್ಯಾಕಪ್​ ಟೂರ್ನಿಗೆ ಕೊನೆಗೂ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಒಂದು ಗಂಟೆಗೂ ಅಧಿಕ ಕಾಲ ಹೈವೋಲ್ಟೆಜ್​ ಸಭೆ ನಡೆಸಿ ಸೆಲೆಕ್ಷನ್​ ಕಮಿಟಿ 15 ಆಟಗಾರರಿಗೆ ಮಣೆ ಹಾಕಿದೆ. ಸರ್​​ಪ್ರೈಸ್​​ ರೀತಿಯಲ್ಲಿ ಕೆಲ ಆಟಗಾರರಿಗೆ ಚಾನ್ಸ್​ ಸಿಕ್ಕಿದ್ರೆ, ಇನ್ನು ಕೆಲವರಿಗೆ ಶಾಕ್​ ನೀಡಲಾಗಿದೆ. ಟಿ20 ಫಾರ್ಮೆಟ್​​ನಿಂದ ನೀವು ಔಟ್​​ ಅನ್ನೋ ಪರೋಕ್ಷ ಸಂದೇಶವನ್ನೂ ರವಾನಿಸಲಾಗಿದೆ. ಇಷ್ಟೇ ಅಲ್ಲ.. ಬಿಗ್​ ಸ್ಟೇಜ್​ಗಳಲ್ಲಿ ಸಾಮರ್ಥ್ಯ ನಿರೂಪಿಸಿರೋ ಆಟಗಾರರ 2026ರ ವಿಶ್ವಕಪ್​ ಆಡೋ ಕನಸು ನುಚ್ಚು ನೂರಾಗಿದೆ. 

ಶ್ರೀಲಂಕಾ ವಿರುದ್ಧ ಮೊದಲ ಟಿ20: ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​!

ಶ್ರೇಯಸ್​ ಅಯ್ಯರ್​ಗೆ ಶಾಕ್​ ಕೊಟ್ಟ ಸೆಲೆಕ್ಟರ್ಸ್​​.!

ಏಷ್ಯಾಕಪ್​ ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ಶ್ರೇಯಸ್​​ ಅಯ್ಯರ್​ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಾಂಪಿಯನ್ಸ್​ ಟ್ರೋಫಿಯಲ್ಲಿ ಶ್ರೇಯಸ್​​ ಅಯ್ಯರ್​ ಅದ್ಭುತ ಪ್ರದರ್ಶನ ನೀಡಿದ್ರು. ಐಪಿಎಲ್​ ಟೂರ್ನಿಯಲ್ಲಿ 175ರ ಸ್ಟ್ರೈಕ್​ರೇಟ್​​ನಲ್ಲಿ ಶ್ರೇಯಸ್​ ಬ್ಯಾಟ್​ ಸೌಂಡ್​ ಮಾಡಿತ್ತು. ಹೀಗಾಗಿ ಏಷ್ಯಾಕಪ್​​ನೊಂದಿಗೆ ಶ್ರೇಯಸ್​​ ಅಯ್ಯರ್​ ಟಿ20 ಫಾರ್ಮೆಟ್​​ಗೆ ಕಮ್​​ಬ್ಯಾಕ್ ಮಾಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ, ಶ್ರೇಯಸ್​​ ಅಯ್ಯರ್​ಗೆ ಸೆಲೆಕ್ಟರ್ಸ್​ ಶಾಕ್​ ಕೊಟ್ಟಿದ್ದಾರೆ. 

ವಿಶ್ವಕಪ್​ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್​ಗೆ ಕೊಕ್.!

ಏಷ್ಯಾಕಪ್​ ಟೀಮ್​ ಅನೌನ್ಸ್​ಮೆಂಟ್​​ಗೂ ಮುನ್ನ ಯಾರೊಬ್ಬರೂ ಕೂಡ ಜೈಸ್ವಾಲ್​ಗೆ ಗೇಟ್​ಪಾಸ್​ ನೀಡಲಾಗುತ್ತೆ ಅನ್ನೋದನ್ನ ಕನಿಷ್ಠ ಊಹೆ ಕೂಡ ಮಾಡಿರಲಿಲ್ಲ. ಆದ್ರೆ, ಟಿ20 ತಂಡದ ಖಾಯಂ ಓಪನರ್​ ಎನಿಸಿಕೊಂಡಿದ್ದ ಯಶಸ್ವಿ ಜೈಸ್ವಾಲ್​ಗೆ ಶಾಕ್​ ಎದುರಾಗಿದೆ. ಟೀಮ್​ ಇಂಡಿಯಾ ಪರ ಟಿ20 ಫಾರ್ಮೆಟ್​ನಲ್ಲಿ 164ರ ಸ್ಟ್ರೈಕ್​​ನಲ್ಲಿ ರನ್​ಗಳಿಸಿದ್ರ ಹೊರತಾಗಿಯೂ ಜೈಸ್ವಾಲ್​ನ ಡ್ರಾಪ್​ ಮಾಡಲಾಗಿದೆ. 2024ರ ವಿಶ್ವಕಪ್​ ಗೆದ್ದ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಸ್ಟ್ಯಾಂಡ್​ ಬೈ ಪ್ಲೇಯರ್​ ಮಾಡಿ, ಅದೇ ವಿಶ್ವಕಪ್​ ತಂಡದಲ್ಲಿ ಬ್ಯಾಕ್ ಅಪ್​ ಪ್ಲೇಯರ್​ ಆಗಿದ್ದ ಗಿಲ್​ಗೆ ಮಣೆ ಹಾಕಲಾಗಿದೆ. 

ಸ್ಥಾನದ ನಿರೀಕ್ಷೆಯಲ್ಲಿದ್ದ ಸಾಯಿ ಸುದರ್ಶನ್​ಗೆ ನಿರಾಸೆ.!

ಯುವ ಆಟಗಾರ ಸಾಯಿ ಸುದರ್ಶನ್​ ಕೂಡ ಏಷ್ಯಾಕಪ್​​ ಟೂರ್ನಿಯ ತಂಡದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ರು. ಐಪಿಎಲ್​ ಸೀಸನ್​ 18ರಲ್ಲಿ ಹೈಯೆಸ್ಟ್​ ರನ್​ ಗೆಟರ್​​ ಆಗಿ ಹೊರಹೊಮ್ಮಿದ್ದ ಸಾಯಿ ಸುದರ್ಶನ್​​ನ ಸೆಲೆಕ್ಟರ್ಸ್​ ಆಯ್ಕೆಗೆ ಪರಿಗಣಿಸ್ತಾರೆ ಎಂಬ ಚರ್ಚೆಗಳು ನಡೆದಿದ್ವು. ಸಾಯಿ ಸುದರ್ಶನ್​ ಸೆಲೆಕ್ಷನ್​ ಬಗ್ಗೆ ಚರ್ಚೆಗಳು ನಡೆದಿದ್ದು ನಿಜ. ಆದ್ರೆ, ಸ್ಥಾನ ಸಿಕ್ಕಿಲ್ಲ. ಅವಕಾಶದ ನಿರೀಕ್ಷೆಯಲ್ಲಿದ್ದ ಸುದರ್ಶನ್​ಗೆ ನಿರಾಸೆ ಎದುರಾಗಿದೆ. 

ಕನ್ನಡಿಗ KL ರಾಹುಲ್​ ಕನಸು ನುಚ್ಚು ನೂರು.!

2026ರ ಟಿ20 ವಿಶ್ವಕಪ್​ ಆಡೋದು ನನ್ನ ಟಾರ್ಗೆಟ್​ ಎಂದಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಕನಸು ಕಮರಿದೆ. ಐಪಿಎಲ್​ಗೂ ಮುನ್ನ ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೀಬೇಕು ಎಂದಿದ್ದ ರಾಹುಲ್​ ಸಿಕ್ಕಾಪಟ್ಟೆ ಸಿದ್ಧತೆ ನಡೆಸಿದ್ರು. ಭರ್ಜರಿ ತಯಾರಿ ನಡೆಸಿ ಅಖಾಡಕ್ಕಿಳಿದಿದ್ದ ರಾಹುಲ್​, ಅದಕ್ಕೆ ತಕ್ಕಂತೆ ಪರ್ಫಾಮೆನ್ಸ್​ ಕೂಡ ನೀಡಿದ್ರು. 150ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದ ರಾಹುಲ್​, 540 ರನ್​ಗಳಿಸಿ ಟಿ20 ತಂಡಕ್ಕೆ ಕಮ್​ಬ್ಯಾಕ್​ ಮಾಡೋದನ್ನ ಎದುರು ನೋಡ್ತಿದ್ರು. ಆದ್ರೆ, ಏಷ್ಯಾಕಪ್​ ತಂಡದಲ್ಲಿ ರಾಹುಲ್​ನ ಸೈಡ್​​ಲೈನ್​ ಮಾಡಲಾಗಿದೆ. ಇದ್ರೊಂದಿಗೆ ವಿಶ್ವಕಪ್​ ಆಡೋ ಕನಸು ಕೂಡ ಕಮರಿದೆ. 

ಇದನ್ನೂ ಓದಿ:ಯಶ್ ಜತೆ ಹೆಜ್ಜೆ ಹಾಕ್ತಿದ್ದಾರೆ ಈ ಬ್ಯೂಟಿ ಹೀರೋಯಿನ್ಸ್​.. ‘ಟಾಕ್ಸಿಕ್’ನಲ್ಲಿ ಎಷ್ಟು ನಾಯಕಿಯರು ಇದ್ದಾರೆ..?

yashaswi jaiswal shreyas iyer
ಜೈಸ್ವಾಲ್ ಮತ್ತು ಅಯ್ಯರ್

ಆಲ್​​​ರೌಂಡರ್​ ಸುಂದರ್​ಗೂ ಸಿಗದ ಸ್ಥಾನ.!​ 

ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಕಾಂಟ್ರಿಬ್ಯೂಟ್​ ಮಾಡ್ತಿದ್ದ ವಾಷಿಂಗ್ಟನ್​ ಸುಂದರ್​ ಟಿ20 ಈ ಹಿಂದೆ ಟಿ20 ಸೆಟಪ್​ನ ಭಾಗವಾಗಿದ್ರು. ಸುಂದರ್​ ಇದ್ರೆ ಲೋವರ್​ ಆರ್ಡರ್​ ಬ್ಯಾಟಿಂಗ್​ಗೆ ಬಲ ಬರುತ್ತೆ. ಜೊತೆಗೆ ಬೌಲಿಂಗ್​ಗೂ ವೆರೈಟಿ ಸಿಗುತ್ತೆ. ಇದ್ರಿಂದ ಟೀಮ್​​ಗೆ ಬ್ಯಾಲೆನ್ಸ್​ ಬರುತ್ತೆ ಅಂತಾ ಟೀಮ್​ ಮ್ಯಾನೇಜ್​ಮೆಂಟ್​​ ಈ ಹಿಂದೆ ಹೇಳಿತ್ತು. ಆದ್ರೆ, ತಂಡಕ್ಕೆ ಬ್ಯಾಲೆನ್ಸ್​ ತರ್ತಾ ಇದ್ದ ಸುಂದರ್​ನ ಮೇನ್​ ಟೀಮ್​ನಿಂದ ಡ್ರಾಪ್​​ ಮಾಡಲಾಗಿದೆ.

ಸೆಲೆಕ್ಷನ್​​ಗೂ ಮುನ್ನ ಪ್ರಸಿದ್ಧ ಕೃಷ್ಣ, ಮೊಹಮ್ಮದ್​ ಸಿರಾಜ್​ ಹೆಸರೂ ಚರ್ಚೆಯಾಗಿದ್ವು. ಯುವ ಆಟಗಾರರಾದ ವೈಭವ್​ ಸೂರ್ಯವಂಶಿ, ಪ್ರಿಯಾಂಶ್​ ಆರ್ಯಗೆ ಚಾನ್ಸ್​​ ನೀಡಬೇಕು ಎಂದು ಮಾಜಿ ಕ್ರಿಕೆಟರ್ಸ್​​ ಒತ್ತಾಯಿಸಿದ್ರು. ಆದ್ರೆ, ಸೆಲೆಕ್ಷನ್​ ಕಮಿಟಿ ಇವರ್ಯಾರಿಗೂ ಚಾನ್ಸ್​ ನೀಡಿಲ್ಲ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Prasidh Krishna KL Rahul Asia Cup 2025 KL Rahul T20 cricket players
Advertisment