ಗಿಲ್​ಗಾಗಿ ಯಶಸ್ವಿ ಜೈಸ್ವಾಲ್ ಬಲಿ.. ಏಷ್ಯಾಕಪ್​ ಓಪನರ್​ ಸ್ಲಾಟ್​ನಲ್ಲಿ ಮತ್ಯಾರು ಟಾರ್ಗೆಟ್​?

ತಂಡದ ಆಯ್ಕೆ ಮಾಡಿದಾಗಲೇ ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ಗಾಗಿ ಯಶಸ್ವಿ ಜೈಸ್ವಾಲ್​ನ ಬಲಿ ಹಾಕಿದ್ದಾಗಿದೆ. ಇದೀಗ ಗಿಲ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಕಲ್ಪಿಸೋಕೆ ಯಾರ ತಲೆದಂಡವಾಗುತ್ತೆ ಅನ್ನೋ ಪ್ರಶ್ನೆ ಹುಟ್ಟಿದೆ.

author-image
Bhimappa
Shubman_Gill (5)
Advertisment

ಏಷ್ಯಾಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾದಲ್ಲಿ ಸೆಲೆಕ್ಷನ್​ನ ಟೆನ್ಶನ್​ ಶುರುವಾಗಿದೆ. ತಂಡದ ಆಯ್ಕೆ ಮಾಡಿದಾಗಲೇ ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ಗಾಗಿ ಯಶಸ್ವಿ ಜೈಸ್ವಾಲ್​ನ ಬಲಿ ಹಾಕಿದ್ದಾಗಿದೆ. ಇದೀಗ ಗಿಲ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಕಲ್ಪಿಸೋಕೆ ಯಾರ ತಲೆದಂಡವಾಗುತ್ತೆ ಅನ್ನೋ ಪ್ರಶ್ನೆ ಹುಟ್ಟಿದೆ. ಅಭಿಷೇಕ್​ ಶರ್ಮಾ VS  ಸಂಜು ಸ್ಯಾಮ್ಸನ್​ ಇಬ್ಬರಲ್ಲಿ ಯಾರು ಔಟ್ ಆಗ್ತಾರೆ ಅನ್ನೋದು ಕುತೂಹಲ. 

ಮಹತ್ವದ ಏಷ್ಯಾಕಪ್​ ಟೂರ್ನಿ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ನಾಳೆಯಿಂದ ಪ್ರತಿಷ್ಟೆಯ ಟೂರ್ನಿ ಆರಂಭವಾಗಲಿದ್ದು ಸಮರ ಗೆದ್ದು ಬೀಗಲು ಏಷ್ಯನ್​ ತಂಡಗಳು ಭರ್ಜರಿಯಾಗಿ ಸಜ್ಜಾಗಿವೆ. ತಿಂಗಳ ಅಂತರದ ಬಳಿಕ ಫೀಲ್ಡ್​ ಎಂಟ್ರಿ ಕೊಡೋಕೆ ಟೀಮ್​ ಇಂಡಿಯಾ ಕೂಡ ಸಜ್ಜಾಗಿದೆ. ಕಳೆದ 2 ದಿನಗಳಿಂದ ದುಬೈನ ಐಸಿಸಿ ಕ್ರಿಕೆಟ್​ ಅಕಾಡೆಮಿಯಲ್ಲಿ ಕಠಿಣ ಅಭ್ಯಾಸ ನಡೆಸಿ ತಯಾರಾಗಿದೆ.

suryakumar_SANJU

ಜೈಸ್ವಾಲ್​ ಆಯ್ತು.. ಗಿಲ್​ಗಾಗಿ ಮುಂದಿನ ಬಲಿ ಯಾರು.?

ಏಷ್ಯಾಕಪ್​​ನ ಮೊದಲ ಕದನಕ್ಕೂ ಮುನ್ನ ಟೀಮ್​ ಇಂಡಿಯಾಗೆ ಸೆಲೆಕ್ಷನ್​ ಟೆನ್ಶನ್​ ಶುರುವಾಗಿದೆ. ಆರಂಭಿಕನ ಸ್ಥಾನದಲ್ಲಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋದು ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿದೆ. ಶುಭ್​ಮನ್​ ಗಿಲ್​ನ ಟಿ20 ಸೆಟಪ್​ಗೆ ವಾಪಾಸ್​​​ ಕರೆತರೋ ನಿಟ್ಟಿನಲ್ಲಿ ಈಗಾಗಲೇ ಯಶಸ್ವಿ ಜೈಸ್ವಾಲ್​ನ ಬಲಿ ಹಾಕಿದ್ದಾಗಿದೆ. ಇದೀಗ ಗಿಲ್​​ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಲು ಯಾರಿಗೆ ಕೊಕ್​ ನೀಡಲಾಗುತ್ತೆ ಅನ್ನೋದು ಕುತೂಹಲ ಮಾಡಿಸಿದೆ. 

ಅಭಿಷೇಕ್​ ಶರ್ಮಾ ಮೇಲೆ ಮ್ಯಾನೇಜ್​ಮೆಂಟ್​ ಒಲವು.!

ಟಿ20 ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವ ಶುಭ್​ಮನ್​ ಗಿಲ್​ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಗಿಲ್​ನ ಮುಂದಿನ ಆಲ್​​ಫಾರ್ಮೆಟ್​ ಕ್ಯಾಪ್ಟನ್​ ಮಾಡೋಕೆ ಹೊರಟಿರೋ ಬಿಸಿಸಿಐ ಈಗಾಗಲೇ ಟಿ20 ತಂಡದಲ್ಲೂ ಉಪನಾಯಕನೂ ಪಟ್ಟವನ್ನೂ ಕಟ್ಟಿದೆ. ಹೀಗಾಗಿ ಓಪನರ್​​ ಆಗಿ ಗಿಲ್​ ​ಆಡೋದು ಫಿಕ್ಸ್​​. ಗಿಲ್​ ಜೊತೆಗಾರ ಯಾರು ಅನ್ನೋದು ಸದ್ಯಕ್ಕಿರೋ ಪ್ರಶ್ನೆಯಾಗಿದೆ. ಬಹುತೇಕ ಗಿಲ್​ ಜೊತೆಗೆ ಅಭಿಷೇಕ್​ ಶರ್ಮಾ ಇನ್ನಿಂಗ್ಸ್​​ ಆರಂಭಿಸೋ ಸಾಧ್ಯತೆ ದಟ್ಟವಾಗಿದೆ.

ಭಾರತದ ಪರ 4 ಟಿ20 ಪಂದ್ಯಗಳನ್ನಾಡಿದ್ರೂ ಆರಂಭಿಕನಾಗಿ ಅಭಿಷೇಕ್​ ಶರ್ಮಾ ಸಕ್ಸಸ್​ ಕಂಡಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್​ ಆಗಿದ್ದ ಅಭಿಷೇಕ್​ ನಂತರದ 3 ಪಂದ್ಯಗಳಲ್ಲಿ ರನ್​ ಅಭಿಷೇಕ ಮಾಡಿದ್ದಾರೆ. 2ನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿ, 3ನೇ ಪಂದ್ಯದಲ್ಲಿ ಅಜೇಯ 71 ರನ್​ಗಳಿಸಿದ್ರು. 4ನೇ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ ಸಾಮರ್ಥ್ಯ ನಿರೂಪಿಸಿದ್ದಾರೆ. ಸಾಲಿಡ್​​ ಪರ್ಫಾಮೆನ್ಸ್​ ನೀಡಿರೋ ಅಭಿಷೇಕ್​ನ ಕಣಕ್ಕಿಳಿಸಿದ್ರೆ, ಲೆಫ್ಟ್​-ರೈಟ್​ ಕಾಂಬಿನೇಷನ್​ ಕೂಡ ಸಿಗಲಿದೆ. ಹೀಗಾಗಿ ಮತ್ತೊರ್ವ ಆರಂಭಿಕನಾಗಿ ಅಭಿಷೇಕ್​ನ ಆಡಿಸೋ ಸಾಧ್ಯತೆಯೇ ಹೆಚ್ಚಿದೆ. 

ಟೀಮ್​ ಮ್ಯಾನೇಜ್​ಮೆಂಟ್​ನಿಂದ ಸಂಜುಗೆ ಅನ್ಯಾಯ​.?

ಅಭಿಷೇಕ್​ ಶರ್ಮಾರಂತೆ ಸಂಜು ಸ್ಯಾಮ್ಸನ್​ ಕೂಡ ಓಪನರ್​ ಆಗಿ ಸಾಲಿಡ್​ ಆಟವಾಡಿದ್ದಾರೆ. ಟೀಮ್​ ಇಂಡಿಯಾ ಪರ ಆಡಿದ ಕೊನೆಯ 10 ಟಿ20 ಪಂದ್ಯಗಳಲ್ಲಿ 3 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇರಳ ಕ್ರಿಕೆಟ್​ ಲೀಗ್​ನಲ್ಲೂ ಆರಂಭಿಕನಾಗಿ ಅಬ್ಬರಿಸಿದ್ದಾರೆ. ಸಂಜುವಿನ ಅಬ್ಬರಕ್ಕೆ ಹೋಲಿಸಿದ್ರೆ, ಗಿಲ್​ ಡಲ್​ ಆಗಿದ್ದಾರೆ. ಆದ್ರೂ, ಗಿಲ್​ ಆರಂಭಿಕನಾಗಿ ಕಣಕ್ಕಿಳಿಯೋದು ಫಿಕ್ಸ್​​ ಆಗಿದೆ. ಟೀಮ್​ ಮ್ಯಾನೇಜ್​​ಮೆಂಟ್​ನ ಆಟಕ್ಕೆ ಮತ್ತೊಮ್ಮೆ  ಸಂಜು ಸ್ಯಾಮ್ಸನ್​ ಬಲಿಯಾಗೋದು ಕನ್​ಫರ್ಮ್​​.!

ಇದನ್ನೂ ಓದಿ: MS ಧೋನಿ ಅಭಿನಯದ ಹೊಸ ಸಿನಿಮಾದ ಟೀಸರ್ ಔಟ್​.. ಕೂಲ್ ಕ್ಯಾಪ್ಟನ್​ ವೈಲ್ಡ್​

ABHISHEK_SHARMA (1)

ಶುಭ್​ಮನ್​ ಗಿಲ್​ಗಾಗಿ ಸಂಜು ಸ್ಯಾಮ್ಸನ್​ ‘ಸ್ಥಾನ ಪಲ್ಲಟ’.!

ಗಿಲ್​ಗಾಗಿ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯತೆ ಇದೀಗ ಸಂಜುಗೆ ಎದುರಾಗಿದೆ. ಆರಂಭಿಕನ ಸ್ಥಾನ ಬಿಟ್ಟು ಮಿಡಲ್​ ಆರ್ಡರ್​​ನಲ್ಲಿ ಆಡಬೇಕಿದೆ. ಆದ್ರೆ, ಇಲ್ಲೂ ಸ್ಥಾನ ಸಿಗೋದು ಅನುಮಾನವೇ ಆಗಿದೆ. 3ನೇ ಕ್ರಮಾಂಕದಲ್ಲಿ ಆಡೋಕೆ ತಿಲಕ್​ ವರ್ಮಾ ರೆಡಿಯಾಗಿದ್ರೆ, ಸೂರ್ಯಕುಮಾರ್​ ಯಾದವ್​ 4ನೇ ಕ್ರಮಾಂಕದ ಬ್ಯಾಟರ್​ ಆಗಿದ್ದಾರೆ. ಸಂಜು ಸ್ಯಾಮ್ಸನ್​ ಉಳಿದಿರೋ ಸ್ಲಾಟ್​ ಅಂದ್ರೆ ಅದು 5ನೇ ಕ್ರಮಾಂಕ. ಟೀಮ್​ ಮ್ಯಾನೇಜ್​ಮೆಂಟ್​ ಗಟ್ಟಿ ನಿರ್ಧಾರ ತಳೆದು ತಿಲಕ್​ ವರ್ಮಾಗೆ ಕೊಕ್​ ಕೊಟ್ರೆ 3ನೇ ಕ್ರಮಾಂಕ ಸಿಗಲಿದೆ. ಇಲ್ಲದಿದ್ರೆ 5ನೇ ಕ್ರಮಾಂಕವೇ ಗತಿ. 

2015ರಲ್ಲಿ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ್ರೂ ಸಂಜು ಸ್ಯಾಮ್ಸನ್​ಗೆ ದೊಡ್ಡ ಸಕ್ಸಸ್​​ ಅನ್ನೋದು ಸಿಕ್ಕಿಲ್ಲ. ಅದಕ್ಕೆ ಮುಖ್ಯವಾದ ಕಾರಣನೇ ಸರಿಯಾದ ಸ್ಲಾಟ್​ ಸಿಗದಿರೋದು. ಫಿಕ್ಸ್​ ಸ್ಲಾಟ್​ ಅಂತಾ ಸಂಜುಗೆ ಸಿಗಲೇ ಇಲ್ಲ. ಕೊನೆಗೂ ಕಳೆದ ವರ್ಷ ಸಂಜುಗೆ ತನ್ನ ಫೇವರಿಟ್​ ಓಪನರ್​ ಸ್ಥಾನ ಸಿಕ್ಕಿತ್ತು. ಆರಂಭಿಕನಾಗಿ ಸಿಕ್ಕ ಅವಕಾಶವನ್ನ ಎರಡೂ ಕೈಯಲ್ಲಿ ಬಾಚಿಕೊಂಡಿದ್ರು. 10 ಪಂದ್ಯದಲ್ಲಿ 3 ಸೆಂಚುರಿ ಸಿಡಿಸಿ ಮಿಂಚಿದ್ರೂ ಫಲ ಸಿಗ್ತಿಲ್ಲ. ಗಿಲ್​ಗಾಗಿ ಮತ್ತೆ ಸಂಜು ಬಲಿಪಶುವಾಗ್ತಿದ್ದಾರೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Shubman Gill Captaincy Sanju Samson Asia Cup 2025
Advertisment