/newsfirstlive-kannada/media/media_files/2025/08/16/kl_rahul_byte-2025-08-16-16-25-26.jpg)
ಬಹು ನಿರೀಕ್ಷಿತ 2025ರ ಏಷ್ಯಾ ಕಪ್ ಟಿ20 ಸೆಪ್ಟೆಂಬರ್ 9 ರಿಂದ ಅದ್ಧೂರಿಯಾಗಿ ಯುಎಇನಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ಆಟಗಾರರ ಆಯ್ಕೆ ನಡೆಯಲಿದೆ. ತಂಡಕ್ಕೆ ಯಾರು ಯಾರು ಆಯ್ಕೆ ಆಗುತ್ತಾರೆ ಎನ್ನುವುದು ಈಗಾಗಲೇ ಆಟಗಾರರಲ್ಲಿ ಕುತೂಹಲ ಮೂಡಿಸಿದೆ. ಹೀಗಾಗಿ ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೂ ಅವಕಾಶ ಸಿಗುತ್ತಾ ಎಂದು ಕಾದು ನೋಡಬೇಕಿದೆ.
/filters:format(webp)/newsfirstlive-kannada/media/media_files/2025/08/04/kl-rahul-delhi-capitals-2025-08-04-09-53-03.jpg)
ಕೆ.ಎಲ್ ರಾಹುಲ್ ಈಗಾಗಲೇ ಐಪಿಎಲ್ ಹಾಗೂ ಮೊನ್ನೆ ಮೊನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗಮನಿಸಿದರೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಇದು ಅಲ್ಲದೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನಿರ್ಣಾಯಕ ಪಂದ್ಯವಾಡಿದ್ದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಗಿಲ್, ಅಯ್ಯರ್ನಂತಹ ಆಟಗಾರರು ಔಟ್ ಆಗಿದ್ದರೂ ಕ್ರೀಸ್ ಕಚ್ಚಿ ಆಡಿದ್ದ ಕೆ.ಎಲ್ ರಾಹುಲ್, ಟೀಮ್ ಇಂಡಿಯಾಕ್ಕೆ ಗೆಲುವು ತಂದಿದ್ದರು.
ಏಷ್ಯಾ ಕಪ್ ಟಿ20 ಟೂರ್ನಿ ಆದರೂ ಸಮಯಕ್ಕೆ ಸರಿಯಾಗಿ ಅನುಭವಿ ಪ್ಲೇಯರ್ ಬೇಕಾಗುತ್ತಾರೆ. ಅದಕ್ಕೆ ಕೆ.ಎಲ್ ರಾಹುಲ್ ಸೂಕ್ತ ಆಯ್ಕೆ. ಏಕೆಂದರೆ 2025ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ ಮೇಲೆ ಕೆ.ಎಲ್ ರಾಹುಲ್ ಬ್ಯಾಟಿಂಗ್ ಫಾರ್ಮ್ ಅತ್ಯುತ್ತಮವಾಗಿದೆ. ಚಿನ್ನಸ್ವಾಮಿಯಲ್ಲಿ ಆರ್ಸಿಬಿ ವಿರುದ್ಧ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್ ಸೆಂಚುರಿ ಸಿಡಿಸಿ, ಪಂದ್ಯ ಗೆಲ್ಲಿಸಿದ್ದು ಈಗಲೂ ಎಲ್ಲ ಕಣ್ಣಂಚಿನಲ್ಲಿದೆ. ಡೆಲ್ಲಿ ಪರ ಅದ್ಭುತ ಪ್ರದರ್ಶನ ನೀಡಿದ್ದ ರಾಹುಲ್, ಆಡಿದ 13 ಪಂದ್ಯಗಳಲ್ಲಿ 149.72 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಬಾರಿಸಿದ್ದರು.
ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಬೆಸ್ಟ್ ಬ್ಯಾಟಿಂಗ್ ಮಾಡಿದ್ದ ಕೆ.ಎಲ್ ರಾಹುಲ್, 2 ಸೆಂಚುರಿ, 2 ಅರ್ಧಶತಕಗಳಿಂದ ಒಟ್ಟು 532 ರನ್ಗಳನ್ನು ಗಳಿಸಿದ್ದರು. ಇದರ ಜೊತೆಗೆ ಏಕದಿನ ಸೇರಿ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ, ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲೂ ಆಡುವುದಕ್ಕೆ ಕೆ.ಎಲ್ ರಾಹುಲ್ ಅವರು ಫೀಟ್ ಆ್ಯಂಡ್ ಫೈನ್ ಆಗಿದ್ದಾರೆ. ಕ್ರೀಸ್ಗೆ ಹೋದರೆ ಖಾಲಿ ಕೈಯಲ್ಲಂತೂ ಹಿಂದಿರುಗಲ್ಲ, ಕನಿಷ್ಠ ಎಂದರೂ 30, 40 ರನ್ಗಳನ್ನ ಜೇಬಿಗೆ ಹಾಕ್ಕೊಂಡು ಬರುವುದಂತೂ ಕನ್ಫರ್ಮ್.
ಇದನ್ನೂ ಓದಿ:ಸಾರಾ, ತಮ್ಮನಾದ ಅರ್ಜುನ್ ತೆಂಡುಲ್ಕರ್ ಮೊದಲೇ ಮದುವೆ ಆಗ್ತಿರೋದು ಯಾಕೆ..?
ಇನ್ನು ಏಷ್ಯಾಕಪ್ ವಿಷ್ಯಕ್ಕೆ ಬಂದರೆ ಈ ಮೇಲಿನ ಎಲ್ಲ ಕಾರಣಗಳನ್ನ ಗಮನದಲ್ಲಿಟ್ಟುಕೊಂಡರೇ ತಂಡದಲ್ಲಿ ಕೆ.ಎಲ್ ರಾಹುಲ್ ಆಡಿದರೆ ಬೆಸ್ಟ್ ಎನ್ನಬಹುದು. ವಿಕೆಟ್ ಕೀಪರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್, ಧ್ರುವ್ ಜುರೆಲ್ ಇದ್ದರೂ, ತಂಡದ ದೃಷ್ಟಿಯಿಂದ ಒಬ್ಬ ಅನುಭವಿ ಪ್ಲೇಯರ್ ಟೂರ್ನಿಯಲ್ಲಿ ಮಹತ್ವದ ತಿರುವು ತರಬಹುದು. ಒತ್ತಡದ ಸಮಯದಲ್ಲೂ ಕ್ರೀಸ್ನಲ್ಲಿ ಬ್ಯಾಟಿಂಗ್ ಪರಾಕ್ರಮ ಮರೆಯುತ್ತಾರೆ. ಕೆ.ಎಲ್ ರಾಹುಲ್ ಏಷ್ಯಾ ಕಪ್ಗೆ ಆಯ್ಕೆ ಆದರೆ ಈ ಎಲ್ಲ ಲಾಭಗಳು ಆಗಲಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ