Advertisment

ಕ್ಲೀನ್ ಸ್ವೀಪ್​ನಿಂದ ಪಾರಾಗಲು ಗಿಲ್ ಪಡೆ ರಣತಂತ್ರ.. ತಂಡದಲ್ಲಿ ಭಾರೀ ಬದಲಾಣೆ ಸಾಧ್ಯತೆ..!

ಆದ್ರೆ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ನಾಯಕ ಗಿಲ್ ಕ್ರೀಸ್​ಗೆ ಬರುತ್ತಿದ್ದರಿಂದ ಯಶಸ್ವಿ ಜೈಸ್ವಾಲ್​ಗೆ ಚಾನ್ಸ್​ ಸಿಗುವುದು ಕಷ್ಟವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಅಷ್ಟೇನೂ ಪರ್ಫಾಮೆನ್ಸ್​ ನೀಡದ ವಾಷಿಂಗ್ಟನ್​ ಸುಂದರ್​ ಹಾಗೂ ಯುವ ವೇಗಿ ಹರ್ಷಿತ್ ರಾಣಾ ಇಬ್ಬರನ್ನು ಬೆಂಚ್​ ಕಾಯಿಸುವ ಸಾಧ್ಯತೆ ಇದೆ.

author-image
Bhimappa
TEAM_INDIA (7)
Advertisment

ಇನ್ನೇನು ಕೆಲವೇ ಕ್ಷಣಗಳಲ್ಲಿ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾದ ನಡುವಿನ ಕೊನೆ ಹಾಗೂ 3ನೇ ಏಕದಿನ ಪಂದ್ಯ ಆರಂಭವಾಗಲಿದೆ. ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್​ನಿಂದ ಪಾರಾಗಲು ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. 

Advertisment

ಆಸ್ಟ್ರೇಲಿಯಾದ ಸಿಡ್ನಿ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ (ಭಾರತದ ಕಾಲಾಮಾನ) ಪಂದ್ಯ ಆರಂಭವಾಗಲಿದೆ. ಶುಭ್​ಮನ್​ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡುತ್ತಿರುವುದು ಬೇಸರ ತರಿಸಿದೆ. ಅಲ್ಲದೇ ಆಸ್ಟ್ರೇಲಿಯಾ ಟೂರ್​ಗೆ ಹೋದಗೆಲ್ಲ ಕಹಿ ಅನುಭವವೇ ಹೆಚ್ಚಾಗಿದೆ. ಈ ಹಿಂದೆ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲೂ ಭಾರತ ತಂಡ ಸೋತಿತ್ತು. ಈಗ ಒಡಿಐ ಸರಣಿ ಕೂಡ ಕೈಚೆಲ್ಲಿದೆ. 

ಇದನ್ನೂ ಓದಿ:100, 200 ಅಲ್ಲ, BEL ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ..ಖಾಲಿ.. ಅರ್ಜಿ ಆಹ್ವಾನ

ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್​ದೀಪ್ ಯಾದವ್ ನಿಶ್ಚಿತಾರ್ಥ ಸಮಾರಂಭ.. ಹುಡುಗಿ ಯಾರು?

ಯುವ ಓಪನರ್​ ಯಶಸ್ವಿ ಜೈಸ್ವಾಲ್​ ಅವರಿಗೆ ಇಂದಿನ ಪಂದ್ಯದಲ್ಲಿ ಅವಕಾಶ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದ್ರೆ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ನಾಯಕ ಗಿಲ್ ಕ್ರೀಸ್​ಗೆ ಬರುತ್ತಿದ್ದರಿಂದ ಯಶಸ್ವಿ ಜೈಸ್ವಾಲ್​ಗೆ ಚಾನ್ಸ್​ ಸಿಗುವುದು ಕಷ್ಟವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಅಷ್ಟೇನೂ ಪರ್ಫಾಮೆನ್ಸ್​ ನೀಡದ ವಾಷಿಂಗ್ಟನ್​ ಸುಂದರ್​ ಹಾಗೂ ಯುವ ವೇಗಿ ಹರ್ಷಿತ್ ರಾಣಾ ಇಬ್ಬರನ್ನು ಬೆಂಚ್​ ಕಾಯಿಸುವ ಸಾಧ್ಯತೆ ಇದೆ. 

Advertisment

ವಾಷಿಂಗ್ಟನ್​ ಸುಂದರ್​ ಹಾಗೂ ಹರ್ಷಿತ್ ರಾಣಾ ಬದಲಿಗೆ ತಂಡಕ್ಕೆ ಚೈನಾಮನ್, ಮ್ಯಾಜಿಕ್ ಸ್ಪಿನ್ನರ್ ಕುಲ್​ದೀಪ್​ ಯಾದವ್​ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಅವಕಾಶ ನೀಡಬಹುದು. ಏಕೆಂದರೆ ಕಳೆದ ಪಂದ್ಯಗಳಲ್ಲಿ ಈ ಇಬ್ಬರನ್ನು ಆಯ್ಕೆ ಮಾಡಿಕೊಳ್ಳದೇ ಕೋಚ್ ಗೌತಮ್ ಗಂಭೀರ್ ಹಾಗೂ ಗಿಲ್ ತಪ್ಪು ಮಾಡಿದ್ದಾರೆ. ಹೀಗಾಗಿ ಇಂದಿನ ಪಂದ್ಯಕ್ಕೆ ಕುಲ್​ದೀಪ್​ ಯಾದವ್​, ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಂಟ್ರಿಕೊಡುವುದು ದಟ್ಟವಾಗಿದೆ.   

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IND vs AUS
Advertisment
Advertisment
Advertisment