/newsfirstlive-kannada/media/media_files/2025/10/31/surya-kumara-yadav-2025-10-31-17-03-22.jpg)
India vs Australia Match: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಬೃಹತ್ ಸ್ಕೋರ್​ ಕಲೆ ಹಾಕುವ ಗುರಿಯೊಂದಿಗೆ ಬಂದ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಬೌಲರ್ಸ್​, ಬಿಗ್ ಶಾಕ್ ನೀಡಿದರು. ಟೀಂ ಇಂಡಿಯಾ ಬ್ಯಾಟರ್​​ಗಳನ್ನು ಕಟ್ಟಿ ಹಾಕುವಲ್ಲಿ ಸಂಪೂರ್ಣ ಯಶಸ್ವಿಯಾದರು. 2.4 ಓವರ್​ನಲ್ಲಿ ಭಾರತ 20 ರನ್​ಗಳಿಸಿ ಆಡುತ್ತಿದ್ದಾಗ ಗಿಲ್ ವಿಕೆಟ್​ ಕಳೆದುಕೊಂಡಿತು. ಕೇವಲ ಐದು ರನ್​ಗಳಿಸಿ ಗಿಲ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ವಿಕೆಟ್ ಕೀಪರ್​ ಸ್ಯಾಮ್ಸನ್ ಕೂಡ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಗಿಲ್ ವಿಕೆಟ್ ಬಿದ್ದು ಮೂರು ರನ್​​ಗಳ ಅಂತರದಲ್ಲಿ ಔಟ್ ಆದರು. ಸ್ಯಾಮ್ಸನ್ 2 ರನ್​ಗಳಿಸಿದ್ರೆ, ಕ್ಯಾಪ್ಟನ್ ಸೂರ್ಯ 1 ರನ್​ಗೆ ಸುಸ್ತಾದರು. ಇನ್ನು, ತಿಲಕ್ ವರ್ಮಾ, ಕುಲ್ದೀಪ್ ಯಾದವ್ ಹಾಗೂ ಬುಮ್ರಾ ಖಾತೆಯನ್ನೇ ತೆರೆಯದೇ ವಾಪಸ್ ಹೊದರು.
ಮಾನ ಕಾಪಾಡಿದ ಅಭಿ, ರಾಣಾ
ಟೀಂ ಇಂಡಿಯಾದ ಮಾನ ಉಳಿಸಿದ್ದು, ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ. ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದಾಗ ಜವಾಬ್ದಾರಿಯುತ ಆಟವಾಡಿದ ಅಭಿಷೇಕ್ ಶರ್ಮಾ.. 183.78 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬಿಸಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಯೊಂದಿಗೆ 68 ರನ್​ಗಳಿಸಿದರು. ಅದೇ ರೀತಿ ಆಲೌರಂಡರ್ ಆಟವಾಡಿದ ಹರ್ಷಿತ್ ರಾಣಾ 33 ಬಾಲ್​ನಲ್ಲಿ ಒಂದು ಸಿಕ್ಸರ್​, ಮೂರು ಬೌಂಡರಿಗಳಿಸಿ ಟೀಂ ಇಂಡಿಯಾಗೆ 35 ರನ್​ಗಳ ಕಾಣಿಕೆ ನೀಡಿದರು. 18.4 ಓವರ್​​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 125 ರನ್​ಗಳಿಸಿತ್ತು.
126 ರನ್​ಗಳ ಗುರಿಯನ್ನ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಕಳೆದುಕೊಂಡು ನಿಗಧಿತ ಗುರಿ ಮುಟ್ಟಿತು. ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್​ 46, ಟ್ರಾವಿಸ್ ಹೆಡ್ 28, ಜೋಶ್ ಇಂಗ್ಲಿಷ್ 20 ರನ್​ಗಳಿಸಿದರು. ಭಾರತದ ಪರ ಬುಮ್ರಾ, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us