/newsfirstlive-kannada/media/media_files/2025/10/31/tilak_surya-2025-10-31-14-42-09.jpg)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಭಾರೀ ಆತಂಕಕ್ಕೆ ಸಿಲುಕಿದೆ. ಕೇವಲ 32 ರನ್​ಗೆ ಪ್ರಮುಖವಾದ 5 ವಿಕೆಟ್​ಗಳನ್ನು ಕಳೆದುಕೊಂಡಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ಕೆ ಮಾಡಿದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಬ್ಯಾಟ್ಸ್​ಮನ್ಸ್​, ಹ್ಯಾಜಲ್​ವುಡ್​ ಬೌಲಿಂಗ್​ಗೆ ಬೆಚ್ಚಿ ಬಿದ್ದಿದ್ದಾರೆ. ತಂಡದ ಮೊತ್ತ 20 ಇರುವಾಗಲೇ ಓಪನರ್ ಶುಭ್​ಮನ್ ಗಿಲ್ ಕ್ಯಾಚ್ ಕೊಟ್ಟು ಹೊರ ನಡೆದರು.
ಇದನ್ನೂ ಓದಿ:ಮತ್ತೆ ಟಾಸ್ ಸೋತ ಸೂರ್ಯಕುಮಾರ್​.. ಪ್ಲೇಯಿಂಗ್- 11ನಲ್ಲಿ ಯಾರ್​ ಯಾರಿಗೆ ಸ್ಥಾನ?
/filters:format(webp)/newsfirstlive-kannada/media/media_files/2025/09/29/suryakumar-yadav-2-2025-09-29-11-46-54.jpg)
ಗಿಲ್ ಔಟ್ ಆದ ಮೂರು ರನ್​ ಬಳಿಕ ಸಂಜು ಸ್ಯಾಮ್ಸನ್​ ಕ್ರೀಸ್​ ಖಾಲಿ ಮಾಡಿದರು. 4 ಎಸೆತದಲ್ಲಿ 2 ರನ್​ ಬಾರಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ನಥಾನ್ ಎಲ್ಲೀಸ್​ ಬೌಲಿಂಗ್​ನಲ್ಲಿ ಎಲ್​ಬಿಗೆ ಬಲಿಯಾದರು. ಇದು ಆದ ಮೇಲೆ ಭಾರತ 9 ರನ್​ಗಳನ್ನು ಕಲೆ ಹಾಕುವಷ್ಟರಲ್ಲಿ ಮತ್ತೊಂದು ಪ್ರಮುಖ ವಿಕೆಟ್​ ಕಳೆದುಕೊಂಡಿತು. ನಾಯಕ ಸೂರ್ಯಕುಮಾರ್ ಕೇವಲ 1 ರನ್​ಗೆ ಪೆವಿಲಿಯನ್​ ಕಡೆಗೆ ನಡೆದರು. ಹ್ಯಾಜಲ್​ವುಡ್ ಬೌಲಿಂಗ್​ನಲ್ಲಿ ಸೂರ್ಯಕುಮಾರ್ ಕ್ಯಾಚ್ ಕೊಟ್ಟು ನಿರಾಸೆ ಅನುಭವಿಸಿದರು.
ಇನ್ನು ಏಷ್ಯಾ ಕಪ್​​ನಲ್ಲಿ ಮಿಂಚಿದ್ದ ತಿಲಕ್ ವರ್ಮಾ ಅವರು ಡಕೌಟ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಟೀಮ್ ಇಂಡಿಯಾಗೆ ಲಕ್ಕಿ ಗ್ರೌಂಡ್ ಎಂದೇ ಹೇಳಲಾಗುವ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತೀವ್ರ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದೆ. ಸಮಾಧಾನಕರ ಸಂಗತಿ ಎಂದರೆ ಅಭಿಷೇಕ್ ಶರ್ಮಾ ಇನ್ನು ಕ್ರೀಸ್​ನಲ್ಲಿ ಇದ್ದು 13 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​ನಿಂದ 34 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಅಕ್ಷರ್ ಪಟೇಲ್ 7 ರನ್​ಗೆ ರನೌಟ್ ಆಗಿದ್ದಾರೆ. ಇದೀಗ ಕ್ರೀಸ್​ಗೆ ರಾಣಾ ಆಗಮಿಸಿದ್ದಾರೆ. ಟೀಮ್ ಇಂಡಿಯಾ 7.3 ಓವರ್​ಗೆ 5 ವಿಕೆಟ್​ಗಳಿಂದ 50 ರನ್ ಗಳಿಸಿದೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


