/newsfirstlive-kannada/media/media_files/2025/10/25/rohit-sharma-and-virat-kohli-2025-10-25-15-42-35.jpg)
ಹಿಟ್​ಮ್ಯಾನ್ ರೋಹಿತ್ ಶರ್ಮಾ ಅವರ ಸ್ಫೋಟಕ ಶತಕ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಅರ್ಧ ಶತಕದೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಮೂರು ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಎರಡು ಮ್ಯಾಚ್ ವಿನ್ ಆಗಿದ್ದು, ಸರಣಿಯನ್ನ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಸ್ಫೋಟಕ ಶತಕ..!
/filters:format(webp)/newsfirstlive-kannada/media/media_files/2025/10/25/rohit-sharma-3-2025-10-25-15-26-45.jpg)
ಸಿಡ್ನಿಯಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ 46.4 ಓವರ್​ಗೆ ಎಲ್ಲಾ ವಿಕೆಟ್ ಕಳೆದುಕೊಂಡು 236 ರನ್​ಗಳಿಸಿತ್ತು. ಭಾರತದ ಪರ ಹರ್ಷಿತ್ ರಾಣಾ 4 ವಿಕೆಟ್ ಪಡೆದು ಆಸ್ಟ್ರೇಲಿಯಾ ಬ್ಯಾಟರ್​ಗಳ ಮಗ್ಗಲು ಮುರಿದರು. ಇನ್ನು ವಾಷಿಂಗ್ಟನ್ ಸುಂದರ್ 2, ಸಿರಾಜ್, ಪ್ರಸಿದ್ಧ್, ಕುಲ್ದೀಪ್, ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಮಿಂಚಿದ ಕೊಹ್ಲಿ, ರೋಹಿತ್
237 ರನ್​ಗಳ ಸಾಧಾರಣ ಗುರಿಯನ್ನ ಬೆನ್ನು ಹತ್ತಿದ ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡು ನಿರ್ದಿಷ್ಟ ಗುರಿಯನ್ನು ಮುಟ್ಟಿತು. ಟೀಂ ಇಂಡಿಯಾ ಪರ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ
/filters:format(webp)/newsfirstlive-kannada/media/media_files/2025/10/25/rohit_sharma_50-1-2025-10-25-14-27-12.jpg)
ಆರಂಭಿಕ ಆಟಗಾರರಾಗಿ ಕ್ರೀಸ್​ಗೆ ಬಂದ ರೋಹಿತ್ ಶರ್ಮಾ ಹಾಗೂ ಗಿಲ್ ಉತ್ತಮ ಆರಂಭ ಪಡೆದುಕೊಂಡರು. 69 ರನ್​​ಗಳ ಪಾರ್ಟ್ನರ್​​ಶಿಪ್ ಮಾಡಿದ್ದ ಈ ಜೋಡಿ 10.2 ಓವರ್​ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಶುಬ್ಮನ್ ಗಿಲ್, 26 ಬಾಲ್​ನಲ್ಲಿ ಒಂದು ಸಿಕ್ಸರ್, 2 ಬೌಂಡರಿ ಬಾರಿಸಿ 24 ರನ್​ಗಳಿಸಿ ಔಟ್ ಆದರು.
ಈ ಮಧ್ಯೆ ಕ್ರೀಸ್​ ಕಚ್ಚಿ ನಿಂತಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ, ಸ್ಫೋಟಕ ಶತಕ ಬಾರಿಸಿ ಮಿಂಚಿದರು. 96.80 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ ರೋಹಿತ್ 3 ಸಿಕ್ಸರ್, 13 ಬೌಂಡರಿಯೊಂದಿಗೆ 121 ರನ್​ಗಳಿಸಿ ಅಜೇಯರಾಗಿ ಉಳಿದರು. ಇತ್ತ, ರೋಹಿತ್​ಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ, 81 ಬಾಲ್​ನಲ್ಲಿ 71 ರನ್​ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಟೆಕ್ಕಿ ಪ್ರಿಯಾಂಕ : ಲಾರಿ ಹರಿದು ಯುವತಿ ಸಾವು!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us