Advertisment

ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಅರ್ಧಶತಕ ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
Virat kohli (1)
Advertisment

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಅರ್ಧಶತಕ ಬಾರಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. 

Advertisment

ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಒಡಿಐ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ಕ್ಯಾಪ್ಟನ್​ ಮಿಚೆಲ್ ಮಾರ್ಷ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಟೀಮ್ ಇಂಡಿಯಾಗೆ 237 ರನ್​ಗಳ ಟಾರ್ಗೆಟ್​ ಅನ್ನು ಆಸಿಸ್​ ಆಟಗಾರರು ನೀಡಿದ್ದಾರೆ. ಈ ಗುರಿ ಬೆನ್ನತ್ತಿರುವ ಭಾರತ ಓಪನರ್​ ಶುಭ್​ಮನ್​ ಗಿಲ್ ಕೇವಲ 24 ರನ್​ಗೆ ಔಟ್ ಆಗಿದ್ದಾರೆ. 

ಇದನ್ನೂ ಓದಿ: ಟೀಮ್ ಇಂಡಿಯಾ ಕಮ್​ಬ್ಯಾಕ್ ಮಾಡುತ್ತಾ.. ಇಂದಿನ ಸಿಡ್ನಿ ಮ್ಯಾಚ್​ ಕಿಂಗ್​ ಕೊಹ್ಲಿಗೆ ​ಲಕ್ಕಿ ಆಗುತ್ತಾ? 

ಗಿಲ್ ಔಟ್ ಆದ ಬೆನ್ನಲ್ಲೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಕೊಹ್ಲಿ, ತಾಳ್ಮೆ ಕಳೆದುಕೊಳ್ಳದೇ ಆಸಿಸ್​ ಬೌಲರ್​​ಗಳ ಬೆಂಡತ್ತಿದ್ದರು. 56 ಬಾಲ್​ಗಳನ್ನು ಎದುರಿಸಿದ ಕೊಹ್ಲಿ, 4 ಬೌಂಡರಿ ಬಾರಿಸಿ ತಮ್ಮ ಅರ್ಧಶತಕ ಪೂರೈಸಿ ಆಡುತ್ತಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​​ ಟೂರ್ನಿಯಲ್ಲಿ 75 ಅರ್ಧ ಶತಕ ಬಾರಿಸಿದ್ದಾರೆ. ಸದ್ಯ ಟೀಂ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 171 ರನ್​ಗಳಿಸಿದೆ. ಭಾರತ ಗೆಲ್ಲಲು 66 ರನ್​ಗಳ ಅಗತ್ಯ ಇದೆ. 

Advertisment

ಇದನ್ನೂ ಓದಿ:ಭರ್ಜರಿ ಬ್ಯಾಟಿಂಗ್​.. ಮತ್ತೊಂದು ಹಾಫ್​ಸೆಂಚುರಿ ಸಿಡಿಸಿದ ಹಿಟ್​ಮ್ಯಾನ್ ರೋಹಿತ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kohli Virat Kohli IND vs AUS India vs Australia
Advertisment
Advertisment
Advertisment