/newsfirstlive-kannada/media/media_files/2025/10/25/virat_kohli_rohit-2025-10-25-08-08-22.jpg)
ಆಸ್ಟ್ರೇಲಿಯಾದ ಪರ್ತ್- ಅಡಿಲೇಡ್ ಮೈದಾನದಲ್ಲಿ ಏಕದಿನ ಪಂದ್ಯಗಳನ್ನ ಸೋತು, ಸರಣಿ ಕೈಚೆಲ್ಲಿರುವ ಟೀಮ್ ಇಂಡಿಯಾ, ಇಂದು ಸಿಡ್ನಿಯಲ್ಲಿ ಮುಖಭಂಗದಿಂದ ಪಾರಾಗಲು ಮುಂದಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಪರದಾಡ್ತಿರುವ ಟೀಮ್ ಇಂಡಿಯಾ, ಇಂದು ಸಮಸ್ಯೆಗಳನ್ನ ಬಗೆಹರಿಸಿಕೊಂಡೇ ಕಣಕ್ಕಿಳಿಯಬೇಕಿದೆ.
ಪರ್ತ್​ನಲ್ಲಿ 7 ವಿಕೆಟ್​ಗಳ ಹೀನಾಯ ಸೋಲು, ಅಡಿಲೇಡ್​​ನಲ್ಲಿ 2 ವಿಕೆಟ್​ಗಳ ಸೋಲು. ಈ ಎರಡು ಪಂದ್ಯಗಳ ಸೋಲುಗಳು, ಟೀಮ್ ಇಂಡಿಯಾ ಆಟಗಾರರ ನಿದ್ದೆಗೆಡಿಸಿದೆ. ಇಂದು ಸಿಡ್ನಿಯಲ್ಲಿ ಸ್ಟ್ರಾಂಗ್​​ ಕಮ್​​ಬ್ಯಾಕ್ ಮಾಡುವ ವಿಶ್ವಾಸದಲ್ಲಿರುವ ಶುಭ್ಮನ್ ಗಿಲ್ ಪಡೆ, ಸರಣಿ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗುವ ಲೆಕ್ಕಾಚಾರದಲ್ಲಿದೆ. ಆದ್ರೆ ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿರುವ ಸಮಸ್ಯೆಗಳು ಬಗೆಹರಿದ್ರೆ ಮಾತ್ರ, ಅಂದುಕೊಂಡಿದ್ದನ್ನ ಸಾಧಿಸಬಹುದು.
/filters:format(webp)/newsfirstlive-kannada/media/media_files/2025/10/18/kohli_rohith-1-2025-10-18-14-39-06.jpg)
ಸಿಡ್ನಿ ರೋಹಿತ್​ಗೆ ಲಕ್ಕಿ, ವಿರಾಟ್​ಗೆ ಅನ್​ಲಕ್ಕಿ..!
ಎಸ್​​ಸಿಜಿ ಸಿಡ್ನಿ ಕ್ರಿಕೆಟ್ ಗ್ರೌಂಡ್, ಮಾಜಿ ನಾಯಕ ರೋಹಿತ್ ಶರ್ಮಾ ಪಾಲಿಗೆ ಲಕ್ಕಿ ಗ್ರೌಂಡ್. ಈ ಗ್ರೌಂಡ್​ನಲ್ಲಿ ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡಿ 669 ರನ್ ಕಲೆಹಾಕಿದ್ದಾರೆ. 5 ಪಂದ್ಯಗಳಲ್ಲಿ 1 ಶತಕ ಸೇರಿದಂತೆ, 67ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಸ್ಕೋರ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ, ಎಸ್​​ಸಿಜಿ ಮೈದಾನದಲ್ಲಿ ಫುಲ್ ಡಲ್ ಆಗಿದ್ದಾರೆ. ಈ ಮೈದಾನದಲ್ಲಿ 7 ಪಂದ್ಯಗಳನ್ನ ಆಡಿರುವ ವಿರಾಟ್, ಕೇವಲ 24ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಒಂದು ಅರ್ಧಶತಕವೂ ಇಲ್ಲ, ಒಂದು ಶತಕವೂ ವಿರಾಟ್ ಬ್ಯಾಟ್​​ನಿಂದ ಬಂದಿಲ್ಲ.
ಫ್ಲಾಪ್ ಕ್ಯಾಪ್ಟನ್ ಗಿಲ್, ಸಿಡ್ನಿಯಲ್ಲಿ ಹಿಟ್ ಆಗ್ತಾರಾ..?
ಟೀಮ್ ಇಂಡಿಯಾ ಏಕದಿನ ತಂಡದ ನೂತನ ಸಾರಥಿ ಶುಭ್ಮನ್ ಗಿಲ್​​​, ತಮ್ಮ ಮೇಲಿದ್ದ ನಿರೀಕ್ಷೆಗಳನ್ನೆಲ್ಲಾ ಸುಳ್ಳಾಗಿಸಿದ್ದಾರೆ. ಪರ್ತ್​​​​​ ಏಕದಿನ ಪಂದ್ಯದಲ್ಲಿ 10 ರನ್, ಅಡಿಲೇಡ್​​ ಏಕದಿನ ಪಂದ್ಯದಲ್ಲಿ 9 ರನ್​ಗಳಿಸಿ ಫ್ಲಾಪ್ ಶೋ ನೀಡಿರುವ ಗಿಲ್, ಸಿಡ್ನಿಯಲ್ಲಿ ಸಿಡಿದೇಳಲೇಬೇಕಿದೆ.
ಕೆ.ಎಲ್.ರಾಹುಲ್ ಬ್ಯಾಟ್​ನಿಂದ ಕನ್ಸಿಸ್ಟೆನ್ಸಿ ನಿರೀಕ್ಷೆ..!
ಕ್ಲಾಸ್ ಬ್ಯಾಟಿಂಗ್​​ಗೆ ಹೆಸರುವಾಸಿಯಾಗಿರುವ ಕನ್ನಡಿಗ ಕೆ.ಎಲ್.ರಾಹುಲ್, ಕಾಂಗರೂಗಳ ನಾಡಲ್ಲಿ ಮಂಕಾಗಿದ್ದಾರೆ. ಬ್ಯಾಟಿಂಗ್ ಸ್ಲಾಟ್ ಬದಲಾವಣೆಯಿಂದ ಕಂಗೆಟ್ಟಿರುವ ರಾಹುಲ್​ರಿಂದ, ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನಿರೀಕ್ಷಿಸಲಾಗಿದೆ. ಆಡಿರೋ 2 ಏಕದಿನ ಪಂದ್ಯಗಳಲ್ಲಿ ರಾಹುಲ್ ಬ್ಯಾಟ್​ನಿಂದ, ಬಿಗ್​ ಇನ್ನಿಂಗ್ಸ್ ಬಂದಿಲ್ಲ. ಸಿಡ್ನಿಯಲ್ಲಿ ರಾಹುಲ್​​ ಅಬ್ಬರಿಸಬೇಕಿದೆ.
ಸ್ಥಾನದ ನಿರೀಕ್ಷೆಯಲ್ಲಿ ಜೈಸ್ವಾಲ್, ಕುಲ್ದೀಪ್​​​​​​​, ಪ್ರಸಿದ್ಧ್..!​​
ಪರ್ತ್​, ಅಡಿಲೇಡ್​​​​​​ ಏಕದಿನ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್, ಕೊನೆಯ ಪಂದ್ಯದಲ್ಲಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಜೈಸ್ವಾಲ್​ಗೆ ಸ್ಥಾನ ಸಿಗೋದು ಅನುಮಾನ. ಆದ್ರೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ ಇಬ್ಬರೂ, ಎಸ್​​ಸಿಜಿಯಲ್ಲಿ ಆಡೋ ವಿಶ್ವಾಸದಲ್ಲಿದ್ದಾರೆ. ಹರ್ಷಿತ್ ರಾಣಾ, ವಾಶಿಂಗ್ಟನ್ ಸುಂದರ್, ಸ್ಥಾನ ಬಿಟ್ಟುಕೊಡೋ ಸಾಧ್ಯತೆ ಹೆಚ್ಚಿದೆ.
ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಳ್ಳಲು ಪ್ಲಾನ್ ಏನು..?
ಎರಡೂ ಏಕದಿನ ಪಂದ್ಯಗಳನ್ನ ಸೋತಿರುವ ಟೀಮ್ ಇಂಡಿಯಾ ಮುಂದಿರೋದು, ಸದ್ಯ ಒಂದೇ ಒಂದು ಗುರಿ. ಅದು ಸರಣಿ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗೋದು. ಶಾರ್ಟ್ ಬ್ರೇಕ್​ನಲ್ಲಿ ಬ್ಯಾಟಿಂಗ್, ಬೌಲಿಂಗ್​​ ಮತ್ತು ಫೀಲ್ಡಿಂಗ್ ಮೇಲೆ ವರ್ಕ್​​​ಔಟ್ ಮಾಡಿರುವ ಗಿಲ್ ಪಡೆ, ಶತಾಯಗತಾಯ ಗೆಲುವಿಗಾಗಿ ಹೋರಾಟ ನಡೆಸಲಿದೆ. ವೈಟ್​ವಾಷ್​​​ನಿಂದ ಪಾರಾಗುವ ಪ್ರಯತ್ನ ನಡೆಸಲಿದೆ.​​
/filters:format(webp)/newsfirstlive-kannada/media/media_files/2025/09/06/rohit-sharma-2-2025-09-06-16-50-51.jpg)
ಮತ್ತೊಂದೆಡೆ, ಪರ್ತ್, ಅಡಿಲೇಡ್ ಏಕದಿನ ಪಂದ್ಯಗಳನ್ನ ಗೆದ್ದು ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ, ಇಂದು ತಂಡದಲ್ಲಿ ಕೆಲ ಬದಲಾವಣೆ ಮಾಡಲಿದೆ. ಬೆಂಚ್​ನಲ್ಲಿರುವ ವೇಗಿ ನಾಥನ್ ಎಲ್ಲಿಸ್, ಸ್ಪಿನ್ನರ್ ಮ್ಯಾಥ್ಯೂ ಕುನ್ಹೇಮನ್, ಆಲ್​ರೌಮಡರ್ ಜ್ಯಾಕ್ ಎಡ್ವರ್ಡ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಷ್ ಇಂಗ್ಲೀಸ್, ಸಿಡ್ನಿಯಲ್ಲಿ ಕಣಕ್ಕಿಯೋ ಸಾಧ್ಯತೆ ಇದೆ.
ಇಂದು ಎಸ್​​ಸಿಜಿಯಲ್ಲಿ ಆಸಿಸ್​​​​​​ಗೆ ಔಪಚಾರಿಕ ಪಂದ್ಯವಾಗಿದೆ. ಇಂಡಿಯಾಗೆ ಕ್ಲೀನ್​ಸ್ವೀಪ್​​ ಮುಖಭಂಗದಿಂದ ಪಾರಾಗೋ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಜಿದ್ದಾಜಿದ್ದಿನ ಫೈಟ್ ನಡೆಸೋದಂತೂ ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us