Advertisment

ಹಿಟ್​ಮ್ಯಾನ್ ಬಿಗ್ ಮೆಸೇಜ್..​ ರೋಹಿತ್ ಶರ್ಮಾ ಕ್ಲಾಸಿ ಬ್ಯಾಟಿಂಗ್​ಗೆ ರೆಕಾರ್ಡ್ಸ್​ ಉಡೀಸ್​..!

ರೋಹಿತ್ ಶರ್ಮಾ, ಕೇವಲ 8 ರನ್​ಗಳಿಸಿ ಔಟಾಗಿದ್ದರು. ರೋಹಿತ್, ಸಿಂಗಲ್ ಡಿಜಿಟ್​​ಗೆ ಔಟಾಗಿದ್ದೇ ತಡ. ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಮತ್ತು ಕ್ರಿಕೆಟ್ ವಿಶ್ಲೇಷಕರು ರೋಹಿತ್ ಬಗ್ಗೆ, ಬಾಯಿಗೆ ಬಂದಂತೆ ಮಾತನಾಡಿದ್ದರು. ರೋಹಿತ್, ODI ಕರಿಯರ್ ಮುಗೀತು ಎಂದಿದ್ದರು.

author-image
Bhimappa
ROHIT_SHARMA_AUS
Advertisment

ಅಡಿಲೇಡ್​​ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಪಾಸ್ ಆಗಿದ್ದಾರೆ. ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಸ್ಟ್ರಾಂಗ್ ಮೆಸೇಜ್ ನೀಡಿರುವ ಹಿಟ್​ಮ್ಯಾನ್, ಟೀಕಕಾರರಿಗೆ ತನ್ನ ಬ್ಯಾಟ್​ನಿಂದಲೇ ಉತ್ತರ ಕೊಟ್ಟಿದ್ದಾರೆ. ಈ ಒಂದು ಇನ್ನಿಂಗ್ಸ್ ಮುಂಬೈಕರ್​ಗೆ​ ಲೈಫ್​​​ಲೈನ್ ನೀಡಿದೆ. ವಿಶ್ವಕಪ್ ಆಡೋ ಕನಸು ಜೀವಂತವಾಗಿರಿಸಿದೆ.

Advertisment

ಅಡಿಲೇಡ್ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಗೆದ್ದಿದ್ದಾರೆ. ಪಂದ್ಯದ ಆರಂಭದಲ್ಲಿ ಆಸ್ಟ್ರೇಲಿಯಾದ ಅನುಭವಿ ಮತ್ತು ಕ್ವಾಲಿಟಿ ಬೌಲರ್​ಗಳು, ರೋಹಿತ್​ ತಾಳ್ಮೆ ಪರೀಕ್ಷೆ ಮಾಡಿದರು. ರೋಹಿತ್ ತಾಳ್ಮೆಯಿಂದಲೇ, ಆಸಿಸ್ ಬೌಲರ್​ಗಳನ್ನ ಎದುರಿಸಿದರು. ಆದ್ರೆ ಕ್ರೀಸ್​​ನಲ್ಲಿ ಸೆಟಲ್ ಆಗ್ತಿದಂತೆ ರೋಹಿತ್, ಕಾಂಗರೂ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ರು. ಅಡಿಲೇಡ್​​ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ, ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ರು.    

ROHIT_SHARMA

ಟೀಕಾಕಾರರ ಬಾಯಿ ಮುಚ್ಚಿಸಿದ್ರಾ ರೋಹಿತ್ ಶರ್ಮಾ..?

ಪರ್ತ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೇವಲ 8 ರನ್​ಗಳಿಸಿ ಔಟಾಗಿದ್ದರು. ರೋಹಿತ್, ಸಿಂಗಲ್ ಡಿಜಿಟ್​​ಗೆ ಔಟಾಗಿದ್ದೇ ತಡ. ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಮತ್ತು ಕ್ರಿಕೆಟ್ ವಿಶ್ಲೇಷಕರು ರೋಹಿತ್ ಬಗ್ಗೆ, ಬಾಯಿಗೆ ಬಂದಂತೆ ಮಾತನಾಡಿದ್ದರು. ರೋಹಿತ್, ODI ಕರಿಯರ್ ಮುಗೀತು, ರೋಹಿತ್​​​​​​​​​​​​ ರಿಟೈರ್​ಮೆಂಟ್ ತೆಗೆದುಕೊಳ್ಳೇದೇ ಸೂಕ್ತ ಅಂತ ಮತನಾಡಿದ್ದರು. ಆದ್ರೀಗ ರೋಹಿತ್, ತನ್ನ ಸಾಲಿಡ್ ಇನ್ನಿಂಗ್ಸ್​ನಿಂದ ಟೀಕಕಾರರ ಬಾಯಿ ಮುಚ್ಚಿಸಿದ್ದಾರೆ. 

ಅಡಿಲೇಡ್ ಇನ್ನಿಂಗ್ಸ್​ ಮುಂಬೈಕರ್​​ಗೆ ಲೈಫ್​ ಲೈನ್..?

ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಸೂಪರ್ಬ್ ಪರ್ಫಾಮೆನ್ಸ್ ನೀಡಿದ್ದರು. ಬೌಲರ್​​ಗಳಿಗೆ ನೆರವಾಗೋ ಪಿಚ್​​ನಲ್ಲಿ, ರನ್​ಗಳಿಸೋದೇ ಕಷ್ಟಕರವಾಗಿತ್ತು. ಮಿಚ್ಚೆಲ್ ಸ್ಟಾರ್ಕ್ ಮತ್ತು ಜೋಷ್ ಹೇಝಲ್​ವುಡ್​​ ಬುಲೆಟ್​ನಂತಹ ಬಾಲ್​ಗಳನ್ನ ಎಸೆಯುತ್ತಿದ್ರೂ, ರೋಹಿತ್​​ ಧೃತಿಗೆಡಲಿಲ್ಲ. ಆಸಿಸ್​​​ ಸ್ಪೀಡ್​ಸ್ಟರ್​ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿ, ಅರ್ಧಶತಕ ಸಿಡಿಸಿ ಮಿಂಚಿದ್ರು. ಈ ಇನ್ನಿಂಗ್ಸ್​, ರೋಹಿತ್​ಗೆ ಲೈಫ್ ಲೈನ್​ ಕೊಟ್ಟಿದೆ.    

Advertisment

ರೋಹಿತ್ ಆಟ ನೋಡಿ ಫ್ಯಾನ್ಸ್ ಫುಲ್ ಖುಷ್..!

ಅಡಿಲೇಡ್​​​ನಲ್ಲಿ ರೋಹಿತ್​​ರ ನಿಧಾನಗತಿಯ ಬ್ಯಾಟಿಂಗ್ ಕಂಡು, ಕ್ರಿಕೆಟ್ ಅಭಿಮಾನಿಗಳಿಗೆ ನಂಬಲಾಗಲಿಲ್ಲ. ಅಗ್ರೆಸಿವ್ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದ ರೋಹಿತ್​​ ಹೀಗೇಕೆ ಆಡ್ತಿದ್ದಾರೆ..? ಇದು ರೋಹಿತ್​​ ಆಟನಾ ಅಂತ, ಮಾತನಾಡಿಕೊಂಡು. ಆದ್ರೆ ರೋಹಿತ್​ರ ತಾಳ್ಮೆ, ಎಚ್ಚರಿಕೆ ಮತ್ತು ಜವಾಬ್ದಾರಿಯುತ ಆಟದ ಹಿಂದೆ, ದೊಡ್ಡ ಲೆಕ್ಕಾಚಾರವೇ ಇತ್ತು. ಕೊನೆಗೆ ರೋಹಿತ್ ಅಂದುಕೊಂಡಂತೆ ಒಳ್ಳೆ ಇನ್ನಿಂಗ್ಸ್​ ಆಡಿದ್ರು. ಓವಲ್ ಮೈದಾನದಲ್ಲಿದ್ದ ಅಭಿಮಾನಿಗಳನ್ನ ತನ್ನ ಆಟದಿಂದ ರಂಚಿಸಿದ್ರು.

ಇದನ್ನೂ ಓದಿ:2 ಬಾರಿ ಡಕೌಟ್​.. ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ ಮಾಡಿದ ಆ ‘ಸನ್ನೆ’ಯ ಅರ್ಥವೇನು?

ROHIT_SHARMA_50

ಅಡಿಲೇಡ್​ನಲ್ಲಿ ರೋಹಿತ್ ದಾಖಲೆಗಳ ಮೇಲೆ ದಾಖಲೆ..!

ರೋಹಿತ್ ಶರ್ಮಾ, ಅದ್ಭುತ ಇನ್ನಿಂಗ್ಸ್ ಮಾತ್ರ ಆಡಿಲ್ಲ. ಅಡಿಲೇಡ್​ನಲ್ಲಿ ದಾಖಲೆಗಳನ್ನ ಪುಡಿ ಪುಡಿ ಮಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಸನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ನಂತರ ಅತಿ ಹೆಚ್ಚು ರನ್​ಗಳಿಸಿ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಸೌರವ್ ಗಂಗೂಲಿಯ ದಾಖಲೆಯನ್ನ ಮುರಿದಿದ್ದಾರೆ. ಇದಲ್ಲದೇ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲೇ, ಸಾವಿರ ODI ರನ್​ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೇನಾ ರಾಷ್ಟ್ರಗಳಲ್ಲಿ 150 ಸಿಕ್ಸರ್ ಸಿಡಿಸಿರುವ ಮೊದಲ ಏಷ್ಯನ್ ಆಟಗಾರ ಎನಿಸಿಕೊಂಡಿರೋ ರೋಹಿತ್, ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ನಂತರ, ಅತಿ ಹೆಚ್ಚು 50+ ಏಕದಿನ ಅರ್ಧಶತಕಗಳನ್ನ ಗಳಿಸಿದ ಮೂರನೇ ಭಾರತೀಯ ಆಗಿದ್ದಾರೆ.

Advertisment

ಹಿಟ್​ಮ್ಯಾನ್​​ ನಾಟೌಟ್..! ರೋಹಿತ್​ಗೆ ವಿಶ್ವಕಪ್ ಗುರಿ..!​​
   
ಅಡಿಲೇಡ್​​ ಏಕದಿನ ಪಂದ್ಯದಲ್ಲಿ ರೋಹಿತ್​​​ ಆಡಿದ್ದ ಕ್ಲಾಸಿ​​​​ ಇನ್ನಿಂಗ್ಸ್​, ಬಿಸಿಸಿಐ ಬಿಗ್​ಬಾಸ್​​ಗಳು ಮತ್ತು ಆಯ್ಕೆ ಸಮಿತಿಗೆ, ಸಂದೇಶ ನೀಡಿದಂತೆ ಇತ್ತು. ನಾನು ನಾಟೌಟ್.. ನನ್ನ ಆಟ ಮುಗಿದಿಲ್ಲ.  2027ರ ಏಕದಿನ ವಿಶ್ವಕಪ್ ನನ್ನ ಗುರಿ ಅನ್ನೋದನ್ನ, ರೋಹಿತ್ ಆ ಒಂದು ಇನ್ನಿಂಗ್ಸ್​ ಮೂಲಕ ಸಾರಿ ಹೇಳಿದ್ದಾರೆ. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​​ಗೂ ಇದು, ಮುಟ್ಟಿನೋಡಿಕೊಳ್ಳುವ ಉತ್ತರವಾಗಿದೆ. ಏನೇ ಇರಲಿ, ರೋಹಿತ್ ಒರ್ವ ಸ್ಮಾರ್ಟ್ ಌಂಡ್ ಇಂಟಲಿಜೆಂಟ್ ಕ್ರಿಕೆಟರ್. ಆತ ಇಷ್ಟು ಬೇಗ, ಏಕದಿನ ಕ್ರಿಕೆಟ್​ನಿಂದ ದೂರ ಆಗೋದಿಲ್ಲ.     
 
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Rohith Sharma IND vs AUS
Advertisment
Advertisment
Advertisment