/newsfirstlive-kannada/media/media_files/2025/10/25/rohit_sharma_50-1-2025-10-25-14-27-12.jpg)
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಸರಣಿಯ ಕೊನೆ ಏಕದಿನ ಪಂದ್ಯದಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಭರ್ಜರಿಯಾದ ಅರ್ಧಶತಕ ಸಿಡಿಸಿದ್ದಾರೆ. ಇದು ಅವರ 60ನೇ ಒಡಿಐ ಫಿಫ್ಟಿ ಆಗಿದೆ.
ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಒಡಿಐ ಮ್ಯಾಚ್​ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ಕ್ಯಾಪ್ಟನ್​ ಮಿಚೆಲ್ ಮಾರ್ಷ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರು. ಟೀಮ್ ಇಂಡಿಯಾಗೆ 237 ರನ್​ಗಳ ಟಾರ್ಗೆಟ್​ ಅನ್ನು ಆಸಿಸ್​ ಆಟಗಾರರು ನೀಡಿದ್ದಾರೆ. ಈ ಗುರಿ ಬೆನ್ನತ್ತಿರುವ ಭಾರತ ಓಪನರ್​ ಶುಭ್​ಮನ್​ ಗಿಲ್ ಕೇವಲ 24 ರನ್​ಗೆ ಔಟ್ ಆಗಿದ್ದಾರೆ.
ಇದನ್ನೂ ಓದಿ: ಖಾಸಗಿ ವೀಡಿಯೋ, ಫೋಟೋಗಳಿಂದ ಬ್ಲ್ಯಾಕ್​ಮೇಲ್ ಆರೋಪ​.. ನಟಿ ಆಶಾ ಜೋಯಿಸ್ ವಿರುದ್ಧ FIR
/filters:format(webp)/newsfirstlive-kannada/media/media_files/2025/10/23/rohit_sharma-2025-10-23-11-17-30.jpg)
ಆದ್ರೆ ಇನ್ನೊಂದೆಡೆ ಓಪನರ್ ಆಗಿ ಕ್ರೀಸ್​ ಆಗಮಿಸಿದ್ದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಬೌಲರ್​ಗಳನ್ನು ಕಾಡಿದರು. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್​ಮ್ಯಾನ್​ ಹಾಫ್​ ಸೆಂಚುರಿ ಸಿಡಿಸಿದ್ದಾರೆ. ಈ ಸರಣಿಯಲ್ಲಿ ಇದು ರೋಹಿತ್ ಶರ್ಮಾರ 2ನೇ ಅರ್ಧಶತಕವಾಗಿದೆ. ಅಲ್ಲದೇ ಏಕದಿನ ಪಂದ್ಯಗಳಲ್ಲಿ 60ನೇ ಫಿಫ್ಟಿ ಆಗಿದೆ. ಆಸ್ಟ್ರೇಲಿಯಾ ವಿರುದ್ಧ ಒಡಿಐ ಮ್ಯಾಚ್​ಗಳಲ್ಲಿ 2500 ರನ್​ ಪೂರೈಸಿದ ಭಾರತದ 2ನೇ ಬ್ಯಾಟರ್ ಆಗಿದ್ದಾರೆ. ಮೊದಲು ಸಚಿನ್ ತೆಂಡೂಲ್ಕರ್ ಇದ್ದಾರೆ.
ಈ ಪಂದ್ಯದಲ್ಲಿ ಒಟ್ಟು 63 ಬಾಲ್​ಗಳನ್ನು ಎದುರಿಸಿದ ರೋಹಿತ್ ಶರ್ಮಾ 6 ಅಮೋಘವಾದ ಬೌಂಡರಿಗಳು ಹಾಗೂ 1 ಸಿಕ್ಸರ್​ನಿಂದ 50 ರನ್​ಗಳನ್ನು ಚಚ್ಚಿದರು. ಸದ್ಯ ವಿರಾಟ್ ಕೊಹ್ಲಿ ಕ್ರೀಸ್​ನಲ್ಲಿದ್ದು ರೋಹಿತ್ ಶರ್ಮಾಗೆ ಸಾಥ್ ಕೊಡುತ್ತಿದ್ದಾರೆ. ಟೀಮ್ ಇಂಡಿಯಾ 1 ವಿಕೆಟ್​ಗೆ 120 ರನ್​ಗಳನ್ನು ಗಳಿಸಿದ್ದು ಗೆಲುವಿಗೆ ಇನ್ನೂ 116 ರನ್​ಗಳನ್ನು ಗಳಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us