/newsfirstlive-kannada/media/media_files/2025/09/24/team_india_win-2025-09-24-23-27-58.jpg)
ಮೆಲ್ಬೋರ್ನ್​ T20 ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ, ಹೊಬಾರ್ಟ್​​ನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ, ಬ್ಯಾಟಿಂಗ್, ಬೌಲಿಂಗ್​​​​ ಮತ್ತು ಫೀಲ್ಡಿಂಗ್​ನಲ್ಲಿ, ಫ್ಲಾಪ್ ಶೋ ನೀಡಿತ್ತು. ಆದ್ರೀಗ ತಪ್ಪನ್ನ ತಿದ್ದಿಕೊಂಡು ಕಣಕ್ಕಿಳಿಯುತ್ತಿರುವ ಬ್ಲೂ ಬಾಯ್ಸ್, ಮಹತ್ವದ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.
ಮೊದಲ T20 ಪಂದ್ಯದಲ್ಲಿ ನೋ ರಿಸಲ್ಟ್. 2ನೇ T20 ಪಂದ್ಯದಲ್ಲಿ ಹೀನಾಯ ಸೋಲು. ಇಂದು ಹೊಬಾರ್ಟ್​​ನಲ್ಲಿ ನಡೆಯಲಿರುವ ಪಂದ್ಯದಲ್ಲಿ, ಟೀಮ್ ಇಂಡಿಯಾ ಗೆಲ್ಲಲೇಬೇಕು. ಸೂರ್ಯಕುಮಾರ್ ಯಾದವ್ ಪಡೆ ಸರಣಿಯಲ್ಲಿ ಜೀವಂತವಾಗಿರಬೇಕಂದ್ರೆ, ಕಾಂಗರೂಗಳ ಬೇಟೆಯಾಡಲೇಬೇಕು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಬಲಿಷ್ಟವಾಗಿರುವ ಆಸಿಸ್​​​ ತಂಡವನ್ನ, ಉಡೀಸ್ ಮಾಡಲೇಬೇಕು. ​
/filters:format(webp)/newsfirstlive-kannada/media/media_files/2025/09/24/abhishek_gill-2025-09-24-18-56-14.jpg)
ಹೊಬಾರ್ಟ್​​ನಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾ ಟೀಮ್ ಇಂಡಿಯಾ..?
T20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಹೆಚ್ಚು ಹೆಚ್ಚು ಪಂದ್ಯಗಳನ್ನ ಗೆದ್ದಿದೆ. ಈ ವರ್ಷ ಟೀಮ್ ಇಂಡಿಯಾ ಸೋತಿರೋದು ಕೇವಲ ಎರಡೇ ಎರಡು ಪಂದ್ಯಗಳಲ್ಲಿ ಮಾತ್ರ. ಶಾರ್ಟರ್ ಫಾರ್ಮೆಟ್​​ನಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುವ ಸೂರ್ಯಕುಮಾರ್ ಬಾಯ್ಸ್, ಹೊಬಾರ್ಟ್​ನಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್​​ಗೆ ಮರಳಬೇಕು. T20 ಫಾರ್ಮೆಟ್​ನಲ್ಲಿ ನಂಬರ್.1 ತಂಡ ಎನಿಸಿಕೊಂಡಿರೋ ಟೀಮ್ ಇಂಡಿಯಾ, ಚಾಂಪಿಯನ್​​​ ತಂಡದಂತೆ ಪರ್ಫಾಮ್ ಮಾಡಬೇಕು.
ಟೀಮ್ ಇಂಡಿಯಾಕ್ಕೆ ಗಿಲ್, ಸೂರ್ಯಕುಮಾರ್ ಫಾರ್ಮ್ ಸಮಸ್ಯೆ..!
ಕ್ಯಾನ್​ಬೆರಾ ಮತ್ತು ಮೆಲ್ಬರ್ನ್ T20 ಪಂದ್ಯಗಳಲ್ಲಿ ಆರಂಭಿಕ ಶುಭ್ಮನ್ ಗಿಲ್, ಅಟ್ಟರ್ ಫ್ಲಾಪ್ ಆಗಿದ್ದಾರೆ. ಎರಡು ಪಂದ್ಯಗಳಿಂದ ಕೇವಲ 10 ರನ್​ಗಳಿಸಿರುವ ಗಿಲ್, ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಲೇಬೇಕು. ಇನ್ನು ಕ್ಯಾಪ್ಟನ್ ಸೂರ್ಯ, ಮೊದಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ರು. ಆದ್ರೆ ಎಂಸಿಜಿಯಲ್ಲಿ ಕೈಕೊಟ್ಟು, ತಂಡದ ಸೋಲಿಗೆ ಕಾರಣರಾದ್ರು. ಈ ಇಬ್ಬರೂ ಸೂಪರ್​​ಸ್ಟಾರ್ ಬ್ಯಾಟರ್ಸ್​ ಫಾರ್ಮ್​​​ ಕಂಡುಕೊಂಡ್ರೆ, ತಂಡದ ಬ್ಯಾಟಿಂಗ್​​​​ ಬಲಿಷ್ಟಗೊಳ್ಳಲಿದೆ.
ಬ್ಯಾಟಿಂಗ್ ಸ್ಲಾಟ್​ನಲ್ಲಿ ಮತ್ತೆ ಪ್ರಯೋಗ ಮುಂದುವರೆಯುತ್ತಾ..?
ಮೆಲ್ಬರ್ನ್ T20 ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಡರ್ ನೋಡಿ, ಎಲ್ಲರಿಗೂ ಆಶ್ಚರ್ಯವಾಯ್ತು. ನಂಬರ್​.3ನಲ್ಲಿ ಸೂರ್ಯಕುಮಾರ್​​​​ ಸ್ಥಾನದಲ್ಲಿ, ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡಿದ್ರು. ಟಾಪ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಅಕ್ಷರ್ ಪಟೇಲ್, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರು. ಇನ್ನು ಹರ್ಷಿತ್ ರಾಣಾ, ಶಿವಂ ದುವೆಗೂ ಮುನ್ನ ಬ್ಯಾಟಿಂಗ್​ಗಿಳಿದು ಆಶ್ಚರ್ಯ ಮೂಡಿಸಿದ್ರು. ಆದ್ರೆ ಇಂದೂ ಅದೇ ರೀತಿ ಬ್ಯಾಟಿಂಗ್ ಸ್ಲಾಟ್​​ನಲ್ಲಿ ಪ್ರಯೋಗ ನಡೆಸಲಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.​​​​​​​​​​
ವೇಗಿ ಆರ್ಷ್​ದೀಪ್ ಸಿಂಗ್ ಗೊಂದಲಕ್ಕೆ ಉತ್ತರ ಸಿಗುತ್ತಾ..?
ಮೊದಲೆರೆಡು T20 ಪಂದ್ಯಗಳಿಂದ ಡ್ರಾಪ್ ಆಗಿದ್ದ ಎಡಗೈ ವೇಗಿ ಆರ್ಷ್​ದೀಪ್ ಸಿಂಗ್, ಹೊಬಾರ್ಟ್​ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ?. T20 ಫಾರ್ಮೆಟ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಆರ್ಷ್​ದೀಪ್, ಮತ್ತೆ ಚೆಂಚ್​ನಲ್ಲೇ ಉಳಿದುಕೊಳ್ತಾರಾ ಅನ್ನೋ ಗೊಂದಲಕ್ಕೆ, ಸದ್ಯಕ್ಕೆ ಉತ್ತರ ಇಲ್ಲ. ಆಸಿಸ್​​​​ನ ಫಾಸ್ಟ್​ ಌಂಡ್ ಸ್ವಿಂಗಿಂಗ್ ಟ್ರ್ಯಾಕ್​​​​ ಆರ್ಷ್​​ದೀಪ್​​​ಗೆ ಸೂಟ್ ಆಗೋದ್ರಿಂದ, ಪಂಜಾಬ್ ವೇಗಿಯನ್ನ ಆಡಿಸಿದ್ರೆ ಒಳ್ಳೇದೇ.
/filters:format(webp)/newsfirstlive-kannada/media/media_files/2025/09/10/abhishek_sharma-2-2025-09-10-17-12-49.jpg)
ತಂಡದಲ್ಲಿ ಬದಲಾವಣೆಗೆ ಮುಂದಾಗ್ತಾರಾ ಕೋಚ್ ಗಂಭೀರ್?
ಟೀಮ್ ಇಂಡಿಯಾ ಬೆಂಚ್ ಸ್ಟ್ರೆಂಥ್ ಸಖತ್ ಸ್ಟ್ರಾಂಗ್ ಆಗಿದೆ. ರಿಂಕು ಸಿಂಗ್, ವಾಶಿಂಗ್ಟನ್ ಸುಂದರ್, ಜಿತೇಶ್ ಶರ್ಮಾ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಮೆಂಟ್, ಒಂದೆರೆಡು ಬದಲಾವಣೆ ಮಾಡುತ್ತಾ..? ಕುಲ್ದೀಪ್ ಯಾದವ್ ಬದಲಿಗೆ ಆಫ್​ಸ್ಪಿನ್ನರ್ ವಾಶಿಂಗ್ಟನ್ ಸುಂದರ್​​​​​​​​​​​​​​​​​ ಮೊರೆ ಹೋಗುತ್ತಾ ಅನ್ನೋದು, ಇನ್ನೂ ಕುತೂಹಲವಾಗೇ ಉಳಿದುಕೊಂಡಿದೆ.
ಹೊಬಾರ್ಟ್​​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸೋಲೇ ಇಲ್ಲ...!
ಹೊಬಾರ್ಟ್​​​ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾ, ಇದುವರೆಗು ಒಂದೇ ಒಂದು ಟಿ-ಟ್ವೆಂಟಿ ಪಂದ್ಯವನ್ನ ಆಡಿಲ್ಲ. ಆದ್ರೆ ಆಸಿಸ್, ಈ ಮೈದಾನದಲ್ಲಿ ಆಡಿರೋ ಎಲ್ಲಾ 5 ಟಿ-ಟ್ವೆಂಟಿ ಪಂದ್ಯಗಳನ್ನ ಗೆದ್ದು ಬೀಗಿದೆ. ಆಸ್ಟ್ರೇಲಿಯನ್ನರಿಗೆ ಹೊಬಾರ್ಟ್ ಮೈದಾನ, ಲಕ್ಕಿ ಌಂಡ್ ಫೇವರಿಟ್. ಸೋ.. ಅದೇ ಜೋಷ್​ನಲ್ಲಿ ಆಸಿಸ್, ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾಕ್ಕೆ ಮತ್ತೊಂದು ಸೋಲಿನ ರುಚಿ ತೋರಿಸುವ ತವಕದಲ್ಲಿದೆ. ಸೂಪರ್ ಸಂಡೇ, ಸೂಪರ್ ಫೈಟ್​​ನಲ್ಲಿ, ಯಾವ ತಂಡ ಗೆಲ್ಲುತ್ತೆ..? ಹೊಡಿ ಬಡಿ ಆಟದಲ್ಲಿ ಯಾರು ವಿಜಯೋತ್ಸವ ಆಚರಿಸುತ್ತಾರೆ..? ಕಾದು ನೋಡೋಣ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us