/newsfirstlive-kannada/media/media_files/2025/11/02/surya-dube-2025-11-02-17-09-50.jpg)
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಆ ಮೂಲಕ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಎರಡು ತಂಡಗಳು ಸಮಬಲ ಕಾಯ್ದುಕೊಂಡಿವೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್​ಗಳಿಸಿತ್ತು. 187 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಭಾರತ 18.3 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 188 ರನ್​ಗಳಿಸಿತು.
ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ.. ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ತಪ್ಪಾಯ್ತಾ?
ಸುಂದರ್ ಸುಂದರ ಆಟ..!
ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಅದ್ಭುತ ಆಟವನ್ನಾಡಿದರು. ಟೀಂ ಇಂಡಿಯಾ ವಿಕೆಟ್ ಮೇಲೆ ವಿಕೆಟ್ ಬೀಳ್ತಿದ್ದಾಗ ತಂಡದ ಗೆಲುವಿಗಾಗಿ ಸೆಟೆದು ನಿಂತು ಬ್ಯಾಟ್ ಬೀಸಿದರು. ಕೇವಲ 23 ಬಾಲ್ ಎದುರಿಸಿ 213.4 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ ನಾಲ್ಕು ಸಿಕ್ಸರ್, ಮೂರು ಬೌಂಡರಿಯೊಂದಿಗೆ 49 ರನ್​ಗಳಿಸಿ ನಾಟೌಟ್ ಆಗಿ ಉಳಿದರು. ಇನ್ನುಳಿದಂತೆ ಭಾರತದ ಪರ ಅಭಿಷೇಕ್ ಶರ್ಮಾ 25, ಗಿಲ್ 15, ಸೂರ್ಯ 24, ತಿಲಕ್ ವರ್ಮಾ 29, ಅಕ್ಸರ್ ಪಟೇಲ್ 17, ಜಿತೇಶ್ ಶರ್ಮಾ 22 ರನ್​ಗಳಿಸಿದರು.
/filters:format(webp)/newsfirstlive-kannada/media/media_files/2025/11/02/team-india-2025-11-02-17-21-18.jpg)
ಇನ್ನು, ಬೌಲಿಂಗ್​ನಲ್ಲಿ ಅರ್ಷ್​ದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದುಕೊಂಡರು. ಇನ್ನು ಶಿವಂ ದುಬೆ ಒಂದು ವಿಕೆಟ್ ಉರುಳಿಸಿದರು. ನಾಲ್ಕನೇ ಟಿ-20 ಪಂದ್ಯವು ನವೆಂಬರ್ 6 ರಂದು ನಡೆಯಲಿದೆ. ನವೆಂಬರ್ 8 ರಂದು ಅಂತಿಮ ಪಂದ್ಯ ನಡೆಯಲಿದೆ. ಟಿ-20 ಸರಣಿಯನ್ನು ಟೀಂ ಇಂಡಿಯಾ ಗೆಲ್ಲಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us