/newsfirstlive-kannada/media/media_files/2025/09/19/bng_bmn_school-2025-09-19-20-41-56.jpg)
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಕಳಿಯ ಬಿಎಂಎನ್ ಪಬ್ಲಿಕ್ ಶಾಲೆಯೂ ಕಬ್ಬಡ್ಡಿ ಟೂರ್ನ್​ಮೆಂಟ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಕರ್ನಾಟಕದಾದ್ಯಂತ 55 ಸಿಬಿಎಸ್ಇ ಶಾಲೆಗಳ ಕಠಿಣ ಸ್ಪರ್ಧೆಯ ನಡುವೆಯೂ ಬಿಎಂಎನ್ ಪಬ್ಲಿಕ್ ಶಾಲೆಯ ಕಬಡ್ಡಿ ತಂಡ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ.
ಬಿಎಂಎನ್ ಪಬ್ಲಿಕ್ ಶಾಲೆಯ ಕಬ್ಬಡ್ಡಿ ತಂಡವು ಫೈನಲ್​ ಟ್ರೋಫಿ ಜಯಿಸುತ್ತಿದ್ದಂತೆ ಇತ್ತ ಶಾಲೆಯಲ್ಲಿ ವಿಜಯೋತ್ಸವ ಮುಗಿಲು ಮುಟ್ಟಿತ್ತು. ವಿದ್ಯಾರ್ಥಿಗಳ ನಿರಂತರ ಅಭ್ಯಾಸ ಹಾಗೂ ಗುರುಗಳ ಶ್ರಮ ಕೊನೆಗೂ ಯಶಸ್ಸು ಗಳಿಸಿದೆ. ತಂಡದ ಶಿಸ್ತು, ದೃಢ ನಿಶ್ಚಯ ಹಾಗೂ ಕ್ರೀಡಾ ಮನೋಭಾವವು ಬಿಜಾಪುರದ ಕವಳಗಿಯ ಸಂಗನಬಸವ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಎಲ್ಲರ ಗಮನ ಸೆಳೆದಿರುವುದು ವಿಶೇಷ ಎನಿಸಿತು.
ಈ ಗೆಲುವಿನೊಂದಿಗೆ ಮತ್ತೊಂದು ದೊಡ್ಡ ಸವಾಲಿಗೆ ಬಿಎಂಎನ್ ಪಬ್ಲಿಕ್ ಶಾಲೆಯ ಕಬ್ಬಡ್ಡಿ ತಂಡ ರೆಡಿಯಾಗಿದೆ. ಸಿಬಿಎಸ್ಇ ರಾಷ್ಟ್ರೀಯ ಕಬಡ್ಡಿ ಚಾಂಪಿಯನಶಿಪ್ 2025 ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಕಸೌಲಿಯ ಸುಂದರವಾದ ಬೆಟ್ಟಗಳ ನಡುವೆ ಇರುವ ʻಕಸೌಲಿ ಇಂಟರ್​​ನ್ಯಾಷನಲ್ ಪಬ್ಲಿಕ್ ಸ್ಕೂಲ್ʼನಲ್ಲಿ 2025ರ ಸೆಪ್ಟೆಂಬರ್ 29 ರಂದು ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಕರ್ನಾಟಕದಿಂದ ಬಿಎಂಎನ್ ಪಬ್ಲಿಕ್ ಶಾಲೆಯ ಪ್ರತಿನಿಧಿಸಲಿದೆ.
ಈ ಸಂಬಂಧ ಬಿಎಂಎನ್ ಪಬ್ಲಿಕ್ ಸ್ಕೂಲ್​ನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಫುಲ್ ಹ್ಯಾಪಿಯಾಗಿದ್ದಾರೆ. ಅದ್ಭುತ ಸಾಧನೆಗಾಗಿ ಆಟಗಾರರನ್ನು ಅಭಿನಂದಿಸಿದ ಅವರು, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಂಡದ ಅಮೋಘ ಯಶಸ್ಸಿಗಾಗಿ ಹಾರೈಸಿದ್ದಾರೆ. ಧೈರ್ಯಶಾಲಿ ಮತ್ತು ಶಕ್ತಿಶಾಲಿ ವಿದ್ಯಾರ್ಥಿನಿಯರು ಸಿದ್ಧರಾಗಿದ್ದಾರೆ. ಇಡೀ ತಂಡದ ಸದಸ್ಯರಿಗೆ ಹಾಗೂ ತರಬೇತುದಾರರನ್ನು ಬಿಎಂಎನ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಡಾ.ವನಿತಾ ಲೋಕೇಶ್ ಹಾಗೂ ಸಿಬ್ಬಂದಿವರ್ಗ, ಶಾಲಾ ಆಡಳಿತ ಮಂಡಳಿ ಶುಭಾಶಯಗಳನ್ನು ಕೋರಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ