/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಇಂಡೋ-ಆಫ್ರಿಕಾ ಏಕದಿನ ಸರಣಿಗೆ ಕಿಕ್​ ಸ್ಟಾರ್ಟ್​ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರೋ ಟೀಮ್​ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಒನ್ ಡೇ ಸರಣಿಯ ನಡುವೆ ಬಿಸಿಸಿಐ ವಲಯದಲ್ಲಿ ಮಹತ್ವದ ಬೆಳವಣಿಗೆಳು ನಡೀತಿವೆ. ತಂಡದ ಭವಿಷ್ಯದ ಲೆಕ್ಕಾಚಾರ, 2026 ಟಿ20 ವಿಶ್ವಕಪ್​ ಹಾಗೂ 2027ರ ಏಕದಿನ ವಿಶ್ವಕಪ್​ಗೆ ಸಿದ್ಧತೆ​ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಸಿಸಿಐ ವಲಯದಲ್ಲಿ ಮಹತ್ವದ ಬೆಳವಣಿಗೆಗಳು ನಡೀತಿವೆ.
ಕೋಚ್​-ಸೆಲೆಕ್ಟರ್​ಗೆ ಬಿಸಿಸಿಐನಿಂದ ಕ್ಲಾಸ್​
ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ ಬಾಸ್​​ಗಳು ಹೈವೋಲ್ಟೆಜ್​ ಮೀಟಿಂಗ್​ಗೆ ಟೈಮ್​ ಫಿಕ್ಸ್​ ಮಾಡಿದ್ದಾರೆ. ಹೆಡ್​ಕೋಚ್​ ಗೌತಮ್​ ಗಂಭೀರ್​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ಗೆ ದಿಢೀರ್​​ ಬುಲಾವ್​ ನೀಡಿದ್ದಾರೆ. ರಾಯ್​​ಪುರದಲ್ಲಿ ನಡೆಯೋ ಸೌತ್​ ಆಫ್ರಿಕಾ ಎದುರಿನ 2ನೇ ಏಕದಿನ ಪಂದ್ಯ ಅಂತ್ಯವಾದ ಬಳಿಕ ಮಹತ್ವದ ಸಭೆ ನಡೆಯಲಿದೆ. ಬಿಸಿಸಿಐ ಸೆಕ್ರೆಟರಿ ದೇವಜಿತ್​ ಸೈಕಿಯಾ, ಜಂಟಿ ಕಾರ್ಯದರ್ಶಿ ಪ್ರಭ್​ತೇಜ್​ ಸಿಂಗ್​ ಭಾಟಿಯಾ, ಗಂಭೀರ್​ ಹಾಗೂ ಅಗರ್ಕರ್​ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಹಲವು ವಿಚಾರಗಳಲ್ಲಿ ಗಂಭೀರ್​-ಅಗರ್ಕರ್​ ನಡೆ ಬಗ್ಗೆ ಬಿಸಿಸಿಐ ವಲಯದಲ್ಲಿ ಬೇಸರವಿದೆ. ಹೀಗಾಗಿ ಬೆಂಡೆತ್ತೊಕೆ ಮೀಟಿಂಗ್ ಕರೆದಿದ್ದಾರೆ ಅನ್ನೋದು ಮೂಲದ ಮಾಹಿತಿಯಾಗಿದೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಜಿಪಿಎಸ್ ವಂಚನೆ ನಿಜ ಎಂದ ಕೇಂದ್ರ ಸರ್ಕಾರ: ಒಂದೇ ದಿನ 800 ವಿಮಾನ ಸಂಚಾರ ವ್ಯತ್ಯಯ!
/filters:format(webp)/newsfirstlive-kannada/media/media_files/2025/11/30/kohli-rohit-2025-11-30-17-27-31.jpg)
ರೋಹಿತ್​-ಕೊಹ್ಲಿ ಭವಿಷ್ಯವೇ ಪ್ರಮುಖ ಅಜೆಂಡಾ
ಸಭೆಯ ಪ್ರಮುಖ ಅಜೆಂಡಾನೇ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಭವಿಷ್ಯ. ಇವರಿಬ್ಬರ ಪ್ಯೂಚರ್​ ಬಗ್ಗೆ ಟೀಮ್​ ಮ್ಯಾನೇಜ್​ಮೆಂಟ್​ನ ಪ್ಲಾನ್​ ಏನಿದೆ ಅನ್ನೋದ್ರ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಈ ವಿಚಾರದಲ್ಲಿ ಗಂಭೀರ್​, ಅಗರ್ಕರ್​ರಿಂದ ಬಿಸಿಸಿಐ ಸ್ಪಷ್ಟತೆ ಬಯಸಿದೆ. ಟೆಸ್ಟ್​ ಫಾರ್ಮೆಟ್​ನಲ್ಲಿ ಕೋಚ್​ & ಸೆಲೆಕ್ಟರ್​ ತೆಗೆದುಕೊಂಡ ಆತುರದ ನಿರ್ಧಾರದಿಂದ ಸಾಕಷ್ಟು ಡ್ಯಾಮೇಜ್​ ಆಗಿದೆ. ಒನ್​ ಡೇ ಫಾರ್ಮೆಟ್​​ ಹೀಗಾಗಬಾರದು ಅನ್ನೋದು ಬಿಸಿಸಿಐನ ಉದ್ದೇಶ.
ಹೆಡ್​ಕೋಚ್​, ಚೀಫ್​ ಸೆಲೆಕ್ಟರ್​ ಹಾಗೂ ಟೀಮ್​ ಇಂಡಿಯಾದ ಸೀನಿಯರ್​ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಬಹುದಿನಗಳಿಂದ ಚರ್ಚೆಯಲ್ಲಿದೆ. ಹಿರಿಯ ಆಟಗಾರರನ್ನ ಗಂಭೀರ್, ಅಗರ್ಕರ್​ ಸರಿಯಾಗಿ ನಡೆಸಿಕೊಳ್ತಿಲ್ಲ. ತಮಗೆ ಸರಿಯಾದ ಯಾವ ಮಾಹಿತಿಯನ್ನೂ ನೀಡ್ತಿಲ್ಲ ಎಂಬ ದೂರು ಸೀನಿಯರ್​ ಆಟಗಾರರಿಂದ ಕೇಳಿಬಂದಿದೆ. ಇದ್ರಿಂದಾಗಿ ಟೀಮ್​ ಇಂಡಿಯಾದಲ್ಲೂ ಬಿರುಕು ಸೃಷ್ಟಿಯಾಗಿದೆ. ಕೆಲ ಆಟಗಾರರು ಗಂಭೀರ್​ ಜೊತೆ ಮಾತುಕತೆಯನ್ನೇ ನಿಲ್ಲಿಸಿದ್ದಾರೆ ಎನ್ನಲಾಗ್ತಿದೆ. ಇದು ಬಾಸ್​ಗಳ ಪಿತ್ತ ನೆತ್ತಿಗೇರಿಸಿದೆ. ಈ ಬಿಕ್ಕಟ್ಟನ್ನ ಬಗೆಹರಿಸೋ ನಿಟ್ಟಿನಲ್ಲಿ ಬಿಸಿಸಿಐ ಬಾಸ್​​ಗಳು ಅಖಾಡಕ್ಕೆ ಇಳಿದಿದ್ದಾರೆ.
/filters:format(webp)/newsfirstlive-kannada/media/media_files/2025/09/02/bcci-1-2025-09-02-22-44-54.jpg)
ಇದೇ ಸಭೆಯಲ್ಲಿ ತವರಿನಲ್ಲಿ ನಡೆಯೋ 2026ರ ಟಿ20 ವಿಶ್ವಕಪ್​ನ ಬಗ್ಗೆಯೂ ಚರ್ಚೆ ನಡೆಯಲಿದೆ. ಸೂರ್ಯಕುಮಾರ್​ ಯಾದವ್ ನೇತೃತ್ವದಲ್ಲಿ ಅಖಾಡಕ್ಕೆ ಇಳೀತಾ ಇರೋ ಟೀಮ್ ಇಂಡಿಯಾದ ಮುಂದೆ ಹಾಲಿ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳಬೇಕಾದ ಸವಾಲಿದೆ. ತವರಿನಲ್ಲಿ ನಡೀತಾ ಇರೋದ್ರಿಂದ ಬಿಸಿಸಿಐ ಪ್ರತಿಷ್ಠೆಯನ್ನೆ ಪಣಕ್ಕಿಟ್ಟಿದೆ. ಈ ಮಹತ್ವದ ಸರಣಿಗೆ ಕೋಚ್​ & ಸೆಲೆಕ್ಟರ್​ ಪ್ಲ್ಯಾನಿಂಗ್​ ಏನಿದೆ.? ಸಿದ್ಧತೆ ಹೇಗಿದೆ.? ಎಂಬ ಬಗ್ಗೆಯೂ ಬಿಸಿಸಿಐ ಬಾಸ್​​ಗಳು ಚರ್ಚಿಸಲಿದ್ದಾರೆ.
2027 ಏಕದಿನ ವಿಶ್ವಕಪ್​ ರೋಡ್​ ಮ್ಯಾಪ್​ ಏನು?
2027ರಲ್ಲಿ ಸೌತ್​ ಆಫ್ರಿಕಾದಲ್ಲಿ ನಡೆಯೋ ಏಕದಿನ ವಿಶ್ವಕಪ್​ ಟೂರ್ನಿಯ ರೋಡ್​ಮ್ಯಾಪ್​ ಬಗ್ಗೆ ಕೂಡ ಮೀಟಿಂಗ್​ನಲ್ಲಿ ಚರ್ಚೆ ನಡೆಯಲಿದೆ. ರೋಹಿತ್, ಕೊಹ್ಲಿ, ಜಡೇಜಾರಂತ ಸೀನಿಯರ್​ ಆಟಗಾರರು ಟೂರ್ನಿಯಲ್ಲಿ ಆಡಿಸಬೇಕಾ.? ಅಥವಾ ಡ್ರಾಪ್ ಮಾಡಬೇಕಾ.? ಎಂಬ ಪ್ರಶ್ನೆಗೆ ಇದೇ ಸಭೆಯಲ್ಲಿ ಕ್ಲಾರಿಟಿ ಸಿಗಲಿದೆ. ಒಂದು ವೇಳೆ ಸೀನಿಯರ್ಸ್​ ಪ್ಲ್ಯಾನಿಂಗ್​ನಲ್ಲಿ ಇಲ್ಲ ಅಂದ್ರೆ ಬ್ಯಾಕ್​ ಅಪ್​ ಪ್ಲ್ಯಾನ್​ಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಯ್​​ಪುರದಲ್ಲಿ ಗಂಭೀರ್​ ಹಾಗೂ ಅಗರ್ಕರ್​ ಜೊತೆಗೆ ಸಭೆಗೆ ಮಹೂರ್ತವಿಟ್ಟಿರೋ ಬಿಸಿಸಿಐ, ಸರಣಿ ಅಂತ್ಯದ ಬಳಿಕ ರೋಹಿತ್​- ಕೊಹ್ಲಿ ಜೊತೆಗೂ ಅಹ್ಮದಾಬಾದ್​ನಲ್ಲಿ ಸಭೆ ನಡೆಸಲಿದೆ. ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿರೋ ಎಲ್ಲಾ ಗೊಂದಲಗಳಿಗೆ ಸೌತ್​ ಆಫ್ರಿಕಾ ಸರಣಿ ಅಂತ್ಯದ ಬಳಿಕ ಒಂದು ಕ್ಲಾರಿಟಿ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us