/newsfirstlive-kannada/media/media_files/2025/09/02/bcci-1-2025-09-02-22-44-54.jpg)
ಟೀಂ ಇಂಡಿಯಾಗೆ ಹೊಸ ಶಿರ್ಷಿಕೆ ಪ್ರಾಯೋಜಕರಿಗಾಗಿ (New title sponsor) ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರ ಡ್ರೀಮ್ -11 ಆನ್ಲೈನ್ ಗೇಮ್ ನಿಷೇಧಿಸಿದ ಪರಿಣಾಮ ಹೊಸ ಪ್ರಾಯೋಜಕರ ಹುಡುಕಾಟದಲ್ಲಿ ಬಿಸಿಸಿಐ ಇದೆ. ಇನ್ನು, ಹೊಸ ಪ್ರಾಯೋಜಕರಿಗೆ ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿದೆ.
ಯಾರೆಲ್ಲ ಬಿಡ್ ಮಾಡಲು ಸಾಧ್ಯವಿಲ್ಲ?
ಬಿಸಿಸಿಐ ಬಿಡುಗಡೆ ಮಾಡಿರುವ ಟೆಂಡರ್‌ನಲ್ಲಿ.. ಮದ್ಯ, ತಂಬಾಕು, ಬೆಟ್ಟಿಂಗ್, ಹಣ ಮಾಡುವ ಗೇಮಿಂಗ್ (ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಹೊರತುಪಡಿಸಿ), ಕ್ರಿಪ್ಟೋಕರೆನ್ಸಿ ಮತ್ತು ಅಶ್ಲೀಲತೆ ಅಥವಾ ಸಾರ್ವಜನಿಕರ ಮನಸ್ಸಿಗೆ ನೋವು ತರುವಂತಹ ಬ್ರ್ಯಾಂಡ್‌ಗಳಿಗೆ ಬಿಡ್‌ನಲ್ಲಿ ಅವಕಾಶವಿಲ್ಲ. ಬಿಸಿಸಿಐ ಟೆಂಡರ್ ಭರ್ತಿ ಮಾಡಲು ಸೆಪ್ಟೆಂಬರ್ 12 ಕೊನೆಯ ದಿನಾಂಕ. ಬಿಡ್ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನ. 2023 ರಿಂದ 2026 ರವರೆಗೆ ಬಿಸಿಸಿಐ ಡ್ರೀಮ್11 ಜೊತೆ 44 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 358 ಕೋಟಿ ರೂ.) ಒಪ್ಪಂದ ಮಾಡಿಕೊಂಡಿತ್ತು.
ಜೆರ್ಸಿ ಪ್ರಾಯೋಜಕತ್ವಕ್ಕಾಗಿ 452 ಕೋಟಿ ಒಪ್ಪಂದ?
2025 ರಿಂದ 2028 ರವರೆಗಿನ 140 ಪಂದ್ಯಗಳಿಗೆ ಬಿಸಿಸಿಐ ಜರ್ಸಿ ಪ್ರಾಯೋಜಕರ ಹುಡುಕುತ್ತಿದೆ. ಬಿಸಿಸಿಐ ಪ್ರತಿ ದ್ವಿಪಕ್ಷೀಯ ಪಂದ್ಯಕ್ಕೆ 3.5 ಕೋಟಿ ರೂ. ಮತ್ತು ಐಸಿಸಿ ಮತ್ತು ಎಸಿಸಿ ಪಂದ್ಯಗಳಿಗೆ 1.5 ಕೋಟಿ ರೂ. ಗುರಿಯನ್ನು ನಿಗದಿಪಡಿಸಿದೆ.
ಮಹಿಳಾ ವಿಶ್ವಕಪ್‌ಗೂ ಮುನ್ನ ಪ್ರಾಯೋಜಕ ಪಡೆಯುವ ವಿಶ್ವಾಸ
ಬಿಸಿಸಿಐ ಏಷ್ಯಾ ಕಪ್‌ಗೆ ಮುನ್ನ ಜರ್ಸಿ ಪ್ರಾಯೋಜಕರ ಹುಡುಕಲು ಪ್ರಯತ್ನಿಸುತ್ತಿದೆ. ಸಮಯದ ಅಭಾವ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಮಹಿಳಾ ವಿಶ್ವಕಪ್‌ಗೆ ಮುನ್ನ ಹೊಸ ಸಂಸ್ಥೆಯನ್ನು ಹುಡುಕುವ ವಿಶ್ವಾಸ ಬಿಸಿಸಿಐ ಇದೆ. ಏಷ್ಯಾ ಕಪ್ ಗೇಮ್ಗೆ ಯಾವುದೇ ಪ್ರಾಯೋಜಕರಿಲ್ಲದೇ ಟೀಂ ಇಂಡಿಯಾ ಕಣಕ್ಕೆ ಇಳಿಯಲಿದೆ.
ಇದನ್ನೂ ಓದಿ:ದ್ರಾವಿಡ್ಗೆ ತಾನೇ ಸಾಕಿದ ಗಿಣಿ ಹದ್ದಾಗಿ ಬಂದು ಕುಕ್ಕಿದೆ.. ಯಾಕೆ ಹೀಗೆ ಆಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ