/newsfirstlive-kannada/media/post_attachments/wp-content/uploads/2025/02/SHAMI.jpg)
ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಹಾಲಿ ಕ್ರಿಕೆಟಿಗರು, ಗರಂ ಆಗಿದ್ದಾರೆ. ಪರ್ಫಾಮೆನ್ಸ್ ನೀಡಿದ್ರೂ ಆಯ್ಕೆ ಸಮಿತಿ, ಆಟಗಾರರನ್ನ ನಿರ್ಲಕ್ಷಿಸುತ್ತಿದೆ ಅಂತ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಆಯ್ಕೆಗಾರರ ನಡೆಯನ್ನ ಪ್ರಶ್ನಿಸಿರುವ ಆಟಗಾರರು, ಬಿಗ್​ಬಾಸ್​ಗಳ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಅಂತ ಆಕ್ರೋಶಗೊಂಡಿದ್ದಾರೆ.
ಟೀಮ್ ಇಂಡಿಯಾದಲ್ಲಿ ರಾಜಕೀಯ ನಡೆಯುತ್ತಿದ್ಯಾ?, ತಂಡದಲ್ಲಿ ಫೇವರಿಸಂಗೆ ಆಟಗಾರರು ಬಲಿಯಾಗ್ತಿದ್ದಾರಾ? ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯನಾ..? ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ, ಇದೀಗ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ಪರ್ಫಾಮ್ ಮಾಡೋ ಆಟಗಾರರನ್ನ, ಸೈಲೆಂಟ್ ಆಗಿ ಸೈಡ್​ಲೈನ್ ಮಾಡಲಾಗುತ್ತಿದೆ ಅಂತ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್, ಕರುಣ್ ನಾಯರ್, ಅಜಿಂಕ್ಯಾ ರಹಾನೆ ಮತ್ತು ಮೊಹಮ್ಮದ್ ಶಮಿ.
/filters:format(webp)/newsfirstlive-kannada/media/media_files/2025/10/16/shami-and-gambhir-2025-10-16-12-10-25.jpg)
ಆಯ್ಕೆ ಸಮಿತಿ ವಿರುದ್ಧ ಕನ್ನಡಿಗ ಕರುಣ್ ನಾಯರ್ ಗರಂ..!
ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕರುಣ್ ನಾಯರ್, ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ರು. ಆಡಿದ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಕರುಣ್, ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ರು. ಆದ್ರೆ ಆಯ್ಕೆ ಸಮಿತಿ ಮುಂದಿನ ಸರಣಿಗೆ, ಕರುಣ್ ನಾಯರ್​ರನ್ನ ತಂಡಕ್ಕೆ ಸೆಲೆಕ್ಟ್ ಮಾಡಲೇ ಇಲ್ಲ. ಇದ್ರಿಂದ ರೊಚ್ಚಿಗೆದ್ದ ಕರುಣ್, ನಾನು ಇನ್ನಷ್ಟು ಸರಣಿಗಳನ್ನ ಆಡಲು ಅರ್ಹ ಆಟಗಾರ ಎಂದು, ಆಯ್ಕೆ ಸಮಿತಿ ವಿರುದ್ಧ ಗರಂ ಆಗಿದ್ದಾರೆ.
ಆಯ್ಕೆಗಾರರ ನಡೆಯನ್ನ ಪ್ರಶ್ನಿಸಿದ ಮುಂಬೈಕರ್ ಅಜಿಂಕ್ಯಾ ರಹಾನೆ..!
ಅನುಭವಿ ಬ್ಯಾಟ್ಸ್​ಮನ್ ಅಜಿಂಕ್ಯಾ ರಹಾನೆ ಕೂಡ, ಸೈಲೆಂಟ್ ಆಗಿ ಸೈಡ್​ಲೈನ್ ಆದ ಆಟಗಾರ. ಮುಂಬೈನ ರಹಾನೆ, ಒಂದೆರೆಡು ಟೆಸ್ಟ್ ಸರಣಿಗಳಲ್ಲಿ ವೈಫಲ್ಯ ಆಗಿದ್ದರು. ಆದ್ರೆ ಆಯ್ಕೆ ಸಮಿತಿ, ರಹಾನೆಗೆ ಅವಕಾಶಗಳನ್ನೇ ನೀಡಿಲ್ಲ. ಇದು ರಹಾನೆಗೆ ಭಾರೀ ಬೇಸರ ಮೂಡಿಸಿದೆ. 2 ವರ್ಷಗಳ ಕಾಲ ಡೊಮೆಸ್ಟಿಕ್ ಕ್ರಿಕೆಟ್ ಮತ್ತು ಐಪಿಎಲ್ ಆಡಿ, ಒಳ್ಳೆ ಪ್ರದರ್ಶನವನ್ನೇ ನೀಡಿದೆ. ಆದ್ರೆ ಆಯ್ಕೆಗಾರರಾಗಲಿ ಅಥವಾ ಟೀಮ್ ಮ್ಯಾನೇಜ್ಮೆಂಟ್ ಆಗಲಿ, ನನ್ನನ್ನ ಯಾಕೆ ಸಂಪರ್ಕಿಸಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಹಿರಿಯ ಆಟಗಾರರನ್ನ ನಿರ್ಲಕ್ಷ್ಯ ಮಾಡಬೇಡಿ ಅಂತ ರಹಾನೆ, ಕಿವಿ ಮಾತನ್ನ ಹೇಳಿದ್ದಾರೆ.
ವೇಗಿ ಶಮಿಯನ್ನ ಸಮಾಧಾನ ಮಾಡಲು ಮುಂದಾಗಿದ್ದೇಕೆ ಆರ್​.ಪಿ.ಸಿಂಗ್..?
ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಫಿಟ್ ಇದ್ರೂ, ಅದು ಆಯ್ಕೆ ಸಮಿತಿಗಾಗಲಿ ಅಥವಾ ಟೀಮ್ ಮ್ಯಾನೇಜ್ಮೆಂಟ್​​ಗೆ ಆಗಲಿ ಗೊತ್ತಿಲ್ಲ. ಶಮಿ ಜೊತೆ ಆಯ್ಕೆ ಸಮಿತಿ ಕಣ್ಣಾಮುಚ್ಚಾಲೆ ಆಡಿದೆ ಅನ್ನೋದು, ಇದೀಗ ಓಪನ್ ಸೀಕ್ರೆಟ್. ಅಲ್ಲದೇ, ಯಾವಾಗ ಮೊದಲ ರಣಜಿ ಪಂದ್ಯದಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡಿದ್ರೋ, ನೂತನ ಆಯ್ಕೆಗಾರ ಆರ್​.ಪಿ.ಸಿಂಗ್, ಶಮಿಯನ್ನ ಭೇಟಿ ಮಾಡಲು ಹೋಗಿದ್ದಾರೆ. ಅಲ್ಲದೇ ಸುದೀರ್ಘ ಮಾತುಕತೆ ಮೂಲಕ ಸಮಾಧಾನ ಪಡಿಸಿ, ತೇಪ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಅಡ್ರೆಸ್ಸೇ ಇಲ್ಲದಂತೆ ಕಳೆದುಹೋದ ಯಂಗ್ ಕ್ರಿಕೆಟರ್ಸ್​..!
ಮನೀಶ್ ಪಾಂಡೆ, ಮಯಾಂಕ್ ಯಾದವ್, ಉಮ್ರಾನ್ ಮಲ್ಲಿಕ್, ರವಿ ಬಿಷ್ಣೋಯ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸರ್ಫರಾಝ್ ಖಾನ್​​​​​​​​ರಂತಹ ಯುವ ಆಟಗಾರರು ಈಗ ಎಲ್ಲಿದ್ದಾರೆ..? ಬಿಸಿಸಿಐಗೆ ಆಗಲಿ ಅಥವಾ ಆಯ್ಕೆ ಸಮಿತಿಗೆ ಆಗಲಿ, ಇವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ, ಇಲ್ಲವೇ ಇಲ್ಲ ಬಿಡಿ. ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಿಗ್​ಬಾಸ್​ಗಳು, ಎಂತೆಥಾ ಪ್ರತಿಭಾವಂತ ಆಟಗಾರರನ್ನ ತುಳಿದಿದ್ದಾರೆ ಗೊತ್ತಾ..? ಆದ್ರೆ ಅವರಿಗೆ ಅವರು ಮಾಡಿರುವ ತಪ್ಪುಗಳ ಬಗ್ಗೆ ಸ್ವಲ್ಪವೂ ಪ್ರಾಯಶ್ಚಿತ ಇಲ್ಲ. ಇದೇ ನೋಡಿ ವಿಪರ್ಯಾಸ.
/filters:format(webp)/newsfirstlive-kannada/media/media_files/2025/10/06/ishan-umran-rutu-2025-10-06-10-25-51.jpg)
ಇನ್ನಾದ್ರೂ ಬದಲಾಗ್ತಾರಾ ಬಿಸಿಸಿಐ, ಸೆಲೆಕ್ಟರ್ಸ್, ಕೋಚ್.?
ಟೀಮ್ ಇಂಡಿಯಾ ಆಯ್ಕೆಗಾರರದ್ದು, ದೊಡ್ಡ ಸಮಸ್ಯೆನೇ ಇದೆ. ಅದು ಈಗಿನದ್ದು ಅಲ್ಲ..! ವರ್ಷಾನುಗಟ್ಟಲೇ ಇಂದಲೇ, ಆಯ್ಕೆಗಾರರು ಬಿಗ್​ಬಾಸ್​​ಗಳಂತೆ ವರ್ತಿಸುತ್ತಿದ್ದಾರೆ. ಆಟಗಾರರ ಜೊತೆ ಸರಿಯಾಗಿ ಕಮ್ಯೂನಿಕೇಷನ್ ನಡೆಸಲ್ಲ. ಆಟಗಾರರ ಸಮಸ್ಯೆಗಳನ್ನ ಆಲಿಸಲ್ಲ. ಒಂದೆಡೆರೆಡು ಸರಣಿಗಳಲ್ಲಿ ಫೇಲ್ ಆದ್ರೆ, ಆ ಆಟಗಾರರನ್ನ ಅಡ್ರೆಸ್ಸೇ ಇಲ್ಲದಂತೆ ಮಾಡ್ತಾರೆ. ಇಂತಹ ಕೆಟ್ಟ ನಡೆಯನ್ನ ಬಿಟ್ರೆ ಮಾತ್ರ, ಆಯ್ಕೆಗಾರರು ಮತ್ತು ಆಟಗಾರರ ನಡುವೆ ಉತ್ತಮ ಬಾಂಧವ್ಯ ಇರಲಿದೆ. ಆಯ್ಕೆಗಾರರು ಇದನ್ನ ಮೊದಲು ಮೈಗೂಡಿಸಿಕೊಳ್ಳಬೇಕು.
ಬಿಸಿಸಿಐ, ಆಯ್ಕೆ ಸಮಿತಿ ಮತ್ತು ಟೀಮ್ಮ್ಯಾನೇಜ್ಮೆಂಟ್, ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ತಮ್ಮ ಸ್ವಾರ್ಥಕ್ಕಾಗಿ ಆಟಗಾರರನ್ನ ಸೈಡ್​ಲೈನ್ ಮಾಡುವ ಮುನ್ನ, ನೂರು ಬಾರಿ ಯೋಚನೆ ಮಾಡಬೇಕು. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us