/newsfirstlive-kannada/media/media_files/2025/10/27/shreyas_iyer_family-2025-10-27-13-56-13.jpg)
ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್​, ಸ್ಟಾರ್ ಬ್ಯಾಟರ್ ಆಗಿರುವ ಶ್ರೇಯಸ್ ಅಯ್ಯರ್ ಅವರು ಇಂಜುರಿಗೆ ಒಳಗಾಗಿ ಸಿಡ್ನಿಯ ಸೇಂಟ್ ವಿನ್ಸೆಂಟ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಿಂದ ಹೊರ ಬಂದಿರುವ ಅಯ್ಯರ್ ಅವರ ಆರೋಗ್ಯ ಸ್ಥಿರವಾಗಿದ್ದು ಎಲ್ಲರ ಜೊತೆ ಸಂತೋಷದಿಂದ ಮಾತನಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾಗೆ ಪ್ರಯಾಣಿಸುವುದಿಲ್ಲ ಎಂದು ಶ್ರೇಯಸ್ ಅಯ್ಯರ್​ ಪೋಷಕರು ಹೇಳಿದ್ದಾರೆ.
ಕೊನೆಯ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಡೈವ್ ಮಾಡಿದ್ದ ಶ್ರೇಯಸ್ ಅಯ್ಯರ್ ಅವರು ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಬೆನ್ನಲ್ಲೇ ಆತಂಕಗೊಂಡಿದ್ದ ಅವರ ತಂದೆ, ತಾಯಿ ಸಿಡ್ನಿಗೆ ತೆರಳಲು ಎಮರ್ಜೆನ್ಸಿ ವೀಸಾಗೆ ಅಪ್ಲೇ ಮಾಡಿದ್ದರು. ಆದರೆ ಈಗ ಅವರು ಸಿಡ್ನಿಗೆ ತೆರಳುವುದಿಲ್ಲ ಎಂದು ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/09/06/shreyas-iyer-captain-2025-09-06-19-56-29.jpg)
ಈ ಕುರಿತು ಮಾತನಾಡಿರುವ ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ ಅವರು, ಅತ್ಯುತ್ತಮ ವೈದ್ಯರಿಂದ ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಾರ ಕೊನೆಗೊಳ್ಳುವ ಮೊದಲೇ ಶ್ರೇಯಸ್​ ಅಯ್ಯರ್ ಅವರು ಆಸ್ಪತ್ರೆಯಿಂದ ಹೊರ ಬರುತ್ತಾರೆ. ಬಿಸಿಸಿಐ ಶ್ರೇಯಸ್​ ಅಯ್ಯರ್ ಜೊತೆ ನಿಕಟ ಸಂಪರ್ಕದಲ್ಲಿ ಇರುವುದರಿಂದ ನಾವು ಆಸ್ಟ್ರೇಲಿಯಾಕ್ಕೆ ಹೋಗುವುದಿಲ್ಲ. ಮಗ ಹೇಗೆ ಹೋಗಿದ್ದನೋ ಹಾಗೇ ಬರುತ್ತಾನೆ ಎಂದು ಅವರ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಸಿಸ್​ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯಾರಿ ಹೊಡೆದ ಬಾಲ್​ ಅನ್ನು ಕ್ಯಾಚ್ ಹಿಡಿಯಲು ಶ್ರೇಯಸ್​ ಅಯ್ಯರ್ ಓಡುತ್ತಾ..ಓಡುತ್ತಾ.. ಹೋಗಿ ಡೈವ್ ಮಾಡಿದ್ದರು. ಅದ್ಭುತವಾದ ಕ್ಯಾಚ್ ಹಿಡಿದು ಅಲೆಕ್ಸ್​ ಕ್ಯಾರಿನ ಔಟ್ ಮಾಡಿ ಆಸಿಸ್​ಗೆ ರನ್​ ವೇಗಕ್ಕೆ ಬ್ರೇಕ್ ಹಾಕಿದ್ದರು. ಆದರೆ ಡೈವ್ ಮಾಡಿದ್ದ ಶ್ರೇಯಸ್ ಅಯ್ಯರ್​ಗೆ ಪಕ್ಕೆಲುಬಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದ್ದರಿಂದ ಬಿಸಿಸಿಐ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಗಾಯದಿಂದ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us