/newsfirstlive-kannada/media/media_files/2025/10/28/prithvi_shaw-1-2025-10-28-13-33-53.jpg)
ಪೃಥ್ವಿ ಶಾ ಸದ್ಯ ಟೀಮ್ ಇಂಡಿಯಾ ಹಾಗೂ ಐಪಿಎಲ್​ನಿಂದ ಹೊರಗಿದ್ದರೂ ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈಗ ಮಹಾರಾಷ್ಟ್ರ ತಂಡದ ಪರ ಬ್ಯಾಟಿಂಗ್ ಮಾಡಿದ್ದ ಯುವ ಬ್ಯಾಟ್ಸ್​ಮನ್​ ಪೃಥ್ವಿ ಶಾ ಎರಡನೇ ಅತಿ ವೇಗದ ಡಬಲ್​ ಹಂಡ್ರೆಡ್​ ಸಿಡಿಸಿ ದಾಖಲೆ ಬರೆದಿದ್ದಾರೆ.
ಚಂಡೀಗಢ ಹಾಗೂ ಮಹಾರಾಷ್ಟ್ರದ ನಡುವೆ ಗ್ರೂಪ್- ಬಿ ಹಂತದಲ್ಲಿ ಚಂಡೀಘರ್​ ಮೈದಾನದಲ್ಲಿ ರಣಜಿ ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಚಂಡೀಗಢ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಮಹಾರಾಷ್ಟ್ರದ ಪರ ಪೃಥ್ವಿ ಶಾ ಕೇವಲ 8 ರನ್​ಗೆ ಮಾತ್ರ ಔಟ್ ಆಗಿದ್ದರು. ಆದರೆ 2ನೇ ಇನ್ನಿಂಗ್ಸ್​ನಲ್ಲಿ ಸಿಡಿದೆದ್ದ ಯಂಗ್ ಬ್ಯಾಟರ್​, ಚಂಡೀಗಢದ ಬೌಲರ್​ಗಳಿಗೆ ಚಳಿ ಬಿಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/28/prithvi_shaw_bat-2025-10-28-13-33-31.jpg)
ತಂಡದಲ್ಲಿ ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ್ದ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಮಾಡಿ ಕೇವಲ 141 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದಾರೆ. ಇದು ರಣಜಿ ಇತಿಹಾಸದಲ್ಲೇ ಅತ್ಯಂತ ವೇಗದ 2ನೇ ಡಬಲ್ ಹಂಡ್ರೆಡ್​ ಆಗಿದೆ. 2023/24ರಲ್ಲಿ ರಾಹುಲ್ ಸಿಂಗ್​ ಗಳಿಸಿದ್ದ ದ್ವಿಶತಕವನ್ನು ಪೃಥ್ವಿ ಶಾ ಹಿಂದಿಕ್ಕಿದ್ದಾರೆ. 1984/85ರಲ್ಲಿ ಲೆಜೆಂಡರಿ ಬ್ಯಾಟರ್​, ಸದ್ಯ ಕಮೆಂಟರಿ ಆಗಿರುವ ರವಿಶಾಸ್ತ್ರಿ ಅವರು ಕೇವಲ 123 ಬಾಲ್​ಗೆ ದ್ವಿಶತಕ ಗಳಿಸಿದ್ದರು. ಈಗಲೂ ರವಿಶಾಸ್ತ್ರಿ ಅವರ ರೆಕಾರ್ಡ್ ಅನ್ನು ಯಾವ ಬ್ಯಾಟರ್ ಬ್ರೇಕ್ ಮಾಡೋಕೆ ಆಗಿಲ್ಲ.
2ನೇ ಇನ್ನಿಂಗ್ಸ್​ನಲ್ಲಿ ಒಟ್ಟು 156 ಬಾಲ್​ಗಳನ್ನು ಎದುರಿಸಿದ ಪೃಥ್ವಿ ಶಾ ಅಮೋಘವಾದ 29 ಫೋರ್​ಗಳು ಹಾಗೂ 5 ದೊಡ್ಡ ಸಿಕ್ಸರ್​ಗಳಿಂದ 222 ರನ್​ಗಳಿಗೆ ಕ್ಯಾಚೌಟ್ ಆಗಿದ್ದಾರೆ. ಪೃಥ್ವಿ ಶಾ ಬ್ಯಾಟಿಂಗ್​ನಿಂದ ಮಹಾರಾಷ್ಟ್ರ ಕೇವಲ 3 ವಿಕೆಟ್​ಗೆ 359 ರನ್​ ಲೀಡ್​ ಅನ್ನು ಚಂಡೀಗಢಕ್ಕೆ ನೀಡಿದೆ. ಸದ್ಯ ಬ್ಯಾಟಿಂಗ್ ಮಾಡುತ್ತಿರುವ ಚಂಡೀಗಢ 4 ವಿಕೆಟ್​ಗೆ 206 ರನ್ ಗಳಿಸಿದೆ. ಇನ್ನೊಂದಿನ ಬಾಕಿ ಇದ್ದು ಗೆಲ್ಲಲು ಇನ್ನು 258 ರನ್ಸ್​ ಬೇಕಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us