/newsfirstlive-kannada/media/media_files/2025/09/29/rakshita-shetty-bigg-boss-2025-09-29-09-47-16.jpg)
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ನಿನ್ನೆಯಿಂದ ಆರಂಭವಾಗಿದೆ. ಒಟ್ಟು 19 ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ.
ಬಿಗ್ ಶಾಕ್​..!
ಬೆಳ್ಳಂಬೆಳಗ್ಗೆ ಕಲರ್ಸ್ ಕನ್ನಡ ಪ್ರೊಮೋ ಒಂದನ್ನ ಶೇರ್ ಮಾಡಿದೆ. ಅದರಲ್ಲಿ ಸ್ಪರ್ಧಿಗಳಿಗೆ ಬಿಗ್​ಬಾಸ್​ ಶಾಕ್ ನೀಡಿದ್ದಾರೆ. ಇದು ಬಿಗ್​ ಬಾಸ್​. ನಾನು ಬಂದಿರೋದು ನಿಮಗೆ ಸ್ವಾಗತ ಮಾಡೋದಕ್ಕೆ ಅಲ್ಲ. ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ. ಪರಸ್ಪರ ಚರ್ಚಿಸಿ ಮುಖ್ಯದ್ವಾರ ತೋರಿಸಿ ಎಂದಿದ್ದಾರೆ.
ಬೆನ್ನಲ್ಲೇ ಸ್ಪರ್ಧಿಗಳ ನಡುವೆ ಯಾರನ್ನ ಕಳುಹಿಸಬೇಕು ಎಂಬ ಚರ್ಚೆ ಶುರುವಾಗಿದೆ. ಈ ವೇಳೆ ರಕ್ಷಿತಾ ಶೆಟ್ಟಿ ಹಾಗೂ ಸ್ಪಂದನಾ ಹೆಸರನ್ನು ಕೆಲವರು ತೆಗೆದುಕೊಂಡಿದ್ದಾರೆ. ಆದರೆ ಯಾರನ್ನ ಮನೆಯಿಂದ ಆಚೆ ಕಳುಹಿಸುತ್ತಾರೆ ಅಂತಾ ಖಾತ್ರಿ ಆಗಿಲ್ಲ. ಈ ನಡುವೆ ಮನೆಯ ಮುಖ್ಯದ್ವಾರ ಓಪನ್ ಆಗಿದ್ದು ಯಾರು ಆಚೆ ಹೋಗ್ತಾರೆ ಎಂಬ ಕ್ಯೂರಿಸಿಟಿ ಹೆಚ್ಚಾಗಿದೆ. ಮೊದಲ ದಿನವೇ ಬಿಗ್​ಬಾಸ್​ ಗೇಮ್​​ಗೆ ಟ್ವಿಸ್ಟ್ ನೀಡಿರೋದು ವೀಕ್ಷಕರ ಥ್ರಿಲ್ಲಿಂಗ್ ಅನ್ನು ಹೆಚ್ಚಿಸಿದೆ.
ಇದನ್ನೂ ಓದಿ:BBK12; ಒಟ್ಟು ಎಷ್ಟು ಕಂಟೆಸ್ಟೆಂಟ್ಸ್​ ದೊಡ್ಮನೆಗೆ ಎಂಟ್ರಿ ಆಗಿದ್ದಾರೆ.. ಅವರು ಯಾರೆಂದು ಗೊತ್ತಾ?
ಹಾಯ್ ಹೇಳೋಕೂ ಮುನ್ನವೇ ಟಾಟಾ-ಬಾಯ್ ಹೇಳೋದು ಯಾರು?
— Colors Kannada (@ColorsKannada) September 29, 2025
ಬಿಗ್ ಬಾಸ್ GRAND OPENING | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/OaSylRVhqT
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ