/newsfirstlive-kannada/media/post_attachments/wp-content/uploads/2025/01/ROHIT.jpg)
ರೋಹಿತ್​ ಶರ್ಮಾ ಭವಿಷ್ಯದ ಚರ್ಚೆ ಕ್ರಿಕೆಟ್​ ವಲಯದಲ್ಲಿ ಜೋರಾಗಿದೆ. ಬಿಸಿಸಿಐ ಬಾಸ್​ಗಳು, ಸೆಲೆಕ್ಟರ್ಸ್​ ಟೀಮ್​ ಮ್ಯಾನೇಜ್​​ಮೆಂಟ್​ ರೋಹಿತ್​ಗೆ ಟಾಟಾ ಮಾಡಲು ರೆಡಿಯಾಗಿದ್ದಾರೆ. ಜಿದ್ದಿಗೆ ಬಿದ್ದಿರುವ ರೋಹಿತ್, 2027ರ ಏಕದಿನ ವಿಶ್ವಕಪ್​ ಆಡಲು ಪಣ ತೊಟ್ಟಿದ್ದಾರೆ. ಬಿಸಿಸಿಐಗೆ ಸವಾಲ್​ ಎಸೆದಿದ್ದಾರೆ.
ಏಷ್ಯಾಕಪ್​​ ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಸೂರ್ಯಕುಮಾರ್​ ನಾಯಕತ್ವದ ಟೀಮ್ ಇಂಡಿಯಾ ದುಬೈಗೆ ಹಾರೋಕೆ ಸನ್ನದ್ಧವಾಗಿದೆ. ಈ ಏಷ್ಯಾಕಪ್​, ಟಿ20 ವಿಶ್ವಕಪ್ ನಡುವೆ ಹಿಟ್​ ಮ್ಯಾನ್ ರೋಹಿತ್ ಶರ್ಮಾರ ಭವಿಷ್ಯದ ಪ್ರಶ್ನೆ, ಟಾಕ್ ಆಫ್ ದಿ ಟೌನ್​​ ಆಗಿದೆ.
ರೋಹಿತ್ ಶರ್ಮಾ ಸೂಪರ್ ಫಿಟ್
ಆಸ್ಟ್ರೇಲಿಯಾ ಟೂರ್​ಗೆ ರೋಹಿತ್ ಇರ್ತಾರಾ? ಫಿಟ್ನೆಸ್ ಟೆಸ್ಟ್ ಪಾಸ್ ಮಾಡ್ತಾರಾ? ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡ್ತಾರಾ? ಇಲ್ವಾ? ಎಂಬ ಸಾಲು ಸಾಲು ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಓಡಾಡ್ತಿವೆ. ಈ ಗೊಂದಲಗಳ ನಡುವೆಯೇ ರೋಹಿತ್ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್​ಲೆನ್ಸ್​ಗೆ ಬಂದು ಫಿಟ್​ನೆಸ್​ ಅಗ್ನಿಪರೀಕ್ಷೆಗೆ ಒಳಗಾಗಿದ್ರು. ಅದರ ರಿಸಲ್ಟ್​ ಬಂದಿದ್ದು, ಹಿಟ್​​ಮ್ಯಾನ್​​ ಫಿಟ್​ನೆಸ್​ ಟೆಸ್ಟ್​ನ ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಮಾಡಿದ್ದಾರೆ.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್​..!
/filters:format(webp)/newsfirstlive-kannada/media/media_files/2025/09/03/rohit-sharma-2025-09-03-20-32-17.jpg)
ಈ ಹಿಂದೆ ಇದ್ದ ರೋಹಿತ್​ ಶರ್ಮಾಗೂ, ಈಗಿರೋ ರೋಹಿತ್​ ಶರ್ಮಾಗೂ ಅಜಗಜಾಂತರ ವ್ಯತ್ಯಾಸ ಇದೆ. ದಪ್ಪ ಇರೋ ಕಾರಣಕ್ಕೆ ಸದಾ ಟ್ರೋಲ್​​ಗೆ ಒಳಗಾಗ್ತಿದ್ದ ರೋಹಿತ್​​, ಇದೀಗ ಎಲ್ಲರ ಹುಬ್ಬೇರುವಂತೆ ಸಣ್ಣ ಆಗಿದ್ದಾರೆ. ಏರ್​​​​ಪೋರ್ಟ್​​ನಲ್ಲಿ ಕಾಣಿಸಿಕೊಂಡ ಫಿಟ್ ಅಂಡ್ ಫೈನ್ ರೋಹಿತ್​ ಶರ್ಮಾರ ವಿಡಿಯೋಗಳು ಸಖತ್​ ವೈರಲ್​ ಆಗಿವೆ. ಈ ಚೇಂಜ್ ಓವರ್ ಹಿಂದೆ ಕಠಿಣ ಶ್ರಮವಿದೆ. ಅತಿ ದೊಡ್ಡ ಕನಸನ್ನ ನನಸಾಗಿಸಿಕೊಳ್ಳೋ ಹಂಬಲವಿದೆ.
ವಿಶ್ವಕಪ್​ ಆಡೋದೇ ಶರ್ಮಾ ಗುರಿ
ಏಕದಿನ ನಾಯಕ ರೋಹಿತ್ ಶರ್ಮಾ, ಐಸಿಸಿ ಚಾಂಪಿಯನ್ಸ್​ ಟ್ರೋಫಿ ವೇಳೆಯೇ 2027ರ ವಿಶ್ವಕಪ್ ಆಡೋ ಬಯಕೆ ಹೊರಗಾಕಿದ್ದರು. ಈಗಲೂ ರೋಹಿತ್ ಶರ್ಮಾ, 2027ರ ಏಕದಿನ ವಿಶ್ವಕಪ್​ ಗೆಲ್ಲಬೇಕು ಕನಸು ಹೊಂದಿದ್ದಾರೆ. ಏಕದಿನ ವಿಶ್ವಕಪ್ ಆಡಿ ವೃತ್ತಿ ಜೀವನಕ್ಕೆ ಗುಡ್​ ಬೈ ಹೇಳುವ ಲೆಕ್ಕಾಚಾರದಲ್ಲಿದ್ದಾರೆ. ಫಿಟ್​ನೆಸ್​ ಕಾರಣ ನೀಡಿ ಬಿಸಿಸಿಐ ರೋಹಿತ್​ ಸೈಡ್​ಲೈನ್​ ಮಾಡೋ ಯತ್ನ ಮಾಡ್ತಿದೆ. ಹೀಗಾಗಿಯೇ ರೋಹಿತ್ ಶರ್ಮಾ, ಫಿಟ್ನೆಸ್ ಜೊತೆಗೆ ಇಂಜುರಿಯಿಂದ ದೂರ ಉಳಿಯಲು ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಜಿಮ್​ನಲ್ಲಿ ಬೆವರು ಹರಿಸ್ತಿದ್ದಾರೆ.
ಅಭಿಷೇಕ್ ನಾಯರ್ ಜೊತೆ ಕಸರತ್ತು
ಐಪಿಎಲ್​ ಬಳಿಕ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದ ರೋಹಿತ್, ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದರು. ವಿದೇಶದಿಂದ ಬಂದ ಬೆನ್ನಲ್ಲೇ ರೋಹಿತ್​ ಶರ್ಮಾ, ಗೆಳೆಯ ಅಭಿಷೇಕ್​ ನಾಯರ್​ ಗರಡಿಗೆ ತೆರಳಿದ್ದಾರೆ. ಮುಂಬೈನಲ್ಲಿ ಅಭಿಷೇಕ್​ ನಾಯರ್​ ಮಾರ್ಗದರ್ಶನದಲ್ಲಿ ರೋಹಿತ್​ ಶರ್ಮಾ ಅಭ್ಯಾಸ ನಡೆಸಿದ್ದಾರೆ. ಬ್ಯಾಟಿಂಗ್​ಗಿಂತ ಹೆಚ್ಚಾಗಿ ರೋಹಿತ್​ ಫಿಟ್​ನೆಸ್​ ಮೇಲೆ ಫೋಕಸ್​ ಮಾಡಿದ್ದಾರೆ. ಜಿಮ್​ನಲ್ಲಿ ಬೆವರಿಳಿಸ್ತಿರೋ ರೋಹಿತ್​​, ದೇಹವನ್ನ ಫಿಟ್​ ಆಗಿರಿಸಿಕೊಳ್ಳಲು ಕಠಿಣ ಶ್ರಮ ವಹಿಸಿದ್ದಾರೆ.
ದೀರ್ಘ ಕಾಲ ಹೀಗೆ ಇರ್ತಾರಾ?
ಫಿಟ್​​ನೆಸ್​​ಗೂ ರೋಹಿತ್ ​ಶರ್ಮಾಗೂ ಆಗಿ ಬರಲ್ಲ ಅನ್ನೋ ಮಾತನ್ನ ಈಗ ಹಿಟ್​ಮ್ಯಾನ್​ ಸುಳ್ಳಾಗಿಸಿದ್ದಾರೆ. ಫಿಟ್​​ನೆಸ್​​ ಕಡೆಗೆ ಹೆಚ್ಚು ಫೋಕಸ್​ ಮಾಡಿರುವ ರೋಹಿತ್, ಕಟ್ಟು ನಿಟ್ಟಿನ ಡಯಟ್​ ಮಾಡಿ, ಬೆವರಿಳಿಸಿ ಫ್ಯಾಟ್​ ಟು ಫಿಟ್​ ಆಗಿದ್ದಾರೆ. ರೋಹಿತ್​ ಮುಂದೆ ಅಸಲಿ ಸವಾಲು ಇರೋದೇ ಈಗ. ಏಕದಿನ ವಿಶ್ವಕಪ್​ ಇರೋದು 2027ರಲ್ಲಿ. ಅಂದ್ರೆ ಇನ್ನು ಒಂದೂವರೆ ವರ್ಷ ಟೈಮ್​​ ಇದೆ. ಈ ಗ್ಯಾಪ್​​ನಲ್ಲಿ ಕೆಲವೇ ದಿನ ಮಾತ್ರ ರೋಹಿತ್​ ಆನ್​ಫೀಲ್ಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಮೈದಾನದಿಂದ ಆಚೆಯೇ ಉಳಿಯೋ ರೋಹಿತ್ ದೀರ್ಘಕಾಲ​ ಫಿಟ್​ನೆಸ್​ನ ​ಕಾಯ್ದುಕೊಳ್ತಾರಾ? ಅನ್ನೋದೇ ಪ್ರಶ್ನೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us