/newsfirstlive-kannada/media/media_files/2025/09/03/darshan-and-ravi-belegere-2025-09-03-18-28-52.jpg)
ಬೆಂಗಳೂರು: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಹಾಗೂ ಹಾಸಿಗೆ, ದಿಂಬಿಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಇವತ್ತು 64ನೇ ಸಿಟಿ ಸಿವಿಲ್ ಕೋರ್ಟ್ನಲ್ಲಿ ನಡೆಯಿತು. ಕೋರ್ಟ್ ಕಲಾಪದ ವೇಳೆ ಅಪರೂಪದ ಪ್ರಸಂಗವೊಂದು ನಡೆದಿದೆ.
ವಾದ-ಪ್ರತಿವಾದ ನಡೆಯುತ್ತಿದ್ದ ಕೋರ್ಟ್ ಹಾಲ್ಗೆ ಅನಾಮಿಕ ವ್ಯಕ್ತಿಯೊಬ್ಬ ನುಗ್ಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ‘ನೀವು ಯಾರು..?’ ಎಂದು ತಡೆದು ಪ್ರಶ್ನಿಸಿದ್ದಾರೆ. ಪತ್ರವೊಂದನ್ನು ಹಿಡಿದು ನಿಂತಿದ್ದ ಆತನ ಉತ್ತರ ಹೀಗಿತ್ತು.. ‘ದರ್ಶನ್ ಸೇರಿದಂತೆ 17 ಜನ ಆರೋಪಿಗಳಿಗೆ ಮರಣದಂಡನೆ ನೀಡಬೇಕು. ಅವರಿಗೆ ಯಾವುದೇ ಕಾರಣಕ್ಕೂ ಬೇಲ್ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾನೆ.
ಅಷ್ಟಕ್ಕೂ ನೀವು ಯಾರು..? ಎಂದು ಮತ್ತೆ ಆತನಿಗೆ ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಉತ್ತರಿಸಿರುವ ಆತ, ‘ನಾವು ರವಿ ಬೆಳಗೆರೆ ಕಡೆಯವರು’ ಎಂದಿದ್ದಾನೆ. ಕೊನೆಗೆ ಆ ವ್ಯಕ್ತಿ ಜಡ್ಜ್ಗೆ ಮನವಿ ಪತ್ರ ನೀಡಬೇಕು ಅಂತಾ ಮನವಿ ಮಾಡಿಕೊಂಡಿದ್ದಾನೆ. ಅದಕ್ಕೆ ನ್ಯಾಯಾಧೀಶರು, ‘ಏನೇ ಇದ್ದರೂ ಸರ್ಕಾರದ ಮುಖಾಂತರ ಬನ್ನಿ’ ಎಂದು ಸೂಚಿಸಿದ್ದಾರೆ. ಅರ್ಜಿಯನ್ನು ತೆಗೆದುಕೊಂಡು ಹೋಗುವಂತೆ ನ್ಯಾಯಾಧೀಶರು ಅನಾಮಿಕನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕಾರಾಗೃಹ DG ದಯಾನಂದ್ ವಿರುದ್ಧ ಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಗಂಭೀರ ಆರೋಪ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ