/newsfirstlive-kannada/media/media_files/2025/09/03/darshan-and-dayanada-2025-09-03-18-01-54.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್​ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ 64ನೇ ಸೆಷನ್​ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಇವತ್ತು ಕೂಡ ವಾದ-ಪ್ರತಿವಾದ ನಡೆದಿದೆ.
ಈ ವೇಳೆ ಜೈಲು ಅಧಿಕಾರಿಗಳು ದರ್ಶನ್ ಅವರಿಗೆ ಕನಿಷ್ಠ ಸೌಲಭ್ಯ ನೀಡಬೇಕು. ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ಸೌಲಭ್ಯಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ನೀಡಬೇಕು ಎಂಬ ಮನವಿ ದರ್ಶನ್ ಕಡೆಯಿಂದ ಇದೆ. ಇದೇ ವಿಚಾರ ಸಂಬಂಧ ಇವತ್ತು ಕೋರ್ಟ್​​ನಲ್ಲಿ ದರ್ಶನ್ ಪರ ವಕೀಲ ಸುನಿಲ್ ಗಂಭಿರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್​..!
ಕಾರಾಗೃಹ ಡಿಜಿ ದಯಾನಂದ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ದಯಾನಂದ್ ಬೇರೆ ಅಧಿಕಾರಿಗಳ ಬಳಿ ಹೇಳಿದ್ದಾರೆ. ದರ್ಶನ್ ಸೆಲೆಬ್ರೆಟಿ ಸ್ಟೇಟಸ್ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ. ನಾನು ನಿಮಗೆ ಏನ್ ಪ್ರಶಸ್ತಿ ಬೇಕೋ ಅದನ್ನು ಕೊಡಿಸ್ತೀನಿ ಎಂದು ಸಿಬ್ಬಂದಿಗೆ ಹೇಳಿದ್ದಾರೆ’.
‘ಕೇಸ್ ಆದಗಲೂ ಕೂಡ ಅವರು ಪೊಲೀಸ್ ಆಯುಕ್ತರಾಗಿದ್ದರು. ಈಗ ಕಾರಾಗೃಹ ಮುಖ್ಯಸ್ಥರಾಗಿದ್ದಾರೆ. ಅವರೇ ಈ ರೀತಿ ಸ್ಟ್ರಿಕ್ಟ್ ಮಾಡ್ತಿದ್ದಾರೆ. ದರ್ಶನ್ ಸೆಲೆಬ್ರಿಟಿಯಾದರೇನು? ಅವನಿಗೆ ಜೈಲು ಅಂದ್ರೆ ಏನು ಎಂದು ಗೊತ್ತಾಗಬೇಕು ಎಂದು ಹಾಗೆ ಮಾಡ್ತಿದ್ದಾರೆ. ಒಳಗಡೆ ಸೆಲೆಬ್ರಿಟಿ ಅನ್ನೋದನ್ನ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ ಎಂದು ಜೈಲಾಧಿಕಾರಿಗಳಿಗೆ ದಯಾನಂದ ಹೇಳಿದ್ದಾರೆ’.
ದಯಾನಂದ್ ಯಾಕೆ ಈ ರೀತಿ ಮಾಡ್ತಿದ್ದಾರೆ? ಯಾವ ಉದ್ದೇಶಕ್ಕೆ ದರ್ಶನ್ ವಿರುದ್ಧ ಹೀಗೆ ಮಾಡಲಾಗ್ತಿದೆ. ಹಾಗಾದರೆ ದರ್ಶನ್ ಎಲ್ಲಿರಬೇಕು? ಒಳಗಡೆ ಓರ್ವ ಆರೋಪಿಯನ್ನ ಹೇಗೆ ನಡೆಸಿಕೊಳ್ಳಬೇಕು ಅದನ್ನ ನಡೆಸಲಿ. ಒಳಗಡೆ ಆರೋಪಿಗಳನ್ನ ಸರಿಯಾಗಿ ನೋಡಿಕೊಳ್ಳಬೇಕು. ಯಾವ ಜೈಲಾದರೂ ಕೂಡ ಅಲ್ಲಿ ಆಡಳಿತ ಮಾಡಬೇಕು. ಈ ಪ್ರಕರಣದಲ್ಲಿ ಕೆಲವು ಕೆಲಸಗಳು ಉದ್ದೇಶ ಪೂರ್ವಕವಾಗಿ ನಡೀತಿವೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್​ಗೆ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ