RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್​ಗೆ ಹೇಳಿದ್ದೇನು?

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ಜೀವ ಕಳೆದುಕೊಂಡವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರು ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

author-image
Bhimappa
KOHLI_RCB (1)
Advertisment

ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಪ್ರಕರಣದಲ್ಲಿ ಜೀವ ಕಳೆದುಕೊಂಡವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರು ಭಾವುಕರಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜೂನ್ 4 ರಂದು ಆರ್​ಸಿಬಿ ಪ್ರಶಸ್ತಿ ಸಂಭ್ರಮಾಚರಣೆಯಲ್ಲಿ ದೊಡ್ಡ ದುರಂತದಿಂದ 11 ಜನ ಜೀವ ಕಳೆದುಕೊಂಡಿದ್ದರು. ಬರೋಬ್ಬರಿ 3 ತಿಂಗಳ ಬಳಿಕ ವಿರಾಟ್ ಕೊಹ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

18 ವರ್ಷದ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್​ಸಿಬಿ ವಿಜಯೋತ್ಸವದಲ್ಲಿ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರಜತ್ ಪಾಟಿದಾರ್ ಸೇರಿದಂತೆ ತಂಡದ ಎಲ್ಲ ಆಟಗಾರರು ಭಾಗಿಯಾಗಿದ್ದರು. ಈ ಆಟಗಾರರನ್ನೆಲ್ಲ ಕಣ್ತುಂಬಿಕೊಳ್ಳಬೇಕು ಎಂದು ಲಕ್ಷಾಂತರ ಜನರು ಸ್ಟೇಡಿಯಂ ಬಳಿ ಒಂದೇ ಬಾರಿ  ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಜನರು ಉಸಿರು ಚೆಲ್ಲಿದ್ರೆ, ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಈ ಸಂಬಂಧ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. 

ಜೂನ್ 4 ರಂದು ನಡೆದಂತಹ ದುರ್ಘಟನೆಯಿಂದ ನಿಮ್ಮನ್ನು ಮತ್ತೆ ಸಿದ್ಧಪಡಿಸಲು ಆಗುವುದಿಲ್ಲ. ಆರ್​ಸಿಬಿ ಫ್ರಾಂಚೈಸಿಯ ಐತಿಹಾಸಿಕ ಸಂತೋಷದ ಕ್ಷಣ ಏನಾಗಬೇಕಿತ್ತು ಎಂದುಕೊಂಡಿತ್ತೋ ಅದು ಆಗಲಿಲ್ಲ. ಬದಲಿಗೆ ಅದು ದೊಡ್ಡ ದುರಂತವಾಗಿ ಬದಲಾಯಿತು. ಇದು ತುಂಬಾ ದುಃಖಕರ ಸಂಗತಿ. ಘಟನೆಯಲ್ಲಿ ಉಸಿರು ಚೆಲ್ಲಿರುವಂತಹ ಅವರ ಕುಟುಂಬದ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಗಾಯಗೊಂಡವರು ಬೇಗ ರಿಕವರಿ ಆಗಲೆಂದು ಕೇಳಿಕೊಂಡಿದ್ದೇನೆ. ನಿಮ್ಮನ್ನು ಕಳೆದುಕೊಂಡಿರುವುದು ನಮ್ಮಲ್ಲಿ ಭಾಗವಾಗಿದೆ. ಇನ್ಮುಂದೆ ಕಾಳಜಿ, ಗೌರವ ಮತ್ತು ಜವಾಬ್ದಾರಿಯಿಂದ ನಾವು ಮುಂದೆ ಸಾಗುತ್ತೇವೆ ಎಂದು ವಿರಾಟ್ ಕೊಹ್ಲಿ ಅವರು ಭಾವುಕವಾಗಿ ಹೇಳಿದ್ದಾರೆ. 

ಇದನ್ನೂ ಓದಿ: ಮಿಡಿದ RCB.. ಸ್ಥಳೀಯರಿಗೆ ಉದ್ಯೋಗ, ಸ್ಮಾರಕ ಸೇರಿ ಕೆಲ ಯೋಜನೆಗೆ ಬಿಗ್ ಪ್ಲಾನ್!

RCB (37)

ಘಟನೆಯ ಬಳಿಕ ಸುದೀರ್ಘ ಮೌನಕ್ಕೆ ಜಾರಿದ್ದ ಆರ್​​​ಸಿಬಿ ಅಗಸ್ಟ್​​ 28ರಂದು ಫ್ಯಾನ್ಸ್​ಗೆ ಭಾವನಾತ್ಮಕ ಪತ್ರ ಬರೆದಿತ್ತು. ಮೌನ ಮುರಿದು ಆರ್​​ಸಿಬಿ ಕೇರ್ಸ್​ ಅನ್ನೋ ಯೋಜನೆಯನ್ನ ರೂಪಿಸಿರೋದಾಗಿ ತಿಳಿಸಿತ್ತು. ಎರಡು ದಿನಗಳ ಹಿಂದೆ ಕಾಲ್ತುಳಿತ ದುರಂತದಲ್ಲಿ ಅಸುನೀಗಿದ ಕುಟುಂಬದವರಿಗೆ 10 ಲಕ್ಷದ ಬದಲಾಗಿ 25 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿತ್ತು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Virat Kohli Phil Salt RCB cricket players RCB CARES cricketers love
Advertisment