ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್​ಫ್ರೆಂಡ್​​ ಎಂಟ್ರಿ.. ಯಾರು ಈ ಸುಂದರಿ?

ಕೆಲ ದಿನಗಳ ಹಿಂದಷ್ಟೇ ಪಶ್ಚಾತಾಪದ ಮಾತನಾಡಿದ್ದ ಪೃಥ್ವಿ ಷಾ ಬುದ್ಧಿ ಕಲಿತಂತಿಲ್ಲ. ಈಗಲೂ ಆನ್​ ಫೀಲ್ಡ್​ ಆಟಕ್ಕಿಂತ ಆಫ್​ ದ ಫೀಲ್ಡ್​ನ ಜೀವನವೇ ಪೃಥ್ವಿಗೆ ಮುಖ್ಯವಾಗಿದೆ. 2ನೇ ಗರ್ಲ್​​​ ಫ್ರೆಂಡ್​​​ ನಿಧಿ ತಪಾಡಿಯಾ ಹೋಗಿದ್ದಾಯ್ತು. ಇದೀಗ ಪೃಥ್ವಿ ಬಾಳಲ್ಲಿ 3ನೇ ಹುಡುಗಿಯ ಎಂಟ್ರಿಯಾಗಿದೆ. ಯಾರು ಆ ಹುಡುಗಿ?

author-image
Ganesh Kerekuli
prithvi shaw akriti agarwal
Advertisment

ಕೆಲ ದಿನಗಳ ಹಿಂದಷ್ಟೇ ಪಶ್ಚಾತಾಪದ ಮಾತನಾಡಿದ್ದ ಪೃಥ್ವಿ ಷಾ ಬುದ್ಧಿ ಕಲಿತಂತಿಲ್ಲ. ಈಗಲೂ ಆನ್​ ಫೀಲ್ಡ್​ ಆಟಕ್ಕಿಂತ ಆಫ್​ ದ ಫೀಲ್ಡ್​ನ ಜೀವನವೇ ಪೃಥ್ವಿಗೆ ಮುಖ್ಯವಾಗಿದೆ. 2ನೇ ಗರ್ಲ್​​​ ಫ್ರೆಂಡ್​​​ ನಿಧಿ ತಪಾಡಿಯಾ ಹೋಗಿದ್ದಾಯ್ತು. ಇದೀಗ ಪೃಥ್ವಿ ಬಾಳಲ್ಲಿ 3ನೇ ಹುಡುಗಿಯ ಎಂಟ್ರಿಯಾಗಿದೆ. ಯಾರು ಆ ಹುಡುಗಿ?

ಟೀಮ್​ ಇಂಡಿಯಾಗೆ ಸಿಕ್ಕ ಅಪರೂಪದ ಟ್ಯಾಲೆಂಟೆಡ್​ ಕ್ರಿಕೆಟರ್​. ಭಾರತದ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್,  ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ರು. 18ನೇ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಫೈರಿ ಓಪನರ್​ ಅಷ್ಟೇ ವೇಗವಾಗಿ ಮರೆಯಾಗಿ ಹೋದ್ರು. ಸ್ವಯಂಕೃತ ಅಪರಾಧಗಳು ಕರಿಯರ್​ಗೆ​ ಕೊಳ್ಳಿ ಇಟ್ವು. 

ಇದನ್ನೂ ಓದಿ:ದರ್ಶನ್ ಜೈಲಿಂದ ಬಂದ್ಮೇಲೆ.. ಬಿಗ್ ಅಪ್​ಡೇಟ್​ ಕೊಟ್ಟ ಜೋಗಿ ಪ್ರೇಮ್, ಏನ್ ಅಂದ್ರು?

prithvi shaw akriti agarwal (2)

ಕರಿಯರ್​ ಸೂತ್ರವಿಲ್ಲದ ಗಾಳಿಪಟದಂತೆ ಆಗಿರೋದನ್ನ ಕೊನೆಗೂ ಅರ್ಥ ಮಾಡಿಕೊಂಡ ಪೃಥ್ವಿ ಶಾ ಕೆಲ ದಿನಗಳ ಹಿಂದಷ್ಟೆ ಪಶ್ಚಾತಾಪದ ಮಾತುಗಳನ್ನಾಡಿದ್ರು. ಕೆಲವರ ಗೆಳೆತನ ಮಾಡಿ ನಾನು ಕೆಟ್ಟೆ. ತಪ್ಪು ನಿರ್ಧಾರಗಳು ಕರಿಯರ್​​ಗೆ ಮುಳ್ಳಾದ್ವು ಎಂದೆಲ್ಲಾ ಪೃಥ್ವಿ ಶಾ ಹೇಳಿಕೊಂಡಿದ್ರು. ಆ ಬಳಿಕ ಕೊನೆಗೆ ಪೃಥ್ವಿಗೆ ತಪ್ಪಿನ ಅರಿವಾಗಿದೆ. ಬದಲಾಗ್ತಾರೆ ಎಂಬ ನಿರೀಕ್ಷೆ ಕ್ರಿಕೆಟ್​ ವಲಯದಲ್ಲಿ ಬಂದಿತ್ತು. ಸದ್ಯದ ಪರಿಸ್ಥಿತಿ ನೋಡಿದ್ರೆ ಪೃಥ್ವಿ ಈಗಲೂ ಕ್ರಿಕೆಟ್​ ಮೇಲೆ ಹೆಚ್ಚು ಒತ್ತು​ ಮಾಡಿದಂತಿಲ್ಲ. 

ಬುದ್ಧಿ ಕಲಿತಿಲ್ವಾ ಪೃಥ್ವಿ ಶಾ?

ನಾನು ಕ್ರಿಕೆಟ್​​ಗಿಂತ ಬೇರೆಯದ್ದಕ್ಕೆ ಹೆಚ್ಚು ನಾನು ಟೈಮ್​ ನೀಡ್ತಿದ್ದೆ. ನನ್ನ ಕರಿಯರ್​ ಹಳ್ಳ ಹಿಡಿಯೋಕೆ ಇದು ಮುಖ್ಯ ಕಾರಣ ಎಂದಿದ್ದ ಪೃಥ್ವಿ ಶಾ ಇದೀಗ ಮತ್ತೆ ಅದೇ ದಾರಿಯಲ್ಲಿ ಸಾಗ್ತಿದ್ದಂತೆ ಕಾಣ್ತಿದ್ದಾರೆ. ಕ್ರಿಕೆಟ್​​​ ಕರಿಯರ್​​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪೃಥ್ವಿ ಶಾ ಲವ್​ನಲ್ಲಿ ಬಿದ್ದ ಸುದ್ದಿ ಹೊರಬಿದ್ದಿತ್ತು. ನಟಿ ಪ್ರಾಚಿ ಸಿಂಗ್​ ಜೊತೆಗೆ ಪೃಥ್ವಿಯ ಹೆಸರು ಸಖತ್​ ಸೌಂಡ್​ ಮಾಡಿತ್ತು. ಅಷ್ಟೇ ವೇಗವಾಗಿ ಇಬ್ಬರ ಬ್ರೇಕ್​ ಅಪ್​ ಆಗಿತ್ತು. 

ಇದನ್ನೂ ಓದಿ:ಹೊಸ ಬಾಯ್​ ಫ್ರೆಂಡ್​ ಜೊತೆ ಸಾರಾ ತೆಂಡುಲ್ಕರ್​ ಸುತ್ತಾಟ.. ಆ ಹುಡುಗ ಯಾರು?

prithvi shaw akriti agarwal (3)

ಪ್ರಾಚಿ ಸಿಂಗ್​ ಬಳಿಕ ಬಾಲಿವುಡ್​ ನಟಿ ನಿಧಿ ತಪಾಡಿಯಾ ಜೊತೆಗೆ ಪೃಥ್ವಿ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರ ನಡೆಗಳೂ ಕೂಡ ಲವ್​ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿದ್ವು. 2023ರ ಐಫಾ ಅವಾರ್ಡ್​ ಫಂಕ್ಷನ್​ ವೇಳೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ರು. ಅದಾಗಿ ಕೆಲವೇ ದಿನಕ್ಕೆ ಈ ಲವ್​ ಕಹಾನಿಯೂ ಮುರಿದು ಬಿದ್ದ ಸುದ್ದಿ ಹೊರಬಿದ್ದಿತ್ತು. 

ನಿಧಿ ತಪಾಡಿಯಾ ಹೋದ್ಲು.. ಹೊಸ ಹುಡುಗಿ ಬಂದ್ಲು

ನಿಧಿ ತಪಾಡಿಯಾ ದೂರಾದ ಬಳಿಕ ಪೃಥ್ವಿ ಲೈಫ್​ಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಆಕೆಯ ಹೆಸರೇ ಆಕೃತಿ ಅಗರ್​ವಾಲ್​. ಪೃಥ್ವಿ ಶಾ ಹಾಗೂ ಆಕೃತಿ ಅಗರ್​​ವಾಲ್​ ಇಬ್ಬರ ನಡುವೆ ಸಂಮ್​​ಥಿಂಗ್​-ಸಂಮ್​​ಥಿಂಗ್​ ಹ್ಯಾಪನಿಂಗ್​ ಅನ್ನೋ ಗಾಸಿಪ್​ ಬಹಳ ಹಿಂದಿನಿಂದ ಇತ್ತು. ಆ ಗಾಸಿಪ್​ಗೆ ಪುಷ್ಟಿ ಸಿಕ್ಕಿದೆ. ಪೃಥ್ವಿ ಶಾ- ಆಕೃತಿ ಅಗರ್​ವಾಲ್​ ಇಬ್ಬರೂ ಒಟ್ಟಾಗಿ ಗಣೇಶನ ಹಬ್ಬವನ್ನ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ಆಕೃತ್ತಿ ತಮ್ಮ ಇನ್ಸ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್​ಗೆ ಹೇಳಿದ್ದೇನು?

ಆಕೃತಿ ಅಗರ್​ವಾಲ್​ ಫೋಟೋಗಳನ್ನ ಹಂಚಿಕೊಂಡಿದ್ದೆ ತಡ ಫ್ಯಾನ್ಸ್​​ ಕಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ. ಕೆಲವರು ಲವ್​ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಪೃಥ್ವಿಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯರ್​ ಮೇಲೆ ಗಮನವಹಿಸಿ ರೈಟ್​​ ಟ್ರ್ಯಾಕ್​ಗೆ ಮರಳೋಕೆ ಇನ್ನೂ ಅವಕಾಶ ಇದೆ. ಅದಕ್ಕೆ ಏನ್​ ಮಾಡಬೇಕೋ ಅದನ್ನ ಬಿಟ್ಟು ಉಳಿದಿರೋದ್ರ ಮೇಲೆ ಹೆಚ್ಚು ಗಮನವಹಿಸ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. 

ಆಕೃತಿ ಅಗರ್​ವಾಲ್​ ಯಾರು? ಹಿನ್ನೆಲೆ ಏನು?

ಈ ಆಕೃತಿ ಅಗರ್​ವಾಲ್​ ಕಂಟೆಟ್​ ಕ್ರಿಯೇಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಲಕ್ನೋ ಮೂಲದ ಆಕೃತಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಮ್ಯಾನೇಜ್​ಮೆಂಟ್​ ಸ್ಟಡಿಸ್​ನಲ್ಲಿ ಪದವಿ ಪಡೆದಿದ್ರೂ ಮಾಡೆಲ್​ ಆಗಿ ವೃತ್ತಿ ಬದುಕು ಆರಂಭಿಸಿದ್ರು. ಜೊತೆಗೆ ಕೆಲ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಇನ್ಸ್​​ಸ್ಟಾಗ್ರಾಂ ಒಂದರಲ್ಲೇ 3.3 ಮಿಲಿಯನ್​​ಗೂ ಫಾಲೋವರ್ಸ್​ ಹೊಂದಿದ್ದು ಹಲವು ಬ್ರ್ಯಾಂಡ್​ಗಳನ್ನ ಪ್ರಮೋಟ್​ ಮಾಡ್ತಾರೆ. 

ಇದನ್ನೂ ಓದಿ:IPLಗೆ ಗುಡ್​ ಬೈ ಹೇಳಿದ ಬೆನ್ನಲ್ಲೇ ಪ್ರತಿಷ್ಠಿತ ಬಿಬಿಎಲ್​​ನಲ್ಲಿ ಕಾಣಿಸಿಕೊಳ್ತಾರಾ ಲೆಜೆಂಡರಿ ಪ್ಲೇಯರ್?

ಒಟ್ಟಿನಲ್ಲಿ ಪೃಥ್ವಿ ಷಾ ಬದುಕಿಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಹೊಸ ಗೆಳತಿಯರ ಎಂಟ್ರಿಯ ಬಳಿಕ ಹಲವು ಕ್ರಿಕೆಟರ್​ಗಳ ಕರಿಯರ್​ ಬದಲಾದ ಉದಾಹರಣೆಗಳಿವೆ. ಹೀಗಾಗಿ ಈ ಆಕೃತಿ ಅಗರ್​ವಾಲ್​ ಪೃಥ್ವಿ ಜೀವನಕ್ಕೆ ಅದೃಷ್ಟ ದೇವತೆಯಾಗ್ತಾರಾ? ಹಳಿ ತಪ್ಪಿರೋ ಪೃಥ್ವಿಯ ಕರಿಯರ್​​ನ ಸರಿದಾರಿಗೆ ತರಲು ಪ್ರಯತ್ನಿಸ್ತಾರಾ? ಕಾದು ನೋಡೋಣ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Prithvi Shaw Akriti Agarwal
Advertisment