/newsfirstlive-kannada/media/media_files/2025/09/03/sara_tendulkar_pics-2025-09-03-14-36-17.jpg)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ಗಿಂತ ಕಳೆದೊಂದು ಕೆಲ ವರ್ಷದಿಂದ ಅವರ ಮಗಳ ಹೆಸರೇ ಸಖತ್ ಸೌಂಡ್ ಮಾಡ್ತಿದೆ. ಸಾರಾ ತೆಂಡುಲ್ಕರ್ ಡೇಟಿಂಗ್, ಲವ್ ಗಾಸಿಪ್ಗಳಂತೂ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಶುಭ್ಮನ್ ಗಿಲ್ಯಿಂದ ಹಿಡಿದು ಸಿದ್ಧಾಂತ್ ಚತುರ್ವೇದಿವರೆಗೆ ಸಾರಾ ಹೆಸರು ಥಳುಕು ಹಾಕಿಕೊಂಡಿದ್ದ ಕತೆಗಳೆಲ್ಲಾ ಗೊತ್ತಲ್ವಾ.? ಆದ್ರೀಗ ಈ ಕಹಾನಿಯಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ.
ಸುಡುವ ಸೂರ್ಯನೇ ನಾಚುವಂತಾ ನಗು, ಹಾಲುಗೆನ್ನೆಯ ಹೊಳಪು, ಗುಳಿಕೆನ್ನೆಯ ಚೆಲುವು. ಒಂದೇ ಮಾತಲ್ಲಿ ಹೇಳೋದಾದ್ರೆ ಸೌಂದರ್ಯದ ಗಣಿ. ವಿಶ್ವದ ಅಸಂಖ್ಯ ಜನರ ಹೃದಯ ಗೆದ್ದ ಸೌಂದರ್ಯ ಈಕೆಯದ್ದು.
ನಾವು ಮಾತನಾಡ್ತಾ ಇರೋದು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಬಗ್ಗೆನೇ. ಕಳೆದ ಕೆಲ ವರ್ಷದಿಂದ ತೆಂಡುಲ್ಕರ್ಗಿಂತ ಹೆಚ್ಚು ಸಾರಾ ಸುದ್ದಿಯಾಗಿದ್ದಾರೆ. ಲವ್, ಡೇಡಿಂಗ್ ವಿಚಾರಗಳಂತೂ ಪದೇ ಸದ್ದು ಮಾಡಿವೆ. ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಶುಭ್ಮನ್ ಗಿಲ್, ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಹೆಸರುಗಳು ಓಡಾಡಿದ್ವು. ಇದೀಗ ಈ ಲವ್ ಕಹಾನಿಯಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ.
ಗೋವಾ ಮೂಲದ ಯುವಕನಿಗೆ ಸಾರಾ ಕ್ಲೀನ್ಬೋಲ್ಡ್.?
ಸಾರಾ ತೆಂಡುಲ್ಕರ್ ಲವ್ ಕಹಾನಿಯಲ್ಲಿ ಈಗ ಒಂದು ಟ್ವಿಸ್ಟ್ ಸಿಕ್ಕಿದೆ. ಸಾರಾ ತೆಂಡುಲ್ಕರ್ ಲೈಫ್ಗೆ ಹೊಸ ಹುಡುಗನ ಎಂಟ್ರಿಯಾದಂತಿದೆ. ಒಬ್ಬ ಹುಡುಗನೊಟ್ಟಿಗೆ ಸಾರಾ ಇರೋ ಹಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿವೆ. ಆ ಫೋಟೋಗಳೇ ಮತ್ತೊಂದು ಡೇಟಿಂಗ್ಗೆ ಗಾಸಿಪ್ ಹುಟ್ಟಿಗೆ ದಾರಿ ಮಾಡಿಕೊಟ್ಟಿವೆ.
ಸಚಿನ್-ಅಂಜಲಿ ಜೊತೆಗೂ ಕಾಣಿಸಿಕೊಂಡಿದ್ದ ಹುಡುಗ.!
ಸಾರಾ ತೆಂಡುಲ್ಕರ್ ಒಬ್ಬ ಹುಡುಗನೊಂದಿಗೆ ಆತ್ಮೀಯವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಲವ್ ಗಾಸಿಪ್ ಕಾಳ್ಗಿಚ್ಚಿನಂತೆ ಹಬ್ಬಿದೆ. ಇದಕ್ಕೆ ಮತ್ತೊಂದು ಫೋಟೋ ಕಾರಣವಾಗಿದೆ. ಸಾರಾ ತಂದೆ ಸಚಿನ್, ತಾಯಿ ಅಂಜಲಿ ಜೊತೆಗೆ ಈ ಹುಡುಗ ಕಾಣಿಸಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ಜೊತೆಗೆ ಸಚಿನ್, ಅಂಜಲಿ ಹಾಗೂ ಅರ್ಜುನ್ ಇನ್ಸ್ಸ್ಟಾಗ್ರಾಂನಲ್ಲಿ ಈ ಹುಡುಗನನ್ನ ಫಾಲೋ ಮಾಡ್ತಿದ್ದಾರೆ. ಹೊಸ ಪ್ರೇಮ್ ಕಹಾನಿಯ ಸುದ್ದಿ ಹಬ್ಬಲು ಈ ಎಲ್ಲಾ ವಿಚಾರಗಳು ಕಾರಣವಾಗಿವೆ.
ಸಾರಾ ಮನಗೆದ್ದ ಹುಡುಗ ಯಾರು.? ಹಿನ್ನೆಲೆ ಏನು.?
ಸಾರಾ ತೆಂಡುಲ್ಕರ್ ಜೊತೆಗೆ ಕಾಣಿಸಿಕೊಂಡಿರೋ ಹುಡುಗನ ಹೆಸರು ಸಿದ್ಧಾರ್ಥ್ ಕೆರ್ಕರ್. ಶ್ರೀಮಂತ ಉದ್ಯಮಿ ಹಾಗೂ ಖ್ಯಾತ ಆರ್ಟಿಸ್ಟ್.! ಗೋವಾದಲ್ಲಿ ಹೋಟೆಲ್ ಉದ್ಯಮವನ್ನ ನಡೆಸ್ತಾ ಇದ್ದಾರೆ. ಮೂಲತಃ ಸಿದ್ಧಾರ್ಥ್ ಕುಟುಂಬಸ್ಥರು ಶಿಲ್ಪಕಲೆಯ ಹಿನ್ನೆಲೆಯುಳ್ಳವರು. ಸಿದ್ಧಾರ್ಥ್ ಕೂಡ ಲಂಡನ್ನ ಯುನಿವರ್ಸಿಟಿ ಆಫ್ ಆರ್ಟ್ಸ್ನಲ್ಲಿ ಪದವಿ ಪಡೆದಿದ್ದು, ಶಿಲ್ಪಕಲೆಯ ವೃತ್ತಿಯನ್ನೂ ಮಾಡ್ತಿದ್ದಾರೆ.
ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್ಗೆ ಹೇಳಿದ್ದೇನು?
ಸಾರಾ ತೆಂಡುಲ್ಕರ್ -ಸಿದ್ಧಾರ್ಥ್.. ಇವರಿಬ್ಬರ ಭೇಟಿ-ಪರಿಚಯ ಆಗಿದ್ದು ಲಂಡನ್ನಲ್ಲೇ. ಇದೀಗ ಭಾರತಕ್ಕೆ ವಾಪಾಸ್ಸಾಗಿರೋ ಇಬ್ಬರೂ ಇಲ್ಲಿಯೇ ನೆಲೆಯೂರೋ ಯತ್ನದಲ್ಲಿದ್ದಾರೆ. ಸಾರಾ ತೆಂಡುಲ್ಕರ್ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಬ್ಯುಸಿನೆಸ್ ಆರಂಭಿಸಿದ್ದಾರೆ. ಸಿದ್ಧಾರ್ಥ್ ಗೋವಾದಲ್ಲಿ ಸೆಟಲ್ ಆಗೋ ಯತ್ನದಲ್ಲಿದ್ದಾರೆ.
ಸಾರಾ ತೆಂಡುಲ್ಕರ್ ಲವ್ ಲೈಫ್ ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇವರ್ಯಾರು ಎಂಬಂತಾಗಿದೆ. ಸದ್ಯ ಸಿದ್ಧಾರ್ಥ್ ಕೆರ್ಕರ್ ಜೊತೆಗೆ ಸಾರಾ ಹೆಸರು ಜೋರಾಗಿ ಸದ್ದು ಮಾಡ್ತಿದೆ. ಆದ್ರೆ, ಅಧಿಕೃತವಾದ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗುತ್ತೋ ದೇವರೆ ಬಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ