/newsfirstlive-kannada/media/media_files/2026/02/07/team-india-20-2026-02-07-15-02-05.jpg)
ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಭಾರ ಹೊತ್ತು ಟೀಮ್ ಇಂಡಿಯಾ T20 ವಿಶ್ವಕಪ್ ಅಖಾಡಕ್ಕೆ ಇಳಿಯುತ್ತಿದೆ. ವಿಶ್ವಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಡಲಾಗಿದೆ. ಯುವ ಸೈನ್ಯವನ್ನ ಒಳಗೊಂಡ ಟೀಮ್ ಇಂಡಿಯಾ ಎದುರಾಳಿಗಳ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರದರ್ಶಿಸಬೇಕಿದೆ. ತಂಡದಲ್ಲಿ T20 ಸ್ಪೆಷಲಿಸ್ಟ್​ಗಳೇ ಹೆಚ್ಚು ಇರೋದ್ರಿಂದ ಟೀಮ್ ಇಂಡಿಯಾ ಮೇಲೆ ವಿಶ್ವದ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಇದುವರೆಗೂ ಮಾಡಿದ ದಾಖಲೆಗಳು ಏನೇನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್
/filters:format(webp)/newsfirstlive-kannada/media/media_files/2026/01/18/team-india-bcci-photo-2026-01-18-09-40-08.jpg)
ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪಡೆ T20 ವಿಶ್ವಕಪ್​ಗೆ ಫೇವರಿಟ್ಸ್​ ತಂಡವಾಗಿ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ಸ್​​​​​​ ಪಟ್ಟ ಒಂದೆಡೆಯಾದ್ರೆ ಮತ್ತೊಂದೆಡೆ T20 ಕ್ರಿಕೆಟ್​​ನ ನಂಬರ್ 1 ತಂಡವಾಗಿರುವ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಧಮ್​ಧಾರ್ ತಂಡ ಎನಿಸಿಕೊಂಡಿರೋ ಸ್ಕೈ ಪಡೆ, ಸ್ಟ್ರಾಂಗ್ ಟೀಮ್ ಅಂತ ಗುರುತಿಸಿಕೊಂಡಿದೆ.
T20 ವಿಶ್ವಕಪ್ ಗ್ರೂಪ್ 'ಎ’ ತಂಡದಲ್ಲಿ ಕಾಣಿಸಿಕೊಂಡಿರುವ ಟೀಮ್ ಇಂಡಿಯಾ ಲೀಗ್ ಸ್ಟೇಜ್​​ನಲ್ಲಿ ಒಟ್ಟು 4 ಪಂದ್ಯಗಳನ್ನ ಆಡಲಿದೆ. ಯು.ಎಸ್.ಎ, ನಮೀಬಿಯಾ, ನೆದರ್​ಲೆಂಡ್ಸ್​ ವಿರುದ್ಧ ಟೀಮ್ ಇಂಡಿಯಾ ನಿರೀಕ್ಷೆಯಂತೆ ಗೆಲುವು ಸಾಧಿಸಲಿದೆ. ಭಾರತ ವಿರುದ್ಧ ಆಡೋಲ್ಲ ಅಂತ ಹೇಳಿಕೆ ನೀಡಿರುವ ಪಾಕ್ ಪಂದ್ಯ ಆಡದೇ ಸೋತಿದೆ. ಈ ಎಲ್ಲಾ ಲೆಕ್ಕಾಚಾರ ನೋಡಿದ್ರೆ ಟೀಮ್ ಇಂಡಿಯಾ ಟಾಪ್ ಟೀಮ್ ಆಗಿ ಸೂಪರ್ 8 ಹಂತಕ್ಕೆ ಸುಲಭವಾಗಿ ಎಂಟ್ರಿ ಕೊಡಲಿದೆ.
ಸೂಪರ್​​ 8 ಸ್ಟೇಜ್​ನಲ್ಲಿ ಟೀಮ್ ಇಂಡಿಯಾ ಒಟ್ಟು 3 ಪಂದ್ಯಗಳನ್ನ ಆಡಲಿದೆ. ಆ ಮೂರೂ ಪಂದ್ಯಗಳನ್ನ ಗೆಲ್ಲೋದೇ ಸೂರ್ಯಕುಮಾರ್ ಯಾದವ್ ಪಡೆಯ ಮುಂದಿರೋ ದೊಡ್ಡ ಸವಾಲು. ಸೂಪರ್ ಏಯ್ಟ್​ನಲ್ಲಿ ಟೀಮ್ ಇಂಡಿಯಾ ಬಲಿಷ್ಟ ತಂಡಗಳ ವಿರುದ್ಧ ಸೆಣಸಬೇಕಿದೆ. ಹಾಗಾಗಿ ಟೀಮ್ ಇಂಡಿಯಾಕ್ಕೆ ಒಂದೊಂದು ಪಂದ್ಯವೂ ಅತ್ಯಂತ ಮಹತ್ವವಾಗಲಿದೆ. ಒಂದು ಪಂದ್ಯ ಸೋತ್ರೂ ಸ್ಕೈ ಪಡೆಯ ವಿಶ್ವಕಪ್ ಗೆಲುವು ಕಮರಲಿದೆ.
ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಯನ್ನ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. ಉಪಖಂಡದಲ್ಲಿ ಮೆಗಾ ಟೂರ್ನಿ ನಡೆಯುತ್ತಿರೋದ್ರಿಂದ ಟೀಮ್ ಇಂಡಿಯಾಕ್ಕೆ ಬಿಗ್ ಅಡ್ವಾಂಟೇಜ್. ಇಲ್ಲಿನ ಪಿಚ್​ಗಳಲ್ಲಿ ಟೀಮ್ ಇಂಡಿಯಾ ಹೆಚ್ಚು ಹೆಚ್ಚು ಪಂದ್ಯಗನ್ನ ಆಡಿವೆ. ಇಲ್ಲಿ ವಾತಾವರಣ ಕೂಡ ಟೀಮ್ ಇಂಡಿಯಾಕ್ಕೆ ಅನುಕೂಲವಾಗೋದ್ರಿಂದ ಸ್ಕೈ ಪಡೆಯ ಗೆಲುವಿನ ಆಸೆ ಮತ್ತಷ್ಟು ಚಿಗುರಿಸಿದೆ.
2024ರಲ್ಲಿ ಟೀಮ್ ಇಂಡಿಯಾ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ-20 ವಿಶ್ವಕಪ್ ಗೆದ್ದಿತು. ಆದ್ರೀಗ ಸೂರ್ಯಕುಮಾರ್ ಯಾದವ್​​​​​ ಸಾರಥ್ಯದಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೊರಟಿದೆ. ಒಂದು ವೇಳೆ ಸ್ಕೈ ಪಡೆ, ಈ ಬಾರಿ ಟಿ-20 ವಿಶ್ವಕಪ್ ಗೆದ್ರೆ ಅದು ವಿಶ್ವದಾಖಲೆಯಾಗಲಿದೆ. ಹೋಸ್ಟ್ ನೇಷನ್ ಇದುವರೆಗೂ ಟಿ-20 ವಿಶ್ವಕಪ್ ಗೆದ್ದಿಲ್ಲ. ಹಾಗೆ ಯಾವುದೇ ತಂಡ ಬ್ಯಾಕ್ ಟು ಬ್ಯಾಕ್ ಟಿ-20 ವಿಶ್ವಕಪ್ ಗೆದ್ದಿಲ್ಲ. ಹಾಗಾಗಿ ಈ ಬಾರಿ ವಿಶ್ವದಾಖಲೆ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜಾಗಿದೆ.
ಟಿ-20 ಫಾರ್ಮೆಟ್​ನಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುವ ಟೀ ಇಂಡಿಯಾಗೆ ವಿಶ್ವಕಪ್ ಗೆಲ್ಲೋಕೆ ಗೋಲ್ಡನ್ ಚಾನ್ಸ್ ಇದೆ. ಆ ಚಾನ್ಸ್​ ಮಿಸ್ ಮಾಡಿಕೊಳ್ಳದಿರಲಿ ಅನ್ನೋದೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ: T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್​ಗಳ ಮಧ್ಯೆ ಫೈಟ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us