Advertisment

T20 world cup: ಅಭಿಷೇಕ್ ಶರ್ಮಾಗೆ ಜೋಡಿ ಯಾರು..? ಇಬ್ಬರು ಸ್ಟಾರ್​ಗಳ ಮಧ್ಯೆ ಫೈಟ್​..!

ನ್ಯೂಜಿಲೆಂಡ್​ ವಿರುದ್ಧದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಟಿ-20 ವಿಶ್ವಕಪ್ ಅಖಾಡಕ್ಕಿಳಿಯಲು ಟೀಮ್​ ಇಂಡಿಯಾ ಸಜ್ಜಾಗಿದೆ. ಮೆಗಾ ಟೂರ್ನಿಗೂ ಮುನ್ನ, ಟೀಮ್ ಮ್ಯಾನೇಜ್ಮೆಂಟ್​​ಗೆ ತಲೆ ಬಿಸಿ ಹೆಚ್ಚಾಗಿದೆ. ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಸಜ್ಜಾಗಿರೋ ಮೆನ್​ ಇನ್ ಬ್ಲ್ಯೂ ಪಡೆಗೆ, ಓಪನಿಂಗೇ ದೊಡ್ಡ ಸಮಸ್ಯೆಯಾಗಿದೆ.

author-image
Ganesh Kerekuli
Abhishek sharma (7)
Advertisment
  • T20 ವಿಶ್ವಕಪ್​ಗೂ ಮುನ್ನ ತಂಡದಲ್ಲಿ ಗೊಂದಲ..!
  • ನ್ಯೂಜಿಲೆಂಡ್​ ಸರಣಿಯಲ್ಲಿ ಕಿಶನ್ ಸೂಪರ್​ ಹಿಟ್
  • ತಲೆ ಕೆಳಗಾದ ಟೀಮ್​ ಮ್ಯಾನೇಜ್​ಮೆಂಟ್​​ ಪ್ಲಾನ್​

ನ್ಯೂಜಿಲೆಂಡ್​ ವಿರುದ್ಧದ ಗೆಲುವಿನ ಆತ್ಮವಿಶ್ವಾಸದೊಂದಿಗೆ ಟಿ-20 ವಿಶ್ವಕಪ್ ಅಖಾಡಕ್ಕಿಳಿಯಲು ಟೀಮ್​ ಇಂಡಿಯಾ ಸಜ್ಜಾಗಿದೆ. ಮೆಗಾ ಟೂರ್ನಿಗೂ ಮುನ್ನ, ಟೀಮ್ ಮ್ಯಾನೇಜ್ಮೆಂಟ್​​ಗೆ ತಲೆ ಬಿಸಿ ಹೆಚ್ಚಾಗಿದೆ. ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಸಜ್ಜಾಗಿರೋ ಮೆನ್​ ಇನ್ ಬ್ಲ್ಯೂ ಪಡೆಗೆ, ಓಪನಿಂಗೇ ದೊಡ್ಡ ಸಮಸ್ಯೆಯಾಗಿದೆ.

Advertisment

2024ರ ಟಿ-20 ವರ್ಲ್ಡ್​ ಚಾಂಪಿಯನ್ಸ್​​ ಟೀಮ್ ಇಂಡಿಯಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ತವರಿನಲ್ಲಿ ನಡೆಯುತ್ತಿರೋ ವಿಶ್ವಕಪ್​ನಲ್ಲಿ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಬೇಕಾದ ಒತ್ತಡ ಸೂರ್ಯಕುಮಾರ್​ ಸೈನ್ಯದ ಮೇಲಿದೆ. ಮಹತ್ವದ ಸರಣಿಗೂ ಮುನ್ನ ನಡೆದ ಪ್ರಿಪರೇಟರಿ ಸರಣಿಯಲ್ಲಿ ಟೀಮ್​ ಇಂಡಿಯಾ ಬೊಂಬಾಟ್​​ ಪರ್ಫಾಮೆನ್ಸ್​ ನೀಡಿದೆ. ಮ್ಯಾನೇಜ್​ಮೆಂಟ್​ ಟೆನ್ಶನ್ ಕಡಿಮೆಯಾಗಿಲ್ಲ. 

ಇದನ್ನೂ ಓದಿ: ತಂಡಕ್ಕೆ ಕಂಬ್ಯಾಕ್​ ಮಾಡಿದ್ದೇ ರೋಚಕ.. ಟಿ-20 ವಿಶ್ವಕಪ್​​ನಲ್ಲಿ ಈ ಸ್ಟಾರ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ..!

Ishan kishan (2)

ಕಿಶನ್ ಸೂಪರ್​ ಹಿಟ್

T20 ವಿಶ್ವಕಪ್​ಗೆ ಟೀಮ್​ ಮ್ಯಾನೇಜ್​ಮೆಂಟ್ ನ್ಯೂಜಿಲೆಂಡ್​ ಸರಣಿಗೂ ಮುನ್ನವೇ ಪ್ಲಾನ್​ ಮಾಡಿಕೊಂಡು ರೆಡಿಯಾಗಿತ್ತು. ಸರಣಿ ಅಂತ್ಯದ ಬಳಿಕ ಮ್ಯಾನೇಜ್​ಮೆಂಟ್​ ಪ್ಲಾನ್​ ತಲೆಕೆಳಗಾಗಿದೆ. ಮತ್ತೆ ಪರ್ಫೆಕ್ಟ್​ ಪ್ಲೇಯಿಂಗ್​ ಇಲೆವೆನ್​ ಪಿಕ್ ಮಾಡೋ ಸವಾಲು ಎದುರಾಗಿದೆ. ಇದಕ್ಕೆಲ್ಲಾ ಕಾರಣ ಇಶಾನ್​ ಕಿಶನ್​. ಕಿವೀಸ್​ ಸರಣಿಯಲ್ಲಿ ಸೂಪರ್​ ಹಿಟ್​ ಪರ್ಫಾಮೆನ್ಸ್​ ನೀಡಿದ ಇಶಾನ್​ ಕಿಶನ್​ ಸೆಲೆಕ್ಷನ್​ ಟೆನ್ಶನ್​ ತಂದಿಟ್ಟಿದ್ದಾರೆ. 

Advertisment

ಸಂಜು VS ಕಿಶನ್ ಫೈಟ್​

ನ್ಯೂಜಿಲೆಂಡ್​ ಸರಣಿಯಲ್ಲಿ ಇಶಾನ್ ಕಿಶನ್​ ಸೂಪರ್​ ಡೂಪರ್​ ಪರ್ಪಾಮೆನ್ಸ್​ ನೀಡಿರೋದು ಮ್ಯಾನೇಜ್ಮೆಂಟ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರಣಿಗೂ ಮುನ್ನ ಹೊಸ ಪ್ಲಾನ್​ ಮಾಡಿದ್ದ ಮ್ಯಾನೇಜ್​ಮೆಂಟ್​​ ಶುಭ್​ಮನ್​ ಗಿಲ್​ನ ಡ್ರಾಪ್ ಮಾಡಿ ಸಂಜು ಸ್ಯಾಮ್ಸನ್​ನ ಓಪನರ್​ ಪ್ರಪೋಟ್​ ಮಾಡಿತ್ತು. ಆದ್ರೆ, ಕಿವೀಸ್​ ಸರಣಿಯಲ್ಲಿ ಸಂಜು ಅಟ್ಟರ್​ಫ್ಲಾಪ್ ಶೋ ನೀಡಿದ್ದಾರೆ. ಇದ್ರಿಂದಾಗಿ ಓಪನರ್​​ ಆಗಿ ಯಾರಿಗೆ ಸ್ಥಾನ ನೀಡಬೇಕು ಅನ್ನೋ ಪ್ರಶ್ನೆ ಕೋಚ್ ಗಂಭೀರ್​ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್​ಗೆ ಎದುರಾಗಿದೆ.

ಅಭಿಷೇಕ್ ಶರ್ಮಾಗೆ ಜೋಡಿ ಯಾರು..?

ಟಿ20 ವಿಶ್ವಕಪ್​ನಲ್ಲಿ ಫಿಯರ್​ಲೆಸ್ ಓಪನಿಂಗ್ ಬ್ಯಾಟರ್ ಅಭಿಷೇಕ್ ಶರ್ಮಾಗೆ ಜೋಡಿ ಯಾರಾಗಬೇಕು? ಅನುಭವಿ ಸಂಜು ಸ್ಯಾಮ್ಸನಾ ಅಥವಾ ಇಶಾನ್ ಕಿಶನಾ? ಅನ್ನೋ ಪ್ರಶ್ನೆ ಇದೀಗ ಉದ್ಘವವಾಗಿದೆ. ಸಾಲಿಡ್​ ಫಾರ್ಮ್​ನಲ್ಲಿರೋ ಇಶಾನ್ ಕಿಶನ್​ಗೆ ಚಾನ್ಸ್​ ನೀಡಿದ್ರೆ,ಲೆಫ್ಟ್ ರೈಟ್ ಕಾಂಬಿನೇಷನ್ ಸಿಗಲ್ಲ. ಸಂಜು ಸ್ಯಾಮ್ಸನ್ ನೀಡಿದ ಅವಕಾಶಗಳಲ್ಲಿ ಫೇಲ್​ ಆಗಿದ್ದಾರೆ. ಹಾಗಾಗಿ ಯಾರಿಗೆ ಅವಕಾಶ ನೀಡಬೇಕು ಅನ್ನೋ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಆದ್ರೆ ಕಾಂಬಿನೇಷನ್​ಗೆ ಹೆಚ್ಚು ಒತ್ತು ಕೊಡದೆ, ಅಭಿಷೇಕ್​ ಜೊತೆ ಇಶಾನ್ ಕಿಶನ್​ನ ಕಣಕ್ಕಿಳಿಸಿದ್ರೆ, ಈ ಜೋಡಿ ಡೆಡ್ಲಿ ಆಗೋದ್ರಲ್ಲಿ ಎರಡು ಮಾತಿಲ್ಲ. 

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಇದುವರೆಗೂ ಮಾಡಿದ ದಾಖಲೆಗಳು ಏನೇನು ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

Advertisment

Sanju Samson

ಅನುಭವಿ ಸಂಜು ಸ್ಯಾಮ್ಸನ್ ಹೈಲಿ ಸ್ಕಿಲ್ಡ್ ಌಂಡ್ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಹತ್ತು ಪಂದ್ಯಗಳನ್ನ ಆಡಿದ್ರೆ ಯಾವುದೋ ಒಂದು ಪಂದ್ಯದಲ್ಲಿ ಸಂಜು ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡ್ತಾರೆ. ಉಳಿದ ಪಂದ್ಯಗಳಲ್ಲಿ ಸಂಜು, ಸೈಲೆಂಟ್ ಆಗಿಬಿಡ್ತಾರೆ. ಕಿವೀಸ್​ ಸರಣಿಯಲ್ಲಿ ಆರಂಭಿಕನಾಗಿ 5 ಪಂದ್ಯಗಳಲ್ಲಿ ಫೇಲ್​ ಆಗಿದ್ದಾರೆ. 5 ಪಂದ್ಯದಿಂದ ಕೇವಲ 46 ರನ್​ಗಳಿಸಿದ ಸಂಜು ಸ್ಯಾಮ್ಸನ್​ ತಮ್ಮ ಸ್ಥಾನಕ್ಕೆ ತಾವೇ ಕುತ್ತು ತಂದುಕೊಂಡಿದ್ದಾರೆ. ತಿಲಕ್​ ವರ್ಮಾ ಕೂಡ ಕಮ್​ಬ್ಯಾಕ್​ ಮಾಡ್ತಿರೋದ್ರಿಂದ, ವಿಶ್ವಕಪ್​ನಲ್ಲಿ ಪ್ಲೇಯಿಂಗ್​ ಇಲೆವೆನ್​ನಿಂದಲೇ ಸಂಜು ಔಟ್​ ಆಗೋ ಸಾಧ್ಯತೆಯಿದೆ. 

ಟಿ20 ವಿಶ್ವಕಪ್​ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್​​ರನ್ನ ಓಪನಿಂಗ್ ಜೋಡಿಯನ್ನಾಗಿ ಮಾಡಿದ್ರೆ, ನೆಕ್ಸ್ಟ್​​ ಲೆವೆಲ್ ಬ್ಯಾಟಿಂಗ್ ನಿರೀಕ್ಷಿಸಬಹುದು. ಇಬ್ಬರೂ ಫಿಯರ್​ಲೆಸ್, ಡೆಡ್ಲಿ, ಅಗ್ರೆಸಿವ್, ಪವರ್ ಹಿಟ್ಟರ್ಸ್ ಆಗಿರೋದ್ರಿಂದ, ಎದುರಾಳಿ ಬೌಲರ್​ಗಳನ್ನ ಚಿಂದಿ ಉಡಾಯಿಸ್ತಾರೆ. ಟಾಪ್ ಆರ್ಡರ್​ನಲ್ಲಿ ಇಶಾನ್ ಕಿಶನ್, ಅಭಿಷೇಕ್ ಶರ್ಮಾರಷ್ಟೇ ಡೇಂಜರಸ್. ಸೆಟಲ್ ಆದ್ರೆ, ಎದುರಾಳಿಗಳನ್ನ ಅನ್​ಸೆಟಲ್ ಮಾಡಿಬಿಡ್ತಾರೆ.  

ಸಂಜು ಸ್ಯಾಮ್ಸನ್​ಗೆ ಹೋಲಿಸಿದ್ರೆ ಕಿವೀಸ್​ ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲೇ 215 ರನ್​ ಚಚ್ಚಿದ ಇಶಾನ್​ ಕಿಶನ್​ ಓಪನರ್​ ಆರಂಭಿಕನ ಸ್ಥಾನಕ್ಕೆ ಪರ್ಫೆಕ್ಟ್​ ಪ್ಲೇಯರ್​ ಎನಿಸಿದ್ದಾರೆ. ಆದ್ರೆ, ಇಶಾನ್​ ಕಿಶನ್​ಗೆ ಸ್ಥಾನ ನೀಡಿ, ತಿಲಕ್​ ವರ್ಮಾ ನಂಬರ್​ 3 ಸ್ಲಾಟ್​ಗೆ ಕಮ್​ಬ್ಯಾಕ್​ ಮಾಡಿದ್ರೆ, ಟಾಪ್​ ಆರ್ಡರ್​ನಲ್ಲಿ ಬರೀ ಲೆಫ್ಟ್​ ಹ್ಯಾಂಡರ್​ಗಳೇ ಇರ್ತಾರೆ. ಮ್ಯಾನೇಜ್​ಮೆಂಟ್​​ ಈ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯೋ ರಿಸ್ಕ್​ ತೆಗೆದುಕೊಳ್ಳುತ್ತಾ ಅನ್ನೋದೆ ಪ್ರಶ್ನೆಯಾಗಿದೆ.  

Advertisment

ಇದನ್ನೂ ಓದಿ:ಬಿಹಾರದ ನಳಂದ ಜಿಲ್ಲೆಯಲ್ಲಿ ಗುಬ್ಬಿ ತಾಲ್ಲೂಕಿನ ನಾಲ್ವರು ಆತ್ಮಹತ್ಯೆ : ತಂಗಿ ಮಗನ ಆನ್ ಲೈನ್ ಗೇಮ್ ನಿಂದ ನೊಂದು ಆತ್ಮಹತ್ಯೆ ಶಂಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

T20 world cup Ishan Kishan Sanju Samson Abhishek Sharma
Advertisment
Advertisment
Advertisment