/newsfirstlive-kannada/media/media_files/2026/02/07/ishan-kishan-4-2026-02-07-13-38-16.jpg)
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್​ಗೆ ಬ್ಯಾಡ್ ಲಕ್ ದೂರವಾಗಿದೆ. ಕಳೆದೆರಡು ವರ್ಷದಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಕಿಶನ್, ಸರ್​​​​​ಪ್ರೈಸ್​ ರೀತಿಯಲ್ಲಿ ಟಿ-20 ವಿಶ್ವಕಪ್ ತಂಡಕ್ಕೆ ಎಂಟ್ರಿ ಕೊಟ್ರು. ಇದೀಗ ಪ್ಲೇಯಿಂಗ್​ ಇಲೆವೆನ್​ನಲ್ಲೂ ಸ್ಥಾನ ಸೀಲ್​ ಮಾಡಿಕೊಂಡಿದ್ದಾರೆ. ಇಶಾನ್​ ಕಿಶನ್​ ಆಟ ಟೀಮ್​ ಇಂಡಿಯಾ ಬಲ ಹೆಚ್ಚಿಸಿದ್ರೆ ಎದುರಾಳಿಗಳ ನಿದ್ದೆಗೆಡಿಸಿದೆ.
ಇಶಾನ್ ಕಿಶನ್ ಕರಿಯರ್ ಮುಗೀತು. ಇಶಾನ್ ಕಿಶನ್ ಖೇಲ್ ಖತಂ.. ಅಂತಿದ್ದವರಿಗೆ, ಜಾರ್ಖಂಡ್ ವಿಕೆಟ್ ಕೀಪರ್ ಮುಟ್ಟಿನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾರೆ. ಸ್ಪೋಟಕ, ಅಗ್ರೆಸಿವ್, ಅಟ್ಯಾಕಿಂಗ್ ಇಂಟೆಂಟ್​​​​​ನಲ್ಲಿ ಬ್ಯಾಟಿಂಗ್ ನಡೆಸಿ ತನ್ನ ಬ್ಯಾಟ್​​ನಿಂದಲೇ ಆನ್ಸರ್​​ ಕೊಟ್ಟಿದ್ದಾರೆ. ಟೀಮ್​ ಇಂಡಿಯಾಗೆ ರಾಯಲ್​ ರೀ ಎಂಟ್ರಿ ಕೊಟ್ಟಿರೋ ಇಶಾನ್ ಕಿಶನ್​, ಸಿಡಿಲಿ-ಮಿಂಚಿನಂತಾ ಆರ್ಭಟಕ್ಕೆ ಎದುರಾಳಿ ಪಡೆಗಳು ಬೆಚ್ಚಿ ಬಿದ್ದಿವೆ.
/filters:format(webp)/newsfirstlive-kannada/media/media_files/2026/02/07/ishan-kishan-5-2026-02-07-13-38-29.jpg)
ತಿರುವನಂತಪುರಂನಲ್ಲಿ ನಡೆದ ನ್ಯೂಜಿಲೆಂಡ್​ ಎದುರಿನ ಅಂತಿಮ ಟಿ20ಯಲ್ಲಿ ಇಶಾನ್​ ಕಿಶನ್​ ಬ್ಯಾಟ್​ನಿಂದ ಬಂದಿದ್ದು, ಒಂದು ಇನ್ನಿಂಗ್ಸ್​ ಮಾತ್ರವಲ್ಲ.. ಅದೊಂದು ಸ್ಟ್ರಾಂಗ್ ಸ್ಟೇಟ್​ಮೆಂಟ್​.! ಬ್ಯಾಟ್​​ನಿಂದ ಸಿಡಿದು ಬಂದ ಒಂದೊಂದು ಬೌಂಡರಿ, ಸಿಕ್ಸರ್​ಗಳು ಅನುಮಾನಿಸಿ, ಅವಮಾನಿಸಿದವರಿಗೆ ನೀಡಿದ ತಿರುಗೇಟು. ಅಲ್ಲದೇ ಟಿ-20 ವಿಶ್ವಕಪ್​ನ ಅಭ್ಯಾಸ ಪಂದ್ಯದಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.
ಪ್ಲೇಯಿಂಗ್​-XI ಸ್ಥಾನ ಫಿಕ್ಸ್​
ಇಶಾನ್​ ಕಿಶನ್ ಟಿ20 ವಿಶ್ವಕಪ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ದೇ ಎಲ್ಲರಿಗೂ ಸರ್​​ಪ್ರೈಸ್​ ಮೂಡಿಸಿತ್ತು. ಆದ್ರೀಗ ಈಗ ಕಿಶನ್​ ಪ್ಲೇಯಿಂಗ್​ ಇಲೆವೆನ್​ ಸ್ಥಾನವನ್ನೇ ಸೀಲ್​ ಮಾಡಿಕೊಂಡಿದ್ದಾರೆ. ಕಿವೀಸ್​ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಚಚ್ಚಿದ ಸೆಂಚುರಿ ಇನ್ನಿಂಗ್ಸ್​ ನೋಡಿದ​​ ಎಲ್ಲರೂ ಗಪ್​ಚುಪ್​ ಆಗಿದ್ದಾರೆ. ಕಮ್​ಬ್ಯಾಕ್​ ಮಾಡಿದ ಸರಣಿಯಲ್ಲಿ ಆಡಿದ 4 ಇನ್ನಿಂಗ್ಸ್​ಗಳಲ್ಲೇ 53.75ರ ಸರಾಸರಿ, 231.18ರ ಸ್ಪೋಟಕ ಸ್ಟ್ರೈಕ್​ರೇಟ್​​ನಲ್ಲಿ 215 ರನ್​ಗಳಿಸಿದ ಇಶಾನ್​ ಕಿಶನ್​, ತಮ್ಮ ಸ್ಥಾನವನ್ನ ಕಬ್ಜಾ ಮಾಡಿದ್ದಾರೆ.
ಈ ಸೀಸನ್​ನಲ್ಲಿ ದೇಶಿ ಕ್ರಿಕೆಟ್​ನಲ್ಲೂ ಕಿಶನ್​ ರನ್​ ಹೊಳೆ ಹರಿಸಿದ್ದಾರೆ. ಟಿ20 ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿಜಯ್​ ಹಜಾರೆ ಟೂರ್ನಿಯಲ್ಲಿ ಆಡಿದ್ದ ಇಶಾನ್ ಕಿಶನ್ ಸಿಡಿಲಬ್ಬರದ ಶತಕ ಸಿಡಿಸಿದ್ರು. ಕೇವಲ 33 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಕಿಶನ್ ಘರ್ಜಿಸಿದ್ರು. 7 ಬೌಂಡರಿ 14 ಸಿಕ್ಸರ್ ಸಹಿತ ಒಟ್ಟು 125 ರನ್​ಗಳಿಸಿದ ಕಿಶನ್​, ಬರೋಬ್ಬರಿ 321ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ರು.
ಇದನ್ನೂ ಓದಿ: ಟಿ-20 ವಿಶ್ವಕಪ್​! ಎದುರಾಳಿಗಳಿಗೆ ನಡುಕ ಹುಟ್ಟಿಸಿದ ಏಕೈಕ ಆಟಗಾರ ಈತ..!
/filters:format(webp)/newsfirstlive-kannada/media/media_files/2025/12/25/ishan-kishan-2-2025-12-25-15-30-02.jpg)
ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲೀ ಕಿಶನ್​ ಬ್ಯಾಟ್​ ಸಖತ್​ ಸೌಂಡ್​ ಮಾಡಿತ್ತು. ಡಿಸೆಂಬರ್ 18ರಂದು ಪುಣೆಯಲ್ಲಿ ನಡೆದ ಫೈನಲ್​ ಪಂದ್ಯದಲ್ಲಂತೂ ಇಶಾನ್ ಕಿಶನ್, 45 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಹರಿಯಾಣದ ಬಲಿಷ್ಟ ಬೌಲಿಂಗ್ ಅಟ್ಯಾಕ್​ ಅನ್ನ ಚಿಟಿಕೆ ಹೊಡೆಯೋದ್ರಲ್ಲಿ ಧೂಳಿಪಟ ಮಾಡಿದ ಇಶಾನ್ ಕಿಶನ್ 10 ಮೆಗಾ ಸಿಕ್ಸರ್ ಮತ್ತು 6 ಬೌಂಡರಿಗಳನ್ನ ಬಾರಿಸಿದ್ರು. ಮುಷ್ತಾಕ್​ ಅಲಿಯಲ್ಲಿ ಆಡಿದ ಅತ್ಯಮೋಘ ಆಟದಿಂದಲೇ ಟಿ20 ವಿಶ್ವಕಪ್​ ತಂಡಕ್ಕೆ ಎಂಟ್ರಿ ಕೊಟ್ಟಿದ್ರು.
ಅಶಿಸ್ತಿನ ವರ್ತನೆಗೆ ಬಿಸಿಸಿಐ ಬಾಸ್​​ಗಳು ಕೆಂಡ
ಡಿಸೆಂಬರ್ 23, 2023ರಂದು ಇಶಾನ್ ಕಿಶನ್ ಮೆಂಟಲ್ ಹೆಲ್ತ್ ಸಮಸ್ಯೆ ಅಂತ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದರು. ಕಿಶನ್ ತಂಡದ ಪ್ಲಾನ್ಸ್​ನಲ್ಲಿದ್ರೂ ಅದ್ಯಾಕೆ ಇಂತಹ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ. ಕಿಶನ್ ನಡುವಳಿಕೆಯನ್ನ ಪ್ರಶ್ನಿಸಿದ್ದ ಬಿಸಿಸಿಐ ಅಶಸ್ತಿನ ಆಧಾರದ ಮೇಲೆ ರಾಷ್ಟ್ರೀಯ ತಂಡದಿಂದ ದೂರವಿಟ್ಟಿತ್ತು. ಬಳಿಕ ಟೆಸ್ಟ್, ಏಕದಿನ ತಂಡದಿಂದ ಡ್ರಾಪ್ ಮಾಡಲಾಗಿತ್ತು. ಜೊತೆಗೆ ಬಿಸಿಸಿಐ ಕಾಂಟ್ರ್ಯಾಕ್ಟ್​ನಿಂದಲೂ ಕಿಶನ್​ಗೆ ಕೊಕ್​ ಕೊಡಲಾಗಿತ್ತು.
ಟೀಮ್​ ಇಂಡಿಯಾ ಸ್ಥಾನ ಕಳೆದುಕೊಂಡ ಬಳಿಕ ನಿರಂತವಾಗಿ ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ದ ಇಶಾನ್ ಕಿಶನ್, ಮತ್ತೆ ತನ್ನ ಸಾಮರ್ಥ್ಯ ತೋರಿಸಿ ಗ್ರೇಟ್​ ಕಮ್​ಬ್ಯಾಕ್ ಮಾಡಿದ್ದಾರೆ. ಇಶಾನ್ ಕಿಶನ್ ಒಬ್ಬ ಅಪ್ರತಿಮ ಕ್ರಿಕೆಟಿಗ. ಧೈರ್ಯ ಮತ್ತು ಆತ್ಮವಿಶ್ವಾಸವೇ ಇಶಾನ್ ಕಿಶನ್, ಸಕ್ಸಸ್ ಫಾರ್ಮುಲಾ. ಪವರ್ ಹಿಟ್ಟಿಂಗ್ ಮತ್ತು ಸ್ಟ್ರಾಂಗ್ ವ್ರಿಸ್ಟ್, ಈತನ ಸ್ಟ್ರೆಂಥ್. ಈ ಫಿಯರ್​ಲೆಸ್ ಕ್ರಿಕೆಟರ್ ಕಿಶನ್ ಕಮ್​ಬ್ಯಾಕ್, ಇತಿಹಾಸ ಪುಟಗಳಲ್ಲಿ ಸೇರೋದ್ರಲ್ಲಿ, ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ಜನಪದ ಅಂದರೆ ಜನಪರ! ಮಣ್ಣಿನ ಗುಣ, ಇತಿಹಾಸ ಪ್ರತಿಬಿಂಬಿಸುವ ಕನ್ನಡಿಗಳು-ಕೆ.ವಿ.ಪ್ರಭಾಕರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us