/newsfirstlive-kannada/media/media_files/2025/10/31/cm_cup_2026-2025-10-31-14-14-53.jpg)
ಬೆಂಗಳೂರು: 2026ರ ಕ್ರಿಕೆಟ್​ ಹಾಗೂ ಬ್ಯಾಡ್ಮಿಂಟನ್​ ಟೂರ್ನಿ CM ಕಪ್​ನ ಲೋಗೋ ಅನಾವರಣಗೊಂಡಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಲೋಗೋ ಅನಾವರಣಗೊಳಿಸಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ, ಚಲನಚಿತ್ರ ಹಾಗೂ ವೈದ್ಯಕೀಯ ರಂಗದವರಿಗಾಗಿ '9' ಡ್ರೀಮ್ಸ್ ಸಂಸ್ಥೆ ಈ ಟೂರ್ನಿಯನ್ನ ಆಯೋಜಿಸುತ್ತಿದೆ. ಜನವರಿಯ ಬಳಿಕ ಟೂರ್ನಿ ನಡೆಯಲಿದ್ದು ಬ್ಯಾಡ್ಮಿಂಟನ್ ಟೂರ್ನಿ​ ಬೆಂಗಳೂರಿನಲ್ಲಿ ಹಾಗೂ ಕ್ರಿಕೆಟ್​ ಟೂರ್ನಿ ಮೈಸೂರಿನಲ್ಲಿ ಆಯೋಜನೆಗೊಳ್ಳಲಿದೆ.
ಇದನ್ನೂ ಓದಿ: ಮತ್ತೆ ಟಾಸ್ ಸೋತ ಸೂರ್ಯಕುಮಾರ್​.. ಪ್ಲೇಯಿಂಗ್- 11ನಲ್ಲಿ ಯಾರ್​ ಯಾರಿಗೆ ಸ್ಥಾನ?
/filters:format(webp)/newsfirstlive-kannada/media/media_files/2025/08/17/kv_prabhakar-2025-08-17-18-44-09.jpg)
ಸಚಿವ ಜಮೀರ್ ಅಹಮದ್ ಖಾನ್ ಮಾಧ್ಯಮ ಸಲಹೆಗಾರ ಲಕ್ಷ್ಮೀ ನಾರಾಯಣ್, ಪ್ರೆಸ್ ಕ್ಲಬ್ ಕಾರ್ಯದರ್ಶಿ-ರಾಜ್ಯ ಖೋ ಖೋ ಸಂಘದ ಉಪಾಧ್ಯಕ್ಷ ಜಿ.ವೈ ಮಂಜುನಾಥ್, ನಟಿ ಜಯಶ್ರೀ, ಡ್ಯಾನ್ಸ್ ಮಾಸ್ಟರ್ ಚಂದ್ರ ಮಯೂರ್, ಕಲಾವಿದರಾದ ಅಲಕಾನಂದ, ಕ್ರೀಡಾ ತರಬೇತುದಾರ ಆಶಿಕ್ ಈ ವೇಳೆ ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us