ಕ್ರಿಕೆಟರ್ಸ್​ಗೆ ಲಕ್ಕಿ ಹ್ಯಾಂಡ್ ಅಂದ್ರೆ ಈ ಕೋಚ್​.. ಹಲವರ ಹಣೆಬರಹನೇ ಬದಲಿಸಿದ ಮುಂಬೈ ಮಾಸ್ಟರ್​​!

ಟೀಮ್​ ಇಂಡಿಯಾದ ದ್ರಾವಿಡ್​​, ರವಿಶಾಸ್ತ್ರಿ, ಹಾಲಿ ಹೆಡ್​​ಕೋಚ್​ ಗೌತಮ್​ ಗಂಭೀರ್​. ಭಾರತೀಯ ಕ್ರಿಕೆಟ್​ ಲೋಕದ ಸಕ್ಸಸ್​​ಫುಲ್​ ಕೋಚ್​ಗಳು ಅಂದ್ರೆ ಇವರ ಹೆಸರುಗಳು ನೆನಪಾಗುತ್ತವೆ. ಆದರೆ, ಇವರ ಹೊರತಾಗಿ ಯಶಸ್ಸು ಕಂಡ ಹಲವು ಕೋಚ್​​ಗಳಿದ್ದಾರೆ. ಅದರಲ್ಲಿ ಈ ಕೋಚ್​ಗೆ ಸಕ್ಸಸ್​ಗೆ ತಕ್ಕಂತೆ ಹೆಸರು ಬಂದಿಲ್ಲ.

author-image
Bhimappa
ROHIT_SHARMA
Advertisment

ರಾಹುಲ್​ ದ್ರಾವಿಡ್​​, ರವಿ ಶಾಸ್ತ್ರಿ, ಟೀಮ್​ ಇಂಡಿಯಾದ ಹಾಲಿ ಹೆಡ್​​ಕೋಚ್​ ಗೌತಮ್​ ಗಂಭೀರ್​. ಭಾರತೀಯ ಕ್ರಿಕೆಟ್​ ಲೋಕದ ಸಕ್ಸಸ್​​ಫುಲ್​ ಕೋಚ್​ಗಳು ಅಂದ್ರೆ ಇವರ ಹೆಸರು ನೆನಪಾಗುತ್ತೆ. ಆದ್ರೆ, ಇವ್ರ ಹೊರತಾಗಿ ಯಶಸ್ಸು ಕಂಡ ಹಲವು ಕೋಚ್​​ಗಳಿದ್ದಾರೆ. ಆದ್ರೆ, ಸಕ್ಸಸ್​ಗೆ ತಕ್ಕಂತೆ ಹೆಸರು ಬಂದಿಲ್ಲ. ಇವರ ಪೈಕಿ ಒಬ್ಬರು ಅಭಿಷೇಕ್​ ನಾಯರ್​. ಆಟಗಾರರ ಪಾಲಿನ ಲಕ್ಕಿ ಹ್ಯಾಂಡ್​​ ಅಂದರೆ ಅದು ಅಭಿಷೇಕ್​ ನಾಯರ್. 

ಆಟಗಾರರ ಪಾಲಿನ ‘ಲಕ್ಕಿ ಹ್ಯಾಂಡ್’​​ ಅಭಿಷೇಕ್​ ನಾಯರ್​.!

ಟೀಮ್​ ಇಂಡಿಯಾದ ಮಾಜಿ ಅಸಿಸ್ಟೆಂಟ್​​ ಕೋಚ್​ ಅಭಿಷೇಕ್​​ ನಾಯರ್​​​, ಕ್ರಿಕೆಟಿಗರ ಪಾಲಿನ ಲಕ್ಕಿ ಹ್ಯಾಂಡ್​. ಹೀಗಾಗಿಯೇ ಏಕದಿನ ಭವಿಷ್ಯದ ಬಗ್ಗೆ ಚರ್ಚೆ ನಡೀತಾ ಇರೋ ಸಂದರ್ಭದಲ್ಲಿ ಟೀಮ್​ ಇಂಡಿಯಾ ಕ್ಯಾಪ್ಟನ್​​ ರೋಹಿತ್ ಶರ್ಮಾ ಮತ್ತೆ ಅಭಿಷೇಕ್​ ನಾಯರ್​ ಮೊರೆ ಹೋಗಿದ್ದಾರೆ. ರಿಲ್ಯಾಕ್ಸ್​​ ಮೂಡ್​​ನಿಂದ ಹೊರಬಂದಿರೋ ರೋಹಿತ್​, ಅಭಿಷೇಕ್​​ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. 

KL_RAHUL_ROHIT_KOHLI

ಸಂಕಷ್ಟಕ್ಕೆ ಸಿಲುಕಿದ್ದ ರೋಹಿತ್​ ಕರಿಯರ್​ಗೆ ಮರುಜೀವ.!

ಫಿಟ್​​ನೆಸ್​​ ಹಾಗೂ ಫಾರ್ಮ್​ ಕಾರಣದಿಂದಾಗಿ 2011ರ ಏಕದಿನ ವಿಶ್ವಕಪ್​ನಿಂದಲೇ ರೋಹಿತ್​ ಶರ್ಮಾಗೆ ಕೊಕ್​ ನೀಡಿದ್ದು ಕಥೆ ನಿಮಗೆ ಗೊತ್ತೆಯಿದೆ. ಆಗ ರೋಹಿತ್​ ಕರಿಯರ್​​ ಸಂಕಷ್ಟಕ್ಕೆ ಸಿಲುಕಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ​ ನೆರವಿಗೆ ಬಂದಿದ್ದು ಇದೇ ಅಭಿಷೇಕ್​ ನಾಯರ್​. ರೋಹಿತ್​ ಫಿಟ್​​ನೆಸ್​​, ಮೆಂಟಲ್​ ಸ್ಟ್ರೆಂಥ್​, ಬ್ಯಾಟಿಂಗ್​ ಟೆಕ್ನಿಕ್​ ಮೇಲೆ ಅಭಿಷೇಕ್​ ನಾಯರ್​ ವರ್ಕೌಟ್​ ಮಾಡಿದ್ರು. ಕಠಿಣ ಅಭ್ಯಾಸದ ಬಳಿಕ ಕಮ್​ಬ್ಯಾಕ್​ ಮಾಡಿದ ರೋಹಿತ್​, ಹಿಟ್​​ಮ್ಯಾನ್​ ಆಗಿ ಕ್ರಿಕೆಟ್​​ ಲೋಕವನ್ನೇ ಆಳಿದ್ರು. 

ಈ ಸೀಸನ್​ನ ಐಪಿಎಲ್​ನಲ್ಲೂ ಅಷ್ಟೇ.. ಆರಂಭಿಕ 6 ಪಂದ್ಯದಿಂದ ರೋಹಿತ್​ ಕೇವಲ 82 ರನ್​ಗಳಿಸಿದ್ದರು. ಸತತ ವೈಫಲ್ಯ ಕಂಡ ರೋಹಿತ್​ ಐಪಿಎಲ್​​ ಮಧ್ಯೆ ನಾಯರ್​ ಸಹಾಯ ಕೋರಿದ್ದರು. ರೋಹಿತ್ ಶರ್ಮಾರ ವೀಕ್​​ನೆಸ್​ ಮೇಲೆ ಅಭಿಷೇಕ್ ನಾಯರ್​ ವರ್ಕೌಟ್​ ಮಾಡಿದರು. ಬ್ಯಾಟಿಂಗ್​ನಲ್ಲಿ ಕೆಲ ಬದಲಾವಣೆ ಮಾಡಿಕೊಂಡ ರೋಹಿತ್​​ ಸೆಕೆಂಡ್​ ಹಾಫ್​​ನಲ್ಲಿ ಅಬ್ಬರಿಸಿದ್ದರು. 

ಕೆ.ಎಲ್​ ರಾಹುಲ್​ ಸಕ್ಸಸ್​ ಹಿಂದೆ ಅಭಿಷೇಕ್ ನಾಯರ್

ಟಿ20 ಫಾರ್ಮೆಟ್​​ನಲ್ಲಿ ಸ್ಟ್ರಗಲ್​ ಮಾಡ್ತಿದ್ದ ಕೆ.ಎಲ್​ ರಾಹುಲ್​ ಈ ಬಾರಿಯ ಐಪಿಎಲ್​ನಲ್ಲಿ ಬೊಂಬಾಟ್​ ಆಟವಾಡಿದ್ರು. ಇದ್ರ ಹಿಂದಿನ ರೀಸನ್​ ಕೂಡ​ ನಾಯರ್​. ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದ ರಾಹುಲ್​, ಮುಂಬೈನಲ್ಲಿ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದರು. ಭರ್ಜರಿ ಸಿದ್ಧತೆಯೊಂದಿಗೆ ಕಣಕ್ಕಿಳಿದ ರಾಹುಲ್​ ಅದ್ಭುತ ಆಟವಾಡಿದ್ರು. 

ಫಿನಿಶ್​ ಆಗಿದ್ದ ಕಾರ್ತಿಕ್​​​​ನ ಫಿನಿಶರ್​ ಮಾಡಿದ ನಾಯರ್​.!

ರನ್​ಗಳಿಕೆಗೆ ಪರದಾಟ ನಡೆಸಿದ್ದ ದಿನೇಶ್​​ ಕಾರ್ತಿಕ್​ ಕರಿಯರ್ ಯಾವಾಗ್ಲೋ​ ಫಿನಿಷ್​ ಆಗಿತ್ತು. ಆದ್ರೆ, ಫಿನಿಷರ್​ ಅವತಾರ ಎತ್ತಿ ಡಿಕೆ ಬಾಸ್​​​ 2.0 ದರ್ಶನ ನೀಡಿದ್ರು. ಫಾರ್ಮ್​ ಸಮಸ್ಯೆ ಎದುರಿಸಿದ್ದ ಕಾರ್ತಿಕ್​, ಅಭಿಷೇಕ್​ ನಾಯರ್​​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಬಳಿಕ ಹೊಸ ಅವತಾರದಲ್ಲಿ ಮಿಂಚಿದರು. ಕೊನೆಯ 2 ಐಪಿಎಲ್​ ಸೀಸನ್​ಗಳಲ್ಲಿ ಆರ್​​ಸಿಬಿ ಪರ ಮ್ಯಾಜಿಕ್​ ಮಾಡಿದರು. 

ರೋಹಿತ್​​ ಶರ್ಮಾ, ಕೆ.ಎಲ್​ ರಾಹುಲ್​, ದಿನೇಶ್​ ಕಾರ್ತಿಕ್​ ಮಾತ್ರವಲ್ಲ, ಅಭಿಷೇಕ್​ ನಾಯರ್​ ಗರಡಿಯಲ್ಲಿ ಪಳಗಿದ ಮೇಲೆ ಹಲವು ಆಟಗಾರರ ಕರಿಯರ್​ ಬದಲಾಗಿದೆ. ಶ್ರೇಯಸ್​​ ಅಯ್ಯರ್​, ಶುಭ್​ಮನ್​ ಗಿಲ್​, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​​​, ವರುಣ್​ ಚಕ್ರವರ್ತಿ ಇವರೆಲ್ಲರೂ ಅಭಿಶೇಕ್​ ನಾಯರ್​ ಮಾರ್ಗದರ್ಶನ ಪಡೆದ ಬಳಿಕ ಬಿಗ್​​ ಸಕ್ಸಸ್​ ಕಂಡವರು.

ಇದನ್ನೂ ಓದಿ: ಪಾಕ್ ಜೊತೆ ಭಾರತ ಕ್ರಿಕೆಟ್ ಆಡಬಾರದು.. ರಕ್ತ, ನೀರು ಒಟ್ಟಿಗೆ ಹರಿಯಲ್ಲ, ದೇಶ ಮೊದಲು- ಮಾಜಿ ಆಟಗಾರ!

abhishek_nayar

ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ಹೊರಬಿದ್ದ​ ನಾಯರ್

ಅಭಿಷೇಕ್​ ನಾಯರ್​​ ಕೋಚಿಂಗ್​ ಜರ್ನಿ ಶುರುವಾಗಿದ್ದು ಕೊಲ್ಕತ್ತಾ ನೈಟ್​​ ರೈಡರ್ಸ್​​​ನೊಂದಿಗೆ. ಅಸಿಸ್ಟೆಂಟ್​ ಕೋಚ್​ ಆಗಿ ಕೆಕೆಆರ್​​ ತಂಡ ಸೇರಿದ ಅಭಿಷೇಕ್​ ನಾಯರ್​, ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಆದ ಬಳಿಕ ಭಾರತ ತಂಡದ ಅಸಿಸ್ಟೆಂಟ್​ ಕೋಚ್​ ಆದ್ರು. ಆದ್ರೆ, ಚಾಂಪಿಯನ್ಸ್​ ಟ್ರೋಫಿ ಅಂತ್ಯದ ಬೆನ್ನಲ್ಲೇ ಟೀಮ್​ ಇಂಡಿಯಾದಿಂದ ಹೊರ ಬಿದ್ದ ಅಭಿಷೇಕ್​ ನಾಯರ್​​, ಮತ್ತೆ  ಕೆಕೆಆರ್​ ಸೇರಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಅಭಿಷೇಕ್​ ನಾಯರ್​ ಯುಪಿ ವಾರಿಯರ್ಸ್​ ಮಹಿಳಾ ತಂಡ ಹೆಡ್​ಕೋಚ್​ ಆಗಿ ನೇಮಕವಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಆಟಗಾರರ ಕರಿಯರ್​​ಗೆ ಪುನರ್ಜನ್ಮ ನೀಡಿದಂತೆ, ಮುಂಬೈ ಮಾಸ್ಟರ್​ WPLನ ಆರಂಭಿಕ ಸೀಸನ್​ನಿಂದ ಪರದಾಡ್ತಿರೋ ಯುಪಿ ವಾರಿಯರ್ಸ್​ಗೆ ಸಕ್ಸಸ್​ ತಂದುಕೊಡ್ತಾರಾ? ಎಂದು ಕಾದು ನೋಡಬೇಕು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

cricket players
Advertisment