ಸೂಪರ್​ ಸಂಡೆಯ ಮಹಾ ಕದನಕ್ಕೆ ಕೌಂಟ್​​ಡೌನ್​.. ಈ 6 ಪವರ್ ಹಿಟ್ಟರ್​​ಗಳ ಬಗ್ಗೆ ಗೊತ್ತಾ ನಿಮ್ಗೆ..?

ವಿಶ್ವಕಪ್​ ಟೂರ್ನಿಯಲ್ಲಿಂದು ನಡೀತಾ ಇರೋ ಬಿಗ್​ ಹಿಟ್ಟರ್ಸ್​ ಬ್ಯಾಟಲ್​. ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಇವತ್ತು ನಮೋ ಮೈದಾನದಲ್ಲಿ ಸುರಿಯಲಿದೆ. ಭಾರತ, ಸೌತ್​ ಆಫ್ರಿಕಾ ಎರಡೂ ತಂಡಗಳಲ್ಲಿ ಸ್ಪೋಟಕ ಬ್ಯಾಟರ್​ಗಳ ದಂಡೇ ಇದ್ದು, ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಮನರಂಜನೆ ಪಕ್ಕಾ.

author-image
Ganesh Kerekuli
shivam dube
Advertisment
  • ಅಹ್ಮದಾಬಾದ್​ನಲ್ಲಿಂದು ಪವರ್​​ ಹಿಟ್ಟರ್ಸ್​ ಬ್ಯಾಟಲ್​
  • 2 ತಂಡಗಳಲ್ಲಿ ಡೆಡ್ಲಿ & ಡೇಂಜರಸ್​ ಬ್ಯಾಟರ್ಸ್​ ದಂಡು
  • ಬೌಂಡರಿ, ಸಿಕ್ಸರ್​ ಮಳೆ ಸುರಿಸೋಕೆ ಬ್ಯಾಟರ್ಸ್ ರೆಡಿ

ವಿಶ್ವಕಪ್​ ಟೂರ್ನಿಯಲ್ಲಿಂದು ನಡೀತಾ ಇರೋ ಬಿಗ್​ ಹಿಟ್ಟರ್ಸ್​ ಬ್ಯಾಟಲ್​. ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಇವತ್ತು ನಮೋ ಮೈದಾನದಲ್ಲಿ ಸುರಿಯಲಿದೆ. ಭಾರತ, ಸೌತ್​ ಆಫ್ರಿಕಾ ಎರಡೂ ತಂಡಗಳಲ್ಲಿ ಸ್ಪೋಟಕ ಬ್ಯಾಟರ್​ಗಳ ದಂಡೇ ಇದ್ದು, ಫ್ಯಾನ್ಸ್​ಗೆ ಫುಲ್​ ಮೀಲ್ಸ್​ ಮನರಂಜನೆ ಪಕ್ಕಾ. 

ಇಂಡೋ-ಆಫ್ರಿಕಾ ಬಿಗ್ ಬ್ಯಾಟಲ್​ಗೆ ಕೆಲವೇ ಗಂಟೆಗಳು ಬಾಕಿ. ಸೂಪರ್​ ಸಂಡೆಯ ಮಹಾ ಕದನದಲ್ಲಿ ಫ್ಯಾನ್ಸ್​ಗೆ ಫುಲ್​ ಮೀಲ್ಸ್​​ ಎಂಟರ್​​ಟೈನ್​ಮೆಂಟ್​. ಇವತ್ತಿನ ಕದನದಲ್ಲಿ ಬ್ಯಾಟಲ್​ ನಡೀತಾ ಇರೋದು ಬಿಗ್​ ಹಿಟ್ಟರ್ಸ್​ಗಳ ನಡುವೆ. ಭಾರತ, ಸೌತ್​ ಆಫ್ರಿಕಾ ಎರಡೂ ತಂಡಗಳಲ್ಲಿ ಡೆಡ್ಲಿ & ಡೇಂಜರ್ಸ್​ ಬ್ಯಾಟರ್ಸ್​ಗಳ ದಂಡೇ ಇದೆ. ಅಹ್ಮದಾಬಾದ್​ನ ನಮೋ ಅಂಗಳದಲ್ಲಿ ಇಂದು ರನ್​ ಹೊಳೆಯೇ ಹರಿಯಲಿದೆ. ಕಳೆದ ಟಿ20 ವಿಶ್ವಕಪ್​ ನಂತರದ ಒಬ್ಬೊಬ್ಬ ಬ್ಯಾಟರ್​​ ಸ್ಟ್ರೈಕ್​ ರೇಟ್​​ ಬೌಂಡರಿ, ಸಿಕ್ಸರ್​ ಸುರಿಮಳೆಯ ಕಥೆ ಹೇಳ್ತಿದೆ. 

ನಂಬರ್​.1: ಇಶಾನ್​ ಕಿಶನ್​

2 ವರ್ಷಗಳ ಬಳಿಕ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿರೋ ಇಶಾನ್​ ಕಿಶನ್ ನೆಕ್ಸ್ಟ್​ ಲೆವೆಲ್​ ಬ್ಯಾಟಿಂಗ್​ ನಡೆಸ್ತಾ ಇದ್ದಾರೆ. ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅನ್ನೋ ಡೈಲಾಗ್​ಗೆ ತಕ್ಕಂತೆ ನೋವು, ಅವಮಾನಗಳನ್ನ ಮೆಟ್ಟಿನಿಂತ ಇಶಾನ್​ ಕಿಶನ್​ ಬೌಲರ್​ಗಳನ್ನ ಉಡೀಸ್​​ ಮಾಡ್ತಿದ್ದಾರೆ. ವಿಶ್ವಕಪ್​ನಂತಾ ಬಿಗ್​ ಸ್ಟೇಜ್​ನಲ್ಲೂ ಕಿಂಚಿತ್ತೂ ಒತ್ತಡಕ್ಕೆ ಒಳಗಾಗದೇ ಫಿಯರ್​ಲೆಸ್​​ ಬ್ಯಾಟಿಂಗ್​ ನಡೆಸ್ತಿರೋ ಇಶಾನ್​ ಕಿಶನ್​ ಇಂದಿನ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​.! 217.2ರ ಸ್ಟ್ರೈಕ್​ರೇಟ್​ ಹೊಂದಿರೋ ಕಿಶನ್​, ರನ್​ ಹೊಳೆ ಹರಿಸೋಕೆ ರೆಡಿಯಾಗಿ ನಿಂತಿದ್ದಾರೆ.  

ನಂಬರ್​.2: ಅಭಿಷೇಕ್ ಶರ್ಮಾ 

0,0,0.. ಸತತ ಮೂರು ಡಕೌಟ್​.. ಟೀಮ್ ಇಂಡಿಯಾ ಓಪನರ್​ ಅಭಿಷೇಕ್ ಶರ್ಮಾ ಅಸಲಿ ಅವತಾರ ಇನ್ನೂ ವಿಶ್ವಕಪ್​ನಲ್ಲಿ ಇನ್ನೂ ಆಗಿಲ್ಲ. ಲೀಗ್​ ಸ್ಟೇಜ್​ನಲ್ಲಿ ಮೂರೂ ಮ್ಯಾಚ್​ನಲ್ಲಿ ಸೊನ್ನೆ ಸುತ್ತಿರೋ ಅಭಿಷೇಕ್​ ಶರ್ಮಾ ಸೂಪರ್​-8ನಲ್ಲಿ ಸೂಪರ್​ ಹಿಟ್​​ ಪರ್ಫಾಮೆನ್ಸ್​ ನೀಡೋಕೆ ಸಜ್ಜಾಗಿದ್ದಾರೆ. ರನ್​ಗಳಿಕೆಗೆ ಅಭಿಷೇಕ್ ಪರದಾಡ್ತಿದ್ರೂ, ಫ್ಯಾನ್ಸ್​ ನಂಬಿಕೆ ಕಡಿಮೆಯಾಗಿಲ್ಲ. 192+ ಸ್ಟ್ರೇಕ್​ರೇಟ್​ ಹೊಂದಿರೋ ಅಭಿ, ಇವತ್ತು ಸೌತ್​ ಆಫ್ರಿಕಾ ಬೌಲಿಂಗ್​ ಲೈನ್​ ಅಪ್​​​ನ ಷೇಕ್​ ಮಾಡ್ತಾರೆ ಅನ್ನೋ ಅಪಾರ ನಿರೀಕ್ಷೆ​ ಫ್ಯಾನ್ಸ್​ ವಲಯದಲ್ಲಿದೆ. 

ನಂಬರ್​.3: ಶಿವಂ ದುಬೆ

ಸೈಲೆಂಟ್​ ಕಿಲ್ಲರ್​ ಶಿವಂ ದುಬೆ ಕಳೆದ ಪಂದ್ಯದಲ್ಲಿ ತನ್ನ ಅಸಲಿ ಬ್ಯಾಟಿಂಗ್​ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಂದಿನ ಪಂದ್ಯ ನಡೆಯೋ ಇದೇ ನಮೋ ಮೈದಾನದ ಉದ್ದಗಲಕ್ಕೆ ಚೆಂಡಿನ ದರ್ಶನ ಮಾಡಿಸಿದ್ದ ಶಿವಂ ದುಬೆ ನೆದರ್ಲೆಂಡ್ಸ್​ಗೆ ನರಕ ತೋರಿಸಿದ್ರು. 2024 ಟಿ20 ವಿಶ್ವಕಪ್​ ಬಳಿಕ 176ರ ಸಾಲಿಡ್​ ಸ್ಟ್ರೈಕ್​ರೇಟ್​ನಲ್ಲಿ ಬೌಲರ್​ಗಳ ಚೆಂಡಾಡಿರೋ ದುಬೆ, ಇವತ್ತು ಸೌತ್​ ಆಫ್ರಿಕಾ ಮೇಲೆ ಸವಾರಿ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. 

ನಂಬರ್​.4: ಡೆವಾಲ್ಡ್​ ಬ್ರೆವಿಸ್​

ಸೌತ್​​ ಆಫ್ರಿಕಾ ಪಡೆಯಲ್ಲೂ ಬಿಗ್​ ಹಿಟ್ಟರ್​ಗಳ ದಂಡೇ ಇದೆ. ಲೋವರ್​ ಆರ್ಡರ್​ನಲ್ಲಿ ಬ್ಯಾಟಿಂಗ್​ಗೆ ಬರೋ ಬೇಬಿ ಎಬಿಡಿ ಡೆವಾಲ್ಡ್​ ಬ್ರೆವಿಸ್​​ ಸಲೀಸಾಗಿ ಸಿಕ್ಸರ್​​ ಸಿಡಿಸೋದ್ರಲ್ಲಿ ನಿಸ್ಸೀಮ. 165ರ ಸ್ಟ್ರೈಕ್​​ರೇಟ್​ ಹೊಂದಿರೋ ಬ್ರೆವಿಸ್, ಡೆತ್​ ಓವರ್​ಗಳಲ್ಲಿ ಬೌಲರ್​ಗಳನ್ನ ಬೆಂಡೆತ್ತಿ ರನ್​ ಸುರಿಮಳೆ ಸುರಿಸ್ತಾರೆ. ಈತನ ಸ್ಪೋಟಕ ಆಟಕ್ಕೆ ಸೀನಿಯರ್​ ಬೌಲರ್​ಗಳೂ ಕಂಗಾಲಾದ ಕಥೆಯನ್ನ ಇತಿಹಾಸವೇ ಹೇಳುತ್ತೆ. ಇಂದು ಏನಾಗುತ್ತೆ ಅನ್ನೋದು ಸದ್ಯದ ಕುತೂಹಲ.

ನಂಬರ್​.5: ಕ್ವಿಂಟನ್​ ಡಿ ಕಾಕ್​

ಸೌತ್​ ಆಫ್ರಿಕಾದ​ ಕ್ವಿಂಟನ್​ ಡಿ ಕಾಕ್, ವೈಟ್​ ಬಾಲ್ ಫಾರ್ಮೆಟ್​ನ ಡೇಂಜರಸ್​ ಓಪನರ್​​​. ಪವರ್​ ಪ್ಲೇನಲ್ಲೇ ಎದುರಾಳಿಯ ಮೇಲೆ ಮುಗಿ ಬೀಳೋ ಡಿ ಕಾಕ್​ ಪವರ್​ ಫುಲ್​ ಬ್ಯಾಟಿಂಗ್​ ನಡೆಸ್ತಾರೆ. 170ರ ಸ್ಟ್ರೈಕ್​​ರೇಟ್​ನಲ್ಲಿ ಅಬ್ಬರಿಸಿರೋ ಡಿ ಕಾಕ್, ಆರಂಭದಲ್ಲೇ ಡ್ಯಾಮೆಜ್​ ಮಾಡ್ತಾರೆ. ಇವತ್ತಿನ ಮ್ಯಾಚ್​ನಲ್ಲೂ ಡಿ ಕಾಕ್​ ಡಮಾಲ್ ಡಿಮೀಲ್​ ಇನ್ನಿಂಗ್ಸ್​ ಕಟ್ತಾರೆ ಅನ್ನೋ ಫ್ಯಾನ್ಸ್​ ವಲಯದಲ್ಲಿರೋ ನಿರೀಕ್ಷೆಯಾಗಿದೆ. 

ನಂಬರ್​.6: ಏಡೆನ್ ಮರ್ಕರಮ್

ಸೌತ್​ ಆಫ್ರಿಕನ್​ ಕ್ಯಾಪ್ಟನ್​ ಏಡೆನ್ ಮರ್ಕರಮ್ ಕೂಡ ಸ್ಪೋಟಕ ಬ್ಯಾಟಿಂಗ್​ ನಡೆಸೋದ್ರಲ್ಲಿ ಎತ್ತಿದ ಕೈ. ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ನಡೆಸ್ತಿದ್ರೂ 160+ ಸ್ಟ್ರೇಕ್​​ರೇಟ್​ನ ಮೆಂಟೇನ್​ ಮಾಡಿದ್ದಾರೆ. ಬಿಗ್​ ಸ್ಟೇಜ್​, ಬಿಗ್​ ಮ್ಯಾಚ್​ಗಳಲ್ಲಿ ಯಾವಾಗ್ಲೂ ಪರ್ಫಾಮ್​ ಮಾಡೋದ್ರಿಂದ ಮರ್ಕರಮ್​ ಬ್ಯಾಟ್​ನಿಂದ ಬಿಗ್​ ಇನ್ನಿಂಗ್ಸ್​ ನಿರೀಕ್ಷೆ ಮಾಡಬಹುದು. 

ಇವರಿಷ್ಟೇ ಅಲ್ಲ.. ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ತಿಲಕ್ ವರ್ಮಾ, ರಿಯಾನ್ ರಿಕಲ್ಟನ್​, ಡೇವಿಡ್​ ಮಿಲ್ಲರ್​, ಟ್ರಿಸ್ಟನ್ ಸ್ಟಬ್ಸ್​... ಇಂದಿನ ಪಂದ್ಯದಲ್ಲಿ ಬಿಗ್​ ಹಿಟ್ಟರ್ಸ್​ಗಳ ದಂಡೇ ಅಖಾಡಕ್ಕಿಳಿಯಲಿದೆ. ಈ ಬ್ಯಾಟಲ್​ನಲ್ಲಿ ಯಾರು ಸಕ್ಸಸ್​ ಕಾಣ್ತಾರೆ ಅನ್ನೋದನ್ನ ಕಾದು ನೋಡೋಣ. 

ಇದನ್ನೂ ಓದಿ:ಟಾಟಾ ಪಂಚ್ EV vs ಎಂಜಿ ವಿಂಡ್ಸರ್ EV: ಯಾವುದು ಬೆಸ್ಟ್? ಬಜೆಟ್, ಮೈಲೇಜ್, ಬೆಲೆ ಕಂಪ್ಲೀಟ್ ಡೀಟೇಲ್ಸ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs South Africa T20 world cup
Advertisment