/newsfirstlive-kannada/media/media_files/2026/02/22/new-tata-punch-ev-vs-mg-windsor-ev-2026-02-22-12-34-39.jpg)
ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಈಗ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಮ ವರ್ಗದ ಜನರ ನೆಚ್ಚಿನ ಕಾರು ಟಾಟಾ ಪಂಚ್ ಇವಿ (Tata Punch EV) ಮತ್ತು ಐಷಾರಾಮಿ ಫೀಚರ್ಸ್ ಹೊಂದಿರುವ ಎಂಜಿ ವಿಂಡ್ಸರ್ ಇವಿ (MG Windsor EV) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನೀವೇನಾದರೂ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸುವ ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ಬಜೆಟ್ ಮತ್ತು ಅಗತ್ಯಕ್ಕೆ ತಕ್ಕಂತೆ ಯಾವುದು ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಲೆ ಮತ್ತು ಸೆಗ್ಮೆಂಟ್ (Price Segment)
ನೀವು ಬಜೆಟ್ ಸ್ನೇಹಿ ಕಾರನ್ನು ಹುಡುಕುತ್ತಿದ್ದರೆ ಟಾಟಾ ಪಂಚ್ ಇವಿ ಮೊದಲ ಆಯ್ಕೆಯಾಗಬಹುದು. ಆದರೆ ಸ್ವಲ್ಪ ಹೆಚ್ಚು ಹಣ ಹೂಡಿಕೆ ಮಾಡಿದರೆ ದೊಡ್ಡ ಕಾರು ಬೇಕು ಎನ್ನುವವರಿಗೆ ವಿಂಡ್ಸರ್ ಇವಿ ಲಭ್ಯವಿದೆ.
ಇದನ್ನೂ ಓದಿ: ಒಮ್ಮೆ ಚಾರ್ಜ್ ಮಾಡಿದ್ರೆ ನಿಮ್ಮ EV ಎಷ್ಟು ಕಿಮೀ ಓಡುತ್ತೆ? ಕಾರು, ಬೈಕ್, ಸ್ಕೂಟರ್‌ಗಳ ‘ರೇಂಜ್’ ಕಂಪ್ಲೀಟ್ ಲಿಸ್ಟ್..!
/filters:format(webp)/newsfirstlive-kannada/media/media_files/2026/02/22/new-tata-punch-ev-vs-mg-windsor-ev-3-2026-02-22-12-36-24.jpg)
ಟಾಟಾ ಪಂಚ್ ಇವಿ: ಇದರ ಹೊಸ ಫೇಸ್‌ಲಿಫ್ಟ್ ಆವೃತ್ತಿಯ ಎಕ್ಸ್-ಶೋರೂಂ ಬೆಲೆ 9.69 ಲಕ್ಷ ರೂ. ನಿಂದ ಪ್ರಾರಂಭವಾಗಿ ಟಾಪ್ ಎಂಡ್ ಮಾಡೆಲ್ 12.59 ಲಕ್ಷ ರೂ. ವರೆಗೆ ಇದೆ. ವಿಶೇಷವೆಂದರೆ, 'ಬ್ಯಾಟರಿ ಆಸ್ ಎ ಸರ್ವೀಸ್' (BaaS) ಅಡಿಯಲ್ಲಿ ಕೇವಲ 6.49 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಈ ಕಾರು ಸಿಗಲಿದೆ.
ಎಂಜಿ ವಿಂಡ್ಸರ್ ಇವಿ
ಇದು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬರುತ್ತದೆ. ಬ್ಯಾಟರಿ ಬಾಡಿಗೆ (BaaS) ಆಯ್ಕೆಯೊಂದಿಗೆ ಇದರ ಬೆಲೆ 9.99 ಲಕ್ಷ ರೂ. ನಿಂದ 13.99 ಲಕ್ಷ ರೂ. ವರೆಗೆ ಇದೆ (ಪ್ರತಿ ಕಿಲೋಮೀಟರ್‌ಗೆ 3.5 ರೂ. ಬಾಡಿಗೆ). ಬ್ಯಾಟರಿ ಸಹಿತ ಪೂರ್ಣ ಕಾರು ಬೇಕಿದ್ದರೆ 14 ಲಕ್ಷದಿಂದ 18.50 ಲಕ್ಷ ರೂ. ನೀಡಬೇಕಾಗುತ್ತದೆ.
ಇದನ್ನೂ ಓದಿ: 1993ರಲ್ಲೇ ಮೋಡಿ ಮಾಡಿತ್ತು ‘ಲವ್‌ಬರ್ಡ್’! ದೇಶದ ಮೊದಲ ಎಲೆಕ್ಟ್ರಿಕ್ ಕಾರು ಯಾವ್ದು ಗೊತ್ತಾ?
/filters:format(webp)/newsfirstlive-kannada/media/media_files/2026/02/22/new-tata-punch-ev-vs-mg-windsor-ev-2-2026-02-22-12-36-40.jpg)
ಮೈಲೇಜ್ ಮತ್ತು ಬ್ಯಾಟರಿ ಸಾಮರ್ಥ್ಯ (Range & Battery)
ಟಾಟಾ ಪಂಚ್ ಇವಿ: ಇದರಲ್ಲಿ 30 kWh ಮತ್ತು 40 kWh ಬ್ಯಾಟರಿ ಆಯ್ಕೆಗಳಿವೆ. ಕಂಪನಿ ಪ್ರಕಾರ ಇದು 468 ಕಿ.ಮೀ ರೇಂಜ್ ನೀಡಲಿದ್ದು, ರಿಯಲ್ ವರ್ಲ್ಡ್‌ನಲ್ಲಿ (ನೈಜ ರಸ್ತೆಗಳಲ್ಲಿ) ಸುಮಾರು 355 ಕಿ.ಮೀ ವರೆಗೂ ಚಲಿಸಬಲ್ಲದು.
ಎಂಜಿ ವಿಂಡ್ಸರ್ ಇವಿ
ಇದು ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿದೆ (38 kWh ಮತ್ತು 52.9 kWh). ಇದರ ಗರಿಷ್ಠ ರೇಂಜ್ 449 ಕಿ.ಮೀ ವರೆಗೆ ಇದೆ. ಅಲ್ಲದೆ ಇದರ ಎಲೆಕ್ಟ್ರಿಕ್ ಮೋಟಾರ್ 182.3 ಹಾರ್ಸ್ ಪವರ್ ಮತ್ತು 200 Nm ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.
ಯಾವುದು ಯಾರಿಗೆ ಸೂಕ್ತ?
ಸಿಟಿ ರೈಡ್‌ಗೆ ಪಂಚ್ ಇವಿ ಬೆಸ್ಟ್: ನೀವು ನಗರದ ಟ್ರಾಫಿಕ್‌ನಲ್ಲಿ ಓಡಾಡಲು, ಆಫೀಸ್‌ಗೆ ಹೋಗಿ ಬರಲು ಮತ್ತು ಬಜೆಟ್ ಸ್ನೇಹಿ ಕಾರನ್ನು ಹುಡುಕುತ್ತಿದ್ದರೆ 'ಟಾಟಾ ಪಂಚ್ ಇವಿ' ನಿಮಗೆ ಹೇಳಿ ಮಾಡಿಸಿದ ಹಾಗಿದೆ. ಇದು ಕಾಂಪ್ಯಾಕ್ಟ್ ಆಗಿದ್ದು, ಪಾರ್ಕಿಂಗ್ ಮತ್ತು ಡ್ರೈವಿಂಗ್‌ಗೆ ಸುಲಭ.
/filters:format(webp)/newsfirstlive-kannada/media/media_files/2026/02/22/new-tata-punch-ev-vs-mg-windsor-ev-1-2026-02-22-12-36-53.jpg)
ಫ್ಯಾಮಿಲಿಗೆ ವಿಂಡ್ಸರ್ ಇವಿ
ನೀವು ಐದಾರು ಜನ ಕುಳಿತುಕೊಳ್ಳುವಂತಹ, ಹೆಚ್ಚು ಸ್ಪೇಸ್ ಇರುವ ಮತ್ತು ಲಾಂಗ್ ಡ್ರೈವ್‌ಗೆ ಹೋಗಲು ಕಾರು ಹುಡುಕುತ್ತಿದ್ದರೆ 'ಎಂಜಿ ವಿಂಡ್ಸರ್ ಇವಿ' ಉತ್ತಮ ಆಯ್ಕೆ. ಇದು ಎಸ್‌ಯುವಿ ಮಾದರಿಯಲ್ಲಿದ್ದು, ಕುಟುಂಬದ ಪ್ರಯಾಣಕ್ಕೆ ಹೆಚ್ಚು ಆರಾಮದಾಯಕ. ಕಡಿಮೆ ಬಜೆಟ್ ಮತ್ತು ಸಿಟಿ ಬಳಕೆಗೆ ಟಾಟಾ ಪಂಚ್ ಇವಿ ಗೆದ್ದರೆ, ಪ್ರೀಮಿಯಂ ಅನುಭವ, ಹೆಚ್ಚು ಜಾಗ ಮತ್ತು ಫ್ಯಾಮಿಲಿ ಟ್ರಿಪ್‌ಗಳಿಗೆ ಎಂಜಿ ವಿಂಡ್ಸರ್ ಇವಿ ಸೂಕ್ತವಾಗಿದೆ.
ಇದನ್ನೂ ಓದಿ:2ನೇ ಮದ್ವೆಯಾದ ಶಿಖರ್ ಧವನ್! ಸುದ್ದಿ ಬ್ರೇಕ್ ಮಾಡಿದ ಚಹಾಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us