ಟಿ-20 ವಿಶ್ವಕಪ್ ಆರಂಭದಲ್ಲೇ ಅಭಿಮಾನಿಗಳಿಗೆ ಬೇಸರ..! ಕಾರಣ..?

T20 ವಿಶ್ವಕಪ್​ ಟೂರ್ನಿ ಕಿಕ್​ ಸ್ಟಾರ್ಟ್​ ಆಗಿದೆ. ಪ್ರತಿಷ್ಟಿಯ ಟ್ರೋಫಿ ಗೆಲುವಿಗೆ ತಂಡಗಳು ಜಿದ್ದಿಗೆ ಬಿದ್ದಿವೆ. ಕ್ರಿಕೆಟ್​ ಹಬ್ಬದ ಮೊದಲ ದಿನದಲ್ಲೇ ಫ್ಯಾನ್ಸ್​ಗೆ ಭರ್ಜರಿ​ ಎಂಟರ್​​ಟೈನ್​ಮೆಂಟ್​ ಸಿಕ್ಕಿದೆ. ಆದ್ರೂ ಕೂಡ ಕೆಲ ಅಭಿಮಾನಿಗಳು ಬೇಸರಗೊಂಡಿದ್ದಾರೆ.

author-image
Ganesh Kerekuli
t20 world cup
Advertisment
  • ಫ್ಯಾನ್ಸ್​​ಗೆ ಕಾಡ್ತಿದೆ ಸ್ಟಾರ್​ ಆಟಗಾರರ ಅಲಭ್ಯತೆ
  • ಕಾಂಗರೂ ಪಡೆಯ ಬೌಲಿಂಗ್​ ಅಟ್ಯಾಕ್​ನಲ್ಲಿಲ್ಲ ಧಮ್​
  • ಟೀಮ್​ ಇಂಡಿಯಾಗಿಲ್ಲ ಶುಭ್​ಮನ್ ಗಿಲ್​ ಬಲ

T20 ವಿಶ್ವಕಪ್​ ಟೂರ್ನಿ ಕಿಕ್​ ಸ್ಟಾರ್ಟ್​ ಆಗಿದೆ. ಪ್ರತಿಷ್ಟಿಯ ಟ್ರೋಫಿ ಗೆಲುವಿಗೆ ತಂಡಗಳು ಜಿದ್ದಿಗೆ ಬಿದ್ದಿವೆ. ಕ್ರಿಕೆಟ್​ ಹಬ್ಬದ ಮೊದಲ ದಿನದಲ್ಲೇ ಫ್ಯಾನ್ಸ್​ಗೆ ಭರ್ಜರಿ​ ಎಂಟರ್​​ಟೈನ್​ಮೆಂಟ್​ ಸಿಕ್ಕಿದೆ. ಆದ್ರೂ ಕೂಡ ಕೆಲ ಅಭಿಮಾನಿಗಳು ಬೇಸರಗೊಂಡಿದ್ದಾರೆ. 

ವಿಶ್ವಕಪ್​ ಆರಂಭದಲ್ಲೇ ಅಭಿಮಾನಿಗಳಿಗೆ ಬೇಸರ..!

ಪ್ರತಿಷ್ಟಿತ ಟಿ20 ವಿಶ್ವಕಪ್​ ಟೂರ್ನಿ ಕಿಕ್ ಸ್ಟಾರ್ಟ್​ ಆಗಿದೆ. ಮೊದಲ ದಿನದಾಟದ 3 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ.  ಆದ್ರೂ, ಆರಂಭಿಕ ಹಂತದಲ್ಲೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೆಲ ಆಟಗಾರರ ಅಲಭ್ಯತೆ ಅಭಿಮಾನಿಗಳನ್ನ ಕಾಡಲಾರಂಭಿಸಿದೆ. ಸೂಪರ್​ ಸ್ಟಾರ್​ಗಳನ್ನ ಫ್ಯಾನ್ಸ್​ ಮಿಸ್​ ಮಾಡಿಕೊಳ್ತಿದ್ದಾರೆ. 

ಇದನ್ನೂ ಓದಿ: PUB G ಗೇಮ್ ಆಡುವಾಗ ರಕ್ತದೊತ್ತಡ ಹೆಚ್ಚಾಗಿ ಯುವಕ ಸಾವು : 300 ಕ್ಕೂ ಅಧಿಕ ಮಟ್ಟಕ್ಕೆ ಏರಿದ ರಕ್ತದೊತ್ತಡ!

surya hardik pandya

ಯಾವುದೇ ಐಸಿಸಿ ಟೂರ್ನಿಯಿರಲಿ ಆಸ್ಟ್ರೇಲಿಯಾ ತಂಡವೇ ಅಲ್ಲಿ ಹಾಟ್​ ಫೇವರಿಟ್​ ಅನಿಸಿಕೊಳ್ತಿತ್ತು. ಫ್ಯಾನ್ಸ್​ಗೂ ಕಿಕ್ ಸಿಗ್ತಾ ಇತ್ತು. ಆದ್ರೇ, ಈ ಬಾರಿ ಆಸ್ಟ್ರೇಲಿಯಾ ತಂಡ ಸ್ಟಾರ್​ಗಳ ಅಲಭ್ಯತೆಯಲ್ಲಿ ಬಡವಾಗಿದೆ. ಅದ್ರಲ್ಲೂ ಆಸ್ಟ್ರೇಲಿಯಾ ತಂಡದ ಬೌಲಿಂಗ್​ ವಿಭಾಗದಲ್ಲಂತೂ ಧಮ್ಮೇ ಇಲ್ಲ. ಮಿಚೆಲ್​ ಸ್ಟಾರ್ಕ್​ ರಿಟೈರ್ಡ್​ ಆಗಿದ್ರೆ, ಇಂಜುರಿಗೆ ತುತ್ತಾಗಿರೋ ಜೋಷ್​ ಹೇಜಲ್​ವುಡ್​, ಪ್ಯಾಟ್​ ಕಮಿನ್ಸ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ತ್ರಿಮೂರ್ತಿಗಳಿಲ್ಲದ ಆಸಿಸ್​ ಪಡೆಯಲ್ಲಿ ಸದ್ಯ ಜೋಷೆ ಇಲ್ಲ. 

ವಿರಾಟ್​ ಕೊಹ್ಲಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ ಈ ಬಾರಿಯ ವಿಶ್ವಕಪ್​ ಟೂರ್ನಿಯ ತಂಡದಲ್ಲೇ ಇಲ್ಲ. ಭಾರತದಲ್ಲೇ ವಿಶ್ವಕಪ್​ ಟೂರ್ನಿ ನಡೀತಾ ಇದೆ. ಈ ಟೂರ್ನಿಯಲ್ಲಿ ನೆಕ್ಸ್ಟ್​​ ಕೊಹ್ಲಿ ಅನಿಸಿಕೊಂಡಿದ್ದ ಶುಭ್​ಮನ್​ ಗಿಲ್​ ಆಡ್ತಿಲ್ಲ. ಪಂಜಾಬ್ ಪುತ್ತರ್​​ ಅಲಭ್ಯತೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲ ಕಾಡ್ತಿದೆ. 

ಇದನ್ನೂ ಓದಿ:ನನ್ನ ಸಿದ್ಧಾಂತಕ್ಕೆ ಮ್ಯಾಚ್ ಆಗದಿದ್ರೆ ಮದ್ವೆನೇ ಬೇಡ ಅಂತಿದ್ದೆ -ಮದುವೆ ಬಗ್ಗೆ ಸಂಜನಾ ಬುರ್ಲಿ ಎಕ್ಸ್​ಕ್ಲೂಸೀವ್ ಮಾತು..!

ಸೀನಿಯರ್​ ಆಟಗಾರರನ್ನ ಸೈಡ್​ಲೈನ್​ ಮಾಡಿರೋ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​, ವಿಶ್ವಕಪ್​ ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕಿದೆ. ಈ ಪ್ರಕ್ರಿಯೆಯಲ್ಲಿ ಸಿಡಿಲಬ್ಬದ ಆಟವಾಡ್ತಿದ್ದ ಲಯಾಮ್​ ಲಿವಿಂಗ್​ ಸ್ಟೋನ್​, ಜಾನಿ ಬೇರ್​ಸ್ಟೋರಂತ ಆಟಗಾರರನ್ನ ಡ್ರಾಪ್​ ಮಾಡಿದೆ. ಕ್ರಿಸ್​​ನಲ್ಲಿ ಸೆಟಲ್​ ಆದ್ರೆ, ವಿಧ್ವಂಸ ಸೃಷ್ಠಿಸ್ತಾ ಇದ್ದ ಆಟಗಾರರನ್ನ ಫ್ಯಾನ್ಸ್​ ಮಿಸ್​​ ಮಾಡಿಕೊಳ್ತಿದ್ದಾರೆ. 

ವಿಶ್ವ ಕ್ರಿಕೆಟ್​ನ ಸೂಪರ್​ ಸ್ಟಾರ್​ ಆಟಗಾರರು ರಿಟೈರ್​ಮೆಂಟ್​ ಫ್ಯಾನ್ಸ್​ಗೆ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕ್ರಿಕೆಟ್​ ಲೋಕದ ಕಿಂಗ್ ವಿರಾಟ್​ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಟೀಮ್​ ಇಂಡಿಯಾದ ಇಬ್ಬರೂ ದಿಗ್ಗಜರೂ ಈ ಬಾರಿ ವಿಶ್ವಕಪ್​ ಕಣದಲ್ಲಿಲ್ಲ. ಟಿ20 ಕ್ರಿಕೆಟ್​ನ ರಿಯಲ್​ ಎಂಟರ್​​​ಟೈನರ್ಸ್, ವಿಂಡೀಸ್​ ದೈತ್ಯರಾದ ನಿಕೊಲಸ್​ ಪೂರನ್​, ಆ್ಯಂಡ್ರೆ ರಸೆಲ್​ ಕೂಡ ರಿಟೈರ್​ ಆಗಿದ್ದಾರೆ. ಸೌತ್​ ಆಫ್ರಿಕಾದ ಕಿಲ್ಲರ್​ ಹೆನ್ರಿಚ್​ ಕ್ಲಾಸೆನ್​​ ಕೂಡ ಕಣದಲ್ಲಿಲ್ಲ. ಸ್ಟಾರ್​ ಆಟಗಾರರ ಅಲಭ್ಯತೆಯಿಂದ ಟೂರ್ನಿ ರಂಗು ಕುಂದಿದೆ. 

ಆರಂಭಿಕ ಹಂತದಲ್ಲಿ ಸ್ಟಾರ್​ ಆಟಗಾರರ ಅಲಭ್ಯತೆ ಹಾಗೂ ರಿಟೈರ್​​ಮೆಂಟ್​​ನಿಂದ ಟಿ20 ವಿಶ್ವಕಪ್​ನ ಕ್ರೇಜ್​ ಕಡಿಮೆಯಿದೆ. ಟೂರ್ನಿ ಸಾಗಿದಂತೆ ಯುವ ಆಟಗಾರರು ಭರ್ಜರಿ ಪರ್ಫಾಮೆನ್ಸ್​ ನೀಡಿದ್ರೆ, ವಿಶ್ವಕಪ್​​​ ರಂಗು ಹೆಚ್ಚಲಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಫೈವ್ ಸ್ಟಾರ್ ಹೋಟೇಲ್ ಗಳಲ್ಲೂ ರೂಮುಗಳೇ ಸಿಗುತ್ತಿಲ್ಲ : ರೂಮು ಬಾಡಿಗೆ 4-5 ಲಕ್ಷ ರೂಪಾಯಿಗೆ ಏರಿಕೆ! ಏಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

T20 world cup Rohit Sharma Virat Kohli
Advertisment