ಕನ್ನಡಿಗ ಪಡಿಕ್ಕಲ್​​ಗೆ ಮತ್ತೆ ಅನ್ಯಾಯ.. ಟೀಂ ಇಂಡಿಯಾ ಕಂಬ್ಯಾಕ್ ಕನಸಿ​ಗೆ ಅಗರ್ಕರ್​​ ಕೊಕ್ಕೆ..!

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡುವ ಕನಸು ಕಂಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್​​​ಗೆ ಬಿಸಿಸಿಐ ಅನ್ಯಾಯ ಮಾಡಿದೆ. ಪಡಿಕ್ಕಲ್ ಅವರು ತಂಡಕ್ಕೆ ಕಂಬ್ಯಾಕ್ ಮಾಡುವ ಕನಸು ಕಂಡಿದ್ದರು.

author-image
Ganesh Kerekuli
devdutt padikkal
Advertisment

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ತಂಡಕ್ಕೆ ಮತ್ತೆ ಕಂಬ್ಯಾಕ್ ಮಾಡುವ ಕನಸು ಕಂಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್​​​ಗೆ ಬಿಸಿಸಿಐ ಅನ್ಯಾಯ ಮಾಡಿದೆ. ಪಡಿಕ್ಕಲ್ ಅವರು ತಂಡಕ್ಕೆ ಕಂಬ್ಯಾಕ್ ಮಾಡುವ ಕನಸು ಕಂಡಿದ್ದರು. ಅದರಂತೆ ದೇಸಿಯ ಟೂರ್ನಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದರು. 

ಪಡಿಕ್ಕಲ್​​ಗೆ ಅನ್ಯಾಯ..!

ಪ್ರತಿಷ್ಟಿತ ವಿಜಯ್ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್ ಜಬರ್​ದಸ್ತ್ ಪ್ರದರ್ಶನ ನೀಡಿದ್ದರು. ಜಾರ್ಖಂಡ್​ ವಿರುದ್ಧದ ಮೊದಲ ಪಂದ್ಯದಲ್ಲೇ ಅತ್ಯಾದ್ಭುತ ಶತಕ ಸಿಡಿಸಿದ ಪಡಿಕ್ಕಲ್, ಕೇರಳ ವಿರುದ್ಧವೂ ಶತಕ ಸಿಡಿಸಿ ಮಿಂಚಿದ್ದರು. ಪುದುಚೇರಿ ವಿರುದ್ಧದ ಪಂದ್ಯದಲ್ಲೂ ಪಡಿಕ್ಕಲ್​ ಸೆಂಚುರಿ ಬಾರಿಸಿದ್ದರು. 4 ಪಂದ್ಯಗಳಲ್ಲಿ 3 ಶತಕ ಸಿಡಿಸಿ ವಿಜಯ್ ಹಜಾರೆಯಲ್ಲಿ ರನ್ ಯಾತ್ರೆ ನಡೆಸಿರೋ ಪಡಿಕ್ಕಲ್​, ಸೆಲೆಕ್ಟರ್ಸ್​ ತನ್ನತ್ತ ತಿರುಗುವಂತೆ ಮಾಡಿದ್ದರು. 

ಇದನ್ನೂ ಓದಿ: ರೋಹಿತ್​ -ಕೊಹ್ಲಿ ಕರಿಯನ್​ನ ಕಠಿಣ ವರ್ಷ.. ಏಳು, ಬೀಳಿನ ಮಧ್ಯೆ ಸಾಧಿಸಬೇಕಾಗಿದ್ದು ಏನೇನು?

ಲಿಸ್ಟ್ 'ಎ' ಕ್ರಿಕೆಟ್​ನಲ್ಲಿ ದೇವದತ್ ಪಡಿಕ್ಕಲ್ ಮುಂದೆ, ಸೂಪರ್​ಸ್ಟಾರ್ ಕ್ರಿಕೆಟಿಗರು ಏನೇನು ಇಲ್ಲ. ಕೊಹ್ಲಿ, ರೋಹಿತ್ ಶರ್ಮಾ ಎಲ್ಲರೂ, ಕರ್ನಾಟಕ ಬ್ಯಾಟರ್ ಮುಂದೆ ಸೈಲೆಂಟ್ ಆಗಿತ್ತು. ಆಡಿರೋ 37 ಲಿಸ್ಟ್ 'ಎ' ಪಂದ್ಯಗಳಲ್ಲಿ ಪಡಿಕ್ಕಲ್,​​​​​​​​​​​​​​​​​ 12 ಶತಕ ಮತ್ತು 12 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಡಿಕ್ಕಲ್ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 84 ರನ್ ಆಗಿದೆ.

ವಿಜಯ್ ಹಜಾರೆ ಟೂರ್ನಿಯಲ್ಲಿ ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ, ಪಡಿಕ್ಕಲ್ ಪರಾಕ್ರಮ ನಡೆಸಿದ್ದರು. ವೈಟ್​ಬಾಲ್ ಕ್ರಿಕೆಟ್​ನಲ್ಲಿ ಕನ್ನಡಿಗ ದರ್ಬಾರ್ ನಡೆಸಿದ್ದರು. 50 ಓವರ್ ಫಾರ್ಮೆಟ್ ಮತ್ತು ಟಿ-20 ಫಾರ್ಮೆಟ್​ಗೆ ಪಡಿಕ್ಕಲ್ ಹೇಳಿ ಮಾಡಿಸಿದ ಬ್ಯಾಟರ್. ಸಿಕ್ಕ ಅವಕಾಶಗಳಲ್ಲಿ ಎಡಗೈ ಬ್ಯಾಟರ್ ಮಿಂಚು ಹರಿಸಿದ್ದಾರೆ. ಹೀಗಿದ್ದೂ ಬಿಸಿಸಿಐ ಕಣ್ಣು ತೆರೆಯದೇ ತಂಡವನ್ನು ಪ್ರಕಟಿಸಿದೆ. 

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ODI ಸರಣಿ.. ಬಲಿಷ್ಠ ಟೀಂ ಇಂಡಿಯಾ ಪ್ರಕಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

devdutt padikkal ODI series IND vs NZ
Advertisment