/newsfirstlive-kannada/media/media_files/2026/01/02/kohli-rohit-1-2026-01-02-12-54-42.jpg)
2025 ಈ ಒಂದು ವರ್ಷದಲ್ಲಿ ಟೀಮ್​ ಇಂಡಿಯಾದ ದಿಗ್ಗಜರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅನುಭವಿಸಿದ್ದು ಎಷ್ಟೋ. ವರ್ಷದ ಆರಂಭದಲ್ಲೇ ಕಾಂಗರೂ ನಾಡಲ್ಲಿ ವೈಫಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದ ಈ ಜೋಡಿ, ನಾಟಕೀಯ ಬೆಳವಣಿಗೆಗಳಲ್ಲಿ ಟೆಸ್ಟ್​ ಕ್ರಿಕೆಟ್​​ಗೆ ಗುಡ್​ ಬೈ ಹೇಳಿದ್ರು. ಆ ಬಳಿಕ ಒನ್​ ಡೇ ಫಾರ್ಮೆಟ್​ನಿಂದಲೂ ಇವರಿಗೆ ಗೇಟ್​​ಪಾಸ್​ ನೀಡೋಕೆ ನಡೆದ ವಿಫಲಯತ್ನಗಳು ಸೀಕ್ರೆಟ್​ ಆಗೇನು ಉಳಿದಿಲ್ಲ.
ಎದುರಾದ ಎಲ್ಲಾ ಸವಾಲುಗಳನ್ನ ದಿಟ್ಟವಾಗಿ ಎದುರಿಸಿದ ರೋ-ಕೊ ಜೋಡಿ ಕಥೆ ಮುಗಿಸೋಕೆ ಬಂದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಆನ್ಸರ್​ ಕೊಟ್ರು. ಬಿಸಿಸಿಐ ಬಾಸ್​ಗಳು, ಟೀಮ್​ ಮ್ಯಾನೇಜ್​ಮೆಂಟ್​, ಸೆಲೆಕ್ಟರ್ಸ್​ ಎಲ್ಲರ ಸವಾಲುಗಳನ್ನ ಸ್ವೀಕರಿಸಿದ ಈ ಜೋಡಿ ವಾರ್​ ಫೀಲ್ಡ್​ನಲ್ಲಿ ಖಡಕ್​ ಆನ್ಸರ್​ ಕೊಟ್ಟಿದ್ದಾಯ್ತು. ಅಭೂತಪೂರ್ವ ಯಶಸ್ಸಿನೊಂದಿಗೆ 2025ಕ್ಕೆ ಗುಡ್​ ಬೈ ಹೇಳಿರೋ ಈ ಜೋಡಿಗೆ 2026ರಲ್ಲಿ ಮತ್ತಷ್ಟು ಸವಾಲುಗಳು ಎದುರಾಗಿವೆ.
/filters:format(webp)/newsfirstlive-kannada/media/media_files/2025/11/30/kohli-rohit-2025-11-30-17-27-31.jpg)
ವಿಶ್ವಕಪ್​ ಕನಸು.. ಹೊಸ ವರ್ಷದಲ್ಲಿ ಹೊಸ ಟಾಸ್ಕ್​
ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ ಇವರಿಬ್ಬರ ಸದ್ಯದ ಮಹಾಗುರಿ ಏನಂದ್ರೆ 2027ರ ಏಕದಿನ ವಿಶ್ವಕಪ್​ ಆಡೋದು. ಈ ಒಂದು ಕನಸನ್ನ ನನಸು ಮಾಡಿಕೊಳ್ಳಲು ಪಣ ತೊಟ್ಟಿರೋ ಈ ದಿಗ್ಗಜರು ಸರ್ವವನ್ನೂ ತ್ಯಾಗ ಮಾಡ್ತಿದ್ದಾರೆ. ಸುದೀರ್ಘ ಅಂತರದ ಬಳಿಕ ಡೊಮೆಸ್ಟಿಕ್​ ಕ್ರಿಕೆಟ್​ಗೂ ಮರಳಿ ಬ್ಯಾಟ್​ ಝಳಪಿಸಿದ್ದು, ಇದಕ್ಕೆ ಒಂದು ಎಕ್ಸಾಂಪಲ್​. 2027ರ ಏಕದಿನ ವಿಶ್ವಕಪ್ ಆಡಲು ಪಣತೊಟ್ಟಿರೋ ಇವರಿಬ್ಬರ ಪಾಲಿಗೆ 2026 ಕರಿಯರ್​ನಲ್ಲೇ ಅತ್ಯಂತ ಕಠಿಣ ವರ್ಷ. ಹೊಸ ವರ್ಷದಲ್ಲಿ ಹೊಸ ಟಾಸ್ಕ್​ಗಳು ರೋಹಿತ್​​, ಕೊಹ್ಲಿಗೆ ಕಾದಿವೆ.
ಫಾರ್ಮ್​ ಕಾಯ್ದುಕೊಂಡರಷ್ಟೇ ಕನಸು ಜೀವಂತ
ಸಾಲಿಡ್​​ ಫಾರ್ಮ್​ನೊಂದಿಗೆ ಬ್ಯಾಟ್​ ಬೀಸಿ, ರನ್​ ಹೊಳೆಯನ್ನೇ ಹರಿಸಿ 2025ಕ್ಕೆ ಗುಡ್​ ಬೈ ಹೇಳಿರೋ ರೋ-ಕೊ, 2026ರಲ್ಲೂ ಇದೇ ಆಟವನ್ನ ಮುಂದುವರೆಸಬೇಕಿದೆ. ಸುದೀರ್ಘ ಕಾಲ ಕ್ರಿಕೆಟ್​ ಆಡಿದ ಅನುಭವವಿದ್ರೂ, ಒಂದೇ ಫಾರ್ಮೆಟ್​ಗೆ ಸೀಮಿತವಾಗಿರೋದ್ರಿಂದ ಫಾರ್ಮ್​ ಉಳಿಸಿಕೊಳ್ಳೋದು ಸವಾಲಾಗಲಿದೆ. ಇಡೀ ವರ್ಷದಲ್ಲಿ ಕೆಲವೇ ಕೆಲವು ದಿನ ಮಾತ್ರ ಜೋಡೆತ್ತುಗಳು ಮೈದಾನದಲ್ಲಿ ಇರಲಿದ್ದಾರೆ.
ಇದನ್ನೂ ಓದಿ: ಚುನಾವಣಾ ವ್ಯವಸ್ಥೆ, ಇವಿಎಂ ವಿಶ್ವಾಸಾರ್ಹ ಎಂದ ಕರ್ನಾಟಕದ ಶೇ.83 ರಷ್ಟು ಜನರು: ಚುನಾವಣಾ ಆಯೋಗದ ಸಮೀಕ್ಷೆ
/filters:format(webp)/newsfirstlive-kannada/media/media_files/2025/10/27/kohli-rohit-2025-10-27-18-25-48.jpg)
ಫಿಟ್​ನೆಸ್ ಅಗ್ನಿಪರೀಕ್ಷೆ ಗೆದ್ದರಷ್ಟೇ ಸ್ಥಾನ ಸೇಫ್!​​
ಫಿಟ್​ನೆಸ್​ ವಿಚಾರದಲ್ಲಿ ವಿರಾಟ್​ ಕೊಹ್ಲಿಯನ್ನ ಪ್ರಶ್ನಿಸೋಕೆ ಸಾಧ್ಯವಿಲ್ಲ. ರೋಹಿತ್​ ಶರ್ಮಾ ಈ ವಿಚಾರದಲ್ಲಿ ಸ್ವಲ್ಪ ಹಾರ್ಡ್​ವರ್ಕ್​ ಮಾಡಬೇಕಿದೆ. ಸದ್ಯ ಕಳೆದ 4 ತಿಂಗಳಿಂದ ಸಿಕ್ಕಾಪಟ್ಟೆ ಹಾರ್ಡ್​ವರ್ಕ್​ ಮಾಡಿ ರೋಹಿತ್​ ಶರ್ಮಾ ಸೂಪರ್​ ಫಿಟ್​ ಆಗಿದ್ದಾರೆ. ಇದನ್ನೇ ಮುಂದುವರೆಸಬೇಕಿದೆ. ಬಾಡಿ ಫಿಟ್​ನೆಸ್​ ಜೊತೆಗೆ ಮ್ಯಾಚ್​ ಫಿಟ್​ನೆಸ್​ ಕಾಯ್ದುಕೊಳ್ಳೋದು ಇಬ್ಬರಿಗೂ ಸವಾಲಾಗಲಿದೆ.
2 ಕಠಿಣ ಪ್ರವಾಸ
2026ರಲ್ಲಿ ಟೀಮ್​ ಇಂಡಿಯಾ ಒಟ್ಟು 18 ಏಕದಿನ ಪಂದ್ಯಗಳನ್ನ ಆಡಲಿದೆ. ನ್ಯೂಜಿಲೆಂಡ್​, ಅಫ್ಘಾನಿಸ್ತಾನ, ವೆಸ್ಟ್​ ಇಂಡೀಸ್ ಹಾಗೂ ಶ್ರೀಲಂಕಾ ಎದುರು ತವರಿನಲ್ಲಿ ತಲಾ 3 ಪಂದ್ಯಗಳ ಸರಣಿಯನ್ನಾಡಲಿದೆ. ಜೊತೆಗೆ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ನಲ್ಲೂ 3 ಪಂದ್ಯಗಳ 2 ಸರಣಿಯನ್ನಾಡಲಿದೆ. ಈ ಇಂಗ್ಲೆಂಡ್​ ಹಾಗೂ ನ್ಯೂಜಿಲೆಂಡ್​ ಪ್ರವಾಸವೇ ರೋಹಿತ್​, ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ. ಇಂಗ್ಲೆಂಡ್​, ನ್ಯೂಜಿಲೆಂಡ್​ ಕಂಡಿಷನ್ಸ್​ನಲ್ಲಿ ಫೇಲ್​ ಆದ್ರೆ, ಟೀಕೆಗಳ ಮಹಾಪೂರವೇ ಹರಿದು ಬರಲಿದೆ.
ಟೀಮ್​ ಇಂಡಿಯಾ ಪರ ಕೆಲವೇ ಕೆಲವು ಪಂದ್ಯಗಳನ್ನಾಡೋದ್ರಿಂದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ 2026ರಲ್ಲೂ ಡೊಮೆಸ್ಟಿಕ್​ ಕ್ರಿಕೆಟ್​ ಆಡಬೇಕಿದೆ. ವಿರಾಟ್​ ಕೊಹ್ಲಿ ಈಗಾಗಲೇ ವಿಜಯ್​ ಹಜಾರೆ ಟೂರ್ನಿಯ ಪಂದ್ಯದೊಂದಿಗೆ ಈ ವರ್ಷವನ್ನ ಆರಂಭಿಸಲು ಮುಂದಾಗಿದ್ದಾರೆ. ಟಚ್ ಹಾಗೂ ಫಾರ್ಮ್​ ಉಳಿಸಿಕೊಳ್ಳಲು ವರ್ಷಾಂತ್ಯದಲ್ಲಿ ನಡೆಯೋ ಹೊಸ ಸೀಸನ್​ನಲ್ಲೂ ರೋಹಿತ್​-ಕೊಹ್ಲಿ ಕಣಕ್ಕಿಳಿಯಬೇಕಿದೆ.
ಇದನ್ನೂ ಓದಿ: ಜನಾರ್ದನ್ ರೆಡ್ಡಿಯನ್ನ ಟಾರ್ಗೆಟ್ ಮಾಡಿ ದಾಳಿ, ಪೆಟ್ರೋಲ್ ಬಾಂಬ್ ತಂದಿದ್ದರು -ಶ್ರೀರಾಮುಲು ಆಕ್ರೋಶ
/filters:format(webp)/newsfirstlive-kannada/media/media_files/2025/10/19/kohli-rohit-gill-1-2025-10-19-15-45-23.jpg)
ಸೀಸನ್​ 19ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಕೂಡ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ಪಾಲಿಗೆ ಮಹತ್ವದ ಸರಣಿಗಳೇ ಆಗಿದೆ. ಐಪಿಎಲ್​ನಲ್ಲಿ ಫೇಲ್​ ಆದ್ರೂ ಸಾಕು.. ಇವರಿಬ್ಬರ ನಿವೃತ್ತಿಯ ಸುದ್ದಿ ಮತ್ತೆ ಜೋರಾಗಿ ಸೌಂಡ್​ ಮಾಡುತ್ತೆ. ಹೀಗಾಗಿ ಮಿಲಿಯನ್​ ಡಾಲರ್​ ಟೂರ್ನಿಯಲ್ಲೂ ಹಿಟ್​ ಮ್ಯಾನ್​, ಕಿಂಗ್​ ಕೊಹ್ಲಿ ಧೂಳೆಬ್ಬಿಸಬೇಕಿದೆ. ಒಟ್ಟಿನಲ್ಲಿ, 2026ರಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮುಂದೆ ಸಾಲು ಸಾಲು ಟಫ್​ ಚಾಲೆಂಜಸ್​ಗಳಿವೆ. ಹೀಗಾಗಿಯೇ ಹೇಳಿದ್ದು 2026.. ಇವರಿಬ್ಬರ ಕರಿಯರ್​ ಕಠಿಣ ವರ್ಷ ಅಂತಾ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us