ಫಿಟ್ನೆಸ್​ ಟೆಸ್ಟ್​ನಲ್ಲಿ ಅಯ್ಯರ್ ಫೇಲ್.. ಕನ್ನಡಿಗನ ಮೇಲೆ ಕಣ್ಣಿಟ್ಟ ಅಗರ್ಕರ್​​..!

ಕರ್ನಾಟಕ ತಂಡದ ಎಡಗೈ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್​ಗೆ ಅದೃಷ್ಠ ಹುಡುಕಿಕೊಂಡು ಬಂದಂತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಒನ್​ ಡೇ ಫಾರ್ಮೆಟ್​ಗೆ​ ಪಡಿಕ್ಕಲ್​ ಕೆಲವೇ ದಿನಗಳಲ್ಲಿ ಡೆಬ್ಯೂ ಮಾಡಲಿದ್ದಾರೆ. ಹೊಸ ವರ್ಷದ ಮೊದಲ ಟಾಸ್ಕ್​​ ನ್ಯೂಜಿಲೆಂಡ್​ ಸರಣಿಯೊಂದಿಗೆ ಕನ್ನಡಿಗನ ಹೊಸ ಅಧ್ಯಾಯ ಆರಂಭವಾಗಲಿದೆ.

author-image
Ganesh Kerekuli
shreyas Iyer and devdatta padikkal
Advertisment

ಕರ್ನಾಟಕ ತಂಡದ ಎಡಗೈ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್​ಗೆ ಅದೃಷ್ಠ ಹುಡುಕಿಕೊಂಡು ಬಂದಂತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಒನ್​ ಡೇ ಫಾರ್ಮೆಟ್​ಗೆ​ ಪಡಿಕ್ಕಲ್​ ಕೆಲವೇ ದಿನಗಳಲ್ಲಿ ಡೆಬ್ಯೂ ಮಾಡಲಿದ್ದಾರೆ. ಹೊಸ ವರ್ಷದ ಮೊದಲ ಟಾಸ್ಕ್​​ ನ್ಯೂಜಿಲೆಂಡ್​ ಸರಣಿಯೊಂದಿಗೆ ಕನ್ನಡಿಗನ ಹೊಸ ಅಧ್ಯಾಯ ಆರಂಭವಾಗಲಿದೆ. 

ನ್ಯೂಜಿಲೆಂಡ್​ ಎದುರಿನ ಏಕದಿನ ಸರಣಿಗೆ ಟೀಮ್​ ಇಂಡಿಯಾ ಸೆಲೆಕ್ಷನ್​ ಕಸರತ್ತು ಆರಂಭವಾಗಿದೆ. ಹೊಸ ವರ್ಷದ ಮೊದಲ ಸರಣಿಗೆ ನಾಳೆ ಅಥವಾ ನಾಡಿದ್ದು ಟೀಮ್​ ಅನೌನ್ಸ್​ ಆಗಲಿದೆ. ಆಟಗಾರರ ಆಯ್ಕೆ ಕಸರತ್ತು ಆರಂಭವಾದ ಬೆನ್ನಲ್ಲೇ, ಕರ್ನಾಟಕ ತಂಡದ ಸ್ಟೈಲಿಶ್​ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್, ಗುಡ್​ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ. ಈ ಹೊಸ ವರ್ಷ ಕನ್ನಡಿಗ ದೇವದತ್​ ಪಡಿಕ್ಕಲ್​ಗೆ ಹೊಸ ಲಕ್​ ತಂದಂತಿದೆ. 

ಇದನ್ನೂ ಓದಿ:ಹೊಸ ವರ್ಷದ ಆರಂಭದಲ್ಲೇ BCCI ಮೊದಲ ರಿಸ್ಕ್.. ತಂಡದ ಪಕ್ಕಾ ಪ್ಲಾನ್..!

Shreyas iyer

ಶ್ರೇಯಸ್​ ಅಯ್ಯರ್​ ಫೇಲ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಂಭೀರ ಇಂಜುರಿಗೆ ತುತ್ತಾಗಿದ್ದ ಶ್ರೇಯಸ್​ ಅಯ್ಯರ್​​, ನ್ಯೂಜಿಲೆಂಡ್​ ಸರಣಿಯೊಂದಿಗೆ ಕಮ್​ಬ್ಯಾಕ್​ ನಿರೀಕ್ಷೆಯಲ್ಲಿದ್ರು. ಕಮ್​​ಬ್ಯಾಕ್​ ಕನಸು ಕಮರಿದೆ. ಬೆಂಗಳೂರಿನ ಎನ್​ಸಿಎನಲ್ಲಿ ನಡೆದ ಫಿಟ್​​ನೆಸ್​​​ ಟೆಸ್ಟ್​ನಲ್ಲಿ ಶ್ರೇಯಸ್​ ಫೇಲ್ ಆಗಿದ್ದಾರೆ. ಶ್ರೇಯಸ್​ ಅಯ್ಯರ್​ ಕಂಪ್ಲೀಟ್​ ಫಿಟ್​ ಆಗಿಲ್ಲ ಎಂಬ ರಿಪೋರ್ಟ್​ ಹೊರ ಬಿದ್ದಿದೆ. ಇದ್ರೊಂದಿಗೆ ವಿಜಯ್​ ಹಜಾರೆ ಟೂರ್ನಿಯನ್ನಾಡಿ, ನ್ಯೂಜಿಲೆಂಡ್​ ಸರಣಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ಶ್ರೇಯಸ್​ ಪ್ಲ್ಯಾನ್​ ಫ್ಲಾಪ್ ಆಗಿದೆ.

ಪಡಿಕ್ಕಲ್​ ಮೇಲೆ ಸೆಲೆಕ್ಷರ್ಸ್​ ಕಣ್ಣು

ಶ್ರೇಯಸ್​ ಅಯ್ಯರ್​ ಹೊರ ಬಿದ್ದ ಬಳಿಕ ಬದಲಿ ಆಟಗಾರನಿಗಾಗಿ ಸೆಲೆಕ್ಷನ್​ ಕಮಿಟಿಯ ಹುಡುಕಾಟ ಆರಂಭವಾಗಿದ್ದು, ಕನ್ನಡಿಗನ ಮೇಲೆ ಕಣ್ಣು ಬಿದ್ದಿದೆ. ಪ್ರತಿಷ್ಟಿತ ವಿಜಯ್ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್ ಜಬರ್​ದಸ್ತ್ ಪ್ರದರ್ಶನ ನೀಡ್ತಿದ್ದಾರೆ. ಜಾರ್ಖಂಡ್​ ವಿರುದ್ಧದ ಮೊದಲ ಪಂದ್ಯದಲ್ಲೇ ಅತ್ಯಾದ್ಭುತ ಶತಕ ಸಿಡಿಸಿದ ಪಡಿಕ್ಕಲ್, ಕೇರಳ ವಿರುದ್ಧವೂ ಶತಕ ಸಿಡಿಸಿ ಮಿಂಚಿದ್ರು. ಪುದುಚೇರಿ ವಿರುದ್ಧದ ಪಂದ್ಯದಲ್ಲೂ ಪಡಿಕ್ಕಲ್​ ಸೆಂಚುರಿ ಬಾರಿಸಿದ್ದಾರೆ. 4 ಪಂದ್ಯಗಳಲ್ಲಿ 3 ಶತಕ ಸಿಡಿಸಿ ವಿಜಯ್ ಹಜಾರೆಯಲ್ಲಿ ರನ್ ಯಾತ್ರೆ ನಡೆಸಿರೋ ಪಡಿಕ್ಕಲ್​, ಸೆಲೆಕ್ಟರ್ಸ್​ ತನ್ನತ್ತ ತಿರುಗುವಂತೆ ಮಾಡಿದ್ದಾರೆ. 

ಇದನ್ನೂ ಓದಿ: ಧೋನಿ, ಕೊಹ್ಲಿ ನಂತರ.. ಟೀಂ ಇಂಡಿಯಾದಲ್ಲಿ ಉಪನಾಯಕ ಅಂದ್ರೆನೇ ದೊಡ್ಡ ಜೋಕ್..!

padikkal karun nair

ಲಿಸ್ಟ್ 'ಎ' ಕ್ರಿಕೆಟ್​ನಲ್ಲಿ ದೇವದತ್ ಪಡಿಕ್ಕಲ್ ಮುಂದೆ, ಸೂಪರ್​ಸ್ಟಾರ್ ಕ್ರಿಕೆಟಿಗರು ಏನೇನು ಇಲ್ಲ.! ಕೊಹ್ಲಿ, ರೋಹಿತ್ ಶರ್ಮಾ ಎಲ್ಲರೂ, ಕರ್ನಾಟಕ ಬ್ಯಾಟರ್ ಮುಂದೆ ಸೈಲೆಂಟ್ ಆಗಿದ್ದಾರೆ. ಆಡಿರೋ 37 ಲಿಸ್ಟ್ 'ಎ' ಪಂದ್ಯಗಳಲ್ಲಿ ಪಡಿಕ್ಕಲ್,​​​​​​​​​​​​​​​​​ 12 ಶತಕ ಮತ್ತು 12 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಡಿಕ್ಕಲ್ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 84.

ವಿಜಯ್ ಹಜಾರೆ ಟೂರ್ನಿಯಲ್ಲಿ ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ, ಪಡಿಕ್ಕಲ್ ಪರಾಕ್ರಮ ನಡೆಸಿದ್ದಾರೆ. ವೈಟ್​ಬಾಲ್ ಕ್ರಿಕೆಟ್​ನಲ್ಲಿ ಕನ್ನಡಿಗ ದರ್ಬಾರ್ ನಡೆಸಿದ್ದಾರೆ. 50 ಓವರ್ ಫಾರ್ಮೆಟ್ ಮತ್ತು ಟಿ-20 ಫಾರ್ಮೆಟ್​ಗೆ ಪಡಿಕ್ಕಲ್ ಹೇಳಿ ಮಾಡಿಸಿದ ಬ್ಯಾಟರ್. ಸಿಕ್ಕ ಅವಕಾಶಗಳಲ್ಲಿ ಎಡಗೈ ಬ್ಯಾಟರ್ ಮಿಂಚು ಹರಿಸಿದ್ದಾರೆ.

ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಪಡಿಕ್ಕಲ್​ಗೆ ಚಾನ್ಸ್?

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ದರ್ಬಾರ್ ನಡೆಸಿರೋ ಪಡಿಕ್ಕಲ್, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ರು. ಶ್ರೇಯಸ್​ ಅಯ್ಯರ್​ ಅನ್​ಫಿಟ್​ ಆಗಿರೋದು ಪಡಿಕ್ಕಲ್​ ನಿರೀಕ್ಷೆಗೆ ನೀರೆರೆದಿದೆ. ಟಾಪ್​ ಆರ್ಡರ್​ ಜೊತೆಗೆ ಮಿಡಲ್​ ಆರ್ಡರ್​ನಲ್ಲೂ ಬ್ಯಾಟ್​ ಬೀಸೋ ಸಾಮರ್ಥ್ಯ ಪಡಿಕ್ಕಲ್​ಗಿದೆ. ಟೆಸ್ಟ್, ಟಿ-ಟ್ವೆಂಟಿ ಆಡಿರುವ ಪಡಿಕ್ಕಲ್, ಇದೀಗ ODI ಕ್ರಿಕೆಟ್​​ಗೂ ಡೆಬ್ಯೂ ಮಾಡೋ ಕನಸು ಕಾಣ್ತಿದ್ದಾರೆ. ಆದ್ರೆ ಸೆಲೆಕ್ಟರ್ಸ್​, ಪಡಿಕ್ಕಲ್​ಗೆ ಮಣೆ ಹಾಕ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಕರ್ನಾಟಕ ಬ್ಯಾಟರ್ ದೇವದತ್ ಪಡಿಕ್ಕಲ್, ಏಕದಿನ ತಂಡದಲ್ಲಿ ಅವಕಾಶ ಪಡೆಯೋಕೆ ಅರ್ಹ ಆಟಗಾರ. ಸೆಲೆಕ್ಟರ್ಸ್​, ಪಡಿಕ್ಕಲ್ ಆಟವನ್ನ ಎರಡೂ ಕಣ್ಣುಗಳನ್ನ ತೆರೆದು ನೋಡಬೇಕಷ್ಟೇ.

ಇದನ್ನೂ ಓದಿ: 2026ರಲ್ಲಿ ಟೀಮ್​ ಇಂಡಿಯಾಗೆ ಸಾಲು ಸಾಲು ಸವಾಲು.. ಗೆಲ್ಲಲೇಬೇಕಾದ ಬಿಗ್​ ಟಾಸ್ಕ್​​ಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Shreyas Iyer devdutt padikkal
Advertisment