/newsfirstlive-kannada/media/media_files/2025/09/21/team-india-15-2025-09-21-09-10-47.jpg)
ಹೊಸ ವರ್ಷ.. ಹೊಸ ಸವಾಲು.. ಹೊಸ ಅಧ್ಯಾಯ.. ಟೀಮ್ ಇಂಡಿಯಾ ಮುಂದೆ ಈ ವರ್ಷ ದೊಡ್ಡ ಸವಾಲೇ ಇದೆ. 2025ರಲ್ಲಿ ದೇಶ-ವಿದೇಶಗಳಲ್ಲಿ ವೈಟ್​ಬಾಲ್, ರೆಡ್ ಬಾಲ್ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾಗೆ ಹಲವು ಸವಾಲಿವೆ. ಮೆನ್​ ಇನ್​ ಬ್ಲ್ಯೂ ಪಡೆ ರನ್​ಭೂಮಿಯಲ್ಲಿ ನಂಬರ್.1 ತಂಡವಾಗಬೇಕಂದ್ರೆ ಈ ಸವಾಲುಗಳನ್ನ ಗೆಲ್ಲಲೇಬೇಕು.
2025.. ಟೀಮ್ ಇಂಡಿಯಾ ಪಾಲಿಗೆ ಸ್ವಲ್ಪ ಸಿಹಿ, ಜಾಸ್ತಿ ಕಹಿನೇ ಆಗಿತ್ತು. ದುಬೈನಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿದ್ದು ಬಿಟ್ರೆ ಪ್ರಮುಖ ಸರಣಿಗಳಲ್ಲಿ ಟೀಮ್ ಇಂಡಿಯಾ ಕಂಡಿದ್ದು, ಬರೀ ಸೋಲು. ಅದ್ರಲ್ಲೂ ತವರಿನಲ್ಲೇ ಟೀಮ್ ಇಂಡಿಯಾ ಎರಡೆರಡು ವೈಟ್​ ವಾಷ್​ ಮುಖಭಂಗ ಅನುಭವಿಸಿದ್ದನ್ನ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೇ ಆಗ್ತಿಲ್ಲ. ಇದೀಗ 2026, ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲಲು ಹೊರಟಿದೆ. ಸವಾಲನ್ನ ಮೆಟ್ಟಿನಿಂತು, ದಿಗ್ವಿಜಯ ಸಾಧಿಸೋಕೆ ಸಜ್ಜಾಗಿದೆ.
ಇದನ್ನೂ ಓದಿ:ಧೋನಿ, ಕೊಹ್ಲಿ ನಂತರ.. ಟೀಂ ಇಂಡಿಯಾದಲ್ಲಿ ಉಪನಾಯಕ ಅಂದ್ರೆನೇ ದೊಡ್ಡ ಜೋಕ್..!
/filters:format(webp)/newsfirstlive-kannada/media/media_files/2025/12/20/team-india-16-2025-12-20-14-38-16.jpg)
ಹೊಸ ವರ್ಷದಲ್ಲಿ ಟೀಮ್​ ಇಂಡಿಯಾಗೆ ಎದುರಾಗ್ತಿರೋ ಮೊದಲ ಟಾಸ್ಕೇ ನ್ಯೂಜಿಲೆಂಡ್​ ಸರಣಿ. ಜನವರಿ 11ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ರೆ, ಜನವರಿ 21ರಿಂದ 31ರವರೆಗೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಒನ್​ ಡೇ ಹಾಗೂ ಟಿ 20 ಫಾರ್ಮೆಟ್​ನಲ್ಲಿ ನ್ಯೂಜಿಲೆಂಡ್​ ಸಖತ್​ ಸ್ಟ್ರಾಂಗ್​ ಟೀಮ್​. ನ್ಯೂಜಿಲೆಂಡ್​ ಎದುರು ಭರ್ಜರಿ ಜಯ ಸಾಧಿಸಿ ವರ್ಷದ ಮೊದಲ ಸರಣಿಯಲ್ಲಿ ಶುಭಾರಂಭ ಮಾಡೋ ಟಫ್​ ಟಾಸ್ಕ್​ ಟೀಮ್​ ಇಂಡಿಯಾ ಮುಂದಿದೆ.
ತವರಿನಲ್ಲಿ ಪ್ರತಿಷ್ಟಿತ T20 ವಿಶ್ವಕಪ್​ ಟೂರ್ನಿ.!
ಟಿ20 ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾಗೆ ಈ ವರ್ಷದಲ್ಲಿರೋ ಚಾಲೆಂಜಿಂಗ್​ ಟಾಸ್ಕ್​ ಆಂದ್ರೆ ಅದು ಚುಟುಕು ವಿಶ್ವಕಪ್​.! ಪ್ರತಿಷ್ಟಿತ ಸರಣಿ ಈ ವರ್ಷ ತವರಿನಲ್ಲೇ ನಡೀತಾ ಇದೆ. ತವರಿನಲ್ಲಿ ನಡೆಯೋ ಟೂರ್ನಿಯನ್ನ ಗೆದ್ದು, ಹಾಲಿ ಚಾಂಪಿಯನ್​ ಪಟ್ಟವನ್ನ ಉಳಿಸಿಕೊಳ್ಳಬೇಕಿದೆ. ಸೂರ್ಯಕುಮಾರ್​ ಯಾದವ್​ ಸೈನ್ಯದ ಮೇಲೆ ಟೀಮ್​ ಇಂಡಿಯಾ ಅಭಿಮಾನಿಗಳ ಅಪಾರವಾದ ನಿರೀಕ್ಷೆಯಿದೆ. ಹೋಂ ಕ್ರೌಡ್​ನ ಒತ್ತಡವನ್ನ ನಿಭಾಯಿಸಿಕೊಂಡು ಟ್ರೋಫಿ ಗೆಲ್ಲಬೇಕಿದೆ.
ಇದನ್ನೂ ಓದಿ: ಹೊಸ ವರ್ಷದ ಆರಂಭದಲ್ಲೇ BCCI ಮೊದಲ ರಿಸ್ಕ್.. ತಂಡದ ಪಕ್ಕಾ ಪ್ಲಾನ್..!
/filters:format(webp)/newsfirstlive-kannada/media/media_files/2025/12/12/team-india-13-2025-12-12-08-03-19.jpg)
ಇಂಗ್ಲೆಂಡ್​ ಪ್ರವಾಸವೇ ಟೀಮ್​ ಇಂಡಿಯಾಗೆ ಅಗ್ನಿಪರೀಕ್ಷೆ.!
ಜುಲೈನಲ್ಲಿ ಟೀಮ್​ ಇಂಡಿಯಾ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿದೆ. 5 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನ ಆಂಗ್ಲರ ನಾಡಲ್ಲಿ ಇಂಡಿಯನ್​ ಟೀಮ್​ ಆಡಲಿದೆ. 2025ರಲ್ಲಿ ಟಫ್​ ಫೈಟ್​ ನೀಡಿ ಟೆಸ್ಟ್​ನಲ್ಲಿ ಸಮಭಲ ಸಾಧಿಸಿದ ಟೀಮ್​ ಇಂಡಿಯಾ, ಈ ವರ್ಷ ವೈಟ್​ ಬಾಲ್​ ಫಾರ್ಮೆಟ್​ನಲ್ಲೂ ಮಿಂಚಬೇಕಿದೆ. ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಬಲಿಷ್ಟ ತಂಡವಾಗಿರುವ ಇಂಗ್ಲೆಂಡ್, ತವರಿನಲ್ಲಿ ಹೆಬ್ಬುಲಿಗಳಂತೆ ಹೋರಾಟ ನಡೆಸಲಿದ್ದಾರೆ. ಎದುರಾಳಿಗಳು ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಸುಲಭದ ಮಾತಲ್ಲ. ಹಾಗಾಗಿ ಟೀಮ್ ಇಂಡಿಯಾ ಅಲ್ಲಿ ಗೆಲ್ಲೋದು ಟಫ್ ಟಾಸ್ಕ್ ಆಗಿದೆ.
ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್​ನಲ್ಲಿ ‘ಟೆಸ್ಟ್​’.!
ವರ್ಷಾಂತ್ಯದಲ್ಲಿ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ಪ್ರವಾಸಕ್ಕೆ ತೆರಳಲಿದೆ. ಪ್ರವಾಸದಲ್ಲಿ 2 ಟೆಸ್ಟ್​ ಹಾಗೂ 3 ಏಕದಿನ ಪಂದ್ಯಗಳನ್ನ ಟೀಮ್​ ಇಂಡಿಯಾ ಆಡಲಿದೆ. ನ್ಯೂಜಿಲೆಂಡ್​ ಪ್ಲೇಯಿಂಗ್​ ಕಂಡೀಷನ್ಸ್​ನಲ್ಲಿ ಆಡೋದು ಅಂದುಕೊಂಡಷ್ಟು ಸುಲಭವಲ್ಲ. ಅದ್ರಲ್ಲೂ ಟೆಸ್ಟ್​​ ಸರಣಿ ಗೆಲ್ಲೋದು ಸಿಕ್ಕಾಪಟ್ಟೆ ಕಷ್ಟ. 2009ರ ಪ್ರವಾಸದಲ್ಲಿ 1-0 ಅಂತರದಲ್ಲಿ ಟೆಸ್ಟ್​ ಸರಣಿ ಗೆದ್ದಿದ್ದ ಟೀಮ್​ ಇಂಡಿಯಾ, ಆ ಬಳಿಕ 2 ಸರಣಿಗಳನ್ನ ಕೈ ಚೆಲ್ಲಿದೆ. ಈ ಬಾರಿ ಟೆಸ್ಟ್​ ಸರಣಿ ಗೆಲ್ಲೋದ್ರ ಜೊತೆಗೆ ಏಕದಿನ ಸರಣಿಯಲ್ಲೂ ಜಯಿಸಬೇಕಿದೆ.
ಟೆಸ್ಟ್​ ಫಾರ್ಮೆಟ್​ನಲ್ಲಿ ತಂಡಕ್ಕೆ ಸಿಗುತ್ತಾ ಮರುಜೀವ?
ಟೆಸ್ಟ್​ ಫಾರ್ಮೆಟ್​ನಲ್ಲಿ 2025ರಲ್ಲಿ ಟೀಮ್​ ಇಂಡಿಯಾ ಹೀನಾತಿಹೀನ ಪ್ರದರ್ಶನ ನೀಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಸತತ 2 ಬಾರಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಈ ಸೀಸನ್​ನಲ್ಲಿ ಭಾರತ ತಂಡ WTC ಫೈನಲ್ ಪ್ರವೇಶಿಸುತ್ತೋ ಇಲ್ವೋ ಗೊತ್ತಿಲ್ಲ. 2026ರಲ್ಲಿ ಟೀಮ್​ ಇಂಡಿಯಾ 5 ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ಆ ಪಂದ್ಯಗಳನ್ನ ಗೆದ್ದು ಟೆಸ್ಟ್​ ಫಾರ್ಮೆಟ್​ನಲ್ಲಿ ಮರುಜೀವ ಪಡೆದುಕೊಳ್ಳಬೇಕಿದೆ.
2027ರಲ್ಲಿ ನಡೆಯೋ ಏಕದಿನ ವಿಶ್ವಕಪ್​ಗೂ ಈ ವರ್ಷವಿಡೀ ಟೀಮ್​ ಇಂಡಿಯಾದ ಸಿದ್ಧತೆ ನಡೆಯಬೇಕಿದೆ. ಒಟ್ನಲ್ಲಿ 2025ರಲ್ಲಿ ಏನೇ ನಡೆದಿರಲಿ, ಅದನ್ನ ಬದಲಾಯಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಹೊಸ ವರ್ಷದಲ್ಲಿ ಮತ್ತೆ ಅದೇ ತಪ್ಪನ್ನ ಮಾಡದೇ, ಟೀಮ್​ ಇಂಡಿಯಾ ಗೆಲುವಿನ ಹಾದಿಯಲ್ಲಿ ಸಾಗುವಂತಾಗಲಿ.
ಇದನ್ನೂ ಓದಿ:ಗಂಭೀರ್​ಗೆ ಬಿಸಿಸಿಐ ಶಾಕ್.. ಟೀಂ ಇಂಡಿಯಾದ ಮುಂದಿನ ಕೋಚ್ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us