/newsfirstlive-kannada/media/media_files/2025/12/20/gambhir-ajit-2025-12-20-09-07-33.jpg)
ಹೊಸ ವರ್ಷದ ಆರಂಭದಲ್ಲೇ ನ್ಯೂಜಿಲೆಂಡ್ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗುತ್ತಿದೆ. ಈಗಾಗಲೇ ಸೆಲೆಕ್ಟರ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ತಂಡದ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ. 2027ರ ಏಕದಿನ ವಿಶ್ವಕಪ್​ಗೆ ನ್ಯೂಜಿಲೆಂಡ್ ಸರಣಿಯಿಂದಲೇ ‘ಬ್ಲೂ ಪ್ರಿಂಟ್’ ರೆಡಿ ಮಾಡಲು ಬಿಗ್​ಬಾಸ್​​ಗಳು ತೀರ್ಮಾನಿಸಿದ್ದಾರೆ. ​
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ, ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದಾಗಲಿದೆ. 2027ರ ಏಕದಿನ ವಿಶ್ವಕಪ್​ಗೆ ಕೋರ್​ ಟೀಮ್ ಕಟ್ಟಲು ಮುಂದಾಗಿರುವ ಕೋಚ್ ಗಂಭೀರ್ ಮತ್ತು ಸೆಲೆಕ್ಟರ್ಸ್, ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಂಡ ಆಯ್ಕೆ ಮಾಡಲು ಮುಂದಾಗಿದೆ. ಕಿವೀಸ್ ಸರಣಿಗೆ ಯುವಕರಿಗೆ ಹೆಚ್ಚು ಆದ್ಯತೆ ನೀಡಲು ಚಿಂತನೆ ನಡೆಸುತ್ತಿದ್ದಾರೆ. ​
ಗಿಲ್, ಅಯ್ಯರ್ ತಂಡಕ್ಕೆ ಕಮ್​ಬ್ಯಾಕ್
ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಗಿಲ್ ಮತ್ತು ಉಪನಾಯಕ ಅಯ್ಯರ್, ಕಮ್​ಬ್ಯಾಕ್​ಗೆ ರೆಡಿಯಾಗಿದ್ದಾರೆ. ಗಾಯದ ಕಾರಣ ಗಿಲ್ ಮತ್ತು ಅಯ್ಯರ್, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನ ಮಿಸ್ ಮಾಡಿಕೊಂಡಿದ್ದರು. ಆದ್ರೀಗ ಗಿಲ್ ಫುಲ್ ಫಿಟ್ ಆಗಿದ್ದು, ವಿಜಯ್ ಹಜಾರೆ ಟೂರ್ನಿ ಆಡಲು ರೆಡಿಯಾಗಿದ್ದಾರೆ. ಮತ್ತೊಂದೆಡೆ ಅಯ್ಯರ್ ಬಿಸಿಸಿಐ COEಗೆ ಆಗಮಿಸಿದ್ದು, ರಿಹ್ಯಾಬ್​ಗೆ ಒಳಗಾಗಲಿದ್ದಾರೆ. ಅಯ್ಯರ್ ಫುಲ್ ಫಿಟ್ ಆದ್ರೆ ಏಕದಿನ ಸರಣಿ ಆಡೋದು ಪಕ್ಕಾ.
ಇದನ್ನೂ ಓದಿ: 2025ರಲ್ಲಿ ಬದಲಾಯ್ತು ಕ್ರಿಕೆಟ್ ತಂಡಗಳ ಹಣೆಬರಹ.. 47 ವರ್ಷಗಳ ಆ ಕೊರಗು ಅಂತ್ಯವಾಗಿದ್ದು ಹೇಗೆ?
/filters:format(webp)/newsfirstlive-kannada/media/media_files/2025/12/23/gill-2-2025-12-23-08-36-29.jpg)
ಗಿಲ್ ಮತ್ತು ಅಯ್ಯರ್​​​​​ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡ್ತಿರೋದ್ರಿಂದ ತಿಲಕ್ ವರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಅಯ್ಯರ್ ನ್ಯೂಜಿಲೆಂಡ್ ಏಕದಿನ ಸರಣಿಗೆ ಫಿಟ್ ಆಗದಿದ್ರೆ ತಿಲಕ್ ವರ್ಮಾ ಅಥವಾ ಜುರೆಲ್ ಇಬ್ಬರಲ್ಲಿ ಒಬ್ಬರು, ತಂಡದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ.
ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಮತ್ತು ವಿಜಯ್ ಹಜಾರೆ ಟೂರ್ನಿಯಲ್ಲಿ ರನ್​​ ಯಾತ್ರೆ ಮುಂದುವರೆಸುತ್ತಿರುವ ಇಶಾನ್ ಕಿಶನ್ ಮತ್ತು ಕರ್ನಾಟಕದ ಪಡಿಕ್ಕಲ್, ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇಬ್ಬರಿಗೂ ಏಕದಿನ ತಂಡದಲ್ಲಿ ಸ್ಥಾನ ಅನುಮಾನವಾಗಿದೆ. ಟೀಮ್ ಇಂಡಿಯಾದಲ್ಲಿ ಸ್ಲಾಟ್ ಖಾಲಿ ಇಲ್ಲ. ಹಾಗಾಗಿ ಇಶಾನ್ ಕಿಶನ್ ಮತ್ತು ಪಡಿಕ್ಕಲ್ ಅವಕಾಶಕ್ಕಾಗಿ ಕಾಯಲೇಬೇಕು.
ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್‌ನ್ಯೂಸ್.. ಟೀಂ ಇಂಡಿಯಾದ ಸ್ಟಾರ್ ಉಮೇಶ್ ಯಾದವ್ ಆರ್‌ಸಿಬಿಗೆ ಮತ್ತೆ ಎಂಟ್ರಿ..?
/filters:format(webp)/newsfirstlive-kannada/media/media_files/2025/10/27/iyer-2025-10-27-17-52-52.jpg)
ತಂಡದ ಸೂಪರ್​​ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಫ್ರಂಟ್​​ಲೈನ್ ಪೇಸರ್​ ಜಸ್ಪ್ರೀತ್ ಬೂಮ್ರಾ ಇಬ್ಬರೂ, ಕಿವೀಸ್ ಸರಣಿ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಳೆದೆರಡು ಏಕದಿನ ಸರಣಿಗಳಲ್ಲಿ ಪಾಂಡ್ಯ ಮತ್ತು ಬೂಮ್ರಾ ಕಾಣಿಸಿಕೊಳ್ಳಲಿಲ್ಲ. ಟಿ-20 ವಿಶ್ವಕಪ್ ಸಮೀಪಿಸುತ್ತಿರುವ ಕಾರಣ ಇಬ್ಬರಿಗೂ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸುತ್ತಿದೆ. ​
ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳದ ಎಡಗೈ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್, ನ್ಯೂಜಿಲೆಂಡ್ ಏಕದಿನ ಸರಣಿಗೂ ಆಯ್ಕೆಯಾಗೋದು ಅನುಮಾನ. ಕಾರಣ ಜಡೇಜಾಗೆ ತಂಡದಲ್ಲಿ ಸ್ಥಾನ ಫಿಕ್ಸ್ ಆಗಿದೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ಜಡ್ಡು ಪರ್ಫಾಮೆನ್ಸ್ ಅಷ್ಟಕಷ್ಟೇ. ಆದ್ರೆ ಟೀಮ್ ಮ್ಯಾನೇಜ್ಮೆಂಟ್​​ ಜಡೇಜಾಗೆ ಕೊನೆಯ ಚಾನ್ಸ್ ನೀಡಲು ಮುಂದಾಗಿದೆ.
ನ್ಯೂಜಿಲೆಂಡ್ ಏಕದಿನ ಸರಣಿಗೆ ಟೀಮ್ ಇಂಡಿಯಾ ಆಯ್ಕೆ ಸೆಲೆಕ್ಟರ್ಸ್​ ಮತ್ತು ಟೀಮ್ ಮ್ಯಾನೇಜ್ಮೆಂಟ್​​ಗೆ ಟಫ್ ಟಾಸ್ಕ್. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ತಂಡದ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳಲೇಬೇಕು.
ಇದನ್ನೂ ಓದಿ: ಯುವ ಆಟಗಾರರಿಗೆ ಬಂಪರ್ ಗಿಫ್ಟ್.. ರೋಹಿತ್-ಕೊಹ್ಲಿಗೆ ಹೊಸ ವರ್ಷದಲ್ಲಿ ಶಾಕಿಂಗ್ ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us