/newsfirstlive-kannada/media/media_files/2025/12/31/umesh-yadav-2025-12-31-07-56-10.jpg)
ಎಕ್ಸ್​ಪ್ರೆಸ್ ಪೇಸ್.. ಡೆಡ್ಲಿ ಯಾರ್ಕರ್ಸ್, ಶಾರ್ಪ್ ಬೌನ್ಸರ್ಸ್​, ಸ್ವಿಂಗ್ ಕಿಂಗ್ ಉಮೇಶ್ ಯಾದವ್​​​, ಐಪಿಎಲ್ ಆಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಫಿಟ್ನೆಸ್ ಮತ್ತು ಸಮರಾಭ್ಯಾಸ ಶುರುಮಾಡಿರುವ ವಿದರ್ಭ ಎಕ್ಸ್​ಪ್ರೆಸ್, ಐಪಿಎಲ್​​ನ ಹೈ ಪ್ರೊಫೈಲ್ ಫ್ರಾಂಚೈಸಿ ಸೇರಲು ರೆಡಿಯಾಗಿದ್ದಾರೆ. ಹೊಸ ವರ್ಷ, ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಉಮೇಶ್ ಯಾದವ್, ನಮ್ಮ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಸೇರಿಕೊಳ್ಳೋ ಸಾಧ್ಯತೆ ಹೆಚ್ಚಿದೆ.
ಎರಡು ರೇಪ್ ಕೇಸ್, ವಂಚನೆ ಪ್ರಕರಣದ ಆರೋಪಿಯಾಗಿರುವ ಆರ್​ಸಿಬಿ ಎಡಗೈ ವೇಗಿ ಯಶ್ ದಯಾಳ್, ಜೈಲು ಸೇರೋ ಭೀತಿಯಲ್ಲಿದ್ದಾರೆ. ಹಾಗಾಗಿ ಯಶ್, ಮುಂಬರುವ ಐಪಿಎಲ್ ಸೀಸನ್-19 ಆಡೋದು ಬಹುತೇಕ ಅನುಮಾನ ಎನ್ನಲಾಗ್ತಿದೆ. ಸದ್ಯ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕ್ತಿರುವ ಬೆಂಗಳೂರು ಫ್ರಾಂಚೈಸಿ, ಯಶ್ ದಯಾಳ್ ರೀಪ್ಲೇಸ್​ಮೆಂಟ್ ಹುಡುಕುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ಅನುಭವಿ ವೇಗಿ ಉಮೇಶ್ ಯಾದವ್​​​ ಜೊತೆ ಮಾತುಕತೆ ನಡೆಸಿರುವ ಆರ್​ಸಿಬಿ ಫ್ರಾಂಚೈಸಿ, ವಿದರ್ಭ ವೇಗಿಯನ್ನ ತಂಡಕ್ಕೆ ಕರೆತರಲು ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಐಪಿಎಲ್ ಟೆಕ್ನಿಕಲ್ ಟೀಮ್ ಜೊತೆಯೂ ಟಚ್​ನಲ್ಲಿದೆ.
3 ವರ್ಷ RCB ತಂಡಕ್ಕೆ ಸೇವೆ ಸಲ್ಲಿಸಿದ್ದ ವೇಗಿ ಉಮೇಶ್..!
2018 ರಿಂದ 2020, ಮೂರು ವರ್ಷಗಳ ಕಾಲ ಉಮೇಶ್ ಯಾದವ್, ಬೆಂಗಳೂರು ತಂಡದ ಪರ ಆಡಿದ್ರು. 2018ರಲ್ಲಿ 14 ಪಂದ್ಯಗಳನ್ನಾಡಿ 20 ವಿಕೆಟ್ ಪಡೆದಿದ್ದ ಉಮೇಶ್, 2029ರಲ್ಲಿ 11 ಪಂದ್ಯಗಳಿಂದ 8 ವಿಕೆಟ್ ಕಬಳಿಸಿದ್ರು. 2020ರಲ್ಲಿ ಕೇವಲ ಎರಡೇ ಎರಡು ಪಂದ್ಯಗಳನ್ನಾಡಿದ್ದ ವಿದರ್ಭ ವೇಗಿ 2 ವಿಕೆಟ್ ಮಾತ್ರ ಪಡೆದಿದ್ರು. 2020ರ ಬ್ಯಾಡ್ ಸೀಸನ್​​ ನಂತರ ಆರ್​ಸಿಬಿ ಉಮೇಶ್ ಯಾದವ್​ರನ್ನ ರಿಲೀಸ್ ಮಾಡಿತ್ತು. 2021ರಲ್ಲಿ ಉಮೇಶ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೇರಿಕೊಂಡಿದ್ರು.
ಇದನ್ನೂ ಓದಿ: 2025ರಲ್ಲೂ ಭಾರತೀಯರೇ ಕಿಂಗ್; ಕೊಹ್ಲಿ, ರೋಹಿತ್, ಪಂತ್ ಗಳಿಸಿದ ಹಣವೆಷ್ಟು..?
ಅನುಭವಿ ವೇಗಿ ಉಮೇಶ್ ಯಾದವ್​​​​​​​​​ಗೆ ಐಪಿಎಲ್​ನಲ್ಲಿ ಆಡಿದ ಅತಿ ಹೆಚ್ಚು ಅನುಭವ ಇದೆ. 14 ವರ್ಷಗಳಲ್ಲಿ 4 ಫ್ರಾಂಚೈಸಿಗಳ ಪರ ಆಡಿದ್ದ ಉಮೇಶ್ ಯಾದವ್, ಡೆಲ್ಲಿ ಕ್ಯಾಪಿಟಲ್ಸ್, ಕೊಲ್ಕತ್ತಾ ನೈಟ್​ರೈಡರ್ಸ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡವನ್ನ ಪ್ರತಿನಿಧಿಸಿದ್ರು. ಒಟ್ಟು 148 ಪಂದ್ಯಗಳಲ್ಲಿ ಉಮೇಶ್, 144 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ವಿದರ್ಭ ಎಕ್ಸ್​ಪ್ರೆಸ್ ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮಿಚ್ಚೆಲ್ ಸ್ಟಾರ್ಕ್​ರಂತೆ ಪವರ್​ಫುಲ್ ಬೌಲರ್. T20 ಫಾರ್ಮೆಟ್​ನ ಹೈ ಕ್ವಾಲಿಟಿ ಪೇಸರ್ ಕೂಡ ಹೌದು.! ತನ್ನ ಪೇಸ್ ಮತ್ತು ಸ್ವಿಂಗ್​ನಿಂದ ಉಮೇಶ್, ಪವರ್​ಪ್ಲೇನಲ್ಲಿ ಡೇಂಜರಸ್ ಬೌಲರ್ ಎನಿಸಿಕೊಂಡಿದ್ದಾರೆ. ತನ್ನ ಶಾರ್ಪ್​ ಬೌನ್ಸರ್ಸ್​​ನಿಂದ ಬ್ಯಾಟರ್ಸ್​ ಅನ್ನ ಟ್ರಬಲ್ ಮಾಡಿದ್ದಾರೆ. ಹಾಗೆ ತನ್ನ ಇಂಪ್ಯಾಕ್ಟ್​ಫುಲ್ ಸ್ಪೆಲ್ಸ್​ನಿಂದ, ಗೇಮ್ ಚೇಂಜರ್​​ ಕೂಡ ಎನಿಸಿಕೊಂಡಿದ್ದಾರೆ.
ಉಮೇಶ್ ಯಾದವ್ ಕೇವಲ ಎಕ್ಸ್​ಪ್ರೆಸ್ ಬೌಲರ್ ಮಾತ್ರವಲ್ಲ. ಲೋವರ್ ಆರ್ಡರ್​​ನಲ್ಲಿ ಹ್ಯಾಂಡಿ ಬ್ಯಾಟ್ಸ್​ಮನ್ ಕೂಡ ಹೌದು. ಪವರ್​ಫುಲ್ ಹಿಟ್ಟಿಂಗ್ ಮಾಡೋ ಉಮೇಶ್, ಡೆಥ್ ಓವರ್​ಗಳಲ್ಲಿ vಏಗವಾಗಿ ರನ್​ಗಳಿಸಬಲ್ಲರು. ನಿಮಗೆ ಗೊತ್ತಿದಿಯೋ ಇಲ್ವೋ..! ಉಮೇಶ್ ಯಾದವ್ ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ ವೇಗವಾದ ಶತಕ ಕೂಡ ಸಿಡಿಸಿದ್ದಾರೆ. 2015ರಲ್ಲಿ ಓಡಿಶಾ ವಿರುದ್ಧ ಉಮೇಶ್ ಕೇವಲ 106 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ರು. ಯಶ್ ದಯಾಳ್​ಗೆ ಹೋಲಿಸಿದ್ರೆ ಉಮೇಶ್ ಯಾದವ್ ಅತ್ಯುತಮ ವೇಗಿ. T20 ಕ್ರಿಕೆಟ್​ನಲ್ಲಿ ಉಮೇಶ್, ಸ್ವಲ್ಪ ದುಬಾರಿ. ಆದ್ರೆ ಕ್ರೂಶಿಯಲ್ ಟೈಮ್​ನಲ್ಲಿ ಉಮೇಶ್, ವಿಕೆಟ್​​​ ಬೇಟೆಯಾಡಿ ತಂಡಕ್ಕೆ ಬ್ರೇಕ್ ನೀಡ್ತಾರೆ. ಉಮೇಶ್ ಯಾದವ್ ಆರ್​ಸಿಬಿ ಪರ ಆಡ್ತಾರಾ ಅಡಲ್ವಾ ಅನ್ನೋದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಗೊತ್ತಾಗುತ್ತದೆ.
ಇದನ್ನೂ ಓದಿ: ಯುವ ಆಟಗಾರರಿಗೆ ಬಂಪರ್ ಗಿಫ್ಟ್.. ರೋಹಿತ್-ಕೊಹ್ಲಿಗೆ ಹೊಸ ವರ್ಷದಲ್ಲಿ ಶಾಕಿಂಗ್ ನ್ಯೂಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us