ಯುವ ಆಟಗಾರರಿಗೆ ಬಂಪರ್‌ ಗಿಫ್ಟ್‌.. ರೋಹಿತ್‌-ಕೊಹ್ಲಿಗೆ ಹೊಸ ವರ್ಷದಲ್ಲಿ ಶಾಕಿಂಗ್‌ ನ್ಯೂಸ್..!

ಹೊಸ ವರ್ಷಕ್ಕೆ ಆಟಗಾರರ ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​ ಅನೌನ್ಸ್​ಮೆಂಟ್​ಗೆ ಬಿಸಿಸಿಐ ವಲಯದಲ್ಲಿ ಸಿದ್ಧತೆ ನಡೆದಿದೆ. ಬಿಸಿಸಿಐ ಬಾಸ್​​ಗಳು ಕೆಲ ಆಟಗಾರರಿಗೆ ಬಂಪರ್​​ ಗಿಫ್ಟ್​ ಕೊಡೋಕೆ ಮುಂದಾಗಿದ್ರೆ ಕೆಲವರಿಗೆ ಶಾಕ್​ ನೀಡೋಕೆ ಸಜ್ಜಾಗಿದ್ದಾರೆ. ಯಾರಿಗೆ ಪ್ರಮೋಷನ್​? ಯಾರಿಗೆ ಡಿಮೋಷನ್? ಇಲ್ಲಿದೆ ಡಿಟೇಲ್ಸ್​

author-image
Ganesh Kerekuli
Virat kohli Rohit sharma (1)

ರೋಹಿತ್, ಕೊಹ್ಲಿ Photograph: (ಬಿಸಿಸಿಐ)

Advertisment
  • ನೂತನ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಪಟ್ಟಿ ಫೈನಲ್​
  • ಕಾಂಟ್ರ್ಯಾಕ್ಟ್​ನಿಂದ ರೋ​-ಕೊಗೆ ಡಿಮೋಷನ್.​.?
  • ನಾಯಕ ಶುಭ್​ಮನ್ ಗಿಲ್​ಗೆ ಪ್ರಮೋಷನ್​

2025ರ ಅಂತ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. 2026ಕ್ಕೆ ಕಾಲಿಡೋಕೂ ಮುನ್ನ ಬಿಸಿಸಿಐ ವಲಯದಲ್ಲಿ ಆಟಗಾರರ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ರಿನ್ಯೂವಲ್​ಗೆ ಸಿದ್ಧತೆ ಜೋರಾಗಿ ನಡೀತಿದೆ. ಹೊಸ ವರ್ಷಕ್ಕೆ ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​ ಅನೌನ್ಸ್​ಮೆಂಟ್​ಗೆ ಬಾಸ್​​​ಗಳು ರೆಡಿಯಾಗಿದ್ದಾರೆ. ಹೊಸ ಗುತ್ತಿಗೆ ಒಪ್ಪಂದದ ಲಿಸ್ಟ್​ ಬಹುತೇಕ ಫೈನಲ್​ ಆಗಿದ್ದು, ಕೆಲ ಆಟಗಾರರಿಗೆ ಬಂಪರ್​ ಬಹುಮಾನ ಕಾದಿದ್ರೆ, ಕೆಲವರಿಗೆ ಶಾಕ್​ ಕಾದಿದೆ.    

ಬಿಸಿಸಿಐ ಬಾಸ್​ಗಳು ನೂತನ ಕಾಂಟ್ರ್ಯಾಕ್ಟ್​ ಲಿಸ್ಟ್​ನಲ್ಲಿ, ಮಾಜಿ ನಾಯಕರ ಡಿಮೋಷನ್​ಗೂ ಮುಂದಾಗಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೆಂಟ್ರಲ್​ ಕಾಂಟ್ರಾಕ್ಟ್​ನಲ್ಲಿ ಹಾಲಿ A+ ಗ್ರೇಡ್​ನಲ್ಲಿದ್ದು, ವಾರ್ಷಿಕವಾಗಿ 7 ಕೋಟಿ ಹಣವನ್ನ ಪಡೀತಿದ್ದಾರೆ. ಆದ್ರೀಗ, ಟಿ20 ಹಾಗೂ ಟೆಸ್ಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ ಆಲ್​​ಫಾರ್ಮೆಟ್​ ಪ್ಲೇಯರ್ಸ್​ಗೆ ಮಾತ್ರ A+ ಗ್ರೇಡ್​ನಲ್ಲಿ ಸ್ಥಾನ ಸಿಗಲಿದೆ. ಹೀಗಾಗಿ ನೂತನ ಕಾಂಟ್ರ್ಯಾಕ್ಟ್​​ನಲ್ಲಿ ರೋಹಿತ್​​, ಕೊಹ್ಲಿ ಬಿ ಗ್ರೇಡ್​ಗೆ ಡಿಮೋಟ್​ ಆಗೋ ಸಾಧ್ಯತೆಯಿದೆ.

ಇದನ್ನೂ ಓದಿ: ಗಂಭೀರ್, ಅಗರ್ಕರ್​ ಮಸಲತ್ತು.. ಪಂತ್​​ಗೆ ಕಾದಿದೆ ಶಾಕಿಂಗ್ ನ್ಯೂಸ್​..! 

Virat Kohli, Rohit Sharma

ಮಾಜಿ ನಾಯಕರ ಡಿಮೋಷನ್​ಗೆ ಮುಂದಾಗಿರೋ ಬಿಸಿಸಿಐ, ಹಾಲಿ ನಾಯಕನಿಗೆ ಪ್ರಮೋಷನ್​ ನೀಡಲು ಪ್ಲಾನ್​ ರೂಪಿಸಿದೆ. ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​ನಲ್ಲಿ ಟೀಮ್​ ಇಂಡಿಯಾದ ಟೆಸ್ಟ್​ ಹಾಗೂ ಒನ್​ ಡೇ ಟೀಮ್​ನ ಕ್ಯಾಪ್ಟನ್​, ಟಿ20 ಫಾರ್ಮೆಟ್​ನ ವೈಸ್ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಬಂಪರ್​ ಬಹುಮಾನ ಕಾದಿದೆ. ಆಲ್​​​ ಫಾರ್ಮೆಟ್​ ಪ್ಲೇಯರ್​ ಶುಭ್​ಮನ್​ ಗಿಲ್​ಗೆ ಟಾಪ್​ ಲೆವೆಲ್​ಗೆ ಪ್ರಮೋಷನ್​ ನೀಡಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿವೆ. ಸದ್ಯ A ಗ್ರೇಡ್​ನಲ್ಲಿರೋ ಗಿಲ್​, A+ ಗ್ರೇಡ್​ಗೆ ಪ್ರಮೋಟ್​ ಆಗಲಿದ್ದಾರೆ.

ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್, ಟಿ20 ಕ್ಯಾಪ್ಟನ್​ ಸೂರ್ಯಕುಮಾರ್​ಗೆ ಬಿಸಿಸಿಐನಿಂದ ಶಾಕ್​ ಎದುರಾದ್ರೂ ಅಚ್ಚರಿ ಪಡಬೇಕಿಲ್ಲ. ರಿಷಭ್​ ಪಂತ್ ಕೇವಲ ಟೆಸ್ಟ್​ ಫಾರ್ಮೆಟ್​ಗೆ ಸೀಮಿತವಾಗಿದ್ರೆ, ಸೂರ್ಯ ಕುಮಾರ್​ ಟಿ20 ಫಾರ್ಮೆಟ್​ನಲ್ಲಿ ಮಾತ್ರ ಆಡ್ತಿದ್ದಾರೆ. ಹೀಗಾಗಿ ಎ ಗ್ರೇಡ್​ನಲ್ಲಿರೋ ಪಂತ್​ ಹಾಗೂ ಬಿ ಗ್ರೇಡ್​ನಲ್ಲಿರೋ ಸೂರ್ಯನಿಗೆ ಹಿಂಬಡ್ತಿ ನೀಡೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. 

ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಲು ಶತಪ್ರಯತ್ನ ನಡೆಸ್ತಾ ಇರೋ ಸೀನಿಯರ್​ ವೇಗಿ ಮೊಹಮ್ಮದ್​ ಶಮಿಗೆ ಶಾಕ್​ ಕಾಡಿದೆ. ಈಗಾಗಲೇ ಸೆಲಕ್ಟರ್ಸ್​ ಶಮಿಯನ್ನ ಸೈಡ್​ಲೈನ್​ ಮಾಡಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಮ್​ ಇಂಡಿಯಾದಿಂದ ಶಮಿ ಹೊರಬಿದ್ದಿದ್ದು, ಮುಂದೆ ಆಯ್ಕೆಗೆ ಪರಿಗಣಿಸೋದೂ ಅನುಮಾನವಾಗಿದೆ. ಹೀಗಾಗಿ ಕಾಂಟ್ರ್ಯಾಕ್ಟ್​ ರಿನ್ಯೂವಲ್​ ಮಾಡೋ ಸಾಧ್ಯತೆ ಕಡಿಮೆಯಿದೆ. 

ಇದನ್ನೂ ಓದಿ: ವೈಭವ್ ಸೂರ್ಯವಂಶಿಯನ್ನ ಯಾಕೆ BCCI ಟೀಂ ಇಂಡಿಯಾಗೆ ಆಯ್ಕೆ ಮಾಡ್ತಿಲ್ಲ? ಅಸಲಿ ಉತ್ತರ ಇಲ್ಲಿದೆ..!

Hardik pandya (11)

ಟಿ20 ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ರೂ, ಆಲ್​​ರೌಂಡರ್​​ ರವೀಂದ್ರ ಜಡೇಜಾ ಟೆಸ್ಟ್​ ಮತ್ತು ಏಕದಿನ ಮಾದರಿಯಲ್ಲಿ ಸಕ್ರಿಯವಾಗಿರೋದಿಂದ A+ ಗ್ರೇಡ್​ನಲ್ಲೇ ಮುಂದುವರೆಯೋ ಸಾಧ್ಯತೆಯಿದೆ. B ಕೆಟಗೆರಿಯಲ್ಲಿರೋ ಶ್ರೇಯಸ್​​ ಅಯ್ಯರ್​ ಹಾಗೂ ಯಶಸ್ವಿ ಜೈಸ್ವಾಲ್​ಗೆ ಬಡ್ತಿ ಸಿಗೋ ಸಾಧ್ಯತೆ ದಟ್ಟವಾಗಿದೆ. ಏಕದಿನ ತಂಡ ವೈಸ್​ ಕ್ಯಾಪ್ಟನ್​ ಆಗಿರೋ ಶ್ರೇಯಸ್​​ ಅಯ್ಯರ್​ ಹಾಗೂ ಆಲ್​ ಫಾರ್ಮೆಟ್​​ ಪ್ಲೇಯರ್​ ಯಶಸ್ವಿ ಜೈಸ್ವಾಲ್​ ಸದ್ಯ ಬಿ ಕೆಟಗೆರಿಯಲ್ಲಿದ್ದಾರೆ. ಬಿನಿಂದ ಎ ಗ್ರೇಡ್​ಗೆ ಪ್ರಮೋಟ್​ ಮಾಡಲು ಚರ್ಚೆಗಳು ನಡೆದಿದೆ. 

ಟೀಮ್​ ಇಂಡಿಯಾದ ಕೆಲ ಯುವ ಆಟಗಾರರಿಗೂ ಬಿಸಿಸಿಐನಿಂದ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್​ ಕಾದಿದೆ. ಕಳೆದೊಂದು ವರ್ಷದಿಂದ ಟೀಮ್​ ಇಂಡಿಯಾ ಪರ ಖಾಯಂ ಆಟಗಾರರಾಗಿರೋ ತಿಲಕ್​ ವರ್ಮಾ, ಆರ್ಷ್​​ದೀಪ್​ ಸಿಂಗ್​, ಪ್ರಸಿದ್ಧ್​ ಕೃಷ್ಣ, ದೃವ್​ ಜುರೇಲ್​ ಹಾಗೂ ಹರ್ಷಿತ್​ ರಾಣಾಗೆ ಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ.  ಯುವ ಆಟಗಾರೆರಲ್ಲಾ ಒಂದು ಅಥವಾ 2 ಫಾರ್ಮೆಟ್​ಗಳಲ್ಲಿ ಟೀಮ್​ ಇಂಡಿಯಾ ಪರ ಆಡ್ತಿರೋದ್ರಿಂದ, ಸಿ ಗ್ರೇಡ್​​ನಿಂದ ಬಿ ಗ್ರೇಡ್​​ಗೆ ಬಡ್ತಿ ಸಿಗೋದು ಬಹುತೇಕ ಪಕ್ಕಾ!  ಒಟ್ಟಿನಲ್ಲಿ, ಬಿಸಿಸಿಐ ಬಾಸ್​​ಗಳು ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಲ್ಲಿ ಹಲವು ಬದಲಾವಣೆ ತರೋದಕ್ಕಂತೂ ಮುಂದಾಗಿದ್ದಾರೆ. ಉಳಿದಂತೆ ಬಿಸಿಸಿಐ ಯಾವೆಲ್ಲಾ ಸರ್​​ಪ್ರೈಸ್​ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದಕ್ಕೆ ಅಪೆಕ್ಸ್​ ಕೌನ್ಸಿಲ್​ ಮೀಟಿಂಗ್​ ಬಳಿಕ ಆನ್ಸರ್​ ಸಿಗಲಿದೆ. 

ಇದನ್ನೂ ಓದಿ:2025ರಲ್ಲೂ ಭಾರತೀಯರೇ ಕಿಂಗ್; ಕೊಹ್ಲಿ, ರೋಹಿತ್‌, ಪಂತ್‌ ಗಳಿಸಿದ ಹಣವೆಷ್ಟು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli Rohit Sharma-Virat Kohli BCCI BCCI central contract
Advertisment