ಗಂಭೀರ್, ಅಗರ್ಕರ್​ ಮಸಲತ್ತು.. ಪಂತ್​​ಗೆ ಕಾದಿದೆ ಶಾಕಿಂಗ್ ನ್ಯೂಸ್​..!

ಅಷ್ಟಕ್ಕೂ ಡೆಲ್ಲಿ ಡ್ಯಾಶರ್​ಗೆ ಕೊಕ್​ ಕೊಡಲು ಸೆಲೆಕ್ಷನ್​ ಕಮಿಟಿ ಮುಂದಾಗಿರೋದ್ಯಾಕೆ.? ಟೀಮ್​ ಮ್ಯಾನೇಜ್​ಮೆಂಟ್​ಗೆ ಪಂತ್​ ಯಾಕೆ ಬೇಡವಾದ್ರಾ? ಈ ರಿಪೋರ್ಟ್​ನಲ್ಲಿದೆ ಡಿಟೇಲ್ಸ್!​

author-image
Ganesh Kerekuli
RISHABH_PANT (5)
Advertisment
  • ಏಕದಿನ ತಂಡದಿಂದ ರಿಷಭ್​ ಪಂತ್​ ಡ್ರಾಪ್​..?
  • ಕಮ್​ಬ್ಯಾಕ್​ ಬಳಿಕ ಆಡಿರೋದು 1 ಏಕದಿನ ಪಂದ್ಯ
  • ಮ್ಯಾನೇಜ್​ಮೆಂಟ್​ಗೆ ಪಂತ್​ ಯಾಕೆ ಬೇಡವಾದ್ರು?

ನ್ಯೂಜಿಲೆಂಡ್​ ಎದುರಿನ ಏಕದಿನ ತಂಡಕ್ಕೆ ಟೀಮ್​ ಸೆಲೆಕ್ಷನ್​ಗೂ ಮುನ್ನ ರಿಷಭ್​ ಪಂತ್​ಗೆ ಶಾಕಿಂಗ್​ ಸುದ್ದಿ ಎದುರಾಗಿದೆ. ಟಿ20 ತಂಡಕ್ಕೆ ಬೇಡವಾಗಿರೋ ಪಂತ್​ನ ಒನ್​ ಡೇ ಟೀಮ್​ನಿಂದಲೂ ಡ್ರಾಪ್​ ಮಾಡೋಕೆ ಅಜಿತ್​ ಅಗರ್ಕರ್​ ಅಂಡ್ ಟೀಮ್​ ಮುಂದಾಗಿದೆ. 

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಮ್​ ಇಂಡಿಯಾದ ಸೆಲೆಕ್ಷನ್​ ಸರ್ಕಸ್​ ಆರಂಭವಾಗಿದೆ. ಜನವರಿ 11 ರಿಂದ ಆರಂಭವಾಗೋ 3 ಪಂದ್ಯಗಳ ಸರಣಿಗೆ ಈಗಾಗಲೇ ನ್ಯೂಜಿಲೆಂಡ್ ತಂಡ​ ಅನೌನ್ಸ್​ ಆಗಿದೆ. ಭಾರತದ ಸೀನಿಯರ್​ ಸೆಲೆಕ್ಷನ್​ ಕಮಿಟಿ ಈ ವಾರದಲ್ಲಿ ಟೀಮ್​ ಅನೌನ್ಸ್​ ಮಾಡಲಿದೆ. ತಂಡ ಅಧಿಕೃತವಾಗಿ ಪ್ರಕಟವಾಗೋಕೂ ಮುನ್ನವೇ ಶಾಕಿಂಗ್​ ಸುದ್ದಿ ಹೊರಬಿದ್ದಿದೆ.

ಏಕದಿನ ತಂಡದಿಂದ ಪಂತ್​ ಡ್ರಾಪ್

ವಿಜಯ್​ ಹಜಾರೆ ಟೂರ್ನಿಯ 2ನೇ ಪಂದ್ಯದಲ್ಲಿ ಹಾಫ್​​ ಸೆಂಚುರಿ ಸಿಡಿಸಿ ಏಕದಿನ ತಂಡದ ಸ್ಥಾನ ಸೇಫ್ ಮಾಡಿಕೊಂಡ ಕನವರಿಕೆಯಲ್ಲಿದ್ದ ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಶಾಕಿಂಗ್​ ಸುದ್ದಿ ಎದುರಾಗಿದೆ. ಮುಂಬರುವ ನ್ಯೂಜಿಲೆಂಡ್​ ಎದುರಿನ ಏಕದಿನ ಸರಣಿಯಿಂದ ರಿಷಭ್​ ಪಂತ್​ನ ಡ್ರಾಪ್​ ಮಾಡೋಕೆ, ಸೆಲೆಕ್ಷನ್​ ಕಮಿಟಿ ಮುಂದಾಗಿದೆ.  ರಿಷಭ್​ ಪಂತ್​ನ ಡ್ರಾಪ್​ ಮಾಡಿ ಯುವ ವಿಕೆಟ್​ ಕೀಪರ್​​​ಗೆ ಮಣೆ ಹಾಕೋಕೆ ಅಜಿತ್​ ಅಗರ್ಕರ್​ & ಟೀಮ್​ ರೆಡಿಯಾಗಿದೆ. 

ಇದನ್ನೂ ಓದಿ: ಎರಡೂವರೆ ಲಕ್ಷ ರೂ.ದಾಟಿದ ಬೆಳ್ಳಿ ದರ! : ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟು ಗೊತ್ತಾ?

ಪಂತ್​​ ಡ್ರಾಪ್​ ಮಾಡೋಕೆ ಮುಂದಾಗಿರೋ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ 2022ರಲ್ಲಿ ಆ್ಯಕ್ಸಿಡೆಂಟ್​​ಗೆ ತುತ್ತಾಗಿ ಕ್ರಿಕೆಟ್​ನಿಂದ ಸುದೀರ್ಘ ಕಾಲ ಹೊರಗುಳಿದಿದ್ದ ರಿಷಭ್​ ಪಂತ್​, ಕಮ್​ಬ್ಯಾಕ್​ ಆಡಿರೋದು ಕೇವಲ 1 ಏಕದಿನ ಪಂದ್ಯ ಮಾತ್ರ. 2024ರಲ್ಲಿ ಏಕದಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ ದಿನದಿಂದ ಬ್ಯಾಕ್​ ಅಪ್​ ವೀಕೆಟ್​ ಕೀಪರ್​ ಆಗಿ ಪಂತ್​ ಬೆಂಚ್​ ಬಿಸಿ ಮಾಡಿದ್ರು. 2025ರಲ್ಲಂತೂ ಒಂದೇ ಒಂದು ಅವಕಾಶವೂ ಪಂತ್​ಗೆ ಸಿಕ್ಕಿಲ್ಲ. ಅವಕಾಶವನ್ನೇ ನೀಡದೆ ಇದಕ್ಕಿದ್ದಂತೆ ತಂಡದಿಂದ ಡ್ರಾಪ್ ಮಾಡೋಕೆ ಮುಂದಾಗಿರೋದು, ಅಚ್ಚರಿ ಮೂಡಿಸಿದೆ. 

ಟೆಸ್ಟ್​ ಕ್ರಿಕೆಟ್​ಗೆ ಮಾತ್ರ ಪಂತ್​ ಸೀಮಿತ

ಒಂದು ವೇಳೆ ಏಕದಿನ ತಂಡದಿಂದ ಡ್ರಾಪ್​ ಆಗಿದ್ದೇ ಆದ್ರೆ ರೆಡ್​​ ಬಾಲ್​ ಫಾರ್ಮೆಟ್​ಗೆ ಮಾತ್ರ ಪಂತ್​ ಸೀಮಿತವಾಗಲಿದ್ದಾರೆ. ಟಿ20 ಫಾರ್ಮೆಟ್​ನಲ್ಲಿ ಸ್ಥಾನ ಕಳೆದುಕೊಂಡಿರೋ ಪಂತ್​, ವಿಶ್ವಕಪ್​ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದೀಗ ಒನ್​ ಡೇ ಫಾರ್ಮೆಟ್​ನಿಂದಲೂ ಪಂತ್​ ಹೊರಬಿದ್ರೆ 2027ರ ಏಕದಿನ ವಿಶ್ವಕಪ್​ ಆಡೋದು ಕೂಡ ಅನುಮಾನವೇ. ವೈಟ್​ಬಾಲ್​ ಫಾರ್ಮೆಟ್​ನ ಕರಿಯರ್​ ಸಂಕಷ್ಟಕ್ಕೆ ಸಿಲುಕಲಿದೆ.

ಇದನ್ನೂ ಓದಿ: ಅಚ್ಚರಿ ಹೆಸರು..! ಸೂರಜ್​​ಗೆ ಯಾರು ಬಿಗ್​ಬಾಸ್ ಗೆಲ್ಲಬೇಕಂತೆ ಗೊತ್ತಾ..?

ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟಾಗ ರಿಷಭ್​ ಪಂತ್​ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ರು. ಮೂರೂ ಫಾರ್ಮೆಟ್​ನ ಖಾಯಂ ವಿಕೆಟ್​ ಕೀಪರ್​ ಬ್ಯಾಟರ್​ ಅನಿಸಿದ್ರು. ಆದ್ರೆ 2024ರಲ್ಲಾದ ಆ್ಯಕ್ಷಿಡೆಂಟ್​ ಪಂತ್​ ಕರಿಯರ್​​ಗೆ ಟ್ವಿಸ್ಟ್​ ನೀಡ್ತು. ಪಂತ್​ ಹೊರಬಿದ್ದ ಬಳಿಕ ಕೆ.ಎಲ್​ ರಾಹುಲ್​ ಏಕದಿನ ತಂಡದ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊತ್ತರೆ ಟಿ20 ಫಾರ್ಮೆಟ್​ನಲ್ಲಿ ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಪಂತ್​ ಸ್ಥಾನವನ್ನ ಅತಿ ಕ್ರಮಿಸಿಕೊಂಡ್ರು. ಕಮ್​ಬ್ಯಾಕ್​ ಬಳಿಕ ಸಿಕ್ಕ ಕೆಲ ಅವಕಾಶಗಳಲ್ಲಿ ಪಂತ್​ ಕೂಡ ಶೈನ್​ ಆಗಲಿಲ್ಲ. ಹೀಗಾಗಿ ಏಕದಿನದಲ್ಲಿ ರಾಹುಲ್​, ಟಿ20 ಸಂಜು ಸ್ಯಾಮ್ಸನ್​ನ ಮ್ಯಾನೇಜ್​ಮೆಂಟ್​ ಬ್ಯಾಕ್​ ಮಾಡ್ತಿದೆ. 

ಇಶಾನ್​ ಕಿಶನ್​ಗೆ ಏಕದಿನ ತಂಡದ​ ಟಿಕೆಟ್?

ನ್ಯೂಜಿಲೆಂಡ್​ ಎದುರಿನ ಸರಣಿಯಿಂದ ಪಂತ್​ಗೆ ಕೊಕ್​ ನೀಡಲು ಮುಂದಾಗಿರೋ ಸೆಲೆಕ್ಷನ್​ ಕಮಿಟಿ​ ಇಶಾನ್​ ಕಿಶನ್​ ಮೇಲೆ ಒಲವು ತೋರಿದೆ. ಬ್ಯಾಡ್​ ಟೈಮ್​ ದೂರಾಗಿ ಇಶಾನ್​ ಕಿಶನ್ ಪಾಲಿಗೆ ಗುಡ್​ ಟೈಮ್​ ಈಗ ಶುರುವಾದಂತಿದೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿ 2 ವರ್ಷಗಳ ಬಳಿಕ ಟೀಮ್​ ಇಂಡಿಯಾ ಟಿ20 ತಂಡಕ್ಕೆ ಎಂಟ್ರಿ ಕೊಟ್ಟಿರೋ ಇಶಾನ್​ ಕಿಶನ್​​ ಏಕದಿನ ತಂಡಕ್ಕೂ ಕಮ್​ಬ್ಯಾಕ್​ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಇಶಾನ್​ ಕಿಶನ್​ ಜೊತೆಗೆ ಜಿತೇಶ್​ ಶರ್ಮಾ ಹೆಸರೂ ಕೂಡ ಸೆಲೆಕ್ಷನ್​ ವಿಚಾರದಲ್ಲಿ ಚರ್ಚೆಯಲ್ಲಿದೆ.

ಇದನ್ನೂ ಓದಿ: ವರ್ಷದ ಆರಂಭದಲ್ಲೇ ಕಹಿ ಅನುಭವ.. ಹೇಗಿತ್ತು ಕೊಹ್ಲಿ ಜರ್ನಿ..?

ಸದ್ಯದ ಪರಿಸ್ಥಿತಿಯಲ್ಲಿ ರಿಷಭ್​ ಪಂತ್​ ಕರಿಯರ್​ ಫುಲ್​ ಡೇಂಜರ್​ನಲ್ಲಿದೆ. ಟೆಸ್ಟ್​ ಫಾರ್ಮೆಟ್​ನಲ್ಲಿ ದೃವ್​ ಜುರೇಲ್​ ರಿಷಭ್​ ಪಂತ್​ಗೆ ಟಫ್​ ಫೈಟ್​ ನೀಡ್ತಿದ್ದಾರೆ. ಪಂತ್​ ಅಲಭ್ಯರಾದಾಗ ಸಿಕ್ಕ ಅವಕಾಶಗಳಲ್ಲೇ ದೃವ್​​ ಜುರೇಲ್​ ಸಾಮರ್ಥ್ಯ ನಿರೂಪಿಸಿ ಮ್ಯಾನೇಜ್​ಮೆಂಟ್​ನ ಇಂಪ್ರೆಸ್​ ಮಾಡಿದ್ದಾರೆ. ಪಂತ್​ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡದಿದ್ರೆ ಟೆಸ್ಟ್​ ತಂಡಕ್ಕೂ ಬೇಡವಾಗೋ ಸಾಧ್ಯತೆಯನ್ನ ಅಲ್ಲಗಳೆಯುವಂತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Gautam Gambhir Rishabh Pant Ajit Agarkar
Advertisment