/newsfirstlive-kannada/media/media_files/2025/12/31/virat-kohli-rohit-sharma-2025-12-31-06-52-04.jpg)
2025ರಲ್ಲಿ ಭಾರತೀಯ ಕ್ರಿಕೆಟರ್ಸ್​ದ್ದೇ ದರ್ಬಾರ್​​. ಆನ್​​ ಫೀಲ್ಡ್​ ಮಾತ್ರವಲ್ಲ. ಆಫ್​ ದ ಫೀಲ್ಡ್​ನಲ್ಲೂ ಅಷ್ಟೇ. ಭಾರತೀಯ ಕ್ರಿಕೆಟರ್ಸ್​ ಅಬ್ಬರದ ಮುಂದೆ ಫಾರಿನ್​ ಕ್ರಿಕೆಟರ್ಸೇ ಸೈಲೆಂಟ್​ ಆಗಿ ಸೈಡ್​ಲೈನ್​ ಆಗಿದ್ದಾರೆ. ಕೋಟಿ-ಕೋಟಿ ಹಣ ಇಂಡಿಯನ್​ ಕ್ರಿಕೆಟರ್ಸ್​ ಖಜಾನೆ ಸೇರಿದೆ. ಎಂದಿನಂತೆ ಈ ವರ್ಷವೂ ಗಳಿಕೆಯಲ್ಲಿ ವಿರಾಟ್​ ಕೊಹ್ಲಿ ದಾಖಲೆ ಬರೆದಿದ್ದಾರೆ.
ಕ್ರಿಕೆಟ್​ ಲೋಕದಲ್ಲಿ ಬ್ಯಾಟ್​ ಮತ್ತು ಬಾಲ್ ಸೌಂಡ್​​ ಎಷ್ಟಿರುತ್ತೋ, ಝಣ ಝಣ ಕಾಂಚಾಣಾದ ಸದ್ದು ಕೂಡ ಅಷ್ಟೆ ಜೋರಾಗಿ ಇರುತ್ತೆ. ರನ್ ​ಹೊಳೆ ಹರಿದಂತೆ ಹಣದ ಹೊಳೆಯೂ ಹರಿಯುತ್ತೆ. ಕೋಟಿ ಕೋಟಿ ಆದಾಯ ಕ್ರಿಕೆಟರ್ಸ್​ ಖಜಾನೆಗೆ ಸೇರುತ್ತೆ. 2025ರಲ್ಲೂ ಕ್ರಿಕೆಟಿಂಗ್​ ಸೂಪರ್​ ಸ್ಟಾರ್ಸ್​ ಭರ್ಜರಿ ಕಮಾಯ್​ ಮಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಇಂಡಿಯನ್​ ಕ್ರಿಕೆಟರ್ಸ್​​ದ್ದೇ ದರ್ಬಾರ್​ ನಡೆದಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಯನ್ನ ಯಾಕೆ BCCI ಟೀಂ ಇಂಡಿಯಾಗೆ ಆಯ್ಕೆ ಮಾಡ್ತಿಲ್ಲ? ಅಸಲಿ ಉತ್ತರ ಇಲ್ಲಿದೆ..!
/filters:format(webp)/newsfirstlive-kannada/media/media_files/2025/12/03/virat-kohli-1-2025-12-03-16-07-28.jpg)
ವಿರಾಟ್​ ಕೊಹ್ಲಿ 300 ಕೋಟಿ
ಈ ವರ್ಷವೂ ಅತಿ ಹೆಚ್ಚು ಹಣ ಗಳಿಸಿದ ಕ್ರಿಕೆಟರ್ಸ್​ ಪಟ್ಟಿಯಲ್ಲಿ ಕಿಂಗ್​ ಕೊಹ್ಲಿಗೆ ಅಗ್ರಸ್ಥಾನ. ಟಿ20 ಮತ್ತು ಟೆಸ್ಟ್​ಗೆ ಗುಡ್​ ಬೈ ಹೇಳಿ ಐಪಿಎಲ್​ ಹಾಗೂ ಒನ್​ ಡೇ ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದ್ರೂ ಕೊಹ್ಲಿಗೆ ಬೇಡಿಕೆ ಕಡಿಮೆಯಾಗಿಲ್ಲ. ಮೂಲಗಳ ಪ್ರಕಾರ ಈ ವರ್ಷದಲ್ಲಿ ಕೊಹ್ಲಿ ಖಜಾನೆಗೆ ಅಂದಾಜು 300 ಕೋಟಿ ಹಣ ಹರಿದು ಬಂದಿದೆ. ಎಂಡ್ರೋಸ್​ಮೆಂಟ್​ ಹಾಗೂ ಇನ್ವೆಸ್ಟ್​ ಮೆಂಟ್​​ ಲಾಭದಿಂದಲೇ ಶೇಕಡಾ 90ಕ್ಕೂ ಅಧಿಕ ಮಟ್ಟದ ಆದಾಯ ಕೊಹ್ಲಿಯ ಅಕೌಂಟ್​​ಗೆ ಬಂದಿದೆ.
ರೋಹಿತ್​ ಶರ್ಮಾ 180 ಕೋಟಿ
ವಿರಾಟ್​ ಕೊಹ್ಲಿಯಂತೆ ಐಪಿಎಲ್​ ಹಾಗೂ ಏಕದಿನಕ್ಕೆ ಮಾತ್ರ ಸೀಮಿತವಾಗಿರೋ ರೋಹಿತ್​ ಶರ್ಮಾ ಕೂಡ ಈ ವರ್ಷ ನೂರಾರು ಕೋಟಿ ಸಂಪಾದಿಸಿದ್ದಾರೆ. ಸರಿ ಸುಮಾರು 180 ಕೋಟಿ ಹಣವನ್ನ ಈ ಒಂದು ವರ್ಷದಲ್ಲೇ ರೋಹಿತ್​ ಶರ್ಮಾ ದುಡಿದಿದ್ದಾರೆ. ಐಪಿಎಲ್​ ಕಾಂಟ್ರ್ಯಾಕ್ಟ್​ ಮುಂಬೈ ಇಂಡಿಯನ್ಸ್​ನಿಂದ 16.30 ಕೋಟಿ, ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಿಂದ 7 ಕೋಟಿ ಹಣ ರೋಹಿತ್​ ಅಕೌಂಟ್​ಗೆ ಜಮಾ ಆಗಿದೆ. ಉಳಿದ ಹಣ ಮ್ಯಾಚ್​​ ಫೀ ಹಾಗೂ ಎಂಡ್ರೋಸ್​ಮೆಂಟ್​ ಡೀಲ್​​ಗಳಿಂದ ಹರಿದು ಬಂದಿದೆ.
/filters:format(webp)/newsfirstlive-kannada/media/media_files/2025/12/19/jasprit-bumrah-2025-12-19-13-20-58.jpg)
ರಿಷಭ್​ ಪಂತ್ 120 ಕೋಟಿ
2025ರಲ್ಲಿ ಕ್ರಿಕೆಟ್​ ಫೀಲ್ಡ್​ನಲ್ಲಿ ರನ್​ಗಳಿಕೆಯಿಂದ ಅಷ್ಟೇನು ಸದ್ದು ಮಾಡದಿದ್ರೂ ಟೀಮ್​ ಇಂಡಿಯಾ ಡೇರ್​ ಡೆವಿಲ್​ ಬ್ಯಾಟರ್​ ರಿಷಭ್​ ಪಂತ್, ಹಣಗಳಿಕೆ ಮುಂಚೂಣಿಯಲ್ಲಿದ್ದಾರೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಬಳಿಕ ಈ ವರ್ಷ ಅಧಿಕ ಹಣ ಸಂಪಾದಿಸಿದ ಕ್ರಿಕೆಟಿಗ ಎನಿಸಿದ್ದಾರೆ. ವರ್ಷದ ಆರಂಭದಲ್ಲೇ ಐಪಿಎಲ್​ನಲ್ಲಿ ದಾಖಲೆಯ 27 ಕೋಟಿ ಹಣಕ್ಕೆ ಲಕ್ನೋ ಸೂಪರ್​ ಜೈಂಟ್ಸ್​​​ ತಂಡಕ್ಕೆ ಸೇಲಾದ ಪಂತ್​, ಅಂದಾಜು 120 ಕೋಟಿ ಹಣವನ್ನ ಈ ವರ್ಷದಲ್ಲಿ ಸಂಪಾದಿಸಿದ್ದಾರೆ.
ಜಸ್​​ಪ್ರಿತ್​ ಬೂಮ್ರಾ 100 ಕೋಟಿ
ಟೀಮ್​ ಇಂಡಿಯಾ ವೇಗಿ, ಯಾರ್ಕರ್​ ಸ್ಪೆಷಲಿಸ್ಟ್​ ಜಸ್​​ಪ್ರಿತ್​ ಬೂಮ್ರಾ ಗಳಿಕೆಯಲ್ಲಿ ಸೆಂಚುರಿ ಬಾರಿಸಿದ್ದಾರೆ. ಈ ಒಂದು ವರ್ಷದಲ್ಲೇ ಬೂಮ್ರಾ 100 ಕೋಟಿಗೂ ಅಧಿಕ ಹಣವನ್ನ ಗಳಿಸಿದ್ದಾರೆ. ಐಪಿಎಲ್​ ಕಾಂಟ್ರ್ಯಾಕ್ಟ್​ನಿಂದ 18 ಕೋಟಿ ಹಣ ಗಳಿಸಿದ್ರೆ, ಬಿಸಿಸಿಐ ಕಾಂಟ್ರ್ಯಾಕ್ಸ್​ನಿಂದ 7 ಕೋಟಿ ಹಣ ಬೂಮ್ರಾ ಖಾತೆಗೆ ಜಮಾ ಆಗಿದೆ. ಮ್ಯಾಚ್​ ಫೀ, ಎಂಡ್ರೋಸ್​ಮೆಂಟ್​ ಹಾಗೂ ಬ್ಯುಸಿನೆಸ್​ ಪಾಲುದಾರಿಕೆಯಿಂದ ಅಂದಾಜು 75 ಪರ್ಸೆಂಟ್​ ಹಣವನ್ನ ಬೂಮ್ರಾ ಗಳಿಸಿದ್ದಾರೆ.
ಇದನ್ನೂ ಓದಿ: SUPER SIX: ಕರ್ನಾಟಕಕ್ಕೆ 4 ವಿಕೆಟ್​ಗಳ ಭರ್ಜರಿ ಜಯ.. ಸ್ಮೃತಿ ಮಂದಾನ ಹೊಸ ದಾಖಲೆ!
/filters:format(webp)/newsfirstlive-kannada/media/media_files/2025/12/20/hardik-pandya-10-2025-12-20-08-41-02.jpg)
ಹಾರ್ದಿಕ್​ ಪಾಂಡ್ಯ 90 ಕೋಟಿ
ಸ್ಟಾರ್​ ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಕೂಡ ಈ ವರ್ಷ ಗಳಿಕೆಯಲ್ಲಿ ಹಿಂದೆ ಬಿದ್ದಲ್ಲ. ಬೂಮ್ರಾಗೆ ಸರಿ ಸಮವಾಗಿ ಹಾರ್ದಿಕ್​ ಕೋಟಿ-ಕೋಟಿ ಕಮಾಯ್​ ಮಾಡಿದ್ದಾರೆ. ವರದಿಯ ಪ್ರಕಾರ ಹಾರ್ದಿಕ್​ ಪಾಂಡ್ಯ 2025ರ ಒಂದು ವರ್ಷದಲ್ಲೇ 90 ಕೋಟಿ ಹಣವನ್ನ ಗಳಿಸಿದ್ದಾರೆ. ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಸ್​, ಮ್ಯಾಚ್​ ಫೀ, ಐಪಿಎಲ್​ ಗಳಿಕೆ, ಎಂಡ್ರೋಸ್​​ಮೆಂಟ್ಸ್​ ಹಾಗೂ ತನ್ನ ಸ್ವಂತ hardik pandya clothing brandನಿಂದ ಆದಾಯ ಹರಿದು ಬಂದಿದೆ.
2025ರಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಕ್ರಿಕೆಟರ್ಸ್​ ಪಟ್ಟಿಯಲ್ಲಿ ಇಂಡಿಯನ್ಸೇ ಕಾರುಬಾರು ನಡೆಸಿದ್ದಾರೆ. 75 ಕೋಟಿ ಸಂಪಾದನೆ ಮಾಡಿರೋ ಆಸಿಸ್​ ಕ್ಯಾಪ್ಟನ್​ ಪ್ಯಾಟ್​ ಕಮಿನ್ಸ್​ ಅತಿ ಹೆಚ್ಚು ಹಣಗಳಿಸಿದ ಆಟಗಾರರ ಟಾಪ್​ 10 ಪಟ್ಟಿಯಲ್ಲಿರೋ ಏಕೈಕ ವಿದೇಶಿ ಕ್ರಿಕೆಟಿಗ ಅನಿಸಿದ್ದಾರೆ. ಉಳಿದಂತೆ ಇಂಡಿಯನ್​​ ಕ್ರಿಕಟರ್ಸ್​​ದ್ದೇ ದರ್ಬಾರ್ ನಡೆದಿದೆ.
ಇದನ್ನೂ ಓದಿ: ಚಿಗಟೇರಿ ಗ್ರಾಮದಲ್ಲಿ ನಟಿ ನಂದಿನಿ ಅಂತ್ಯಕ್ರಿಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us