/newsfirstlive-kannada/media/media_files/2025/12/30/serial-actress-nandini-3-2025-12-30-06-28-01.jpg)
ಬೆಂಗಳೂರಿನಲ್ಲಿ ಕಿರುತೆರೆ ನಟಿ ಸಿ.ಎಂ ನಂದಿನಿ ಸಾವಿಗೆ ಶರಣಾಗಿದ್ದರು. ಇದೀಗ ಅವರ ಹುಟ್ಟೂರು ವಿಜಯನಗರ ಜಿಲ್ಲೆಯ ಚಿಗಟೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
/filters:format(webp)/newsfirstlive-kannada/media/media_files/2025/12/30/serial-actress-nandini-6-2025-12-30-06-40-24.jpg)
ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಪೋಷಕರು, ನಟಿಯ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದರು. ದಿವಂಗತ ಮಹಾಬಲೇಶ್ವರಪ್ಪ, ಬಸವರಾಜೇಶ್ವರಿ ದಂಪತಿ ಪುತ್ರಿ ಆಗಿದ್ದರು. ನಂದಿನಿ ಕನ್ನಡ, ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದರು. ಗೌರಿ, ನಿನಾದೇ ನಾ ಸೇರಿದಂತೆ ಇತರೆ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು.
ಇದನ್ನೂ ಓದಿ:ʼನೀನಾದೆ ನಾʼ ಖ್ಯಾತಿಯ ಕನ್ನಡದ ಸೀರಿಯಲ್ ನಟಿ ಹಠಾತ್ ನಿಧನ
/filters:format(webp)/newsfirstlive-kannada/media/media_files/2025/12/30/serial-actress-nandini-9-2025-12-30-06-40-05.jpg)
ಮೃತ ನಂದಿನಿಯ ನಿಧನದ ಬಗ್ಗೆ ಅನುಮಾನ ಶುರುವಾಗಿದೆ. ನಂದಿನಿ ತಂದೆ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ಇದೀಗ ನಂದಿನಿ, ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ. ನಂದಿನಿ, ತಂದೆ-ತಾಯಿಗೆ ಒಬ್ಬಳೇ ಮಗಳಾಗಿದ್ದಳು. ನಟನೆ ಕಡೆ ಒಲವು ಹೊಂದಿದ್ದ ನಂದಿನಿಗೆ ಟೀಚಿಂಗ್ ಕೆಲಸ ಇಷ್ಟ ಇರಲಿಲ್ಲ. ಈ ಮಧ್ಯೆ ತಂದೆ ಮರಣದ ನಂತರ ಅನುಕಂಪದ ಆಧಾರದ ಮೇಲೆ ಟೀಚಿಂಗ್ ಪೋಸ್ಟ್ ಆಗಿತ್ತು ಎನ್ನಲಾಗಿದೆ.
ಇದನ್ನೂ ಓದಿ:ʼಅಮ್ಮಾ ಕ್ಷಮಿಸಿ ಬಿಡು..ʼ ನಟಿ ನಂದಿನಿ ಕೇಸ್‌ಗೆ ಮಹತ್ವದ ಸುಳಿವು ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us