/newsfirstlive-kannada/media/media_files/2025/12/13/vaibhav-suryavanshi-2025-12-13-11-38-09.jpg)
14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಸದ್ಯ ವಿಶ್ವಕ್ರಿಕೆಟ್​​ನಲ್ಲಿ ಭಾರೀ ಸದ್ದು ಮಾಡ್ತಿದ್ದಾನೆ. ಎಕ್ಸ್​​ಪ್ಲೋಸಿವ್ ಬ್ಯಾಟಿಂಗ್​ನಿಂದ ಸಖತ್ ಸೌಂಡ್ ಮಾಡ್ತಿರುವ ಬಿಹಾರ್ ಕ್ರಿಕೆಟಿಗ ದಾಖಲೆಗಳ ಮೇಲೆ ದಾಖಲೆಗಳನ್ನ ಬರೆಯುತ್ತಿದ್ದಾನೆ. ಈತನ ಆಟಕ್ಕೆ ದಿಗ್ಗಜ ಕ್ರಿಕೆಟಿಗರೇ ದಂಗಾಗಿದ್ದಾರೆ. ಹೀಗಿರುವಾಗ ವೈಭವ್ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ಯಾಕೆ ಡೆಬ್ಯು ಮಾಡ್ತಿಲ್ಲ ಅನ್ನೋ ಪ್ರಶ್ನೆ, ಕ್ರಿಕೆಟ್ ಅಭಿಮಾನಿಗಳನ್ನ ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.
ವಿಜಯ್ ಹಜಾರೆ ಟೂರ್ನಿಯಲ್ಲಿ ಶತಕ, ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಶತಕ, ಏಷ್ಯಾಕಪ್​ನಲ್ಲಿ ಶತಕ, ಯೂತ್ ಏಕದಿನ ಕ್ರಿಕೆಟ್​ನಲ್ಲಿ ಶತಕ, ಐಪಿಎಲ್​ನಲ್ಲಿ ಶತಕ ಹೀಗೆ ಶತಕಗಳ ಮೇಲೆ ಶತಕಗಳನ್ನ ಸಿಡಿಸುತ್ತಿರುವ ವೈಭವ್ ಸೂರ್ಯವಂಶಿ, ಸದ್ಯ ವಿಶ್ವಕ್ರಿಕೆಟ್​ನ ಮೋಸ್ಟ್ ಎಕ್ಸೈಟಿಂಗ್ ಕ್ರಿಕೆಟರ್. ಇಷ್ಟೆಲ್ಲಾ ಸಾಧನೆ ಮಾಡಿರುವ ವೈಭವ್​ಗೆ, ಟೀಮ್ ಇಂಡಿಯಾದಲ್ಲಿ ಸ್ಥಾನ ಯಾಕಿಲ್ಲ..? ಇದು ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ಸ್​ ಅನ್ನ ಕಾಡ್ತಿದೆ.
ಇದನ್ನೂ ಓದಿ: SUPER SIX: ಕರ್ನಾಟಕಕ್ಕೆ 4 ವಿಕೆಟ್​ಗಳ ಭರ್ಜರಿ ಜಯ.. ಸ್ಮೃತಿ ಮಂದಾನ ಹೊಸ ದಾಖಲೆ!
/filters:format(webp)/newsfirstlive-kannada/media/media_files/2025/12/26/vaibhav-suryavamshi-2025-12-26-11-00-45.jpg)
ಈ ವರ್ಷ ವೈಭವ್ ಸೂರ್ಯವಂಶಿ ಕಾಂಪಿಟೇಟಿವ್ ಕ್ರಿಕೆಟ್​ನಲ್ಲಿ 4 ಭರ್ಜರಿ ಶತಕಗಳನ್ನ ಸಿಡಿಸಿದ್ದಾರೆ. ಅನ್​ಅಫಿಶಿಯಲ್ ಆಗಿ 2 ಶತಕಗಳನ್ನ ದಾಖಲಿಸಿದ್ದಾರೆ. ಸೂಪರ್​​​ ಡೂಪರ್​ ಫಾರ್ಮ್​​ನಲ್ಲಿ ರನ್ ​ಮಳೆ ಸುರಿಸುತ್ತಿರುವ ವೈಭವ್​, ಎಷ್ಟೇ ಶತಕ, ರನ್ ಸ್ಕೋರ್ ಮಾಡಿದ್ರೂ, ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡೋಕೇ ಸಾಧ್ಯವೇ ಇಲ್ಲ. ಇದಕ್ಕೆ ಕಾರಣ ಕೂಡ ಇದೆ.​​​​
ಶತಕಗಳ ಮೇಲೆ ಶತಕ, ಟನ್ ಗಟ್ಟಲೇ ರನ್ಸ್​, ಎಲ್ಲಾ ಫಾರ್ಮೆಟ್​ನಲ್ಲೂ ದಾಖಲೆಗಳ ಸರದಾರ ಎನಿಸಿಕೊಂಡಿರೋ ವೈಭವ್ ಸೂರ್ಯವಂಶಿ, ಯಾವಾಗ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡಬಹುದು ಅನ್ನೋ ಪ್ರಶ್ನೆಗೆ ಉತ್ತರ ಐಪಿಎಲ್ ನಂತರ.! ಐಪಿಎಲ್ ಸೀಸನ್-19ರ ನಂತರ ವೈಭವ್ ಇದೇ ಫಾರ್ಮ್​ನಲ್ಲಿದ್ರೆ ನೂರಕ್ಕೆ ನೂರು ಪರ್ಸೆಂಟ್ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಡ್ತಾರೆ. ಅದನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.
ಐಸಿಸಿ ಹೊಸ ರೂಲ್ಸ್ ಏನೇಳುತ್ತೆ..?
ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಎಂಟ್ರಿ ತಡವಾಗ್ತಿರೋದಕ್ಕೆ ಇದೇ ಪ್ರಮುಖ ಕಾರಣ. ಸದ್ಯ ಸೂರ್ಯವಂಶಿಗೆ 14 ವರ್ಷ, 276 ದಿನಗಳಾಗಿವೆ. ಐಸಿಸಿ ರೂಲ್ಸ್ ಪ್ರಕಾರ, ಯಾವುದೇ ಕ್ರಿಕೆಟಿಗ ಅಂತರಾಷ್ಟ್ರೀಯ ಪಂದ್ಯ ಆಡಬೇಕಾದ್ರೆ ಆತನಿಗೆ 15 ವರ್ಷ ಆಗಿರಬೇಕು. ಆದ್ರೆ ವೈಭವ್​​​​​ಗೆ ಇನ್ನೂ 15 ವರ್ಷ ಆಗ್ಲಿಲ್ಲ. ಹಾಗಾಗಿ ವೈಭವ್​ಗೆ ಟೀಮ್ ಇಂಡಿಯಾ ಎಂಟ್ರಿ ಭಾಗ್ಯ ಇನ್ನೂ ಸಿಕ್ಕಿಲ್ಲ. ಆದ್ರೆ ಮುಂದಿನ ವರ್ಷ 2026, ಮಾರ್ಚ್ 27ಕ್ಕೆ ವೈಭವ್, 15ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆಗ ಐಸಿಸಿ ರೂಲ್ಸ್ ಪ್ರಕಾರ, ವೈಭವ್ ಸೂರ್ಯವಂಶಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಬಹುದು.​​
/filters:format(webp)/newsfirstlive-kannada/media/media_files/2025/10/13/vaibhav_suryavanshi-2025-10-13-21-43-58.jpg)
ಪಾಕಿಸ್ತಾನ ತಂಡದ ಹಸನ್ ರಾಜಾ 14 ವರ್ಷ 227 ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಡೆಬ್ಯು ಮಾಡಿದ್ರು. ಆದ್ರೆ ಹಸನ್ ರಾಜಾ ಡೆಬ್ಯೂ ಮಾಡಿದಾಗ ಐಸಿಸಿ ಇಷ್ಟೇ ವರ್ಷಕ್ಕೆ ಡೆಬ್ಯೂ ಮಾಡಬೇಕು ಅಂತ ರೂಲ್ಸ್ ಮಾಡಿರಲಿಲ್ಲ. ನವೆಂಬರ್ 2020ರಲ್ಲಿ ಐಸಿಸಿ ಹೊಸ ರೂಲ್ಸ್ ಮಾಡಿದೆ. ಆ ರೂಲ್ಸ್​ ಪ್ರಕಾರ, ಯಾವುದೇ ಆಟಗಾರ ಇಂಟರ್​ನ್ಯಾಷನಲ್ ಕ್ರಿಕೆಟ್​ ಆಡಬೇಕಂದ್ರೆ, ಆತನಿಗೆ 15 ವರ್ಷ ವಯಸ್ಸಿನವನಾಗಿರಬೇಕು. ಹಾಗಾಗಿ ಈ ಹೊಸ ರೂಲ್ಸ್ ವೈಭವ್ ಸೂರ್ಯವಂಶಿಗೆ ಅನ್ವಯವಾಗುತ್ತದೆ.
ಯಂಗ್ ಫ್ಯೂಚರ್ ಸೂಪರ್​ಸ್ಟಾರ್ ವೈಭವ್​ ಸೂರ್ಯವಂಶಿಯನ್ನ ಬಿಸಿಸಿಐ ಗ್ರೂಮ್ ಮಾಡ್ತಿದೆ. ವೈಭವ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಮಂಡಳಿ, ಆತನ ಸಂಪೂರ್ಣ ಕ್ರಿಕೆಟ್ ಜವಾಬ್ದಾರಿಯನ್ನ ನೋಡಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ವೈಭವ್ ದಾರಿ ತಪ್ಪಬಾರದು ಅಂತ, ಆತನಿಗೆ ಕೆಲ ರೂಲ್ಸ್ ಌಂಡ್ ರೆಗ್ಯುಲೇಷನ್ಸ್ ಮಾಡಿದೆ. ವೈಭವ್ ಹೋಂ ಅಸೋಸಿಯೇಷನ್ ಬಿಹಾರ್ ಕೂಡ, ಬಿಸಿಸಿಐಗೆ ಸಾಥ್ ನೀಡ್ತಿದೆ. ಇನ್ನೂ ಮೂರೇ ಮೂರು ತಿಂಗಳಲ್ಲಿ ಸೂರ್ಯವಂಶಿಯ ವೈಭವದ ಆಟ ಟೀಮ್ ಇಂಡಿಯಾದಲ್ಲಿ ಕಣ್ತುಂಬಿಸಿಕೊಳ್ಳಬಹುದು. ಅಲ್ಲಿವರೆಗೂ ಕ್ರಿಕೆಟ್ ಫ್ಯಾನ್ಸ್ ಕಾಯಲೇಬೇಕು.
ಇದನ್ನೂ ಓದಿ:ದಾವಣಗೆರೆ ಡ್ರಗ್ಸ್ ಕೇಸ್​ನಲ್ಲಿ ಸಚಿವರ ಆಪ್ತ ಸೇರಿ ನಾಲ್ವರು ಅರೆಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us