/newsfirstlive-kannada/media/media_files/2025/12/30/davanagere-2025-12-30-10-41-00.jpg)
ದಾವಣಗೆರೆಯಲ್ಲಿ ಡ್ರಗ್ಸ್ ದಂಧೆ ಕೇಸ್‌ನಲ್ಲಿ ಮತ್ತೆ ನಾಲ್ವರ ಬಂಧನವಾಗಿದೆ. ಅವರಲ್ಲಿ ಓರ್ವ ಸಚಿವರ ಆಪ್ತನಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಸಚಿವರ ಆಪ್ತ ಅನ್ವರ್ ಬಾಷಾ, ಪಾರಸ್, ಕೃಷ್ಣಮೂರ್ತಿ, ಮಂಜುನಾಥ ಧೋನಿ ಬಂಧಿತ ಆರೋಪಿಗಳು. ಡಿಸೆಂಬರ್ 22ರಂದು ಪ್ರಕರಣ ಸಂಬಂಧ 4 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 10 ಲಕ್ಷ ಮೌಲ್ಯದ ಎಂಡಿಎಂಎ, ಒಪಿಯಂ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.
ಇದೀಗ ಬಂಧಿತರ ತೀವ್ರ ವಿಚಾರಣೆ ವೇಳೆ ಕೆಲವು ಮಾಹಿತಿಗಳು ಹೊರಬಂದಿದ್ದವು. ಅದರ ಆಧಾರದ ಮೇಲೆ ಮತ್ತೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: SUPER SIX: ಕರ್ನಾಟಕಕ್ಕೆ 4 ವಿಕೆಟ್​ಗಳ ಭರ್ಜರಿ ಜಯ.. ಸ್ಮೃತಿ ಮಂದಾನ ಹೊಸ ದಾಖಲೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us